ಕಾಂಗ್ರೆಸ್​ಗೆ ಭರ್ಜರಿ ಗೆಲವು; ಪತ್ರಿಕಾಗೋಷ್ಠಿಯಲ್ಲೇ ಭಾವುಕರಾಗಿ ಕಣ್ಣೀರು ಹಾಕಿದ ಡಿಕೆ ಶಿವಕುಮಾರ್

|

Updated on: May 13, 2023 | 1:31 PM

ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು, ಕಾಂಗ್ರೆಸ್​​ಗೆ ಭರ್ಜರಿ ಗೆಲುವು ದೊರೆಯುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಭಾವುಕರಾಗಿ ಕಣ್ಣೀರು ಹಾಕಿ ಅತ್ತರು.

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ (Karnataka Assembly Election Results) ಪ್ರಕಟಗೊಳ್ಳುತ್ತಿದ್ದು, ಕಾಂಗ್ರೆಸ್​​ಗೆ ಭರ್ಜರಿ ಗೆಲುವು ದೊರೆಯುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಭಾವುಕರಾಗಿ ಕಣ್ಣೀರು ಹಾಕಿ ಅತ್ತರು. ಕರ್ನಾಟಕದ ಅತಿದೊಡ್ಡ ಗೆಲುವಿಗೆ ಕಾರಣರಾದ ಪಕ್ಷದ ಕಾರ್ಯಕರ್ತರಿಗೆ ಮತ್ತು ನಾಯಕರಿಗೆ ಧನ್ಯವಾದಗಳು ಎಂದು ಅವರು ಹೇಳಿದರು. ಮತ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಮಧ್ಯಾಹ್ನ 1 ಗಂಟೆ ವೇಳೆಗೆ, ಕಾಂಗ್ರೆಸ್ 120ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಭಾರೀ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ ಬಹುಮತ ಗಳಿಸಿವುದು ಖಚಿತವಾಗುತ್ತಿದ್ದಂತೆಯೇ ಡಿಕೆ ಶಿವಕುಮಾರ್ ಅವರು ಪತ್ರಿಕಾಗೋಷ್ಠಿ ನಡೆಸಿದರು.

ಈ ಮಧ್ಯೆ, ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ, ಸಚಿವ ಆರ್ ಅಶೋಕ್ ವಿರುದ್ಧ ಡಿಕೆ ಶಿವಕುಮಾರ್ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಕನಕಪುರದಲ್ಲಿ ಕಾಂಗ್ರೆಸ್​ನ ಡಿ.ಕೆ.ಶಿವಕುಮಾರ್​ಗೆ 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಆರ್.ಅಶೋಕ್​ ಹೀನಾಯ ಸೋಲುಂಡಿದ್ದಾರೆ.

ಕಾಂಗ್ರೆಸ್ ಭದ್ರಕೋಟೆಯಾಗಿರುವ ಕನಕಪುರದಲ್ಲಿ ಡಿಕೆ ಶಿವಕುಮಾರ್​ಗೆ ಟಕ್ಕರ್ ಕೊಡಲು ಬಿಜೆಪಿ ಸಚಿವ ಆರ್ ಅಶೋಕ್​ರನ್ನು ನಿಲ್ಲಿಸಿತ್ತು. ಆದ್ರೆ ಕನಕಪುರ ಮತದಾರರು ಹೊಸ ಅಭ್ಯರ್ಥಿ ಪರ ಒಲವು ತೋರಿಸಿಲ್ಲ. ಆರ್​ ಅಶೋಕ್ ಹೀನಾಯವಾಗಿ ಸೋತಿದ್ದಾರೆ. ಬಿಜೆಪಿಯ ಮಾಸ್ಟರ್ ಪ್ಲಾನ್​ಗಳೆಲ್ಲವೂ ತಲೆಗೆಳಗಾಗಿವೆ. ಘಟಾನುಘಟಿಗಳ ರೋಡ್​ ಶೋ, ಪ್ರಚಾರ ಯಾವುದಕ್ಕೂ ಫಲ ಸಿಕ್ಕಿಲ್ಲ. ಸದ್ಯ ಗೆಲುವಿನ ನಗೆ ಬೀರಿದ ಡಿಕೆ ಶಿವಕುಮಾರ್ ಫಲಿತಾಂಶ ಕಂಡು ಭಾವುಕರಾದರು. ಜೈಲಿನಲ್ಲಿದ್ದ ದಿನಗಳನ್ನ ಮೆಲುಕು ಹಾಕಿ ಭಾವುಕರಾಗಿ ಕಣ್ಣೀರಿಟ್ಟರು. ಜೈಲಿನಲ್ಲಿದ್ದಾಗ ಸೋನಿಯಾ ಗಾಂಧಿ ಅವರು ನೋಡೋಕೆ ಬಂದ ಸನ್ನಿವೇಶ ನೆನಪಿಸಿಕೊಂಡ ಭಾವುಕರಾದರು.

ಇದನ್ನೂ ಓದಿ: Kanakapura Election 2023 Winner: ಕನಕಪುರದಲ್ಲಿ ಡಿಕೆ ಶಿವಕುಮಾರ್​ಗೆ ಭರ್ಜರಿ ಗೆಲುವು

ಕನಕಪುರ ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳೇ ನಿರ್ಣಾಯಕ. ಹೀಗಾಗಿ ಬಿಜೆಪಿ ಒಕ್ಕಲಿಗ ಸಮುದಾಯದ ಆರ್​ ಅಶೋಕ್​ರನ್ನು ನಿಲ್ಲಿಸಿತ್ತು. ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ 2,24,956 ಮತದಾರರಲ್ಲಿ 1,90,124 ಮತದಾನ ಮಾಡಿದ್ದರು. ಎರಡು ದಶಕಗಳ ಹಿಂದೆ ಜೆಡಿಎಸ್‌ ಪಾಲಿಗೆ ಭದ್ರಕೋಟೆಯಾಗಿದ್ದ ಕನಕಪುರ, ಈಗ ಡಿಕೆ ಶಿವಕುಮಾರ್ ಅವರ ಮುಷ್ಟಿಯಲ್ಲಿದೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 1:05 pm, Sat, 13 May 23