Kapu Election 2023 Winner: ಭರ್ಜರಿ ಗೆಲುವು ಸಾಧಿಸಿದ ಗುರ್ಮೆ ಸುರೇಶ್ ಶೆಟ್ಟಿ
ವಿನಯ್ ಕುಮಾರ್ ಸೂರಕೆ ಅವರಿಗೆ ಪೈಪೋಟಿ ನೀಡಿದ್ದು ಗುರ್ಮೆ ಸುರೇಶ್ ಶೆಟ್ಟಿ. ವಿನಯ್ ಕುಮಾರ್ ಸೂರಕೆ 2013ರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದರು. ಆದರೆ 2018ರಲ್ಲಿ ಕಾಪುವಿನಲ್ಲಿ ಕಾಂಗ್ರೆಸ್ ವಿರೋಧ ಅಲೆಗಳಿದ್ದು. ಈ ಬಾರಿ ಮತ್ತೆ ಕಾಂಗ್ರೆಸ್ಗೆ ಕಾಪು ಜನ ಮಣೆ ಹಾಕಬಹುದ ಎಂದುಕೊಂಡಿದ್ದಾರೆ, ಆದರೆ ಈ ಬಾರಿ ಕಮಲಕ್ಕೆ ಮತ ನೀಡಿದ್ದಾರೆ.
ಕಾಪು: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಇಂದು ಪ್ರಕಟಗೊಂಡಿದೆ. ಕಾಪು ವಿಧಾನಸಭಾ ಕ್ಷೇತ್ರದಲ್ಲಿ (Kapu Assembly Constituency) ಈ ಬಾರಿ ಮೂರು ಪಕ್ಷಗಳ ನಡುವೆ ಬಾರಿ ಪೈಪೋಟಿ ನಡೆದಿತ್ತು. ಇಲ್ಲಿ ಕಾಂಗ್ರೆಸ್ ಪ್ರಭಾವ ಹೆಚ್ಚು ಎಂದು ಹೇಳಲಾಗಿತ್ತು, ಆದರೆ ಈ ಬಾರಿ ಕೂಡ ಬಿಜೆಪಿಯೇ ಗೆದ್ದಿದೆ. ಬಿಜೆಪಿ ಭಾರೀ ಗೆಲ್ಲುವು ಸಾಧಿಸಿದೆ. 2018ರ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸೋತ ವಿನಯ್ ಕುಮಾರ್ ಸೂರಕೆ, ಈ ಬಾರಿ ಮತ್ತೆ ಸ್ಪರ್ಧಿಸಿದ್ದು ಮತ್ತೆ ಸೋತಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಲಾಲಾಜಿ ಮಂಡಲ್ ಗೆಲುವು ಸಾಧಿಸಿದರು. ಆದರೆ ಈ ಬಾರಿ ವಿನಯ್ ಕುಮಾರ್ ಸೂರಕೆ ಅವರಿಗೆ ಪೈಪೋಟಿ ನೀಡಿದ್ದು ಗುರ್ಮೆ ಸುರೇಶ್ ಶೆಟ್ಟಿ. ವಿನಯ್ ಕುಮಾರ್ ಸೂರಕೆ 2013ರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದರು. ಆದರೆ 2018ರಲ್ಲಿ ಕಾಪುವಿನಲ್ಲಿ ಕಾಂಗ್ರೆಸ್ ವಿರೋಧ ಅಲೆಗಳಿದ್ದು. ಈ ಬಾರಿ ಮತ್ತೆ ಕಾಂಗ್ರೆಸ್ಗೆ ಕಾಪು ಜನ ಮಣೆ ಹಾಕಬಹುದ ಎಂದುಕೊಂಡಿದ್ದಾರೆ, ಆದರೆ ಈ ಬಾರಿ ಕಮಲಕ್ಕೆ ಮತ ನೀಡಿದ್ದಾರೆ. ಆದರೂ ಎರಡು ಪಕ್ಷಗಳ ನಡುವೆ ಭಾರೀ ಪೈಪೋಟಿ ನಡೆದಿದೆ.
ಇನ್ನೂ ಇಲ್ಲಿ ಬಿಜೆಪಿ ಅಭ್ಯರ್ಥಿಯು ಕಳೆದ ಚುನಾವಣೆಯಲ್ಲಿ 10 ಸಾವಿರ ಅಂತರದಲ್ಲಿ ಗೆಲುವು ಸಾಧಿಸಿದ್ದರು, ಆದರೆ ಲಾಲಾಜಿ ಮಂಡನ್ ಹೇಳಿಕೊಳ್ಳುವಷ್ಟು ಕೆಲಸ ಮಾಡಿಲ್ಲ ಎಂಬ ಮಾತು ಇಲ್ಲಿತ್ತು. ಈ ಕಾರಣಕ್ಕೆ ಬಿಜೆಪಿ ಈ ಬಾರಿ ಜಾತಿ ಲೆಕ್ಕಚಾರ ಹಾಗೂ ಸಂಘಟನಾ ಶಕ್ತಿಗೆ ಅನುಗುಣವಾಗಿ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಟಿಕೇಟ್ ನೀಡಿತ್ತು , ಇನ್ನೂ ಕಾಂಗ್ರೆಸ್ನಿಂದ ಪ್ರಬಲ ಅಭ್ಯರ್ಥಿಯಾಗಿರುವ ವಿನಯ್ ಕುಮಾರ್ ಸೂರಕೆ ಅವರಿಗೆ ಪ್ರಬಲ ಪೈಪೋಟಿ ನೀಡಿದ್ದರು.
ಇದನ್ನೂ ಓದಿ: Molakalmuru Election 2023 Winner: ಬಿಜೆಪಿ ವಿರುದ್ಧ ಕಾಂಗ್ರೆಸ್ನ ಗೋಪಾಲಕೃಷ್ಣಗೆ ಗೆಲುವು
ಈ ಬಾರಿಯ ಜೆಡಿಎಸ್ನಿಂದ ಸಬೀನಾ ಸಮದ್ ಸ್ಪರ್ಧಿಸುತ್ತಿದ್ದು. ಸಬೀನಾ ಸಮದ್ ಕಾಪುವಿನಲ್ಲಿ ಪ್ರಬಲ ಅಭ್ಯರ್ಥಿ ಅಲ್ಲದಿದ್ದರು, ಮುಸ್ಲಿಂ ಸಮುದಾಯದ ಮತಗಳು ಇವರ ಪರ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಕಾಪುವಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಹೆಚ್ಚು ಪೈಪೋಟಿ ನೀಡುತ್ತಿರುವ ಕಾರಣ ಭಾರೀ ಅಂತರದಲ್ಲಿ ಜೆಡಿಎಸ್ ಸೋತಿದೆ.