Harihara Election Results: ಹರಿಹರ ವಿಧಾನಸಭಾ ಕ್ಷೇತ್ರ ಚನಾವಣೆ 2023 ಫಲಿತಾಂಶ; ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ

|

Updated on: May 13, 2023 | 2:48 AM

Harihara Assembly Election Result 2023 Live Counting Updates: ಪ್ರತಿ ಚುನಾವಣೆಯಲ್ಲೂ ಹರಿಹರ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ನಡೆಯುತ್ತಿದೆ.

Harihara Election Results: ಹರಿಹರ ವಿಧಾನಸಭಾ ಕ್ಷೇತ್ರ ಚನಾವಣೆ 2023 ಫಲಿತಾಂಶ; ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ
ಹರಿಹರ ವಿಧಾನಸಭೆ ಚುನಾವಣೆ ಫಲಿತಾಂಶ
Follow us on

Harihara Assembly Election Results 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ತ್ರಿಕೋನ ಸ್ಪರ್ಧೆ ಏರ್ಪಡುವ ಹರಿಹರ ಕ್ಷೇತ್ರದಲ್ಲಿ ಬಿಜೆಪಿಯಿಂದ ಬಿಪಿ ಹರೀಶ್, ಕಾಂಗ್ರೆಸ್​ನಿಂದ ನಂದಿಗಾವಿ ಶ್ರೀನಿವಾಸ್, ಜೆಡಿಎಸ್​ನಿಂದ ಎಚ್​ಎಸ್ ಶಿವಶಂಕರಪ್ಪ ಕಣದಲ್ಲಿದ್ದು, ಆಮ್ ಆದ್ಮಿ ಪಕ್ಷ ಅದೃಷ್ಟ ಪರೀಕ್ಷೆಗೆ ಇಳಿದಿದೆ. ಕ್ಷೇತ್ರದಲ್ಲಿ ಗಣೇಶಪ್ಪ ದುರ್ಗದ್ ಅವರನ್ನು ಕಣಕ್ಕಿಳಿಸಿದೆ.

ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸಮಬಲದ ಹೋರಾಟ ನಡೆಸಿಕೊಂಡು ಬಂದಿವೆ. ಕ್ಷೇತ್ರದ ಜನರು 2008ರಲ್ಲಿ ಬಿಜೆಪಿ ಹರೀಶ್ ಅವರಿಗೆ ಗೆಲುವು ನೀಡಿದ್ದರೆ, 2013ರ ಚುನಾವಣೆಯಲ್ಲಿ ಜೆಡಿಎಸ್​ನ ಎಚ್​ಎಸ್ ಶಿವಶಂಕರಪ್ಪ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. 2018ರಲ್ಲಿ ಕಾಂಗ್ರೆಸ್​ನ ಎಸ್ ರಾಮಪ್ಪ ಅವರಿಗೆ ಜನಾಶೀರ್ವಾದ ಸಿಕ್ಕಿತ್ತು.

ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ರಾಮಪ್ಪ ಅವರ ಬದಲಿಗೆ ನಂದಿಗಾವಿ ಶ್ರೀನಿವಾಸ್ ಅವರನ್ನು ಕಣಕ್ಕಿಳಿಸಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಕ್ರಮವಾಗಿ ಹರೀಶ್ ಮತ್ತು ಶಿವಶಂಕರಪ್ಪ ಅವರನ್ನೇ ಕಣಕ್ಕಿಳಿಸಿದ್ದಾರೆ. ತ್ರೀಕೋನ ಹೋರಾಟದ ನಡುವೆ ಆಪ್ ಪಕ್ಷದ ಅಭ್ಯರ್ಥಿ ಗಣೇಶಪ್ಪ ದುರ್ಗದ್ ಅವರು ಪೈಪೋಟಿ ನೀಡಲಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಭಾರೀ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ