Karnataka Assembly Election 2023: ಪತ್ರನಿಗೆ ಟಿಕೆಟ್​ ನೀಡುವಂತೆ ಎಂಟಿಬಿ ನಾಗರಾಜ್​​ ಯಡಿಯೂರಪ್ಪ, ಸಿಎಂ ಬೊಮ್ಮಾಯಿಗೆ ದುಂಬಾಲು

|

Updated on: Apr 07, 2023 | 2:59 PM

ಹೊಸಕೋಟೆ ವಿಧಾನಸಭಾ ಕ್ಷೇತ್ರದಿಂದ ನನ್ನ ಪುತ್ರನಿಗೆ ಟಿಕೆಟ್​​ ನೀಡಬೇಕೆಂದು ಮನವಿ ಮಾಡಿದ್ದೇನೆ. ಬಿಜೆಪಿ ಕೋರ್ ಕಮಿಟಿ ಸಭೆಯಲ್ಲೂ ಟಿಕೆಟ್​ ಬಗ್ಗೆ ಚರ್ಚಿಸಲಾಗಿದೆ. ಈಗ ಬಿ.ಎಸ್​​.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ‌ ಎಂದು ಎಂಟಿಬಿ ನಾಗರಾಜ್​ ಹೇಳಿದರು.

Karnataka Assembly Election 2023: ಪತ್ರನಿಗೆ ಟಿಕೆಟ್​ ನೀಡುವಂತೆ ಎಂಟಿಬಿ ನಾಗರಾಜ್​​ ಯಡಿಯೂರಪ್ಪ, ಸಿಎಂ ಬೊಮ್ಮಾಯಿಗೆ ದುಂಬಾಲು
ಸಚಿವ ಎಂಟಿಬಿ ನಾಗರಾಜ್​
Follow us on

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ (Karnataka Assembly Election) ದಿನ ಎಣಿಕೆ ಪ್ರಾರಂಭವಾಗಿದ್ದು, ಅಖಾಡದ ಕಾವು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಮೂರು ಪಕ್ಷದಲ್ಲೂ ಟಿಕೆಟ್​ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಜೊತೆಗೆ ಪಕ್ಷಾಂತರ ಕೂಡ ಏರುಗತಿಯಲ್ಲಿ ಸಾಗುತ್ತಿದೆ. ಕಾಂಗ್ರೆಸ್​ (Congress) ಈಗಾಗಲೆ ಅಭ್ಯರ್ಥಿಗಳ 2 ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇನ್ನೊಂದು ಪಟ್ಟಿ ಬಿಡುಗಡೆಯಾಗಲಿದೆ. ಇತ್ತ ಜೆಡಿಎಸ್ (JDS)​ 1 ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮತ್ತೊಂದು ಪಟ್ಟಿ ಬಿಡುಗಡೆ ಮಾಡಲಿದೆ. ಈ ಪಟ್ಟಿಯಲ್ಲಿ ಹಾಸನ ಕ್ಷೇತ್ರದ ಟಿಕೆಟ್ ಯಾರಿಗೆ ಎಂದು ತಿಳಿಯಲಿದೆ. ಇನ್ನು ಬಿಜೆಪಿ (BJP), ಹಂತ 1,2,3 ಮಾದರಿಯಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿ ಕೇಂದ್ರಕ್ಕೆ ​​ಕಳುಹಿಸಿದೆ. ಇಂದು ಮತ್ತು ನಾಳೆ (ಏ.7,8) ಕೇಂದ್ರ ಮಟ್ಟದಲ್ಲಿ ಸಭೆ ನಡೆದು ಏಪ್ರಿಲ್​.9 ರಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ. ಈ ಹಿನ್ನೆಲೆ ಟಿಕೆಟ್​ ಆಕಾಂಕ್ಷಿಗಳು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ (BS Yediyurappa), ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಮನೆ ಮುಂದೆ ಪರೇಡ್​​ ನಡೆಸಿದ್ದಾರೆ. ಈಗ ಸಚಿವ ಎಂಟಿಬಿ ನಾಗರಾಜ್​ (MTB Nagaraj) ಕೂಡ ದುಂಬಾಲು ಬಿದ್ದಿದ್ದು, ಪುತ್ರನಿಗೆ ಟಿಕೆಟ್​​ ನೀಡುವಂತೆ ಬಿಜೆಪಿ ಕೋರ್​ ಟೀಂಗೆ ಮನವಿ ಮಾಡಿದ್ದಾರೆ.

ಈ ಸಂಬಂಧ ಬಿಜೆಪಿ ನಾಯಕ ಬಿ.ಎಸ್​​.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎಂಟಿಬಿ ನಾಗರಾಜ್​ ಹೊಸಕೋಟೆ ವಿಧಾನಸಭಾ ಕ್ಷೇತ್ರದಿಂದ ನನ್ನ ಪುತ್ರನಿಗೆ ಟಿಕೆಟ್​​ ನೀಡಬೇಕೆಂದು ಮನವಿ ಮಾಡಿದ್ದೇನೆ. ಬಿಜೆಪಿ ಕೋರ್ ಕಮಿಟಿ ಸಭೆಯಲ್ಲೂ ಟಿಕೆಟ್​ ಬಗ್ಗೆ ಚರ್ಚಿಸಲಾಗಿದೆ. ಈಗ ಬಿ.ಎಸ್​​.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ‌ ಎಂದು ಹೇಳಿದರು.
ಅಲ್ಲದೇ ಪುತ್ರನಿಗೆ ಟಿಕೆಟ್​ ನೀಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗು ಮನವಿ ಮಾಡಿದ್ದೇನೆ. ನಾನು ಹೊಸಕೋಟೆ ಅಲ್ಲ, ಎಲ್ಲೂ ಸ್ಪರ್ಧೆ ಮಾಡೋದಿಲ್ಲ. ನನ್ನ ಮಗನಿಗೆ ಬಿಜೆಪಿ ಟಿಕೆಟ್ ಕೊಡಿ ಗೆಲ್ಲಿಸುತ್ತೇನೆ ಎಂದಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸೌಮ್ಯಾ ರೆಡ್ಡಿಯಿಂದ ಮತದಾರರಿಗೆ ಆಮಿಷ; ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ಕುರುಬ ಸಮುದಾಯಕ್ಕೆ 8 ಟಿಕೆಟ್ ನೀಡಬೇಕು ಎಂದು ಕೇಳಿದ್ದೇನೆ. ಗೆಲ್ಲುವ ಕ್ಷೇತ್ರದಲ್ಲಿ ನಮ್ಮ ಸಮುದಾಯಕ್ಕೆ ಟಿಕೆಟ್ ಕೊಡಿ ಎಂದು ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

ಹೊಸಕೋಟೆ ಕ್ಷೇತ್ರದಲ್ಲಿ ಚುನಾವಣೆ ಮತ್ತು ರಾಜಕೀಯ ಪ್ರಾಬಲ್ಯಕ್ಕಾಗಿ ಬಿಎನ್ ಬಚ್ಚೇಗೌಡ ಮತ್ತು ಎಮ್ ಟಿ ಬಿ ನಾಗರಾಜ್ ಕಾದಾಡುತ್ತಿದ್ದರು. ಇನ್ನು ಅವರ ಮಕ್ಕಳಾದ ಶರತ್ ಬಚ್ಚೇಗೌಡ ಮತ್ತು ನೀತಿಶ್ ನಾಗರಾಜ್ ಅದನ್ನು ಮುಂದುವರಿಸಿಕೊಂಡು ಹೋಗಲಿದ್ದಾರೆ. 2023 ವಿಧಾನಸಭಾ ಚುನಾವಣೆಗೆ ಹೊಸಕೋಟೆಯಿಂದ ನಾಗರಾಜ್, ತಮ್ಮ ಮಗನಿಗಾಗಿ ಪ್ರಚಾರವನ್ನೂ ಆರಂಭಿಸಿದ್ದಾರೆ. ಕಳೆದ ಬಾರಿಯ ಉಪಚುನಾವಣೆಯಲ್ಲಿ ಶರತ್ ವಿರುದ್ಧ ಸೋತಿದ್ದ ನಾಗರಾಜ್ ಈ ಬಾರಿ ಮಗನನ್ನು ಗೆಲ್ಲಿಸುವ ಪಣತೊಟ್ಟಂತಿದೆ. ಅದರ ಭಾಗವಾಗಿ ಅವರು ಸಂಸದ ಬಚ್ಚೇಗೌಡರ ಆಪ್ತ ಹುಲ್ಲೂರು ಮಂಜುನಾಥ ಅವರನ್ನು ತಮ್ಮೆಡೆ ಸೆಳೆದುಕೊಂಡಿದ್ದಾರೆ.

ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:57 pm, Fri, 7 April 23