ದುರ್ಗಾಷ್ಟಮಿಯ ಪುಣ್ಯ ದಿನದಂದು ಕರ್ನಾಟಕ ಚುನಾವಣೆ ಘೋಷಣೆ, ಕಾಂಗ್ರೆಸ್‌ ಭರವಸೆಗಳನ್ನು ಜಾರಿಗೆ ತರೋಣ ಎಂದ ಸುರ್ಜೆವಾಲ

|

Updated on: Mar 29, 2023 | 1:08 PM

ಕೇಂದ್ರ ಚುನಾವಣಾ ಆಯೋಗವು ಇಂದು ಕರ್ನಾಟಕ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ದಿನಾಂಕ ಘೋಷಣೆ ಮಾಡಿದೆ. ಇನ್ನು ಈ ಬಗ್ಗೆ ಕರ್ನಾಟಕ ಕಾಂಗ್ರೆಸ್​ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಟ್ವೀಟ್ ಮೂಲಕ ಮತದಾರರಿಗೆ ಮಹತ್ವದ ಕರೆ ಕೊಟ್ಟಿದ್ದಾರೆ.

ದುರ್ಗಾಷ್ಟಮಿಯ ಪುಣ್ಯ ದಿನದಂದು ಕರ್ನಾಟಕ ಚುನಾವಣೆ ಘೋಷಣೆ, ಕಾಂಗ್ರೆಸ್‌ ಭರವಸೆಗಳನ್ನು ಜಾರಿಗೆ ತರೋಣ ಎಂದ ಸುರ್ಜೆವಾಲ
ರಣದೀಪ್ ಸಿಂಗ್ ಸುರ್ಜೆವಾಲ
Follow us on

ಬೆಂಗಳೂರು: ಕಾತರದಿಂದ ಕಾಯುತ್ತಿದ್ದ ಕರ್ನಾಟಕದ 224 ವಿಧಾನಸಭಾ (Karnataka Assembly Elections 2023) ಕ್ಷೇತ್ರಗಳಿಗೆ ಚುನಾವಣಾ ದಿನಾಂಕವನ್ನು ಘೋಷಣೆಯಾಗಿದೆ. ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ. ರಾಜ್ಯದಲ್ಲಿರಾಜಕೀಯ ಪಕ್ಷಗಳಿಂದ ಭರ್ಜರಿಯಾಗಿ ಮತಬೇಟೆ ಆರಂಭವಾಗಲಿದೆ. ಇನ್ನು ಇದರ ಮಧ್ಯೆ ಕರ್ನಾಟಕ ಕಾಂಗ್ರೆಸ್​ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ(randeep singh surjewala)  ಪ್ರತಿಕ್ರಿಯಿಸಿದ್ದು, ದುರ್ಗಾಷ್ಟಮಿಯ ಪುಣ್ಯ ದಿನದಂದು ಕೇಂದ್ರ ಚುನಾವಣಾ ಆಯೋಗ ಕರ್ನಾಟಕ ಚುನಾವಣೆಯನ್ನು ಘೋಷಿಸಿದೆ. ಕಾಂಗ್ರೆಸ್‌ ಭರವಸೆಗಳನ್ನು ಜಾರಿಗೆ ತರೋಣ ಎಂದು ಕರೆ ಕೊಟ್ಟಿದ್ದಾರೆ.

ಇದನ್ನೂ ಓದಿ: Karnataka Election 2023 Schedule: ಕರ್ನಾಟಕ ವಿಧಾನಸಭೆಗೆ ಚುನಾವಣಾ ದಿನಾಂಕ ಪ್ರಕಟ, ಮೇ. 10ರಂದು ಮತದಾನ, ಮೇ.13ಕ್ಕೆ ಫಲಿತಾಂಶ

ಅತ್ತ ದೆಹಲಿಯಲ್ಲಿ ಕೇಂದ್ರ ಚುನಾವಣೆ ಆಯೋಗ ದಿನಾಂಕ ಘೋಷಣೆ ಮಾಡುತ್ತಿದ್ದಂತೆಯೇ ಇತ್ತ ಕರ್ನಾಟಕ ಕಾಂಗ್ರೆಸ್​ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಟ್ವೀಟ್​ ಮಾಡಿದ್ದು, ದುರ್ಗಾಷ್ಟಮಿಯ ಪುಣ್ಯ ದಿನದಂದು ECI ಕರ್ನಾಟಕ ಚುನಾವಣೆಯನ್ನು ಘೋಷಿಸಿದೆ. #40%Sarkara ಮತ್ತು ಅದರ ಲಜ್ಜೆಗೆಟ್ಟ ಲೂಟಿಯಿಂದ ರಾಜ್ಯವನ್ನು ಮುಕ್ತಗೊಳಿಸಲು ಕಾಂಗ್ರೆಸ್ ಸಂಕಲ್ಪ ಮಾಡಿದೆ. #BrandKarnataka ಪುನರ್ ನಿರ್ಮಾಣ ಮಾಡೋಣ! #ಕನ್ನಡಿಗರ ಅಭಿಮಾನ ಬೆಳೆಯಲಿ! ಕಾಂಗ್ರೆಸ್‌ ಭರವಸೆಗಳನ್ನು ಜಾರಿಗೆ ತರೋಣ! ಕರ್ನಾಟಕ ಗೆಲ್ಲಲಿ ಎಂದು ಬರೆದುಕೊಂಡಿದ್ದಾರೆ.

 

ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟವಾಗಿದ್ದು, ಇದೇ 10ರಂದು ಮತದಾನ ನಡೆಯಲಿದ್ದು, ಮೇ 13 ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಇನ್ನ ನಾಮಪತ್ರ ಸಲ್ಲಿಕೆ ಏಪ್ರಿಲ್‌ 13 ರಂದೇ ಆರಂಭವಾಗಲಿದೆ. ಏಪ್ರಿಲ್‌ 20 ನಾಮಪತ್ರ ಸಲ್ಲಿಕೆಗೆ ಕೊನೆದಿನವಾಗಿದೆ. ಏಪ್ರಿಲ್‌ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಏಪ್ರಿಲ್‌ 24 ಕಡೆ ದಿನವಾಗಿದೆ.

Published On - 1:03 pm, Wed, 29 March 23