ವೀಲ್‌ಚೇರಿಗೆ ಅನುಮತಿ ಪಡೆಯಲಾಗಿದ್ಯಾ? ಆಪ್​ ಪರ ಪ್ರಚಾರ ಮಾಡುತ್ತಿದ್ದ ವಿಕಲಚೇತನರನ್ನು ತಡೆದ ಚುನಾವಣಾಧಿಕಾರಿ

|

Updated on: Apr 27, 2023 | 10:23 AM

ಆಮ್ ಆದ್ಮಿ ಪಕ್ಷದ ಪರ ಚುನಾವಣಾ ಪ್ರಚಾರ ಮಾಡುತ್ತಿದ್ದ ವಿಕಲಚೇತನರನ್ನು ಚುನಾವಣಾಧಿರಿಗಳು ತಡೆದು ಗಾಲಿಕುರ್ಚಿ ಬಳಸಲು ಅನುಮತಿ ಪಡೆದುಕೊಳ್ಳಬೇಕೆಂದು ಹೇಳಿರುವ ಪ್ರಸಂಗ ನಡೆದಿದೆ,

ವೀಲ್‌ಚೇರಿಗೆ ಅನುಮತಿ ಪಡೆಯಲಾಗಿದ್ಯಾ? ಆಪ್​ ಪರ ಪ್ರಚಾರ ಮಾಡುತ್ತಿದ್ದ ವಿಕಲಚೇತನರನ್ನು ತಡೆದ ಚುನಾವಣಾಧಿಕಾರಿ
ವಿಕಲಚೇತನರನ್ನು ತಡೆದ ಚುನಾವಣಾ ಅಧಿಕಾರಿಗಳು
Follow us on

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಸ್ಪರ್ಧಿಸಿರುವ ಅಭ್ಯರ್ಥಿಗಳು ಪ್ರಚಾರ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಬಳಸುವ ಪ್ರತಿ ವಸ್ತುವಿನ ಮೇಲೂ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದೆ. ಅದರಂತೆ ಬೆಂಗಳೂರಿನಲ್ಲಿ ಆಮ್ ಆದ್ಮಿ ಪಕ್ಷದ(Aam Aadmi Party) ಪರ ಪ್ರಚಾರ ನಡೆಸುತ್ತಿದ್ದ ವಿಕಲಚೇತನರನ್ನು ಚುನಾವಣಾಧಿಕಾರಿಗಳು ತಡೆದಿದ್ದಾರೆ. ಚಿಕ್ಕಪೇಟೆಯ ಸಜ್ಜನ್ ರಾವ್ ವೃತ್ತದಲ್ಲಿ ಬುಧವಾರ ಸಂಜೆ 4 ಗಂಟೆಗೆ ಪ್ರಚಾರ ನಡೆಸುತ್ತಿದ್ದ ಸುಮಾರು 50 ಮಂದಿ ವಿಕಲಚೇತನ ಆಪ್ ಬೆಂಬಲಿಗರನ್ನು ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಕೇಶವ ವಿಸಿ ಅವರು ತಡೆದು ನಿಲ್ಲಿಸಿದ್ದು, ವೀಲ್‌ಚೇರ್ ಬಳಕೆಗೆ ಅನುಮತಿ ಪಡೆಯಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಎಲೆಕ್ಷನ್ ಪ್ರಚಾರಕ್ಕೆ ರಾಜ್ಯಾದ್ಯಂತ 10 ಸಾವಿರ ಸರ್ಕಾರಿ ಬಸ್ ಬುಕ್, ಮೇ 5ರಿಂದ 13ರ ವರೆಗೂ ಪ್ರಯಾಣಿಕರಿಗೆ ತೊಂದರೆ ಸಾಧ್ಯತೆ

ವಿಕಲಚೇತನ ವ್ಯಕ್ತಿಗಳು ಗಾಲಿಕುರ್ಚಿಗಳನ್ನು ಬಳಸುತ್ತಿದ್ದರು. ಹೀಗಾಗಿ ಎಎಪಿ ಈ ಪ್ರಚಾರಕ್ಕೆ ಅನುಮತಿ ಪಡೆಯಬೇಕಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಎಎಪಿ ಕಾರ್ಯಕರ್ತರು ತಮಗೆ ಅಗತ್ಯವಿರುವ ಅನುಮತಿಗಳನ್ನು ಹೊಂದಿದ್ದಾರೆ ಎಂದು ಪರಿಶೀಲಿಸಿದಾಗ, ಅವರು ಯಾವುದೇ ಅನುಮತಿ ಪಡೆದಿರಲಿಲ್ಲ. ಗಾಲಿಕುರ್ಚಿಗಳನ್ನು ಸಹ ವಾಹನಗಳು ಎಂದು ಪರಿಗಣಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಸ್ಥಳದಲ್ಲೇ ಅಧಿಕಾರಿಗಳು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಎಎಪಿಗೆ ವಾಹನಗಳ ಬಳಕೆಗೆ ಅನುಮತಿ ಪಡೆದಿದೆ. ಆದರೆ ವೀಲ್‌ಚೇರ್ ಒಂದು `ವಾಹನವಾಗಿದ್ದು, ಅಂಗವಿಕಲರಾಗಿದ್ದರೆ ಅವರ ವಾಹನಕ್ಕೆ ಪ್ರತ್ಯೇಕ ಅನುಮತಿ ಪಡೆಯುವ ಅಗತ್ಯ ಇದೆ ಎಂದಿದ್ದಾರೆ. ಈ ವೇಳೆ ಚುನಾವಣಾ ಅಧಿಕಾರಿಗಳ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಎಎಪಿ ಕಾರ್ಯಕರ್ತರು, ಆಯೋಗದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಚುನಾವಣಾ ಅಧಿಕಾರಿಗಳ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಎಎಪಿ ಕಾರ್ಯಕರ್ತರು, ಆಯೋಗದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ವಿಕಲಚೇತನ ಒಬ್ಬರಾದ ಮುನಿಸ್ವಾಮಿ ಶ್ರೀನಿವಾಸ್ ಎನ್ನುವರು ಪ್ರತಿಕ್ರಿಯಿಸಿದ್ದು, ಈ ವೀಲ್‌ಚೇರ್ ನಮ್ಮ ದೇಹದ ಒಂದು ಭಾಗವಾಗಿದೆ. ನಮಗೆ ಕಾಲುಗಳಿಲ್ಲ, ಆದ್ದರಿಂದ ಇದನ್ನು ಬಳಸುತ್ತೇವೆ. ಇದನ್ನು ವಾಹನವೆಂದು ನೀವು ಹೇಗೆ ಪರಿಗಣಿಸುತ್ತೀರಿ ಎಂದು ಪ್ರಶ್ನಿಸಿದರು.

ಆಪ್ ಕಾರ್ಯಕರ್ತನ ಮೇಲೆ ಹಲ್ಲೆ

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ತೊಳದಿನ್ನಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಆಪ್​ ಕಾರ್ಯಕರ್ತನ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ಸುರಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತೊಳದಿನ್ನಿ ಗ್ರಾಮದಲ್ಲಿ, ಸುರಪುರ ಕ್ಷೇತ್ರದ ಆಪ್​ ಅಭ್ಯರ್ಥಿ ಆರ್.ಎಂ.ನಾಯಕ ಎದುರೇ ಹಲ್ಲೆ ಮಾಡಿದ್ದಾರೆ. ಪ್ರಚಾರ ಮಾಡಲು ಯಾಕೆ ಬಂದಿದ್ದೀಯಾ ಎಂದು ಪ್ರಶ್ನಿಸಿ, ಕಟ್ಟೆ ಮೇಲೆ ನಿಂತಿದ್ದವನನ್ನು ಕೆಳಗೆ ಎಳೆದು ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ