Karnataka Elections: ಆರ್​ಆರ್ ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ, ಡಿಕೆ ಸುರೇಶ್ ವಿರುದ್ಧ ಎಫ್​ಐಆರ್

|

Updated on: Apr 07, 2023 | 5:32 PM

ಚುನಾವಣೆ ಸಮೀಪಿಸುತ್ತಿದ್ದಂತೆ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ಮತಕ್ಷೇತ್ರದಲ್ಲಿ ಮತದಾರರನ್ನು ಸೆಳೆಯಲು ಇನ್ನಿಲ್ಲಸದ ಕಸರತ್ತು ನಡೆಸುತ್ತಿದ್ದು, ಆಮಿಷ ಒಡ್ಡುತ್ತಿರುವ ಪ್ರಕರಣಗಳೂ ಬೆಳಕಿಗೆ ಬರುತ್ತಿವೆ. ಅದರಂತೆ ಕಂಡಕಂಡಲ್ಲಿ ಚುನಾವಣಾಧಿಕಾರಿಗಳು ದಾಳಿಯೂ ನಡೆಸುತ್ತಿದ್ದಾರೆ.

Karnataka Elections: ಆರ್​ಆರ್ ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ, ಡಿಕೆ ಸುರೇಶ್ ವಿರುದ್ಧ ಎಫ್​ಐಆರ್
ಕುಸುಮಾ ಹೆಚ್ ಮತ್ತು ಡಿಕೆ ಸುರೇಶ್ ವಿರುದ್ಧ ಎಫ್​ಐಆರ್
Follow us on

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಹಿನ್ನೆಲೆ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ (Rajarajeshwari Constituency) ಮತದಾರರಿಗೆ ಆಮಿಷ ಒಡ್ಡಿದ ಆರೋಪದ ಸಂಬಂಧ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹೆಚ್ (Kusuma H), ಸಂಸದ ಡಿಕೆ ಸುರೇಶ್ (DK Suresh) ಸೇರಿದಂತೆ ಮೂವರ ವಿರುದ್ಧ ಎಫ್​ಐಆರ್ (FIR) ದಾಖಲಾಗಿದೆ. ಕ್ಷೇತ್ರದಲ್ಲಿ ಮತದಾರರಿಗೆ ತವಾ ಹಂಚುತ್ತಿದ್ದ ಮಾಹಿತಿ ತಿಳಿದು ಚುನಾವಣೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಚುನಾವಣಾ ಅಧಿಕಾರಿಗಳನ್ನ ಕಂಡು ತವಾ ಹಂಚುತ್ತಿದ್ದವರು ಪರಾರಿಯಾಗಿದ್ದಾರೆ. ಆದರೆ ಪರಾರಿಯಾಗುವ ವೇಳೆ ಓರ್ವ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ಸ್ಥಳದಲ್ಲಿ ಪತ್ತೆಯಾದ ಬಾಕ್ಸ್​ಗಳನ್ನು ಚುನಾವಣಾ ಅಧಿಕಾರಿಗಳು ಪರಿಶೀಲಿಸಿದಾಗ ಅಭ್ಯರ್ಥಿ ಕುಸುಮಾ ಹಾಗೂ ಡಿ.ಕೆ.ಸುರೇಶ್ ಭಾವ ಚಿತ್ರ ಕಂಡುಬಂದಿದೆ. ಸದ್ಯ 3 ಕರ್ಟನ್ ಬಾಕ್ಸ್ ಹಾಗೂ 3 ತವಾ ಬಾಕ್ಸ್​ಗಳನ್ನ ವಶಕ್ಕೆ‌ ಪಡೆಯಲಾಗಿದ್ದು, ಚುನಾವಣಾ ಅಧಿಕಾರಿಗಳಿಂದ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಅಧಿಕಾರಿಗಳ ದೂರು ಆಧರಿಸಿ ಪೊಲೀಸರು ಕುಸುಮಾ, ಡಿಕೆ ಸುರೇಶ್ ಹಾಗೂ ಜಗದೀಶ್ ಎಂಬವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ಇದನ್ನೂ ಓದಿ: ಮುಳಬಾಗಲು ಕಾಂಗ್ರೆಸ್‌ ಟಿಕೆಟ್​ ಆಕಾಂಕ್ಷಿ ವಿರುದ್ದ ಎಫ್​ಐಆರ್​, ಕಾರಣವೇನು?

ಕುಸುಮಾ.ಎಚ್, ಕಳೆದ ಬಾರಿ ಅಂದರೆ ನವೆಂಬರ್ 03, 2020ಕ್ಕೆ ನಡೆದ ಆರ್.ಆರ್.ನಗರದ ಉಪಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಬಳಿಕ ಬಿಜೆಪಿಯ ಎನ್. ಮುನಿರತ್ನ ಅವರ ವಿರುದ್ಧ ಸೋಲು ಕಂಡಿದ್ದರು. ಈಗ ಎರಡನೇ ಬಾರಿಗೆ ಆರ್.ಆರ್.ನಗರದಲ್ಲಿ ತಮ್ಮ ರಾಜಕೀಯ ಭವಿಷ್ಯ ಬರೆಯಲು ಮುಂದಾಗಿದ್ದು, ಇದೀಗ ಮತ್ತೊಮ್ಮೆ ಮುನಿರತ್ನ ವಿರುದ್ಧ ಅಖಾಡಕ್ಕಿಳಿದಿದ್ದಾರೆ.

ಮುನಿರತ್ನರನ್ನು ರಾಜಕೀಯವಾಗಿ ಮಣಿಸಲು ಯತ್ನಿಸುತ್ತಿರುವ ಕುಸುಮಾ, ಪ್ರಚೋದನಕಾರಿ ಹೇಳಿಕೆ ಆರೋಪಿಸಿ ದೂರು ನೀಡಿದ್ದಾರೆ. ಸಚಿವ ಮುನಿರತ್ನ ಅವರು ಸಾರ್ವಜನಿಕ ಸಭೆಯಲ್ಲಿ ತಮಿಳಿನಲ್ಲಿ ಮಾತನಾಡುತ್ತ ‘ತಮಿಳು ಭಾಷಿಕರು ಕನ್ನಡ ಭಾಷಿಕರ ಮೇಲೆ ಹಲ್ಲೆ ಮಾಡುವಂತೆ’ ಸೂಚನೆ ನೀಡಿರುವ ಹೇಳಿಕೆ ಸಮೇತ ದೂರು ನೀಡಿದ್ದಾರೆ. ಈ ಮೂಲಕ ತಮಿಳು ಮತ್ತು ಕನ್ನಡಿಗರ ನಡುವೆ ಸಂಘರ್ಷಕ್ಕೆ ಎಡೆಮಾಡಿದ್ದಾರೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: ಕಲಬುರಗಿ: ಜೆಡಿಎಸ್ ಮುಖಂಡ ಮತ್ತು ಪೊಲೀಸ್ ಕಮಿಷನರ್ ನಡುವೆ ವಾಗ್ವಾದ, ನಾಸೀರ್ ಹುಸೇನ್ ವಿರುದ್ಧ ದೂರು ದಾಖಲು

ರಾಜಕೀಯದ ಜೊತೆಗೆ ಸಮಾಜ ಸೇವೆ, ಬರವಣಿಗೆಯಂತಹ ಹವ್ಯಾಸಗಳನ್ನು ಬೆಳೆಸಿಕೊಂಡಿರುವ ಕುಸುಮಾ ಅವರು ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಣೆಯಾಗಿದೆ. ಕಾಂಗ್ರೆಸ್​ ತನ್ನ ಮೊದಲ ಪಟ್ಟಿಯಲ್ಲೇ ಕುಸುಮಾ ಅವರ ಹೆಸರನ್ನು ಪ್ರಕಟಿಸಿದೆ. ಹೀಗಿದ್ದು ಹೇಗಾದರೂ ಮಾಡಿ ಈ ಬಾರಿ ಗೆಲುವು ಸಾಧಿಸಲು ಶಥಾಉ ಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಚುನಾವಣೆ ಬಳಿಕ ಗೆಲುವು ಯಾರಿಗೆ ಒಲಿಯುತ್ತೆ ಕಾದುನೋಡಬೇಕಾಗಿದೆ.

Published On - 5:31 pm, Fri, 7 April 23