ಚಿಕ್ಕಬಳ್ಳಾಪುರ: ಆರೋಗ್ಯ ಸಚಿವರಾಗಿದ್ದ, ಪ್ರಭಾವಿ ಬಿಜೆಪಿ ನಾಯಕ ಡಾ ಕೆ ಸುಧಾಕರ್(Dr k Sudhakar) ಅವರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾಗಿ ರಾಜ್ಯವೇ ಹುಬ್ಬೇರಿಸುವಂತೆ ಗೆಲುವಿನ ಉತ್ಸಾಹದಲ್ಲಿದ್ದ ಪ್ರದೀಪ್ ಈಶ್ವರ್ (Pradeep Eshwar) ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಕಾಂಗ್ರೆಸ್ನ ನೂತನ ಶಾಸಕ ಪ್ರದೀಶ್ ಈಶ್ವರ್ (MLA Pradeep Eshwar) ಅವರ ಸಾಕು ತಾಯಿ ರತ್ನಮ್ಮ ಇಂದು ನಿಧನರಾಗಿದ್ದಾರೆ.
72 ವರ್ಷ ವಯಸ್ಸಿನ ರತ್ನಮ್ಮ ಪೇರೇಸಂದ್ರ ಗ್ರಾಮದಲ್ಲಿ ಕೊನೆಯುಸಿರೆಳೆದಿದ್ದಾರೆ. ರತ್ನಮ್ಮ ಅವರು ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇನ್ನು ಮತ್ತೊಂದೆಡೆ ಇಂದು ಸಿಎಂ ಮತ್ತು ಡಿಸಿಎಂ ಸೇರಿದಂತೆ ಕೆಲ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ಹಿನ್ನೆಲೆ ಪ್ರದೀಪ್ ಈಶ್ವರ್ ಬೆಂಗಳೂರಿನಲ್ಲಿದ್ದಾರೆ. ಸದ್ಯ ವಿಷಯ ತಿಳಿಯುತ್ತಿದ್ದಂತೆ ಪ್ರದೀಪ್ ಈಶ್ವರ್ ಪೇರೇಸಂದ್ರದತ್ತ ತೆರಳುತ್ತಿದ್ದಾರೆ. ಪೇರೇಸಂದ್ರ ಗ್ರಾಮಕ್ಕೆ ತೆರಳಿ ತಾಯಿ ರತ್ನಮ್ಮ ಅವರ ಅಂತಿಮ ದರ್ಶನ ಪಡೆಯಲಿದ್ದಾರೆ.
ಇದನ್ನೂ ಓದಿ: ಸುಧಾಕರ್ನನ್ನು ಸೋಲಿಸಿದ್ದಕ್ಕೆ ಕಾಂಗ್ರೆಸ್ ನಾಯಕರು ಹೇಗೆಲ್ಲ ಸಂಭ್ರಮಿಸಿದರು ಗೊತ್ತಾ?ನೂತನ ಶಾಸಕ ಪ್ರದೀಪ್ ಈಶ್ವರ್ ಮಾತು ಕೇಳಿ
ಪ್ರದೀಪ್ ಚಿಕ್ಕ ವಯಸ್ಸಿನಲ್ಲಿ ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾಗ ಪ್ರದೀಪ್ ಹಾಗೂ ಆತನ ತಮ್ಮ ಚೇತನ್ ನನ್ನು ಸಂಬಂಧಿ ರತ್ನಮ್ಮನವರೇ ಸಾಕಿ ಸಲುಹಿ ದೊಡ್ಡವರನ್ನಾಗಿ ಮಾಡಿದ್ರು. ಕಡು ಬಡತನದಲ್ಲಿ ಬೆಳೆದಿದ್ದ ಪ್ರದೀಪ್ ಸದ್ಯ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕನಾದ ಸಂತೋಷದಲ್ಲಿ ಇದ್ರು. ಇನ್ನೂ ಇಂದು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಎಕ.ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಮಾಡುವ ಸಂಭ್ರಮದಲ್ಲಿ ಪ್ರದೀಪ್ ಈಶ್ವರ್ ಇದ್ರು. ಆದ್ರೆ ಸಾಕು ತಾಯಿ ನಿಧನದ ಸುದ್ದಿ ಪ್ರದೀಪ್ ಈಶ್ವರ್ ದುಃಖತಪ್ತರಾಗುವಂತೆ ಮಾಡಿದೆ. ಇದ್ರಿಂದ ಬೆಳಿಗ್ಗೆ ಪಾರ್ಥೀವ ಶರೀರದ ದರ್ಶನ ಪಡೆದ ಪ್ರದೀಪ್ ಪಾರ್ಥಿವ ಶರೀರದ ಪಾದಗಳನ್ನು ಗಟ್ಟಿಯಾಗಿ ಹಿಡಿದು ನಮಸ್ಕರಿಸಿದ್ರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:01 am, Sat, 20 May 23