B Sriramulu: ಗಣಿಧಣಿ ಜನಾರ್ದನ ರೆಡ್ಡಿ ಕೈಜಾರಿದ ಮೀನು ಯಾರು? ಲೇಟೆಸ್ಟ್​ ಆಗಿ ರೆಡ್ಡಿ ಹೇಳಿದ ಆ ಮೀನಿನ ಕತೆಯೇನು?

|

Updated on: Mar 07, 2023 | 11:06 AM

Gali Janardhan Reddy: ರೆಡ್ಡಿ ಹೇಳಿದ ಮೀನಿನ ಕಥೆ, ಒಂದು ಕಾಲದ ಸ್ನೇಹಿತ ಶ್ರೀರಾಮುಲುಗೆ ಎಂದು ಹೇಳಲಾಗ್ತಿದೆ.

B Sriramulu: ಗಣಿಧಣಿ ಜನಾರ್ದನ ರೆಡ್ಡಿ ಕೈಜಾರಿದ ಮೀನು ಯಾರು? ಲೇಟೆಸ್ಟ್​ ಆಗಿ ರೆಡ್ಡಿ ಹೇಳಿದ ಆ ಮೀನಿನ ಕತೆಯೇನು?
ಣಿಧಣಿ ಜನಾರ್ದನ ರೆಡ್ಡಿ ಕೈಜಾರಿದ ಮೀನು ಯಾರು?
Follow us on

ಹಾವಿನ ದ್ವೇಷ ಹನ್ನೆರಡು ವರ್ಷ ಅನ್ನೋ ಮಾತು ಎಲ್ಲರಿಗೂ ಗೊತ್ತು. ಅದೇ ಪ್ರಕಾರ ಬರೊಬ್ಬರಿ 12 ವರ್ಷ ರಾಜಕೀಯ ವನವಾಸ ಅನುಭವಿಸಿ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಗಣಿಧಣಿ ದಶಕದ ಹಿಂದಿನ ದ್ವೇಶವನ್ನ ಒಂದೊಂದಾಗಿ ಹೊರಗೆಡುವುತ್ತಿದ್ದಾರೆ. ಆ ಮೂಲಕ ತಮ್ಮ ಬೆನ್ನಿಗೆ ಚೂರಿ ಹಾಕಿದ್ಯಾರು ಅನ್ನೋದನ್ನ ಪರೋಕ್ಷವಾಗಿ ರೀವಿಲ್ ಮಾಡಿದ್ದಾರೆ. ಹಾಗಿದ್ರೆ ಬನ್ನಿ ರೆಡ್ಡಿ (Gali Janardhan Reddy) ಹೇಳಿರೊ ಆ ಮೀನು (Fish) ಯಾವುದು ಎನ್ನೊದನ್ನ ಹೇಳ್ತೀವಿ ನೋಡಿ..

ಹೌದು. ರಾಜ್ಯ ರಾಜಕೀಯದಲ್ಲಿ (Karnataka Assembly Elections 2023) ಗಣಿಧಣಿ ಜನಾರ್ದನ ರೆಡ್ಡಿ ಎರಡನೇ ಇನ್ನಿಂಗ್ಸ್ ಆರಂಭಿಸಿ ಅದಾಗಲೇ ಎರಡು ತಿಂಗಳೂ ಕಳೆದಿದೆ. ತಮ್ಮದೇ ಹೊಸ ಪಕ್ಷ ಕಟ್ಟೋ ಮೂಲಕ ಫೀಲ್ಡಿಗಿಳಿದಿದ್ದಾರೆ. ಬರೋಬ್ಬರಿ 12 ವರ್ಷ ಕಾಲ ರಾಜಕೀಯ ವನವಾಸದಲ್ಲಿದ್ದ ಗಣಿಧಣಿ ರೆಡ್ಡಿ, ಒಂದು ಕಾಲದ ರಿಪಬ್ಲಿಕ್ ಆಫ್​ ಬಳ್ಳಾರಿಯ ಅನಭಿಶಕ್ತ ದೊರೆ ರೆಡ್ಡಿಗಾರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಟ್ಟೋ ಮೂಲಕ ಎದುರಾಳಿಗಳಿಗೆ ಟಕ್ಕರ್ ಕೊಟ್ಟಿದ್ದರು. ಸೈಲೆಂಟ್ ಆಗಿಯೇ ಇಷ್ಟು ದಿನ ಪಕ್ಷ ಸಂಘಟನೆ ಮಾಡಿದ್ದ ರೆಡ್ಡಿಯ ಗಾಲಿ ನಿಧಾನವಾಗಿ ಉರುಳೋಕೆ ಶುರು ಮಾಡಿದೆ.

ತಮ್ಮ ಬೆನ್ನಿಗೆ ಚೂರಿ ಹಾಕಿದವ ವಿರುದ್ದ ರೆಡ್ಡಿ ಸೋಮವಾರ ಪರೋಕ್ಷವಾಗಿಯೇ ಕಿಡಿಕಾರಿದ್ದಾರೆ. ಸದ್ಯ ಪಕ್ಷ ಸಂಘಟನೆ ಮಾಡುತ್ತಾ, ಅಭ್ಯರ್ಥಿಯ ಘೋಷಣೆ ಮಾಡ್ತಿದಾರೆ ರೆಡ್ಡಿ. ನಿನ್ನೆ ಸೋಮವಾರ ಹಾವೇರಿ ಜಿಲ್ಲೆಗೆ ಆಗಮಿಸಿದ್ದ ವೇಳೆ ಬಹಿರಂಗ ಸಮಾವೇಶ ಉದ್ದೇಶಿಸಿ ಮಾತನಾಡಿದರು. ರೆಡ್ಡಿ ನಮ್ಮವರೇ ನಂಗೆ ಚೂರಿ ಹಾಕಿದರು ಎಂದ್ರು. ಅಷ್ಟೆ ಅಲ್ಲದೇ ಪರೋಕ್ಷವಾಗಿ ಸಚಿವ ಶ್ರೀರಾಮುಲು (B Sriramulu) ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ ವಿರುದ್ದ ಕಿಡಿ ಕಾರಿದ್ದಾರೆಂದು ಹೇಳಲಾಗ್ತಿದೆ. ಯಾಕೆಂದ್ರೆ ರೆಡ್ಡಿ ಹೇಳಿದ ಮೀನಿನ ಕಥೆ, ಒಂದು ಕಾಲದ ಸ್ನೇಹಿತ ಶ್ರೀರಾಮುಲುಗೆ ಎಂದು ಹೇಳಲಾಗ್ತಿದೆ.

ಯಾಕೆಂದ್ರೆ ಸುಪ್ರೀಂ ಕೋರ್ಟ್​​ನಿಂದ ಜಾಮೀನು ಸಿಕ್ಕ ಬಳಿಕ ರೆಡ್ಡಿ ಬಿಜೆಪಿಗೆ ವಾಪಸ್ ಮರಳೋಕೆ ಶತಪ್ರಯತ್ನ ನಡೆಸಿದ್ದರು. ಅದು ಸಚಿವ ಶ್ರೀರಾಮುಲು ಮೂಲಕ ಅನ್ನೋದು ಗುಟ್ಟಾಗಿ ಉಳಿದಿಲ್ಲ. ಆದ್ರೆ ರಾಮುಲು ಮುಂದೆ ಸಂಧಾನ ಮಾತಾಡಿ ಹಿಂದೆ ಸಂಚು ಮಾಡಿದ್ದಾರೆ ಎನ್ನೋ ಆರೋಪ ರೆಡ್ಡಿ ಪಾಳಯದಲ್ಲಿತ್ತು. ಬಿಜೆಪಿ ಬಾಗಿಲು ಬಂದ್​ ಆಗಿದ್ದಕ್ಕೆ ರೆಡ್ಡಿ ತಮ್ಮ ರಾಜಕೀಯ ಉಳಿವಿಗಾಗಿ ಹೊಸ ಪಕ್ಷ ಕಟ್ಟಿದರು. ಹೀಗಾಗಿಯೇ ಇಂದು ನಮ್ಮ ಜೊತೆಗಿದ್ದೇ ನಮ್ಮನ್ನ ತುಳಿದಿದ್ದಾರೆ ಎಂದಿದ್ದಾರೆ‌. ಹೀಗಾಗಿ ಸದ್ಯ ರೆಡ್ಡಿ ಹೇಳಿದ ಆ ಮೀನಿನ ಕಥೆ ಒಂದು ಕಾಲದ ಸ್ನೇಹಿತ ರಾಮುಲು ಅವರೇ ಎನ್ನಲಾಗ್ತಿದೆ.

ಒಂದು ಕಾಲದಲ್ಲಿ ರಿಪಬ್ಲಿಕ್ ಆಫ್​ ಬಳ್ಳಾರಿಯ ದೊರೆಯಾಗಿದ್ದ ರೆಡ್ಡಿಗೆ ಆಪತ್ತು ಬಂದಾಗ ಮಾತ್ರ ತಮ್ಮವರು ಯಾರೂ ಜೊತೆಗೆ ಬರಲಿಲ್ಲ ಅನ್ನೋ ನೋವು ಕಾಡಿದೆ. ನನ್ನಿಂದಲೇ ಅಧಿಕಾರ ಅನುಭವಿಸುತ್ತಿರೋ ನೀವೆಲ್ಲಾ ನಂಗೆ ಸಹಾಯ ಮಾಡ್ತಿಲ್ಲ ಅನ್ನೋ ಕೊರಗು ಕಾಡಿತ್ತು. ಇದಕ್ಕಾಗಿ ಒಂದು, ತಮ್ಮನ್ನ ಬಿಜೆಪಿ ಪಕ್ಷಕ್ಕೆ ಸೇರೋದಕ್ಕೆ ಸಹಾಯ ಮಾಡಿ. ಇಲ್ಲಾಂದ್ರೆ ನನ್ನ ದಾರಿಗೆ ಬನ್ನಿ ಎನ್ನೋ ಮಾತಾಡಿದ್ದಾರಂತೆ.

ಆದ್ರೆ ಸಚಿವ ರಾಮುಲು ಸೇರಿದಂತೆ ಯಾರೊಬ್ಬರೂ ರೆಡ್ಡಿಯ ಜೊತೆಗೆ ಬರಲಿಲ್ಲ. ಹೀಗಾಗೇ ತಮ್ಮವರೇ ತಮ್ಮ ಮಾತು ಕೇಳಲಿಲ್ಲ ಅನ್ನೋದು ರೆಡ್ಡಿಯ ಸಿಟ್ಟಾಗಿದೆ. ಯಾಕೆಂದ್ರೆ ಶ್ರೀರಾಮುಲುಗೆ ಪ್ರಾದೇಶಿಕ ಪಕ್ಷ ಕಟ್ಟಿ, ಕೈಸುಟ್ಟುಕೊಂಡ ಅನುಭವ ಆಗಿದೆ. ‌ಹೀಗಾಗೇ ರೆಡ್ಡಿಗೆ ಪಕ್ಷ ಕಟ್ಟೋ ವಿಚಾರಕ್ಕೆ ರಾಮುಲು ಬೇಡ ಎಂದಿದ್ದರು.‌ ಆದ್ರೆ ರಾಮುಲು ಮಾತು ಕೇಳದ ರೆಡ್ಡಿ, ಪಕ್ಷ ಕಟ್ಟಿ ತೊಡೆ ತಟ್ಟಿದ್ದಾರೆ. ಅಲ್ಲದೆ ತಮ್ಮ ವಿರುದ್ದ ಪಕ್ಷದಲ್ಲಿ ಷಡ್ಯಂತ್ರ ಮಾಡಿದವರ ವಿರುದ್ದ ನಿಧಾನವಾಗೇ ಗುಡುಗುತ್ತಿದ್ದಾರೆ.

ಹಾನಗಲ್ ನಲ್ಲಿ ಸೋಮವಾರ ಆಡಿರುವ ಮಾತು ರೆಡ್ಡಿ ನಿಧಾನವಾಗಿ ಬಿಜೆಪಿ ವಿರುದ್ದ ಗುಡುತ್ತಿದ್ದಾರೆ ಎಂಬುದಕ್ಕೆ ಪುಷ್ಠಿ ನೀಡಿದೆ. ಅಲ್ಲದೇ ತಮ್ಮನ್ನ ಪಕ್ಷಕ್ಕೆ ಸೇರಿಸಿಕೊಳ್ಳಲು ವಿರೋಧ ಮಾಡಿದ ಕೇಂದ್ರ ನಾಯಕರಿಗೂ ಬಿಸಿ ಮುಟ್ಟಿಸೋಕೆ ರೆಡಿಯಾಗಿದ್ದಾರೆ. ಸದ್ಯ ಇರೋ‌ ಮಾಹಿತಿ ಪ್ರಕಾರ ರೆಡ್ಡಿಗೆ ರಾಜ್ಯ ನಾಯಕರಿಗಿಂತ, ಕೇಂದ್ರದ ಇಬ್ಬರು ನಾಯಕರ ಮೇಲೆ ಮುನಿಸಿದೆ. ಆದ್ರೆ ಅದನ್ನ ಬಹಿರಂಗ ಪಡಿಸೋಕೆ ಆಗ್ತಿಲ್ಲ ಅವರಿಗೆ. ಹೀಗಾಗೇ ಪರೋಕ್ಷವಾಗೇ ಗುಡುಗುತ್ತಿದ್ದಾರೆ.

ಸದ್ಯ ಇಷ್ಟು ದಿನ ಸೈಲೆಂಟ್ ಆಗಿ ಪಕ್ಷ ಸಂಘಟನೆ ಮಾಡ್ತಿದ್ದ ರೆಡ್ಡಿ, ನಿಧಾನವಾಗಿ ಗುಡುಗೋಕೆ ಶುರು ಮಾಡಿದ್ದಾರೆ. ಎದೆಯೊಳಗಿನ ನೋವನ್ನ ಏಳೆ ಏಳೆಯಾಗಿ ಬಿಚ್ಚಿಡ್ತಿದ್ದಾರೆ. ಅದು ಮುಂದೆ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಎಷ್ಟರ ಮಟ್ಟಿಗೆ ನಷ್ಟವಾಗುತ್ತೆ ಎನ್ನೋದನ್ನ ಕಾದು ನೋಡಬೇಕು.

ವರದಿ: ದತ್ತಾತ್ರೇಯ ಪಾಟೀಲ್, ಟಿ ವಿ9, ಕೊಪ್ಪಳ

 

Published On - 11:00 am, Tue, 7 March 23