5 ವರ್ಷ ಬಳಿಕ ಮತ್ತೆ ಓಟು ಕೇಳೋಕೆ ಬಂದಿದ್ದೀರಾ? ಬಿಜೆಪಿ ಅಭ್ಯರ್ಥಿಗೆ ತರಾಟೆ ತೆಗೆದುಕೊಂಡ ಗ್ರಾಮಸ್ಥರ ಜತೆ ಜಗಳಕ್ಕೆ ಬಂದ ಶಾಸಕರ ಬೆಂಬಲಿಗರು

|

Updated on: May 03, 2023 | 3:54 PM

ವಿಧಾನಸಭೆ ಚುನಾವಣೆಗೆ ಏಳು ದಿನಗಳು ಬಾಕಿಯಿದ್ದು, ಜಿಲ್ಲೆಯ ದೇವರಹಿಪ್ಪರಗಿ(Devara Hipparagi) ಬಿಜೆಪಿ(BJP) ಅಭ್ಯರ್ಥಿ ಸೋಮನಗೌಡ ಸಾಸನೂರು(Somanagouda Patil Sasnur) ಎಂಬುವವರು ಪ್ರಚಾರಕ್ಕೆ ತೆರಳಿದ್ದಾರೆ. ಈ ವೇಳೆ ಕ್ಷೇತ್ರದ ಹಿಟ್ಟಿನಹಳ್ಳಿ ತಾಂಡಾ ಜನರು ಶಾಸಕರನ್ನ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

5 ವರ್ಷ ಬಳಿಕ ಮತ್ತೆ ಓಟು ಕೇಳೋಕೆ ಬಂದಿದ್ದೀರಾ?  ಬಿಜೆಪಿ ಅಭ್ಯರ್ಥಿಗೆ ತರಾಟೆ ತೆಗೆದುಕೊಂಡ ಗ್ರಾಮಸ್ಥರ ಜತೆ ಜಗಳಕ್ಕೆ ಬಂದ ಶಾಸಕರ ಬೆಂಬಲಿಗರು
ಸೋಮನಗೌಡ ಸಾಸನೂರು
Follow us on

ವಿಜಯಪುರ: ವಿಧಾನಸಭೆ ಚುನಾವಣೆ(Karnataka Assembly Election)ಗೆ ಏಳು ದಿನಗಳು ಬಾಕಿಯಿದ್ದು, ಜಿಲ್ಲೆಯ ದೇವರಹಿಪ್ಪರಗಿ(Devara Hipparagi) ಬಿಜೆಪಿ(BJP) ಅಭ್ಯರ್ಥಿ ಸೋಮನಗೌಡ ಸಾಸನೂರು(Somanagouda Patil Sasnur) ಎಂಬುವವರು ಪ್ರಚಾರಕ್ಕೆ ತೆರಳಿದ್ದಾರೆ. ಈ ವೇಳೆ ಕ್ಷೇತ್ರದ ಹಿಟ್ಟಿನಹಳ್ಳಿ ತಾಂಡಾ ಜನರು ಶಾಸಕರನ್ನ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಹೌದು ಪ್ರಚಾರಕ್ಕೆ ಬಂದಿದ್ದ ಸೋಮನಗೌಡ ಅವರ ಕಾರಿಗೆ ಮುತ್ತಿಗೆ ಹಾಕಿ, 5 ವರ್ಷಗಳ ಬಳಿಕ ಮತ್ತೆ ಓಟು ಕೇಳೋಕೆ ಬಂದ್ರಾ, ತಾಂಡಾ ಅಭಿವೃದ್ಧಿ ಮಾಡಿಲ್ಲ, ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂದು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಶಾಸಕರ ಬೆಂಬಲಿಗರು ಹಾಗೂ ತಾಂಡಾ ನಿವಾಸಿಗಳು ಕೈ ಕೈ ಮಿಲಾಯಿಸಿದ್ದಾರೆ. ಇಷ್ಟೆಲ್ಲಾ ಆಗುತ್ತಿದ್ದರೂ ಶಾಸಕ ಸೋಮನಗೌಡ ಮಾತ್ರ ಕಾರಿನಿಂದ ಹೊರಗಡೆ ಇಳಿದಿಲ್ಲ. ಮತ್ತೆ ಈ ತಾಂಡಾಗೆ ಮತ ಕೇಳಲು ಬರಬೇಡಿ ಎಂದಿದ್ದಾರೆ.

ಸೋಮಣ್ಣ ಪರ ಮತಯಾಚನೆಗೆ ಹೋಗಿದ್ದ ಪ್ರತಾಪ್​ಸಿಂಹಗೆ ಸ್ಥಳೀಯರಿಂದ ತರಾಟೆ

ಮೈಸೂರು: ವರುಣಾ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಪ್ರಚಾರ ನಡೆಸುತ್ತಿರುವ ವಿ ಸೋಮಣ್ಣಗೆ ಲಲಿತಾದ್ರಿಪುರ ಗ್ರಾಮದಲ್ಲಿ ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದರು. ಮೈಸೂರು(Mysuru) ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಏನು ಅಭಿವೃದ್ಧಿ ಮಾಡಿದ್ದೀರಿ? ಏನು ಕೊಡುಗೆ ಕೊಟ್ಟಿದ್ದೀರಿ ಎಂದು ಈಗ ಮತ ಕೇಳಲು ಬಂದಿದ್ದೀರಿ ಎಂದು ಸ್ಥಳೀಯರು ತರಾಟೆಗೆ ತೆಗೆದುಕೊಮಡಿದ್ದರು. ಇದರಿಂದ ಸೋಮಣ್ಣ ಹಾಗೂ ಪ್ರತಾಪ್ ಸಿಂಹ ಮುಜುಗರ ಅನುಭವಿಸಿದ್ದರು. ಇದರ ಬೆನ್ನಲ್ಲೇ ಇದೀಗ ಇಂದು(ಏಪ್ರಿಲ್ 21) ಮತ್ತೆ ಸೋಮಣ್ಣ ಪರ ಮತಯಾಚನೆಗೆ ತೆರಳಿದ್ದ ಸಂಸದ ಪ್ರತಾಪ್​ಸಿಂಹಗೆ(Pratap Simha )ಸ್ಥಳೀಯ ನಿವಾಸಿಗಳು ಕ್ಲಾಸ್ ತೆಗೆದುಕೊಂಡಿರುವ ಪ್ರಸಂಗ ನಡೆದಿತ್ತು.

ಇದನ್ನೂ ಓದಿ:ಅಧ್ಯಕ್ಷ ಸ್ಥಾನ ತೊರೆಯುವುದಾಗಿ ಶರದ್ ಪವಾರ್ ನಿರ್ಧಾರ ವಿರೋಧಿಸಿ ಎನ್‌ಸಿಪಿಯ ಹಿರಿಯ ನಾಯಕ ರಾಜೀನಾಮೆ

ಅಂಬೇಡ್ಕರ್ ಬರೆದ ಸಂವಿಧಾನವನ್ನೇ ಬದಲಿಸುತ್ತೇವೆ ಅಂತೀರಾ? ಬಿಜೆಪಿಯ ಅಕ್ಕಿ, ಚೀಲ ಮಾತ್ರ ಸಿದ್ದರಾಮಯ್ಯರದ್ದು ಹೇಳುತ್ತೀರಿ ರಾಜ್ಯದಲ್ಲಿ ಈಗ ಯಾಕೆ ಪಡಿತರ ಅಕ್ಕಿ ಕಡಿಮೆ ಕೊಡ್ತೀದ್ದೀರಾ? ಮೈಸೂರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಕೊಡಗು ಏನು ಅಂತೀರಿ? ಸಿದ್ದರಾಮಯ್ಯ ಹತ್ತಿರ ಕುಳಿತುಕೊಳ್ಳಿ ಕೊಡುಗೆ ಗೊತ್ತಾಗುತ್ತದೆ. ರಸ್ತೆಗಳ ರಾಜ ಅಂಥ ಮಹದೇವಪ್ಪಗೆ ಬಿರುದು ಕೊಡುತ್ತೀರಾ, ಅದೇ ಮಹದೇವಪ್ಪ ವಿರುದ್ಧ ಮಾತನಾಡುತ್ತೀರಾ ಎಂದು ಪ್ರತಾಪ್​ ಸಿಂಹಗೆ ಸ್ಥಳೀಯ ನಿವಾಸಿಗಳು ಪ್ರಶ್ನಿಸಿ ತರಾಟೆ ತೆಗೆದುಕೊಂಡಿದ್ದರು. ಇದರಿಂದ ಬಿಜೆಪಿ ನಾಯಕರು ತಬ್ಬಿಬ್ಬಾಗಿದ್ದರು.

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 3:52 pm, Wed, 3 May 23