ಕಾಂಗ್ರೆಸ್​ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ: ಶಾಸಕಾಂಗ ಸಭೆ, ರೆಸಾರ್ಟ್​ಗೆ ಶಿಫ್ಟ್ ಸಾಧ್ಯತೆ

|

Updated on: May 13, 2023 | 11:24 AM

224 ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದ್ದು, ಆರಂಭದಲ್ಲಿ ಕಾಂಗ್ರೆಸ್ ಭಾರೀ ಮುನ್ನಡೆ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಕಾಂಗ್ರೆಸ್​ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ: ಶಾಸಕಾಂಗ ಸಭೆ, ರೆಸಾರ್ಟ್​ಗೆ ಶಿಫ್ಟ್ ಸಾಧ್ಯತೆ
Follow us on

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ (Karnataka Election result 2023) ಇಂದು ದೊರಕಲಿದೆ. ಬೆಳಗ್ಗೆ 8 ಗಂಟೆಯಿಂದ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ 34 ಕೇಂದ್ರಗಳಲ್ಲಿ ನಡೆಯುತ್ತಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶದ ಚಿತ್ರಣ ದೊರಕುವ ನಿರೀಕ್ಷೆಯಿದ್ದು, ಸಂಜೆಯ ವೇಳೆಗೆ ಸ್ಪಷ್ಟ ಚಿತ್ರಣ ದೊರಕಲಿದೆ. ಇನ್ನು ಪ್ರಮುಖ ಅಂಶ ಅಂದರೆ ಕಾಂಗ್ರೆಸ್​ ಆರಂಭದಲ್ಲಿ ಭಾರೀ ಮುನ್ನಡೆ ಸಾಧಿಸುವುದರೊಂದಿಗೆ ಮ್ಯಾಜಿಕ್​ ನಂಬರ್ ಸಹ ದಾಟಿದೆ. ಹೀಗಾಗಿ ಕಾಂಗ್ರೆಸ್​ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮುನ್ನಡೆ ಸಾಧಿಸುವ ಕ್ಷೇತ್ರದಲ್ಲಿ ಗೆಲುವು ದೃಢಪಟ್ಟರೆ ಕಾಂಗ್ರೆಸ್ ಪಕ್ಷವು ಇಂದು ರಾತ್ರಿಯೇ ಶಾಸಕಾಂಗ ಪಕ್ಷದ ಸಭೆ ನಡೆಸಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಗೆಲುವು ಸಾಧಿಸಿದ ಎಲ್ಲ ಶಾಸಕರನ್ನು ಬೆಂಗಳೂರಿಗೆ ಕರೆತರಲು ವಿಶ್ವಾಸಾರ್ಹ ನಾಯಕರಿಗೆ ಜವಾಬ್ದಾರಿ ನೀಡಲಾಗಿದೆ.

ಇದನ್ನೂ ಓದಿ: Karnataka Election Results 2023 Live: ಗೆಲವುವಿನ ಖಾತೆ ತೆರೆದ ಕಾಂಗ್ರೆಸ್​, ಮತ ಎಣಿಕೆಯ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ

ಬೆಂಗಳೂರಿಗೆ ಬರುವ ಶಾಸಕರ ಸಮಕ್ಷಮ ಶಾಸಕಾಂಗ ಪಕ್ಷದ ಸಭೆ ನಡೆಸಿ, ನಂತರ ಕಾಂಗ್ರೆಸ್‌ಗೆ ಸುರಕ್ಷಿತ ವಾತಾವರಣ ಇರುವ ರಾಜಸ್ಥಾನ ಅಥವಾ ಇತರೆ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಕ್ಕೆ ಕಳುಹಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಮುನ್ನಡೆ ಸಾಧಿಸಿರುವ ಅಭ್ಯರ್ಥಿ ಗಳನ್ನು ನಿಭಾಯಿಸಲು ಸೂಚನೆ ನೀಡಲಾಗಿದ್ದು, ಕಾಂಗ್ರೆಸ್ ನಿಂದ ಒಬೊಬ್ಬ ಅಭ್ಯರ್ಥಿಗೆ ಒಬ್ಬೊಬ್ಬ ನಾಯಕರ ಜವಾಬ್ದಾರಿ ಕೊಡಲಾಗಿದ್ದು, ಗೆದ್ದ ಅಭ್ಯರ್ಥಿಗಳ ಜೊತೆ ನಿರಂತರ ಸಂಪರ್ಕದಲ್ಲಿರಲು ಸೂಚಿಸಲಾಗಿದೆ.

ಒಟ್ಟಿನಲ್ಲಿ ಸದ್ಯದ ಟ್ರೆಂಡ್ ನೋಡಿದರೆ ಆರಂಭದಲ್ಲಿ ಕಾಂಗ್ರೆಸ್​ ಮ್ಯಾಜಿಕ್ ನಂಬರ್ (113) ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದೆ. ಅಲ್ಲದೇ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಂಭ್ರಮಚಾರಣೆ ನಡೆಯುತ್ತಿದೆ.

 

Published On - 11:23 am, Sat, 13 May 23