ಮುಳಬಾಗಲು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವಿರುದ್ದ ಎಫ್ಐಆರ್, ಕಾರಣವೇನು?
ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಜಿಲ್ಲೆಯ ಮುಳಬಾಗಿಲು ಕಾಂಗ್ರೆಸ್ ಆಕಾಂಕ್ಷಿ ಕೊತ್ತೂರು ಅಂಜು ಬಾಸ್ ಅಲಿಯಾಸ್ ಆಂಜನೇಯಲು ವಿರುದ್ದ FIR ದಾಖಲಾಗಿದೆ.
ಕೋಲಾರ: ರಾಜ್ಯ ವಿಧಾನಸಭೆ ಚುನಾವಣೆಗೆ(Karnataka Assembly Election) ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಜಿಲ್ಲೆಯ ಮುಳಬಾಗಲು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕೊತ್ತೂರು ಅಂಜು ಬಾಸ್ ಅಲಿಯಾಸ್ ಆಂಜನೇಯಲು ವಿರುದ್ದ FIR ದಾಖಲಾಗಿದೆ. ಜಮೀನು ವ್ಯಾಜ್ಯ ಹಿನ್ನಲೆ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಮುಳಬಾಗಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅಂಜು ಬಾಸ್ ಅವರು ಒಂದು ಎಕರೆ ಕ್ರಯ ಮಾಡಿಸಿಕೊಂಡು 2 ಎಕರೆ ಜಮೀನಿಗೆ ಬೇಲಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನು ಅಷ್ಟೆ ಅಲ್ಲದೆ ಮುಳಬಾಗಲು ತಾಲೂಕಿನ ಯಲವಳ್ಳಿ ಗ್ರಾಮದ ಸರ್ವೆ ನಂ. 65 ರಲ್ಲಿ 2 ಎಕರೆ 10 ಗುಂಟೆ ಜಮೀನು ಲಪಟಾಯಿಸಲು ಮುಂದಾಗಿದ್ದನಂತೆ. ಅದನ್ನ ಪ್ರಶ್ನೆ ಮಾಡಿದ ಚಂಗಮ್ಮ ಎಂಬುವವರನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆಂಬಲಿಗರಿಂದ ಧಮ್ಕಿ ಹಾಕಲಾಗಿದೆ. ಈ ಹಿನ್ನಲೆ ಅಂಜುಬಾಸ್, ಮುರಳಿ, ಸುರೇಶ್ ಸೇರಿ 4 ಜನರ ವಿರುದ್ದ ಎಫ್ಐಆರ್ ಹಾಕಲಾಗಿದ್ದು, ಮಹಿಳೆಯನ್ನ ನಿಂದಿಸಿ ಹಲ್ಲೆ ಮಾಡಿದ್ದಕ್ಕಾಗಿ ಐಪಿಸಿ ಸೆಕ್ಷನ್ 504, 143, 149, 323, 354 ಅಡಿ ಪ್ರಕರಣ ದಾಖಲಿಸಲಾಗಿದೆ.
ನ್ಯಾಯದಾನದಲ್ಲಿ ಕರ್ನಾಟಕ ದೇಶದಲ್ಲೇ ನಂ.1
ಬೆಂಗಳೂರು: ಇಂಡಿಯಾ ಜಸ್ಟೀಸ್ ರಿಪೋರ್ಟ್ 2022 ಬಿಡುಗಡೆಯಾಗಿದ್ದು, ಇದರಲ್ಲಿ ಕರ್ನಾಟಕವು ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ಇದೇ ವೇಳೆ ಮೊದಲ 5ರ ಪೈಕಿ 4 ಸ್ಥಾನಗಳನ್ನು ದಕ್ಷಿಣ ರಾಜ್ಯಗಳೇ ಪಡೆದಿವೆ. ಪೊಲೀಸ್ ವ್ಯವಸ್ಥೆ, ನ್ಯಾಯಾಂಗ ವ್ಯವಸ್ಥೆ, ಜೈಲುಗಳ ಸ್ಥಿತಿಗತಿ ಹಾಗೂ ಕಕ್ಷಿದಾರರಿಗೆ ಕಾನೂನು ಸವಲತ್ತು- ಈ ಮಾನದಂಡಗಳನ್ನು ಇರಿಸಿಕೊಂಡು ವರದಿ ಸಿದ್ಧಪಡಿಸಲಾಗಿದೆ. 2019ರಲ್ಲಿ ಪ್ರಾರಂಭವಾದ ಟಾಟಾ ಟ್ರಸ್ಟ್‌ಗಳ ಉಪಕ್ರಮವಾದ ಐಜೆಆರ್ ಈ ವರದಿಯ ಕತೃವಾಗಿದೆ. ತಲಾ 1 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ 18 ದೊಡ್ಡ ಮತ್ತು ಮಧ್ಯಮ ಗಾತ್ರದ ರಾಜ್ಯಗಳಲ್ಲಿ ಕರ್ನಾಟಕವು ಅಗ್ರಸ್ಥಾನದಲ್ಲಿದ್ದರೆ, ತಮಿಳುನಾಡು ತೆಲಂಗಾಣ, ಗುಜರಾತ್ ಮತ್ತು ಆಂಧ್ರಪ್ರದೇಶವು ನಂತರದ ಸ್ಥಾನದಲ್ಲಿವೆ. ತಲಾ ಒಂದು ಕೋಟಿಗಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಏಳು ಸಣ್ಣ ರಾಜ್ಯಗಳ ಪಟ್ಟಿಯಲ್ಲಿ ಸಿಕ್ಕಿಂ ನೇತೃತ್ವ ವಹಿಸಿದ್ದರೆ, ಅರುಣಾಚಲ ಪ್ರದೇಶ ಮತ್ತು ತ್ರಿಪುರಾ ನಂತರದ ಸ್ಥಾನದಲ್ಲಿವೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:25 am, Thu, 6 April 23