ಪಂಚರಾಜ್ಯಗಳಲ್ಲಿ ಮತದಾರರು ಮಣೆ ಹಾಕಿದ್ದು ಯಾರಿಗೆ? ಏನು ಹೇಳುತ್ತಿವೆ ಮತಗಟ್ಟೆ ಸಮೀಕ್ಷೆ?

Exit Poll Results 2023: ಆಕ್ಸಿಸ್ ಇಂಡಿಯಾ ಟುಡೇ ಎಕ್ಸಿಟ್ ಪೋಲ್‌ ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ನಾಯಕತ್ವದಲ್ಲಿ ಕಾಂಗ್ರೆಸ್ ಬಿಜೆಪಿಯಿಂದ ಮುನ್ನಡೆ ಸಾಧಿಸಬಹುದು ಎಂದು ಭವಿಷ್ಯ ನುಡಿದಿದೆ. ಇತ್ತ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಬಿಆರ್‌ಎಸ್ ಮತ್ತು ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ (ಕೆಸಿಆರ್) ಗೆ ಆಘಾತ ನೀಡಬಹುದು, ಕೆಲವು ಸಮೀಕ್ಷೆಗಳು ಇಲ್ಲಿ ನಿಕಟ ಸ್ಪರ್ಧೆ ಸಾಧ್ಯತೆ ಇದೆ ಎಂದು ಹೇಳಿವೆ

ಪಂಚರಾಜ್ಯಗಳಲ್ಲಿ ಮತದಾರರು ಮಣೆ ಹಾಕಿದ್ದು ಯಾರಿಗೆ? ಏನು ಹೇಳುತ್ತಿವೆ ಮತಗಟ್ಟೆ ಸಮೀಕ್ಷೆ?
ಎಕ್ಸಿಟ್​ಪೋಲ್
Follow us
|

Updated on:Nov 30, 2023 | 8:53 PM

ದೆಹಲಿ ನವೆಂಬರ್ 30: ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಧ್ಯ ಪ್ರದೇಶ ಈ ಮೂರು ಹಿಂದಿ ಬೆಲ್ಟ್ ರಾಜ್ಯಗಳಲ್ಲಿ ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ನಡುವೆ ನಿಕಟ ಸ್ಪರ್ಧೆ ನಡೆಯಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು (Exit Poll) ತೋರಿಸುತ್ತವೆ . ನವೆಂಬರ್ 30 ರಂದು ಮತದಾನ ಮುಗಿದ ನಂತರ, ಐದು ರಾಜ್ಯಗಳಾದ ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶ, ತೆಲಂಗಾಣ ಮತ್ತು ಮಿಜೋರಾಂನಲ್ಲಿನ ಯಾರು ಅಧಿಕಾರಕ್ಕೇರುತ್ತವೆ ಎಂಬುದನ್ನು ಎಕ್ಸಿಟ್ ಪೋಲ್‌ ಭವಿಷ್ಯ ನುಡಿದಿವೆ . ಈ ರಾಜ್ಯಗಳ ಪೈಕಿ ಮೊದಲ ಎರಡರಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು ಮೂರನೆಯದ್ದರಲ್ಲಿ ಬಿಜೆಪಿ ಸರ್ಕಾರವನ್ನು ಹೊಂದಿತ್ತು. ತೆಲಂಗಾಣದಲ್ಲಿ ಭಾರತ್ ರಾಷ್ಟ್ರ ಸಮಿತಿ (BRS) ಅಧಿಕಾರದಲ್ಲಿದ್ದರೆ, ಪ್ರಾದೇಶಿಕ ಮಿಜೋ ನ್ಯಾಷನಲ್ ಫ್ರಂಟ್ (MNF) ಈಶಾನ್ಯ ರಾಜ್ಯದಲ್ಲಿ ಚುಕ್ಕಾಣಿ ಹಿಡಿದಿದೆ.

ರಾಜಸ್ಥಾನದಲ್ಲಿ ಬಹುತೇಕ ನಿಜ ನುಡಿಯುವ ಆಕ್ಸಿಸ್ ಇಂಡಿಯಾ ಟುಡೇ ಎಕ್ಸಿಟ್ ಪೋಲ್‌ ಪ್ರಕಾರ ಅಶೋಕ್ ಗೆಹ್ಲೋಟ್ ನಾಯಕತ್ವದಲ್ಲಿ ಕಾಂಗ್ರೆಸ್ ಬಿಜೆಪಿಯಿಂದ ಮುನ್ನಡೆ ಸಾಧಿಸಬಹುದು ಎಂದು ಭವಿಷ್ಯ ನುಡಿದಿದೆ. ಹಿಂದಿನ ಅಭಿಪ್ರಾಯ ಸಮೀಕ್ಷೆಗಳು ಇಲ್ಲಿ ಮತದಾರರು ಬಿಜೆಪಿಗೆ ಅನುಕೂಲಕರವಾಗಿರಬಹುದು ಎಂದು ಹೇಳಿತ್ತು,

ಅದೇ ಸಮಯದಲ್ಲಿ, ಛತ್ತೀಸ್‌ಗಢದ ಎಕ್ಸಿಟ್ ಪೋಲ್‌ಗಳು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ಇದೆ ಎಂದು ಹೇಳಿವೆ. ಹಿಂದಿನ ಅಭಿಪ್ರಾಯ ಸಮೀಕ್ಷೆಗಳಿಗೆ ಮತ್ತೆ ವಿರುದ್ಧವಾಗಿದ್ದು, ಇದು ಪ್ರಸ್ತುತ ಕಾಂಗ್ರೆಸ್‌ಗೆ ಅನುಕೂಲಕರ ಜಯವನ್ನು ತೋರಿಸಿದೆ.

ಮಧ್ಯಪ್ರದೇಶದಲ್ಲೂ ಉಭಯ ಪಕ್ಷಗಳು ಜಿದ್ದಾಜಿದ್ದಿನ ಹೋರಾಟ ನಡೆಸುತ್ತಿವೆ ಎಂದು ಸಮೀಕ್ಷೆಗಳು ತಿಳಿಸಿವೆ.

ಇದನ್ನೂ ಓದಿ: ಮತಗಟ್ಟೆ ಸಮೀಕ್ಷೆ: ಮಧ್ಯಪ್ರದೇಶದಲ್ಲಿ ಬಿಜೆಪಿ, ಕಾಂಗ್ರೆಸ್‌ ತೀವ್ರ ಪೈಪೋಟಿ

ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಬಿಆರ್‌ಎಸ್ ಮತ್ತು ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ (ಕೆಸಿಆರ್) ಗೆ ಆಘಾತ ನೀಡಬಹುದು, ಕೆಲವು ಸಮೀಕ್ಷೆಗಳು ಇಲ್ಲಿ ನಿಕಟ ಸ್ಪರ್ಧೆಯನ್ನು ಭವಿಷ್ಯ ನುಡಿದಿದ್ದಾರೆ. ಬಿಜೆಪಿಗೆ ಇಲ್ಲಿ ಅವಕಾಶ ಇಲ್ಲದೇ ಇದ್ದರೂ ಅಸಾದುದ್ದೀನ್ ಓವೈಸಿ ಅವರ ಎಂಐಎಂ ಹೆಚ್ಚಿನ ಸೀಟು ಗಳಿಸುವ ಸಾಧ್ಯತೆ ಇದೆ

ಮಿಜೋರಾಂನಲ್ಲಿ, ಮುಖ್ಯಮಂತ್ರಿ ಝೋರಾಮ್ತಂಗ ನೇತೃತ್ವದ ಮಿಜೋ ನ್ಯಾಷನಲ್ ಫ್ರಂಟ್ (MNF) ಸಹ ಜೋರಾಮ್ ನ್ಯಾಶನಲಿಸ್ಟ್ ಪಾರ್ಟಿ (ZNF) ನೊಂದಿಗೆ ನಿಕಟ ಹೋರಾಟದಲ್ಲಿದೆ. ಒಂದು ವೇಳೆ ಅತಂತ್ರ ಅಸೆಂಬ್ಲಿ ಚುನಾಯಿತವಾದರೆ ಫಲಿತಾಂಶದಲ್ಲಿ ಕಾಂಗ್ರೆಸ್ ಮ್ಯಾಜಿಕ್ ಮಾಡಬಹುದು. ಆದರೆ ಬಿಜೆಪಿ ಯಾವುದೇ ಪರಿಣಾಮ ಬೀರಲು ವಿಫಲವಾಗಬಹುದು.

ರಾಜಸ್ಥಾನ: ಬಹುಮತ ಸಂಖ್ಯೆ 100

ಮತಗಟ್ಟೆ ಸಮೀಕ್ಷೆ   ಬಿಜೆಪಿ  ಕಾಂಗ್ರೆಸ್ ಇತರೆ
ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ 80-100 86-106 8-16
ಎಬಿಪಿ ನ್ಯೂಸ್-ಸಿ ವೋಟರ್ 94-114 71-91 9-19
ಜನ್ ಕಿ ಬಾತ್ 100-122 62-85 14-15
ಇಂಡಿಯಾಟಿವಿ- CNX 80-90 94-104 14-18
ಟೈಮ್ಸ್ ನೌ-ETG 108-128 56-72 13-21
ದೈನಿಕ್ ಭಾಸ್ಕರ್ 98-105 85-95 10-15

ಮಧ್ಯ ಪ್ರದೇಶ: ಬಹುಮತ : 115

ಮತಗಟ್ಟೆ ಸಮೀಕ್ಷೆ   ಬಿಜೆಪಿ ಕಾಂಗ್ರೆಸ್ ಇತರೆ
ದೈನಿಕ್ ಭಾಸ್ಕರ್ 95-115 105-120 0-15
ರಿಪಬ್ಲಿಕ್ ಟಿವಿ-ಮ್ಯಾಟ್ರಿಜ್ 118-130 97-107 0-2
ಜನ್ ಕಿ ಬಾತ್ 100-123 102-125 5
ನ್ಯೂಸ್ 24-ಟುಡೇಸ್ ಚಾಣಕ್ಯ 151 74 5
ಪೋಲ್​​ಸ್ಟ್ರಾಟ್ 106-116 111-121 0-6

ಛತ್ತೀಸ್‌ಗಢ (ಬಹುಮತ- 45)

ಮತಗಟ್ಟೆ ಸಮೀಕ್ಷೆ   ಬಿಜೆಪಿ ಕಾಂಗ್ರೆಸ್ ಇತರೆ
ಎಬಿಪಿ ನ್ಯೂಸ್ – ಸಿ ವೋಟರ್ 36-4 41-53 1-5
ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ 36-46 40-50 1-5
ಜನ್ ಕಿ ಬಾತ್ 34-45 44-52 0-2
ಇಂಡಿಯಾ ಟಿವಿ- CNX 30-40 46-56 3-5
ನ್ಯೂಸ್ 24-ಟುಡೇಸ್ ಚಾಣಕ್ಯ 33 57 0
ಟೈಮ್ಸ್ ನೌ – ETG 32-40 48-56 2-4

ತೆಲಂಗಾಣ (ಬಹುಮತ : 60)

ಮತಗಟ್ಟೆ ಸಮೀಕ್ಷೆ   ಬಿಜೆಪಿ ಕಾಂಗ್ರೆಸ್ ಬಿಆರ್​​ಎಸ್ ಇತರೆ
ಪೋಲ್​​ಸ್ಟ್ರಾಟ್ 5-10 49-59 48-58 6-8
ರಿಪಬ್ಲಿಕ್ ಟಿವಿ- ಮ್ಯಾಟ್ರಿಜ್ 4-9 58-68 46-56 5-7
ಇಂಡಿಯಾ TV-CNX 2-4 63-79 31-47 5-7
ಜನ್ ಕಿ ಬಾತ್ 7-13 48-64 40-55 4-7
ಮಿಜೋರಾಂ (ಬಹುಮತ  20)
ಮತಗಟ್ಟೆ ಸಮೀಕ್ಷೆ  MNF ZPM ಕಾಂಗ್ರೆಸ್ ಬಿಜೆಪಿ
ಜನ್ ಕಿ ಬಾತ್ 10-14 15-25 5-9 0-2
ಎಬಿಪಿ ನ್ಯೂಸ್-ಸಿ ವೋಟರ್ 15-21 12-18 2-8 0
ಇಂಡಿಯಾ TV-CNX 14-18 12-16 8-10 0-2
ಟೈಮ್ಸ್ ನೌ -ETG 14-18 10-14 9-13 0-2

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:24 pm, Thu, 30 November 23

ತಾಜಾ ಸುದ್ದಿ
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ