KS Eshwarappa: ಕಜಕಿಸ್ತಾನದಿಂದ ಬೆದರಿಕೆ ಕರೆ: ಪೊಲೀಸ್​ ಮೊರೆ ಹೋದ ಕೆಎಸ್​ಈಶ್ವರಪ್ಪ

|

Updated on: May 15, 2023 | 1:43 PM

ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಎಸ್​ ಈಶ್ವರಪ್ಪ , ಭಾನುವಾರ ರಾತ್ರಿ 12:30 ಗಂಟೆಗೆ ಕಜಾಕಿಸ್ತಾನ ದೇಶದಿಂದ ನನಗೆ ಬೆದರಿಕೆ ಕರೆ ಬಂದಿತ್ತು. ಈ ಬಗ್ಗೆ ನಾನು ಎಸ್​ಪಿಗೆ ದೂರು ನೀಡುತ್ತೇನೆ ಎಂದರು.

KS Eshwarappa: ಕಜಕಿಸ್ತಾನದಿಂದ ಬೆದರಿಕೆ ಕರೆ: ಪೊಲೀಸ್​ ಮೊರೆ ಹೋದ ಕೆಎಸ್​ಈಶ್ವರಪ್ಪ
ಕೆಎಸ್ ಈಶ್ವರಪ್ಪ
Follow us on

ಶಿವಮೊಗ್ಗ: ನನಗೆ ಕಳೆದ ರಾತ್ರಿ‌ 12:30ಕ್ಕೆ ಮಿಸ್ಡ್​ ಕಾಲ್ ಬಂದಿತ್ತು. ಕಜಾಕಿಸ್ತಾನದ +7(678)815-46-5 ಸಂಖ್ಯೆಯಿಂದ ಬೆದರಿಕೆ ಕರೆ ಬಂದಿದ್ದು ಈ ಕುರಿತು ಸೂಕ್ತ ತನಿಖೆ ನಡೆಸಬೇಕೆಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ(KS Eshwarappa) ತಿಳಿಸಿದರು. ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾನುವಾರ ರಾತ್ರಿ 12:30 ಗಂಟೆಗೆ ಕಜಾಕಿಸ್ತಾನ ದೇಶದಿಂದ ನನಗೆ ಬೆದರಿಕೆ ಕರೆ ಬಂದಿತ್ತು. ಈ ಬಗ್ಗೆ ನಾನು ಎಸ್​ಪಿಗೆ ದೂರು ನೀಡುತ್ತೇನೆ ಎಂದರು.

ರಾಜ್ಯದಲ್ಲಿ ರಾಷ್ಟ್ರದ್ರೋಹಿ ಚಟುವಟಿಕೆಗಳು ಹೆಚ್ಚಳವಾಗುತ್ತಿವೆ. ಬೆಳಗಾವಿಯಲ್ಲಿ ವಿಜಯೋತ್ಸವ ವೇಳೆ ಪಾಕ್ ಪರ ಘೋಷಣೆ ಕೂಗಲಾಗಿದೆ. ಬೆಳಗಾವಿಯ ಟಿಳಕವಾಡಿ ಠಾಣೆಯಲ್ಲಿ ಐವರ ವಿರುದ್ಧ ಕೇಸ್​ ದಾಖಲಾಗಿದೆ.ಡಿಕೆಶಿ, ಸಿದ್ದರಾಮಯ್ಯ ಜಾತಿ ಮೂಲಕ ಸಿಎಂ ಸ್ಥಾನ ಕೇಳ್ತಿದ್ದಾರೆ. ಈ ಮೂಲಕ ಇವರು ಜಾತಿವಾದಿ ಎನ್ನುವುದು ಸಾಬೀತು ಆಗಿದೆ. ಜೆಡಿಎಸ್ ಎಂಎಲ್​ಸಿ ಭೋಜೇಗೌಡ ವ್ಯಭಿಚಾರ ಮಾಡಿದ್ದಾರೆ. ಕಾಂಗ್ರೆಸ್​​ನವರು ಭೋಜೇಗೌಡಗೆ ಕ್ಷೀರಾಭಿಷೇಕ ಮಾಡಿದ್ದಾರೆ. ಜೆಡಿಎಸ್ ಪಕ್ಷ ಏನು ಕ್ರಮ ಕೈಗೊಳ್ಳುತ್ತೆ ಕಾದು ನೋಡಬೇಕಿದೆ ಎಂದರು.

ಇದನ್ನೂ ಓದಿ: Foxconn: ಕೊಂಗರಕಲಾನ್​ನಲ್ಲಿ ಫಾಕ್ಸ್​ಕಾನ್ ಘಟಕ ಫಿಕ್ಸ್; ತೆಲಂಗಾಣ ಸ್ಪೀಡ್​ಗೆ ಬೆರಗಾದ ಛೇರ್ಮನ್ ಲಿಯು; ಮೊದಲ ಹಂತದಲ್ಲಿ 4,100 ಕೋಟಿ ರೂ ಹೋಡಿಕೆ; 25,000 ಉದ್ಯೋಗಸೃಷ್ಟಿ

ಮತದಾರರು ಯಾವುದೇ ಜಾತಿಯ ಒತ್ತಡಕ್ಕೆ ಮಣಿಯದೇ ಮತದಾನ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರ ಮತ್ತು ಸಂಘಟನೆಯಿಂದ ಬಿಜೆಪಿ ನಗರ ಕ್ಷೇತ್ರದಲ್ಲಿ ಗೆಲುವಾಗಿದೆ. ರಾಜ್ಯದಲ್ಲಿ ಕಳೆದ ಚುನಾವಣೆಗಿಂತ ಹೆಚ್ಚು ಬೆಂಬಲ ಬಿಜೆಪಿಗೆ ಸಿಕ್ಕಿದೆ. ಜನರ ಋಣ ತೀರಿಸುವ ಕೆಲಸ ಮಾಡುತ್ತೇವೆ. ಜನರ ಅಪೇಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇವೆ. ಕಾಯುವ ನಾಯಿ ರೀತಿಯಲ್ಲಿ ವಿಪಕ್ಷ ಆಗಿ ಕಾರ್ಯನಿರ್ವಹಣೆ ಮಾಡುತ್ತೇವೆ. ಬರುವ ಲೋಕಸಭೆ ಚುನಾವಣೆಯಲ್ಲಿ ಜನರ ವಿಶ್ವಾಸ ಗಳಿಸುತ್ತೇವೆ. ರಾಜ್ಯದಲ್ಲಿ ಸೋಲಿಗೆ ಕಾರಣ ಕುರಿತು ಚರ್ಚೆ ನಡೆಸುತ್ತೇವೆ. ರಾಜ್ಯ ನಾಯಕರು ಈ ಕುರಿತು ಬೆಂಗಳೂರಿನಲ್ಲಿ ಶೀಘ್ರ ಚರ್ಚೆ ಮಾಡುತ್ತಾರೆ. ಮುಳುಗುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಫಲಿತಾಂಶ ಊರುಗೋಲು ಆಗಿದೆ. 36.04 ಮತ ಬಿಜೆಪಿಗೆ ಮತ ಸಿಕ್ಕಿದೆ. ಎಲ್ಲ ನಿರ್ಧಾರ ಪಕ್ಷದ ವರಿಷ್ಠರು ತೆಗೆದುಕೊಳ್ಳುತ್ತಾರೆ ಎಂದರು.

ರಾಜ್ಯ ವಿಧಾನಸಭಾ ಚುನಾವಣೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:43 pm, Mon, 15 May 23