Challakere Assembly Election Results 2023, ಚಿತ್ರದುರ್ಗ: ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಫಲಿತಾಂಶ (Karnataka Assembly Election Results 2023) ಬಹಿರಂಗಗೊಂಡಿದ್ದು, ಚಳ್ಳಕೆರೆ ಕ್ಷೇತ್ರದಲ್ಲಿ ಜೆಡಿಎಸ್ (JDS) ವಿರುದ್ಧ ಕಾಂಗ್ರೆಸ್ನ ಟಿ ರಘುಸ್ವಾಮಿ (T Raghuswamy) ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿ (BJP) ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಜೆಡಿಎಸ್ನ ರವೀಶ್ ಕುಮಾರ್ ಎಂ ಅವರ ವಿರುದ್ಧ ರಘುಮೂರ್ತಿ ಅವರು 16450 ಮತಗಳ ಅಂತದಿಂದ ಗೆಲುವಿನ ನಗೆ ಬೀರಿದ್ದಾರೆ.
ಚಳ್ಳಕೆರೆ ಕ್ಷೇತ್ರದಲ್ಲಿ ರಘುಮೂರ್ತಿ ಅವರು ಶೇ 38.2ರಷ್ಟು ಮತ ಪಡೆದರೆ, ಜೆಡಿಎಸ್ನ ರವೀಶ್ ಅವರು ಶೇ 28.9ರಷ್ಟು ಮತ ಪಡೆದಿದ್ದಾರೆ. ಮೂರನೇ ಸ್ಥಾನದಲ್ಲಿರುವ ಪಕ್ಷೇತರ ಅಭ್ಯರ್ಥಿ ಶೇ 16.4ರಷ್ಟು ಮತ ಪಡೆದರೆ, ನಾಲ್ಕನೇ ಸ್ಥಾನದಲ್ಲಿರುವ ಬಿಜೆಪಿಯ ಅನಿಲ್ ಕುಮಾರ್ ಆರ್ ಅವರು ಶೇ 12.9ರಷ್ಟು ಮತ ಪಡೆದಿದ್ದಾರೆ.
ಇದನ್ನೂ ಓದಿ: Molakalmuru Election 2023 Winner: ಮೊಳಕಾಲ್ಮೂರಿನಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ನ ಗೋಪಾಲಕೃಷ್ಣಗೆ ಗೆಲುವು
2013ರ ವಿಧಾನಸಭೆ ಚುನಾವಣೆಯಲ್ಲಿ ಚಳ್ಳಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ ರಘುಮೂರ್ತಿ ಅವರು ಗೆದ್ದಿದ್ದರು. 2018ರಲ್ಲೂ ಅವರು 13,539 ಮತಗಳ ಅಂತರದಿಂದ ಜೆಡಿಎಸ್ನ ರವೀಶ್ ಅವರನ್ನು ಸೋಲಿಸಿದ್ದರು. ಪ್ರಸಕ್ತ ಚುನಾವಣೆಯಲ್ಲಿ ಕ್ಷೇತ್ರದಿಂದ 2 ಬಾರಿ ಆಯ್ಕೆಯಾಗಿದ್ದ ಟಿ ರಘುಮೂರ್ತಿ ಅವರು ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ