Bagalkot: ಕಾರು ಬೆನ್ನತ್ತಿದ ಬಾಗಲಕೋಟೆ ಪಕ್ಷೇತರ ಅಭ್ಯರ್ಥಿ ಪರ ಕಾರ್ಯರ್ತರು, ಟಿ ಶರ್ಟ್​ಗಳು ಪತ್ತೆ

|

Updated on: May 08, 2023 | 11:11 PM

ಮತದಾರರಿಗೆ ಹಂಚಲು ಸೀರೆಗಳನ್ನು ಸಾಗಿಸುತ್ತಿದ್ದಾಗ ಪಕ್ಷೇತರ ಅಭ್ಯರ್ಥಿ ಪರ ಕಾರ್ಯಕರ್ತರು, ಕಾರು ಬೆನ್ನತ್ತಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಸ್ಥಳಕ್ಕೆ ಆಗಮಿಸಿದ ಚುನಾವಣಾಧಿಕಾರಿಗಳು ಟಿ ಶರ್ಟ್​ಗಳನ್ನು ವಶಕ್ಕೆ ಪಡೆದಿದ್ದಾರೆ.

Bagalkot: ಕಾರು ಬೆನ್ನತ್ತಿದ ಬಾಗಲಕೋಟೆ ಪಕ್ಷೇತರ ಅಭ್ಯರ್ಥಿ ಪರ ಕಾರ್ಯರ್ತರು, ಟಿ ಶರ್ಟ್​ಗಳು ಪತ್ತೆ
ಬಾಗಲಕೋಟೆಯಲ್ಲಿ ಸೀರೆಗಳನ್ನು ವಶಕ್ಕೆ ಪಡೆದ ಚುನಾವಣಾಧಿಕಾರಿಗಳು
Follow us on

ಬಾಗಲಕೋಟೆ: ಪಕ್ಷೇತರ ಅಭ್ಯರ್ಥಿ ಪರ ಕಾರ್ಯಕರ್ತರು ಕಾರು ಬೆನ್ನತ್ತಿ ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ಟಿ ಶರ್ಟ್​ಗಳನ್ನು ವಶಕ್ಕೆ ಪಡೆದು ಚುನಾವಣಾಧಿಕಾರಿಗಳಿಗೆ ಒಪ್ಪಿಸಿದ ಘಟನೆ ಇಂದು ನಡೆದಿದೆ. ಕಾರಿನಲ್ಲಿ ಟೀ ಶರ್ಟ್​ (T Shirts Seize) ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ತಿಳಿದ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಚರಂತಿಮಠ (Mallikarjun Charantimath) ಪರ ಕಾರ್ಯಕರ್ತರು ಬೈಕ್​ಗಳಲ್ಲಿ ಹಿಂಬಾಲಿಸಿದ್ದಾರೆ. ಇದನ್ನು ನೋಡಿದ ಕಾರು ಚಾಲಕ ವೇಗವಾಗಿ ಚಲಾಯಿಸಿದರೂ ಕಾರ್ಯಕರ್ತರು ಬೆನ್ನು ಬಿಡದ ಹಿನ್ನೆಲೆ ಚಾಲಕ ಕಾರು ಬಿಟ್ಟು ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.

ವೇಗವಾಗಿ ಚಲಾಯಿಸಿದ ಚಾಲಕ, ಬಸವೇಶ್ವರ ವೃತ್ತದ ಬಳಿ ಇರುವ ಭುವನ್ ನಾರಾ ಎಂಬುವರ ಗೋದಾಮು ಬಳಿ ಕಾರು ಬಿಟ್ಟು ಪರಾರಿಯಾಗಿದ್ದಾನೆ. ಈ ವೇಳೆ ಕಾರ್ಯಕರ್ತರು ಕಾರು ಪರಿಶೀಲಿಸಿದಾಗ ಟಿ ಶರ್ಟ್​​ಗಳ ಬಂಡಲ್​ಗಳು ಪತ್ತೆಯಾಗಿದ್ದು, ಕೂಡಲೇ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಹಾಗೂ ಬಾಗಲಕೋಟೆ ನಗರ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದು, ನಾಲ್ಕು ಬಂಡಲ್ ಟಿ ಶರ್ಟ್​ಗಳನ್ನು ಹಾಗೂ ಕಾರು ವಶಕ್ಕೆ ಪಡೆದಿದ್ದಾರೆ.

ಅಲ್ಲದೆ, ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಗೋದಾಮು ಮಾಲೀಕನಿಗೆ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ವಾಹನ ಯಾರಿಗೆ ಸೇರಿದ್ದು? ವಾಹನದಲ್ಲಿನ ಟಿ ಶರ್ಟ್​ಗಳು ಯಾರಿಗೆ ಸೇರಿದ್ದು? ಎಂದು ಪರಿಶೀಲನೆ ನಡೆಸಲಾಗುತ್ತಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:09 pm, Mon, 8 May 23