ದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು ಗುಜರಾತಿ (Gujarati) ಭಾಷೆಯಲ್ಲಿ ಬಿಜೆಪಿಯ ಹೊಸ ಚುನಾವಣಾ ಘೋಷವಾಕ್ಯ ಬಿಡುಗಡೆ ಮಾಡಿದ್ದಾರೆ. ನಾನು ಈ ಗುಜರಾತ್ನ್ನು ಮಾಡಿದ್ದೇನೆ ಎಂಬ ಈ ಘೋಷಣೆ, ಪ್ರತಿಯೊಬ್ಬ ಗುಜರಾತಿಗೂ ಆತ್ಮಸ್ಥೈರ್ಯ ತುಂಬಿದೆ, ಅದಕ್ಕಾಗಿಯೇ ಪ್ರತಿಯೊಬ್ಬ ಗುಜರಾತಿ ಮಾತನಾಡುತ್ತಾನೆ, ಆಂತರಿಕ ಆತ್ಮದ ಧ್ವನಿ ಮಾತನಾಡುತ್ತದೆ, ಪ್ರತಿ ಶಬ್ದವು ಗುಜರಾತ್‌ನ ಹೃದಯದಿಂದ ಬರುತ್ತದೆ, ನಾನು ಈ ಗುಜರಾತ್ನ್ನು ಮಾಡಿದ್ದೇನೆ ಎಂದು ಅವರು ಕಪ್ರಡಾದಲ್ಲಿ ನಡೆದ ಸಾರ್ವಜನಿಕ ಸಭೆ ಸಮಾರಂಭದಲ್ಲಿ ಹೇಳಿದರು. ಆ ಗುಜರಾತ್ ಮೈ ಬ್ನಾವ್ಯು ಚೇ (ನಾನು ಈ ಗುಜರಾತ್ನ್ನು ಮಾಡಿದ್ದೇನೆ) ಎಂದು ಮೋದಿ ಹೇಳಿದ್ದು ತಮ್ಮ 24 ನಿಮಿಷದ ಭಾಷಣದ ವೇಳೆ ಅದನ್ನು ಮತ್ತೆ ಮತ್ತೆ ಹೇಳುವಂತೆ ಸಭಿಕರಿಗೆ ಹೇಳಿದ್ದಾರೆ.ಕಾಂಗ್ರೆಸ್ ಪಕ್ಷವನ್ನು ಹೆಸರಿಸದೆ ಅದರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಆ ಪಕ್ಷ ರಾಜ್ಯದ ಮಾನಗೆಡೆಸಿದೆ ಎಂದು ಆರೋಪಿಸಿದರು.
ಕಳೆದ 20 ವರ್ಷಗಳಿಂದ ರಾಜ್ಯವನ್ನು ದೂಷಿಸುವಲ್ಲಿ ಕಳೆದಿರುವ ವಿಭಜಕ ಶಕ್ತಿಗಳನ್ನು ಗುಜರಾತ್ ನಾಶಪಡಿಸಲಿದೆ ಎಂದು ಅವರು ಹೇಳಿದರು. ವಲ್ಸಾದ್ ಜಿಲ್ಲೆಯ ಭಾಗವಾಗಿರುವ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ ಮೀಸಲಾಗಿರುವ ಕಪ್ರಡಾ ವಿಧಾನಸಭಾ ಕ್ಷೇತ್ರದಿಂದ ಪ್ರಧಾನಿ ತಮ್ಮ ಗುಜರಾತ್ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದರು.
Massive support for the BJP across Gujarat. Watch from Kaprada. https://t.co/B9tPOyZQwT
— Narendra Modi (@narendramodi) November 6, 2022
ಆದಿವಾಸಿ ಸಮುದಾಯಕ್ಕೆ ಬುಡಕಟ್ಟು ಸಮುದಾಯ ಎಷ್ಟು ಮುಖ್ಯ ಮತ್ತು ಅವರ ಪಕ್ಷ ಅವರಿಗಾಗಿ ಏನು ಮಾಡಿದೆ ಎಂಬುದನ್ನು ಒತ್ತಿ ಹೇಳುವ ಮೂಲಕ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದರು.
ವಿಧಾನಸಭೆ ಚುನಾವಣೆ ಘೋಷಣೆಯಾದ ಬಳಿಕ ತವರು ರಾಜ್ಯಕ್ಕೆ ಪ್ರಧಾನಿ ಭೇಟಿ ನೀಡುತ್ತಿರುವುದು ಇದೇ ಮೊದಲು. ಪ್ರಧಾನಿ ಮೋದಿ ಇಂದು ಸಂಜೆ ಭಾವನಗರದಲ್ಲಿ ಸಾಮೂಹಿಕ ವಿವಾಹ ಸಮಾರಂಭವಾದ ‘ಪಾಪಾ ನಿ ಪರಿ’ ಲಗ್ನೋತ್ಸವ 2022ದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಮಾರಂಭದಲ್ಲಿ ತಂದೆ ಇಲ್ಲದ 522 ಹೆಣ್ಣು ಮಕ್ಕಳಿಗೆ ವಿವಾಹ ನಡೆಯಲಿದೆ.
ಅಕ್ಟೋಬರ್ 13 ರಂದು ಅಹಮದಾಬಾದ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು “ಗುಜರಾತ್ ಗೌರವ್ ಯಾತ್ರೆ” ಉದ್ಘಾಟಿಸಿದ ನಂತರ ಬಿಜೆಪಿ ಚುನಾವಣಾ ಪ್ರಚಾರವನ್ನು ತೀವ್ರಗೊಳಿಸಿದೆ. ಅದಕ್ಕೂ ಒಂದು ದಿನ ಮೊದಲು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಮೆಹ್ಸಾನಾದಲ್ಲಿ ‘ಗುಜರಾತ್ ಗೌರವ್ ಯಾತ್ರೆ’ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಇತರ ಬಿಜೆಪಿ ನಾಯಕರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಅಕ್ಟೋಬರ್ 12 ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್‌ಕೋಟ್ ಜಿಲ್ಲೆಯ ಜಮ್ಕಂದೋರ್ನಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ರ್ಯಾಲಿ ಬಳಿಕ ರೋಡ್ ಶೋ ಕೂಡ ನಡೆಸಿದರು.
ಗುಜರಾತ್ ನಲ್ಲಿ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.
ಗುಜರಾತ್‌ನಲ್ಲಿ ಸತತ ಆರು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಪ್ರಚಾರಕ್ಕೆ ಹೆಚ್ಚಿನ ಸಮಯವನ್ನು ನೀಡಲು ಅಭ್ಯರ್ಥಿಗಳ ಬಗ್ಗೆ ಶೀಘ್ರ ನಿರ್ಧಾರ ತೆಗೆದುಕೊಳ್ಳಲು ಕಾಂಗ್ರೆಸ್ ಉತ್ಸುಕವಾಗಿದೆ ಮತ್ತು ಯಾತ್ರೆಗಳ ಮೂಲಕ ತನ್ನ ಪ್ರಚಾರವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ರಾಜ್ಯಕ್ಕೆ ಹೊಸದಾಗಿ ಪ್ರವೇಶಿಸಿರುವ ಆಮ್ ಆದ್ಮಿ ಪಕ್ಷ, ಈ ಚುನಾವಣೆಯು ಬಿಜೆಪಿ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಎಂದು ಹೇಳಿಕೊಂಡಿದೆ.
Published On - 6:33 pm, Sun, 6 November 22