ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ(Karnataka Assembly Elections 2023)ಕೆಲವೇ ಗಂಟೆಗಳು ಬಾಕಿ ಇದ್ದು ಮೇ 10ರ ಬೆಳಗ್ಗೆ 7ರಿಂದ ಮತದಾನ ಆರಂಭವಾಗಲಿದೆ. ಇದಕ್ಕಾಗಿ ರಾಜ್ಯದೆಲ್ಲೆಡೆ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಆದ್ರೆ ಇದರ ನಡುವೆ ಮೆಜೆಸ್ಟಿಕ್ನಲ್ಲಿ ಬಸ್ಗಾಗಿ ಜನರ ಪರದಾಟ ಹೆಚ್ಚಾಗಿದೆ(KSRTC Shortage). ಮತ ಚಲಾಯಿಸುವುದು ನಮ್ಮ ಹಕ್ಕು, ಮತದಾನ ಮಾಡಿ ಎಂದು ಅಭಿಯಾನಗಳನ್ನು ಮಾಡಿ ಜಾಗೃತಿ ಮೂಡಿಸುತ್ತಿದ್ದ ಅಧಿಕಾರಿಗಳು ಈ ಸಮಸ್ಯೆಗೆ ಕ್ಯಾರೇ ಎನ್ನುತ್ತಿಲ್ಲ. ಕಡ್ಡಾಯ ಮತದಾನ ಎಂದು ಬೊಂಬಡಿ ಹೊಡೆಯುತ್ತಿದ್ದವರು ಈ ಬಗ್ಗೆ ಚರ್ಚೆ ಮಾಡ್ತೀವಿ, ಸಮಸ್ಯೆ ಬಗೆಹರಿಸುತ್ತೀವಿ ಎಂದು ಜಾರಿ ಕೊಳ್ಳುತ್ತಿದ್ದಾರೆ. ಮತದಾನ ಹೆಚ್ಚಿಸಲು ರಜೆ ಘೋಷಿಸಿಯೂ ಪ್ರಯೋಜನವಿಲ್ಲದಂತಾಗಿದೆ. ಮತ ಹಾಕಬೇಕು ಎಂದು ತಮ್ಮ ತಮ್ಮ ಊರಿಗೆ ಹೋಗುವವರು ಅವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಚುನಾವಣಾ ಕರ್ತವ್ಯಕ್ಕೆ 3,500 KSRTC ಬಸ್ ನೀಡಲಾಗಿದ್ದು ಬಸ್ಗಳ ಸಂಖ್ಯೆ ಕಡಿಮೆಯಾಗಿದೆ. ಈ ಹಿನ್ನೆಲೆ ಮತದಾನ ಚಲಾಯಿಸಲು ತಮ್ಮ ತಮ್ಮ ಊರಿಗೆ ಹೊರಟಿರುವ ಮಂದಿ ಸಮಸ್ಯೆಗೆ ಸಿಲುಕಿದ್ದಾರೆ. ಮೆಜೆಸ್ಟಿಕ್ ಬರುವ ಪ್ರತಿ ಸಾರಿಗೆ ಬಸ್ ಫುಲ್ ರಶ್ ಆಗಿದೆ. ಈಗಾಗಲೇ ರಿಸರ್ವೇಷನ್ ಮಾಡಿದವರಿಗೆ ನಿರಾಳ. ಆದರೆ ಓಟ್ ಹಾಕಲು ಹೋಗುತ್ತಿರುವ ಜನರಿಗೆ ತೊಂದರೆ ಎದುರಾಗಿದೆ. ದೂರದೂರಿನಿಂದ ಪ್ರಯಾಣಿಸುವವರು ಕೂಡ ಬಸ್ನಲ್ಲಿ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಪ್ರಯಾಣಿಸುವಂತಾಗಿದೆ. ಇನ್ನೂರಕ್ಕೂ ಹೆಚ್ಚು ಪ್ರಯಾಣಿಕರು ಬಸ್ ಇಲ್ಲದೆ ಕಾಯುವಂತಹ ಸನ್ನಿವೇಶ ಬೆಂಗಳೂರಿನ ಮೆಜೆಸ್ಟಿಕ್ನಲ್ಲಿ ಕಂಡು ಬಂದಿದೆ. ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು ಬಸ್ಗಳಿಗೆ ಫುಲ್ ಡಿಮ್ಯಾಂಡ್ ಇದ್ದು ಬಸ್ ಸ್ಡ್ಯಾಂಡ್ಗೆ ಬರುವ ಎಲ್ಲ ಬಸ್ಗಳ ಸೀಟ್ ಫುಲ್ ಆಗಿದೆ. ಸ್ಡ್ಯಾಂಡಿಂಗ್ ನಲ್ಲಿಯೇ ಜನರು ಪ್ರಯಾಣಿಸುತ್ತಿದ್ದಾರೆ.
ಎಲೆಕ್ಷನ್ಗೆ ಓಟ್ ಮಾಡೋಣ ಅಂದರೆ ಸರಿಯಾಗಿ ಬಸ್ ಸಿಗ್ತಿಲ್ಲ, ನಾವು ನಮ್ಮ ಊರುಗಳಿಗೆ ಹೋಗಿ ಓಟ್ ಹಾಕುವುದಾರೂ ಹೇಗೆ ಎಂದು ಪ್ರಯಾಣಿಕರೊಬ್ಬರು ಅಳಲು ತೋಡಿಕೊಂಡಿದ್ದಾರೆ. ನಾಳಿನ ಎಲೆಕ್ಷನ್ ಡ್ಯೂಟಿಗಾಗಿ ಕೆಎಸ್ಆರ್ಟಿಸಿಯ 3,500 ಬಸ್ ನಿಯೋಜನೆ ಮಾಡಲಾಗಿದೆ. ಉಳಿದ 4,400 ಬಸ್ಸುಗಳು ಮಾತ್ರ ರೋಡಿಗಿಳಿದಿವೆ. ಈ ಹಿನ್ನೆಲೆಯಲ್ಲಿ ಸರಿಯಾಗಿ ಬಸ್ ಸಿಗದೆ ಪ್ರಯಾಣಿಕರು ಪರದಾಡುವಂತಾಗಿದೆ. ಕೆಎಸ್ಆರ್ಟಿಸಿಯಲ್ಲಿ ಒಟ್ಟು 8,100 ಬಸ್ಗಳಿವೆ.
ಇದನ್ನೂ ಓದಿ: Karnataka Election: ವಿಧಾನಸಭೆ ಚುನಾವಣೆಗೆ ವಿಶೇಷ ರೈಲು, ಹೆಚ್ಚುವರಿ ಕೋಚ್; ವಿವರ ಇಲ್ಲಿದೆ
ಇನ್ನು ಮತ್ತೊಂದೆಡೆ ಖಾಸಗಿ ಬಸ್ಸುಗಳ ಮಾಲೀಕರು ಖಾಸಗಿ ಬಸ್ಸಿನ ಟಿಕೆಟ್ ದರವನ್ನ ಡಬಲ್ ಮಾಡಿದ್ದಾರೆ. ಈ ಹಿಂದೆ 900 ರಷ್ಟಿದ್ದಂತಹ ಟಿಕೆಟ್ ಬೆಲೆ ಈಗ 2 ಸಾವಿರದಿಂದ ಮೂರು ಸಾವಿರದವರೆಗೂ ಏರಕೆಯಾಗಿದೆ. ಆದ್ರೆ ಇದಕ್ಕೆ ಸೂಕ್ತ ಕ್ತಮ ತೆಗದುಕೊಳ್ಳಬೇಕಾದ ಆರ್ ಟಿ ಒ ಅಧಿಕಾರಿಗಳು ಇಲ್ಲಿಯವರೆಗೂ ಖಾಸಗಿ ಬಸ್ಸುಗಳ ಜೊತೆ ಚರ್ಚೆ ಮಾಡಿಲ್ಲ.
ಈ ಕುರಿತಾಗಿ ಕರ್ನಾಟಕ ರಾಜ್ಯದ ಬಸ್ಸುಗಳ ಮಾಲೀಕರ ಅಧ್ಯಕ್ಷ ನಟರಾಜ್ ಅವರನ್ನ ಪ್ರಶ್ನಿಸಿದ್ದಕ್ಕೆ ಎಲೆಕ್ಷನ್ ಸಲುವಾಗಿ ಈಗಾಗಲೇ ಸಾಕಷ್ಟು ಬಸ್ಸುಗಳು ಬುಕಿಂಗ್ ಆಗಿವೆ. ಹೆಚ್ಚಿನ ಸಂಖ್ಯೆಯಲ್ಲಿ ಬಸ್ಸುಗಳಿಗೆ ಬೇಡಿಕೆ ಇರುವುದರಿಂದ ಬೇರೆ ಬೇರೆ ಭಾಗಗಳಿಂದ ಬಸ್ ಗಳನ್ನ ಬಸ್ ಮಾಲೀಕರು ತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಟಿಕೇಟ್ ದರ ಜಾಸ್ತಿ ಮಾಡಿರಬಹುದು. ಸಧ್ಯ ರಾಜಕೀಯ ಪಕ್ಷಗಳೇ ಸಾಕಷ್ಟು ಸೀಟ್ ಗಳನ್ನ ಬುಕ್ ಮಾಡಿಕೊಂಡಿದ್ದಾರೆ. ಹಬ್ಬದ ಸಂದರ್ಭದಲ್ಲಿ ಟಿಕೆಟ್ ಬೆಲೆ ಜಾಸ್ತಿ ಮಾಡಿದ್ರೆ ಅದು ಒಂದು ಲೆಕ್ಕಾ. ಆದ್ರೆ ಸಾಮನ್ಯದಿನಗಳಲ್ಲಿ ಟಿಕೆಟ್ ಬೆಲೆ ಜಾಸ್ತಿ ಮಾಡಿರುವ ಬಗ್ಗೆ ನಮ್ಮ ಸದಸ್ಯರ ಜೊತೆ ಚರ್ಚೆ ಮಾಡ್ತಿವಿ ಅಂದ್ರು.
ಸ್ಥಳ | ಹಿಂದಿನ ದರ | ಇಂದಿನ ದರ |
ಮೈಸೂರು | 800 | 1800 |
ಮಂಗಳೂರು | 950 | 2200 |
ಶಿವಮೊಗ್ಗ | 900 | 2160 |
ಉಡುಪಿ | 900 | 2200 |
ಬೆಳಗಾವಿ | 1100 | 2800 |
ಹಾಸನ | 650 | 2200 |
ಗೋವಾ | 1000 | 3350 |
ಚಿಕ್ಕಮಗಳೂರು | 700 | 1500 |
ಕಲಬುರಗಿ | 1400 | 2500 |
ಬಾಗಲಕೋಟೆ | 1400 | 2300 |
ಯಾದಗಿರಿ | 1400 | 1999 |
ಅಥಣಿ | 1400 | 2200 |
ಕೊಡಗು | 700 | 1400 |
ಬಳ್ಳಾರಿ | 900 | 2500 |
ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ