ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಮೇಲುಗೈ, ಪೈಪೋಟಿ ನೀಡಲಿದೆ ಬಿಜೆಪಿ: ಮತಗಟ್ಟೆ ಸಮೀಕ್ಷೆ

ಛತ್ತೀಸ್‌ಗಢದಲ್ಲಿ ನವೆಂಬರ್ 7 ರಂದು ಒಂದೇ ಹಂತದಲ್ಲಿ ಮತದಾನ ನಡೆದಿದೆ. ಭಾನುವಾರ ಡಿಸೆಂಬರ್3ರಂದು ಫಲಿತಾಂಶ ಪ್ರಕಟವಾಗಲಿದೆ. ಇತರ ಎಕ್ಸಿಟ್ ಪೋಲ್​​ಗಳು ಕಾಂಗ್ರೆಸ್‌ ಗೆಲ್ಲುತ್ತದೆ ಎಂದು ಹೇಳಿದ್ದರೂ ಬಹುಮತ ಸಿಗುವ ಸಾಧ್ಯತೆ ಇಲ್ಲ ಎಂದಿದೆ. ಭೂಪೇಶ್ ಬಘೇಲ್ ಈ ಚುನಾವಣೆಯಲ್ಲಿ ಗೆದ್ದರೆ, ಮುಂದಿನ ವರ್ಷದ ಲೋಕಸಭೆ ಚುನಾವಣೆಗೆ ಮುನ್ನ ಆಡಳಿತ ಪಕ್ಷಕ್ಕೆ ಇದು ದೊಡ್ಡ ಉತ್ತೇಜನವಾಗಲಿದೆ.

ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಮೇಲುಗೈ, ಪೈಪೋಟಿ ನೀಡಲಿದೆ ಬಿಜೆಪಿ: ಮತಗಟ್ಟೆ ಸಮೀಕ್ಷೆ
ಭೂಪೇಶ್ ಬಘೇಲ್
Follow us
ರಶ್ಮಿ ಕಲ್ಲಕಟ್ಟ
|

Updated on: Nov 30, 2023 | 7:46 PM

ದೆಹಲಿ ನವೆಂಬರ್ 30: ಛತ್ತೀಸ್‌ಗಢದಲ್ಲಿ (Chhattisgarh) ಅಧಿಕಾರವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಕಾಂಗ್ರೆಸ್‌ ಬಿಜೆಪಿಯನ್ನು ಹಿಂದಿಕ್ಕಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಗುರುವಾರ ಭವಿಷ್ಯ ನುಡಿದಿವೆ. ಕಾಂಗ್ರೆಸ್ (Congress) ಮತ್ತು ಮುಖ್ಯಮಂತ್ರಿ ಭೂಪೇಶ್ ಬಘೇಲ್ (Bhupesh Baghel) ಅವರು ಈ ಚುನಾವಣೆಯಲ್ಲಿ ಗೆದ್ದರೆ, ಮುಂದಿನ ವರ್ಷದ ಲೋಕಸಭೆ ಚುನಾವಣೆಗೆ ಮುನ್ನ ಆಡಳಿತ ಪಕ್ಷಕ್ಕೆ ಇದು ದೊಡ್ಡ ಉತ್ತೇಜನವಾಗಲಿದೆ. ನ್ಯೂಸ್ 24-ಟುಡೇಸ್ ಚಾಣಕ್ಯದಿಂದ ಅತ್ಯಂತ ನಿರ್ಣಾಯಕ ಭವಿಷ್ಯವಾಣಿಯು 90 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಕಾಂಗ್ರೆಸ್ 57 ಸ್ಥಾನಗಳನ್ನು ಗಳಿಸುತ್ತದೆ ಎಂದು ಹೇಳಿದೆ. ಪ್ರಸ್ತುತ ರಾಜ್ಯದಲ್ಲಿ ಮ್ಯಾಜಿಕ್ ನಂಬರ್ 46 ಆಗಿದೆ.

ನ್ಯೂಸ್24-ಟುಡೇಸ್ ಚಾಣಕ್ಯ ಪ್ರಕಾರ ಬಿಜೆಪಿಗೆ ಕೇವಲ 33 ಸೀಟು ಸಿಗಲಿದೆ.ಇಂಡಿಯಾ ಟಿವಿ-ಸಿಎನ್‌ಎಕ್ಸ್ ಕಾಂಗ್ರೆಸ್‌ಗೆ 46-56 ಸ್ಥಾನಗಳು ಮತ್ತು ಬಿಜೆಪಿಗೆ 30-40 ಸೀಟು ಸಿಗಲಿದೆ ಎಂದಿವೆ. ಇತರ ಪಕ್ಷಗಳು ಮತ್ತು ಅಭ್ಯರ್ಥಿಗಳು ಮೂರರಿಂದ ಐದು ಸ್ಥಾನಗಳನ್ನು ಗೆಲ್ಲುತ್ತಾರೆ ಎಂದು ಇದು ಹೇಳಿದೆ.

ಛತ್ತೀಸ್‌ಗಢದಲ್ಲಿ ನವೆಂಬರ್ 7 ರಂದು ಒಂದೇ ಹಂತದಲ್ಲಿ ಮತದಾನ ನಡೆದಿದೆ. ಭಾನುವಾರ ಡಿಸೆಂಬರ್3ರಂದು ಫಲಿತಾಂಶ ಪ್ರಕಟವಾಗಲಿದೆ. ಇತರ ಎಕ್ಸಿಟ್ ಪೋಲ್​​ಗಳು ಕಾಂಗ್ರೆಸ್‌ ಗೆಲ್ಲುತ್ತದೆ ಎಂದು ಹೇಳಿದ್ದರೂ ಬಹುಮತ ಸಿಗುವ ಸಾಧ್ಯತೆ ಇಲ್ಲ ಎಂದಿದೆ.

ಎಬಿಪಿ ನ್ಯೂಸ್-ಸಿ ವೋಟರ್ ಪ್ರಕಾರ ಕಾಂಗ್ರೆಸ್ 41 ರಿಂದ 53 ಸ್ಥಾನಗಳಲ್ಲಿ ಮತ್ತು ಬಿಜೆಪಿ 36-48 ಸ್ಥಾನಗಳನ್ನು ಗೆಲ್ಲುತ್ತದೆ. ಇಂಡಿಯಾ ಟುಡೇ-ಮೈ ಆಕ್ಸಿಸ್ ಕಾಂಗ್ರೆಸ್‌ಗೆ 40-50 ಸ್ಥಾನಗಳನ್ನು ಮತ್ತು ಬಿಜೆಪಿಗೆ 36-46 ಸ್ಥಾನಗಳನ್ನು ನೀಡುತ್ತದೆ. ರಿಪಬ್ಲಿಕ್ ಟಿವಿ-ಮ್ಯಾಟ್ರಿಜ್ ಕಾಂಗ್ರೆಸ್‌ಗೆ 44-52 ಸ್ಥಾನಗಳನ್ನು ಮತ್ತು ಬಿಜೆಪಿಗೆ 34-42 ಸ್ಥಾನಗಳನ್ನು ನೀಡುತ್ತದೆ.

ಇದನ್ನೂ ಓದಿ: ರಾಜಸ್ಥಾನದಲ್ಲಿ ಗೆಹ್ಲೋಟ್ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ? ಭವಿಷ್ಯ ನುಡಿದ ಎರಡು ಎಕ್ಸಿಟ್ ಪೋಲ್

ಪೋಲ್‌ಸ್ಟ್ರಾಟ್ ಮತಗಟ್ಟೆ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 40-50 ಸ್ಥಾನಗಳನ್ನು ಮತ್ತು ಬಿಜೆಪಿ 35-45 ಸ್ಥಾನಗಳನ್ನು ಪಡೆದುಕೊಳ್ಳುತ್ತದೆ . 2018 ರ ಚುನಾವಣೆಯಲ್ಲಿ, ಕಾಂಗ್ರೆಸ್ 68 ಸ್ಥಾನಗಳೊಂದಿಗೆ ಭರ್ಜರಿ ಗೆಲುವು ಸಾಧಿಸಿತು. 2013 ರಲ್ಲಿ 49 ಸ್ಥಾನಗಳನ್ನು ಗೆದ್ದ ಬಿಜೆಪಿ ಕೇವಲ 15 ಸ್ಥಾನಗಳನ್ನು ಗಳಿಸಿತ್ತು.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ