Holalkere Assembly Election Results 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ಹೊಳಲ್ಕೆರೆ ಕ್ಷೇತ್ರದಲ್ಲಿ 2008ರಿಂದಲೂ ಎಂ ಚಂದ್ರಪ್ಪ ಹಾಗೂ ಹೆಚ್ ಆಂಜನೇಯ ಅವರ ನಡುವೆ ನೇರ ಹಣಾಹಣಿ ನಡೆಯುತ್ತಿದೆ. ಈ ಬಾರಿಯೂ ಇವರ ನಡುವೆಯೇ ಜಿದ್ದಾಜಿದ್ದಿ ಏರ್ಪಟ್ಟಿದೆ. ಬಿಜೆಪಿಯಿಂದ ಚಂದ್ರಪ್ಪ, ಕಾಂಗ್ರೆಸ್ನಿಂದ ಆಂಜನೇಯ, ಜೆಡಿಎಸ್ನಿಂದ ಇಂದ್ರಜಿತ್ ನಾಯ್ಕ್ ಹಾಗೂ ಆಮ್ ಆದ್ಮಿ ಪಕ್ಷದಿಂದ ಮಹಾಂತೇಶ್ ಅವರು ಕಣದಲ್ಲಿದ್ದಾರೆ.
ಎಸ್ಸಿ ಮೀಸಲು ಕ್ಷೇತ್ರವಾಗಿರುವ ಹೊಳಲ್ಕೆರೆ ಕ್ಷೇತ್ರದಿಂದ 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಚಂದ್ರಪ್ಪ ಅವರು ಕಾಂಗ್ರೆಸ್ನ ಆಂಜನೇಯ ಅವರನ್ನು ಮಣಿಸಿದ್ದರು. 2013ರಲ್ಲಿ ಕೆಜೆಪಿಯಿಂದ ಕಣಕ್ಕಿಳಿದಿದ್ದ ಚಂದ್ರಪ್ಪ ಅವರನ್ನು ಸೋಲಿಸಿ ಆಂಜನೇಯ ಅವರು ಶಾಸಕರಾಗಿ ಆಯ್ಕೆಯಾಗಿದ್ದರು. 2018ರಲ್ಲಿ ಮತ್ತೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಚಂದ್ರಪ್ಪ ಆಂಜನೇಯ ಅವರನ್ನು ಮಣಿಸಿ ಶಾಸಕರಾಗಿ ಆಯ್ಕೆಯಾಗಿದ್ದರು.
ಇದೀಗ ಮತ್ತೆ ಈ ಇಬ್ಬರು ನಾಯಕರು ಕಣದಲ್ಲಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಲಿಂಗಾಯತ ಮತ್ತು ದಲಿತ ಸಮುದಾಯಗಳು ನಿರ್ಣಾಯಕವಾಗಿದ್ದು, ಹೊಳಲ್ಕೆರೆಯ ಮತದಾರ ಯಾರ ಕೊರಳಿಗೆ ವಿಜಯ ಮಾಲೆ ಹಾಕಲಿದ್ದಾನೆಂಬುದು ಕಾದು ನೋಡಬೇಕಿದೆ.