Karnataka Assembly Election Opinion Poll 2023 Highlights Updates: ರಾಜ್ಯ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದ್ದು, ಎಕ್ಸಿಟ್ ಪೋಲ್ ಅಥವಾ ಮತಗಟ್ಟೆ ಸಮೀಕ್ಷೆಗಳು ಪ್ರಕಟಗೊಂಡಿವೆ. ಮತಗಟ್ಟೆ ಸಮೀಕ್ಷಾ ವರದಿಗಳ ಪ್ರಕಾರ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ದೊರೆಯಲಿದೆ? ಯಾರು ನಿರ್ಣಾಯಕರಾಗಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ. ಮೇ 13ರಂದು ಶನಿವಾರ ಫಲಿತಾಂಶ ಪ್ರಕಟಗೊಳ್ಳಲಿದ್ದು ಸ್ಪಷ್ಟ ಚಿತ್ರಣ ದೊರೆಯಲಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ. 85%ರಷ್ಟು ಮತದಾನವಾಗಿದೆ. ನಾಲ್ಕು ವಿಧಾನಸಭಾ ಕ್ಷೇತ್ರಗಳ ಮತದಾನದ ಶೇಕಡಾವಾರು ವಿವರ ಹೀಗಿದೆ.
178-ಹೊಸಕೋಟೆ ವಿಧಾನಸಭಾ ಕ್ಷೇತ್ರ: 90.86%
179-ದೇವನಹಳ್ಳಿ ವಿಧಾನಸಭಾ ಕ್ಷೇತ್ರ: 84.61%
180-ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ: 84.30%
181-ನೆಲಮಂಗಲ ವಿಧಾನಸಭಾ ಕ್ಷೇತ್ರ: 79.60%
ಮೈಸೂರು: ನಾನು ಜನರ ನಾಡಿಮಿಡಿತ ಅರ್ಥಮಾಡಿಕೊಂಡಿರುವುದು ಸರಿಯಿದೆ. ನಾನೇನು ಫಲಿತಾಂಶದ ನಿರೀಕ್ಷೆ ಮಾಡಿದ್ದೆನೋ ಅದೇ ಫಲಿತಾಂಶ ಬರಲಿದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದರು. ಕರಾವಳಿ ಭಾಗದಲ್ಲಿ ಈ ಬಾರಿ ನಮ್ಮ ಸೀಟು ಹೆಚ್ಚಾಗಲಿದೆ. ಬಜರಂಗದಳ ವಿಚಾರ ಒಂದು ವಿವಾದದ ವಿಚಾರವೇ ಅಲ್ಲ. ನಾವು ನಮ್ಮ ಪ್ರಣಾಳಿಕೆಯಲ್ಲಿ ಬಹಳ ಸ್ಪಷ್ಟವಾಗಿ ಹೇಳಿದ್ದೇವೆ. ಬಿಜೆಪಿಯವರು ಅದನ್ನು ಅಪಪ್ರಚಾರ ಮಾಡಿದರು ಎಂದು ವಾಗ್ದಾಳಿ ಮಾಡಿದರು.
ಮೈಸೂರು: ಈ ಬಾರಿ ಕಾಂಗ್ರೆಸ್‌ಗೆ ಬಹುಮತ ಬರಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ಮೈಸೂರಿನ ನಿವಾಸದಲ್ಲಿ ಮಾತನಾಡಿದ ಅವರು ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ 130ರಿಂದ 150 ಸ್ಥಾನ ಗೆಲ್ಲುತ್ತೆ. ಕರಾವಳಿ ಭಾಗದಲ್ಲೂ ನಾವು ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದರು.
ಎಬಿಪಿ-ಸಿವೋಟರ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ಗೆ 106 ಸ್ಥಾನ, ಬಿಜೆಪಿಗೆ 89 ಸ್ಥಾನ, ಜೆಡಿಎಸ್‌ಗೆ 25 ಸ್ಥಾನ ಮತ್ತು
ಇತರರಿಗೆ 4 ಸ್ಥಾನ ಸಾಧ್ಯತೆ ಇದೆ.
ಟಿವಿ9 ಕನ್ನಡ ಸಿ- ವೋಟರ್ ಮತದಾನೋತ್ತರ ಸಮೀಕ್ಷೆ ಪ್ರಕಾರ ಹಳೇ ಮೈಸೂರಿನಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನದಲ್ಲಿ ಗೆಲುವು ಸಾಧ್ಯತೆ ಇದೆ. ಕಾಂಗ್ರೆಸ್‌ಗೆ 28-32 ಸ್ಥಾನ, ಜೆಡಿಎಸ್‌ಗೆ 19-23, ಬಿಜೆಪಿಗೆ 4, ಇತರರಿಗೆ 3 ಸ್ಥಾನ ಸಾಧ್ಯತೆ ಇದೆ. ಹಳೇ ಮೈಸೂರು ಭಾಗದಲ್ಲಿ ಒಟ್ಟು ಕ್ಷೇತ್ರಗಳ ಸಂಖ್ಯೆ 55.
ಬೆಂಗಳೂರು: ರಾಜ್ಯದಲ್ಲಿ ಈ ಸಲ ಬದಲಾವಣೆ ಗಾಳಿ ಬೀಸಿದೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಡಬಲ್ ಇಂಜಿನ್ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಆಗಿಲ್ಲ. ಉದ್ಯೋಗ ಸೃಷ್ಟಿಸುವಲ್ಲಿ ಕೇಂದ್ರ, ರಾಜ್ಯ ಸರ್ಕಾರ ವಿಫಲವಾಗಿದೆ. ಬೆಲೆ ಏರಿಕೆಯಿಂದ ರಾಜ್ಯದ ಜನ ತತ್ತರಿಸಿದ್ದಾರೆ. ಗ್ರೌಂಡ್ ರಿಪೋರ್ಟ್ ಲಭ್ಯವಾಗಿದೆ, ಕಾಂಗ್ರೆಸ್‌ಗೆ ಬಹುಮತ ಸಿಗಲಿದೆ. ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಿಗಲಿದೆ, ಯಾವುದೇ ಅನುಮಾನ ಬೇಡ ಎಂದು ಹೇಳಿದರು.
ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚಿಸಲಿದೆ. ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ, ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿದೆ. ಬೇರೆ ಯಾವುದೇ ಪಕ್ಷದೊಂದಿಗೆ, ವಿಶೇಷವಾಗಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
#WATCH | Congress will get a clear majority and form the government. According to exit polls, Congress is the single largest party. There is no question of coalition with any other party, especially JD(S): Congress leader Jagadish Shettar#KarnatakaAssemblyElection pic.twitter.com/crw7dFdqcZ
— ANI (@ANI) May 10, 2023
ಹಾವೇರಿ: ಶಿಗ್ಗಾಂವಿ ಕ್ಷೇತ್ರದ ಕಾರ್ಯಕರ್ತರಿಗೆ ಸಿಎಂ ಬೊಮ್ಮಾಯಿ ಧನ್ಯವಾದ ತಿಳಿಸಿದರು. ಶಿಗ್ಗಾಂವಿ ಕ್ಷೇತ್ರದಿಂದ ನಾಲ್ಕನೆ ಬಾರಿ ಆಯ್ಕೆ ಮಾಡಲು ಶ್ರಮಿಸಿದವರಿಗೆ ಧನ್ಯವಾದ ತಿಳಿಸಿದರು. ಬಳಿಕ ಕಾರ್ಯಕರ್ತರ ಜೊತೆ ಫೋಟೋ ತೆಗಿಸಿಕೊಂಡು ಸಂತಸದಿಂದ ಕೈ ಕುಲುಕಿದರು.
ಟಿವಿ9 ಕನ್ನಡ ಸಿ-ವೋಟರ್ ಮತದಾನೋತ್ತರ ಸಮೀಕ್ಷೆ ಪ್ರಕಟವಾಗಿದೆ. ಸಮೀಕ್ಷೆಯಂತೆ ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ಸಾಧ್ಯತೆ ಇದೆ. ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ 18-22 ಸ್ಥಾನ,
ಬಿಜೆಪಿಗೆ 12-16 ಸ್ಥಾನ, ಜೆಡಿಎಸ್‌ಗೆ 0-2, ಇತರರಿಗೆ 0-1 ಸ್ಥಾನ ಸಾಧ್ಯತೆ ಇದೆ.
ಟುಡೇಸ್ ಚಾಣಕ್ಯ ಸಮೀಕ್ಷೆಯಂತೆ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಾಧ್ಯತೆ ಇದೆ. ಸಮೀಕ್ಷೆಯಂತೆ ಕಾಂಗ್ರೆಸ್‌ಗೆ 120 ಸ್ಥಾನ, ಬಿಜೆಪಿಗೆ 92 ಸ್ಥಾನ, ಜೆಡಿಎಸ್‌ಗೆ 12 ಮತ್ತು ಇತರರಿಗೆ 0-3 ಸ್ಥಾನ ಸಾಧ್ಯತೆ ಇದೆ. ಸರ್ಕಾರ ರಚನೆಗೆ ಮ್ಯಾಜಿಕ್ ನಂಬರ್ 113.
ಇಂಡಿಯಾಟುಡೆ-ಏಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಪ್ರಕಟವಾಗಿದೆ. ಸಮೀಕ್ಷೆಯಂತೆ ಕಾಂಗ್ರೆಸ್‌ಗೆ ಅಭೂತಪೂರ್ವ ಬಹುಮತ ಸಾಧ್ಯತೆ ಇದೆ. ಕಾಂಗ್ರೆಸ್‌ಗೆ 122-140 ಸ್ಥಾನ, ಬಿಜೆಪಿಗೆ 62-80 ಸ್ಥಾನ, ಜೆಡಿಎಸ್ 20-25, ಇತರರಿಗೆ 0-3 ಸ್ಥಾನ ಸಾಧ್ಯತೆ ಇದೆ. ಸರ್ಕಾರ ರಚನೆಗೆ ಮ್ಯಾಜಿಕ್ ನಂಬರ್ 113 ಬೇಕು.
ಹಾವೇರಿ: ಎಕ್ಸಿಟ್ ಪೊಲ್ 100% ಕರೆಕ್ಟ್ ಆಗಿರುವುದಿಲ್ಲ. ರಿಯಲ್ ಫಲಿತಾಶ ಬರುವಾಗ ಪ್ಲಸ್ ಮೈನಸ್ ಆಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಶಿಗ್ಗಾಂವಿ ಪಟ್ಟಣದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಗೆ ಸಂಪೂರ್ಣ ಬಹುಮತ ಬರುತ್ತದೆ. ಎಕ್ಸಿಟ್ ಪೊಲ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಬಿಜೆಪಿ ಬಹುಮತ ಸಿಗುತ್ತದೆ. ಹಾಗಾಗಿ ಯಾವುದೇ ರೆಸಾರ್ಟ್ ರಾಜಕೀಯ ಮಾಡುವ ಪ್ರಶ್ನೆ ಇಲ್ಲ. ಮೇ 13 ರ ಫಲಿತಾಂಶ ಬರುವ ತನಕ ಕಾದು ನೋಡಿ. ನಾವೇ ಕಿಂಗ್ ಆಗುತ್ತೇವೆ. ಜೆಡಿಎಸ್ ಕಿಂಗ್ ಮೇಕರ್ ಆಗುವುದಿಲ್ಲ. ಬಿಜೆಪಿಗೆ ಸಂಪುರ್ಣ ಬಹುಮತ ಸಿಗುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.
#WATCH | I am very much confident that we will come back to power with an absolute majority, I am 200% confident. Exit polls are done in a hurry, and there will be lots of errors. There is no question of anybody becoming the kingmaker, for me the people are the kingmaker and they… pic.twitter.com/Ldj4dCgDg3
— ANI (@ANI) May 10, 2023
Tv9 ಕನ್ನಡ C-Voter ಸಮೀಕ್ಷೆ ಪ್ರಕಾರ ಬೃಹತ್ ಬೆಂಗಳೂರಿನಲ್ಲಿ ಬಿಜೆಪಿ ಮೇಲುಗೈ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಬಿಜೆಪಿ 15-19 ಸ್ಥಾನ, ಕಾಂಗ್ರೆಸ್ 11-15 ಸ್ಥಾನ, ಜೆಡಿಎಸ್ 1-4 ಸ್ಥಾನ, ಇತರರು 0-1 ಸ್ಥಾನ ಗೆಲ್ಲೋ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಬಿಜೆಪಿಗೆ ಮೋದಿ ಅಲೆ ವರ ಸಾಧ್ಯತೆ ಎನ್ನಲಾಗುತ್ತಿದೆ.
ಇಂಡಿಯಾಟಿವಿ-CNX ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ಗೆ ಬಹುಮತ ಎಂದು ಹೇಳಲಾಗುತ್ತಿದೆ. ಸಮೀಕ್ಷೆ ಪ್ರಕಾರ ಕಾಂಗ್ರೆಸ್ 110-120 ಸ್ಥಾನ, ಬಿಜೆಪಿ 80-90 ಸ್ಥಾನ, ಜೆಡಿಎಸ್ 20-24 ಸ್ಥಾನ, ಇತರರಿಗೆ 1-3 ಸ್ಥಾನ ಸಾಧ್ಯತೆ ಇದೆ.
ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನ ಪ್ರಕ್ರಿಯೆ ಮುಗಿದಿದೆ. ಸಂಜೆ 6ರವರೆಗೆ ಬೆಂಗಳೂರಿನಲ್ಲಿ ಶೇಕಡಾ 54.53ರಷ್ಟು ಮತದಾನವಾಗಿದೆ.
ಬೆಂಗಳೂರು ಉತ್ತರ ಶೇಕಡಾ 53.03ರಷ್ಟು ಮತದಾನ
ಬೆಂಗಳೂರು ದಕ್ಷಿಣ ಶೇಕಡಾ 52.28ರಷ್ಟು ಮತದಾನ
ಬೆಂಗಳೂರು ನಗರದಲ್ಲಿ ಶೇಕಡಾ 57.17ರಷ್ಟು ಮತದಾನ
ಬೆಂಗಳೂರು ಸೆಂಟ್ರಲ್ ಶೇಕಡಾ 55.63ರಷ್ಟು ಮತದಾನ
ಟೈಮ್ಸ್ ನೌ-ETG ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಬಹುಮತ ಸಾಧ್ಯತೆ ಇದೆ. ಕಾಂಗ್ರೆಸ್‌ಗೆ 113 ಸ್ಥಾನ, ಬಿಜೆಪಿಗೆ 85 ಸ್ಥಾನ, ಜೆಡಿಎಸ್‌ಗೆ 23 ಸ್ಥಾನ ಮತ್ತು ಇತರರಿಗೆ 2 ಸ್ಥಾನ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
Tv9 ಕನ್ನಡ C-Voter ಸಮೀಕ್ಷೆ ಪ್ರಕಾರ ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ಸಾಧ್ಯತೆ ಇದೆ.
ಕಾಂಗ್ರೆಸ್‌ಗೆ 13 ರಿಂದ 17 ಸ್ಥಾನ, ಬಿಜೆಪಿಗೆ 11 ರಿಂದ 15 ಸ್ಥಾನ, ಜೆಡಿಎಸ್ 0-2 ಸ್ಥಾನ, ಇತರರಿಗೆ 0-3 ಸ್ಥಾನ. ಒಟ್ಟು 31 ಸ್ಥಾನಗಳ ಪೈಕಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ಸಾಧ್ಯತೆ ಇದೆ.
ಟಿವಿ9 ಕನ್ನಡ-ಸಿವೋಟರ್ ಮತದಾನೋತ್ತರ ಸಮೀಕ್ಷೆ ಪ್ರಕಟವಾಗಿದ್ದು, ಸಮೀಕ್ಷೆಯಂತೆ ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿಗೆ 24-28 ಸ್ಥಾನ, ಕಾಂಗ್ರೆಸ್‌ಗೆ 22-26 ಮತ್ತು ಜೆಡಿಎಸ್‌ಗೆ 1 ಹಾಗೂ ಇತರರಿಗೆ 0-1 ಸ್ಥಾನ ಸಾಧ್ಯತೆ ಇದೆ.
ಟಿವಿ9 ಕನ್ನಡ ಸಿವೋಟರ್ ಸಮೀಕ್ಷೆಯಂತೆ ಕಾಂಗ್ರೆಸ್‌ಗೆ 100-112 ಸ್ಥಾನ, ಬಿಜೆಪಿಗೆ 83-95 ಸ್ಥಾನ, ಜೆಡಿಎಸ್ 21-29 ಸ್ಥಾನ, ಇತರರಿಗೆ 2-6 ಸ್ಥಾನ ಸಾಧ್ಯತೆ ಇದೆ.
Tv9 ಭಾರತ್ವರ್ಷ್-PolStrat ಸಮೀಕ್ಷೆ ಪ್ರಕಟವಾಗಿದ್ದು, ಅತಂತ್ರ ಫಲಿತಾಂಶ ಹೊರಬಿದ್ದಿದೆ.
Tv9-PolStrat ಸಮೀಕ್ಷೆಯಂತೆ ಬಿಜೆಪಿಗೆ 88-98 ಸ್ಥಾನ, ಕಾಂಗ್ರೆಸ್‌ಗೆ 99-110 ಸ್ಥಾನ, ಜೆಡಿಎಸ್‌ಗೆ 21-26 ಸ್ಥಾನ,
ಇತರರಿಗೆ 0-4 ಸ್ಥಾನ ಸಾಧ್ಯತೆ ಇದೆ.
ನ್ಯೂಸ್ ಆಫ್ ನೇಷನ್ ಸಮೀಕ್ಷೆಯಂತೆ ಬಿಜೆಪಿಗೆ ಸರಳ ಬಹುಮತ ಸಿಗುವ ಸಾಧ್ಯತೆ ಇದೆ. ಸಮೀಕ್ಷೆಯಂತೆ, ಬಿಜೆಪಿಗೆ 114 ಸ್ಥಾನ ಸಿಗುವ ಸಾಧ್ಯತೆ ಇದ್ದು, ಕಾಂಗ್ರೆಸ್‌ಗೆ 86 ಸ್ಥಾನ ಸಾಧ್ಯತೆ ಇದೆ. ಜೆಡಿಎಸ್‌ಗೆ 21 ಸ್ಥಾನ, ಇತರ 3 ಸ್ಥಾನ ಸಿಗುವ ಸಾಧ್ಯತೆ ಇದೆ.
ರಿಪಬ್ಲಿಕ್-PMARQ ಸಮೀಕ್ಷೆಯಂತೆ ಬಿಜೆಪಿಗೆ 85-100 ಸ್ಥಾನ, ಕಾಂಗ್ರೆಸ್‌ಗೆ 94-108, ಜೆಡಿಎಸ್‌ಗೆ 24-32 ಸ್ಥಾನ ಸಿಗುವ ಸಾಧ್ಯತೆ ಇದೆ. ರಿಪಬ್ಲಿಕ್-PMARQ ಸಮೀಕ್ಷೆಯಂತೆ ಇತರರಿಗೆ 2-6 ಸ್ಥಾನ ಸಾಧ್ಯತೆ ಇದೆ.
ಜನ್‌ಕೀ ಬಾತ್ ಸಮೀಕ್ಷೆಯಂತೆ ಬಿಜೆಪಿಗೆ ಬಹುಮತ ಸಾಧ್ಯತೆ ಇದೆ. ಸಮೀಕ್ಷೆ ಪ್ರಕಾರ, ಬಿಜೆಪಿಗೆ 94-117 ಸ್ಥಾನ ಸಿಗುವ ಸಾಧ್ಯತೆ ಇದ್ದು, ಕಾಂಗ್ರೆಸ್‌ಗೆ 91-106 ಸ್ಥಾನಗಳು ಸಿಗುವ ಸಾಧ್ಯತೆ ಇದೆ.
ಜೀ ನ್ಯೂಸ್-ಮ್ಯಾಟ್ರಿಜ್ ಮತದಾನೋತ್ತರ ಸಮೀಕ್ಷೆ ಪ್ರಕಟಗೊಂಡಿದೆ. ಸಮೀಕ್ಷೆ ಪ್ರಕಾರ ಕಾಂಗ್ರೆಸ್ 108ರಿಂದ 118, ಬಿಜೆಪಿ 79-89 ಸ್ಥಾನ? ಮತ್ತು JDS 25ರಿಂದ 35 ಸ್ಥಾನ ಹಾಗೂ ಇತರರಿಗೆ 2-4 ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಕಲಬುರಗಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನ ಮುಕ್ತಾಯವಾಗಿದೆ. ಕಲಬುರಗಿಯ ಮತಗಟ್ಟೆಗಳಲ್ಲಿ ಇವಿಎಂ ಮತ್ತು ವಿವಿಪ್ಯಾಟ್ಗಳನ್ನು ಸೀಲ್ ಮಾಡಿ ಭದ್ರಪಡಿಸಲಾಗುತ್ತಿದೆ. ಮೇ 13ರಂದು ಮತ ಎಣಿಕೆ ನಡೆಯಲಿದೆ.
#WATCH | Voting in the Karnataka Assembly elections concludes.
EVMs and VVPATs being sealed and secured at polling booths in Kalaburagi.
Counting of votes on 13th May. pic.twitter.com/EvV3Eitm7l
— ANI (@ANI) May 10, 2023
ಬೆಂಗಳೂರು: ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಮುಕ್ತಾಯವಾಗಿದ್ದು, ಮತಗಟ್ಟೆ ಅಧಿಕಾರಿಗಳು ಇವಿಎಂ ಮಷಿನ್ ಸೀಲ್ ಮಾಡುತ್ತಿದ್ದಾರೆ. ಸೀಲ್ ಬಳಿಕ ಪೊಲೀಸ್ರ ಭದ್ರತೆಯೊಂದಿಗೆ ಸ್ಟ್ರಾಂಗ್ ರೂಮ್ಗೆ ವಿವಿ ಪ್ಯಾಟ್ ಶಿಫ್ಟ್ ಮಾಡಲಾಗುತ್ತದೆ.
ಬೆಂಗಳೂರು: ರಾಜ್ಯದ 224 ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾನದ ಅವಧಿ ಅಂತ್ಯವಾಗಿದೆ. ಮತಗಟ್ಟೆ ಆವರಣದಲ್ಲಿ ಸರತಿ ಸಾಲಿನಲ್ಲಿ ನಿಂತಿರುವವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಬಹುತೇಕ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಮುಕ್ತಾಯವಾಗಿದೆ. 224 ಕ್ಷೇತ್ರಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆದಿದೆ.
ಕೋಲಾರ: ಮತಗಟ್ಟೆ ಎದುರು ಮಹಿಳೆಯರು ಮಾರಾಮಾರಿ ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಚಿಂತಾಮಣಿ ಸರ್ಕಲ್ ನ ಬೂತ್ ನಂ 148ರಲ್ಲಿ ನಡೆದಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ ಎನ್ನಲಾಗುತ್ತಿದೆ.
ದಾವಣಗೆರೆ: ಪತ್ರಕರ್ತರ ಮೇಲೆ ಚುನಾವಣಾ ಸಿಬ್ಬಂದಿ ಹಲ್ಲೆ ಹಿನ್ನೆಲೆ ಘಟನೆ ಖಂಡಿಸಿ ಪತ್ರಕರ್ತರಿಂದ ಅರೆ ಬೆತ್ತಲೇ ಪ್ರತಿಭಟನೆ ಮಾಡಿದ್ದಾರೆ. ಹೊನ್ನಾಳಿ ತಾಲೂಕಿನ ಹುಣಸಗಟ್ಟ ಗ್ರಾಮದಲ್ಲಿ ಘಟನೆ ನಡೆದಿದೆ. ಮತದಾನಕ್ಕೆ ಕ್ಯೂನಲ್ಲಿ ನಿಂತವರ ಪೋಟೋ ತೆಗೆಯಲು ಹೋದ ಪತ್ರಕರ್ತ ರಮೇಶ ಎಂಬುವರ ಮೇಲೆ ಚುನಾವಣಾ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಪ್ರಶ್ನೆ ಮಾಡಿದ್ದಕ್ಕೆ ಚುನಾವಣಾ ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಪತ್ರ ಕರ್ತರು ಆಕ್ರೋಶಗೊಂಡಿದ್ದಾರೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಆಗ್ರಹಿಸಿದ್ದಾರೆ.
ಬೆಂಗಳೂರು: ಸಂಜೆ 5 ಗಂಟೆ ವೇಳೆಗೆ ಬೆಂಗಳೂರಿನಲ್ಲಿ ಶೇಕಡ 50.91% ಮತದಾನವಾಗಿದ್ದು, ಮತಚಲಾವಣೆಗೆ 50 ನಿಮಿಷ ಮಾತ್ರ ಉಳಿದಿದೆ. ಸಿಲಿಕಾನ್ ಸಿಟಿ ಜನರ ನಿರಾಸಕ್ತಿ ಈ ಬಾರಿ ಶೇಕಾಡವಾರು ಮತದಾನ ಕಡಿಮೆ ಆಗಿದೆ.
ಬೆಂಗಳೂರು ಉತ್ತರ ಶೇಕಡ 50.20% ಮತದಾನ
ಬೆಂಗಳೂರು ದಕ್ಷಿಣ 48.42% ಮತದಾನವಾಗಿದೆ
ಬೆಂಗಳೂರು ಸೆಂಟ್ರಲ್ 51.20% ಮತದಾನವಾಗಿದೆ
ಬೆಂಗಳೂರು ಅರ್ಬನ್ 52.81% ಮತದಾನವಾಗಿದೆ
ಬಳ್ಳಾರಿ: ಮತದಾನ ಕೇಂದ್ರದ ಆವರಣದಲ್ಲಿ ತಾಯಿ ಮಗುವಿಗೆ ಜನ್ಮ ನೀಡಿರುವಂತಹ ಅಪರೂಪದ ಘಟನೆಯೊಂದು ಕುರುಗೋಡು ತಾಲೂಕಿನ ಕೊರ್ಲಾಗುಂದಿ ಗ್ರಾಮದ ಮತದಾನ ಕೇಂದ್ರದಲ್ಲಿ ಕಂಡುಬಂದಿದೆ. ಮತದಾನ ಕೇಂದ್ರದಲ್ಲಿಯೇ ಹೆರಿಗೆ ನೋವು ಪ್ರಾರಂಭವಾಗಿದ್ದು, ಕೂಡಲೇ ಪಕ್ಕದ ಕೊಠಡಿ ಗೆ ಕರೆದುಕೊಂಡು ಹೋಗಲಾಗಿದೆ. ಅಷ್ಟರಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
ಉತ್ತರ ಕನ್ನಡ: ಜಿಲ್ಲೆಯ ಹಳಿಯಾಳ ಕ್ಷೇತ್ರದ ಯಲ್ಲಾಪುರ ಮತಗಟ್ಟೆ ಸಂಖ್ಯೆ 101ರಲ್ಲಿ ತಾಂತ್ರಿಕ ದೋಷ ಹಿನ್ನೆಲೆ ಸುಮಾರು 1 ಗಂಟೆಗಳ ಕಾಲ ಮತದಾನ ಸ್ಥಗಿತಗೊಂಡಿತ್ತು. ಅಧಿಕಾರಿಗಳ ಎಡವಟ್ಟಿನಿಂದ ಮತಯಂತ್ರ ಹಾಳಾಗಿದೆ. ಮಳೆಯಾದರೆ ಜನರು ವೋಟ್ ಹಾಕಲು ಹಿಂಜರಿಯುತ್ತಾರೆ. ಹೆಚ್ಚುವರಿ 1 ಗಂಟೆ ಅವಕಾಶ ನೀಡಬೇಕೆಂದು ಮತದಾರರು ಒತ್ತಾಯಿಸಿದ್ದಾರೆ.
ಚಿಕ್ಕಮಗಳೂರು: 20 ದಿನದ ಮಗುವಿನೊಂದಿಗೆ ಬಂದು ಬಾಣಂತಿ ಮತದಾನ ಮಾಡಿದ್ದಾರೆ. ಚಿಕ್ಕಮಗಳೂರು ನಗರದ ಉರ್ದು ಶಾಲೆಯಲ್ಲಿ ಐ.ಜಿ.ರಸ್ತೆ ನಿವಾಸಿ ಚಂದನಾ ಎಂಬ ಬಾಣಂತಿಯಿಂದ ವೋಟಿಂಗ್ ಮಾಡಿದ್ದಾರೆ.
ಮಂಗಳೂರು: ಬಿಜೆಪಿ ಬೆಂಬಲಿಗರು, ಪಕ್ಷೇತರ ಅಭ್ಯರ್ಥಿ ಬೆಂಬಲಿಗರ ನಡುವೆ ಗಲಾಟೆ ನಡೆದಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮುದಾಯ ಭವನ ಮತಗಟ್ಟೆ ಬಳಿ ನಡೆದಿದೆ. RSS ಮುಖಂಡ ಹುಬ್ಬಳ್ಳಿ ರಮೇಶ್ ವಿರುದ್ಧ ಪುತ್ತಿಲ ಬೆಂಬಲಿಗರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಟೆಂಟ್ಗೆ ಆರ್ಎಸ್ಎಸ್ ಮುಖಂಡ ಹುಬ್ಬಳ್ಳಿ ರಮೇಶ್ ಬಂದಿದ್ದಾರೆ. ಈ ವೇಳೆ ರಮೇಶ್ ಭೇಟಿಗೆ ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆಲಕಾಲ ಬಿಜೆಪಿ, ಪುತ್ತಿಲ ಬೆಂಬಲಿಗರ ನಡುವೆ ಮಾತಿನ ಚಕಮಕಿ ಉಂಟಾಗಿತ್ತು.
ರಾಮನಗರ: ಶತಾಯುಷಿ, ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮಕ್ಕರಿಂದ ಜಿಲ್ಲೆಯ ಮಾಗಡಿ ತಾಲೂಕಿನ ಹುಲಿಕಲ್ಲು ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ.
ಬೆಂಗಳೂರು: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆಯಿಂದಲೇ ಮತದಾನ ಶುರವಾಗಿದ್ದು, ಮಧ್ಯಾಹ್ನ 3 ಗಂಟೆಯವರೆಗೆ ಶೇಕಡಾ 52.18ರಷ್ಟು ಮತದಾನ ನಡೆದಿದೆ.
ಬೆಂಗಳೂರು ಸೆಂಟ್ರಲ್ ಶೇಕಡಾ 40.69ರಷ್ಟು, ಬೆಂಗಳೂರು ಉತ್ತರ ಶೇಕಡಾ 41.19ರಷ್ಟು, ಬೆಂಗಳೂರು ದಕ್ಷಿಣ ಶೇಕಡಾ 40.28ರಷ್ಟು ಬೆಂಗಳೂರು ನಗರದಲ್ಲಿ ಶೇಕಡಾ 41.82ರಷ್ಟು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇಕಡಾ 60.14ರಷ್ಟು, ಬಾಗಲಕೋಟೆ ಜಿಲ್ಲೆಯಲ್ಲಿ ಶೇಕಡಾ 56.42ರಷ್ಟು, ಬೆಳಗಾವಿ ಜಿಲ್ಲೆಯಲ್ಲಿ ಶೇಕಡಾ 53.93ರಷ್ಟು, ಬಳ್ಳಾರಿ ಜಿಲ್ಲೆಯಲ್ಲಿ ಶೇಕಡಾ 53.31ರಷ್ಟು, ಬೀದರ್ ಜಿಲ್ಲೆಯಲ್ಲಿ ಶೇಕಡಾ 50.64ರಷ್ಟು, ವಿಜಯಪುರ ಜಿಲ್ಲೆಯಲ್ಲಿ ಶೇಕಡಾ 49ರಷ್ಟು, ಚಾಮರಾಜನಗರ ಜಿಲ್ಲೆಯಲ್ಲಿ ಶೇಕಡಾ 51.75ರಷ್ಟು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೇಕಡಾ 58.74ರಷ್ಟು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇಕಡಾ 57.28ರಷ್ಟು,
ಚಿತ್ರದುರ್ಗ ಜಿಲ್ಲೆಯಲ್ಲಿ ಶೇಕಡಾ 53.05ರಷ್ಟು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡಾ 57.48ರಷ್ಟು, ದಾವಣಗೆರೆ ಜಿಲ್ಲೆಯಲ್ಲಿ ಶೇಕಡಾ 55.80ರಷ್ಟು ಮತದಾನ.
ಧಾರವಾಡ ಜಿಲ್ಲೆಯಲ್ಲಿ ಶೇಕಡಾ 50.25ರಷ್ಟು, ಗದಗ ಜಿಲ್ಲೆಯಲ್ಲಿ ಶೇಕಡಾ 55.04ರಷ್ಟು, ಕಲಬುರಗಿ ಜಿಲ್ಲೆಯಲ್ಲಿ ಶೇಕಡಾ 46.18ರಷ್ಟು, ಹಾಸನ ಜಿಲ್ಲೆಯಲ್ಲಿ ಶೇಕಡಾ 59.15ರಷ್ಟು, ಹಾವೇರಿ ಜಿಲ್ಲೆಯಲ್ಲಿ ಶೇಕಡಾ 57.21ರಷ್ಟು, ಕೊಡಗು ಜಿಲ್ಲೆಯಲ್ಲಿ ಶೇಕಡಾ 58.24ರಷ್ಟು, ಕೋಲಾರ ಜಿಲ್ಲೆಯಲ್ಲಿ ಶೇಕಡಾ 54.81ರಷ್ಟು, ಕೊಪ್ಪಳ ಜಿಲ್ಲೆಯಲ್ಲಿ ಶೇಕಡಾ 56.45ರಷ್ಟು, ಮಂಡ್ಯ ಜಿಲ್ಲೆಯಲ್ಲಿ ಶೇಕಡಾ 58.39ರಷ್ಟು, ಮೈಸೂರು ಜಿಲ್ಲೆಯಲ್ಲಿ ಶೇಕಡಾ 52.45ರಷ್ಟು, ರಾಯಚೂರು ಜಿಲ್ಲೆಯಲ್ಲಿ ಶೇಕಡಾ 52.73ರಷ್ಟು, ರಾಮನಗರ ಜಿಲ್ಲೆಯಲ್ಲಿ ಶೇಕಡಾ 63.36ರಷ್ಟು, ಶಿವಮೊಗ್ಗ ಜಿಲ್ಲೆಯಲ್ಲಿ ಶೇಕಡಾ 56.10ರಷ್ಟು, ತುಮಕೂರು ಜಿಲ್ಲೆಯಲ್ಲಿ ಶೇಕಡಾ 58.45ರಷ್ಟು, ಉಡುಪಿ ಜಿಲ್ಲೆಯಲ್ಲಿ ಶೇಕಡಾ 60.29ರಷ್ಟು, ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇಕಡಾ 54.94ರಷ್ಟು, ವಿಜಯನಗರ ಜಿಲ್ಲೆಯಲ್ಲಿ ಶೇಕಡಾ 56.29ರಷ್ಟು ಮತ್ತು ಯಾದಗಿರಿ ಜಿಲ್ಲೆಯಲ್ಲಿ ಶೇಕಡಾ 46.61ರಷ್ಟು ಮತದಾನವಾಗಿದೆ.
ಮಧ್ಯಾಹ್ನ 3 ಗಂಟೆ ವೇಳೆಗೆ ಬೆಂಗಳೂರಿನಲ್ಲಿ ಶೇಕಡ 41.43 ಮತದಾನವಾಗಿದೆ.
ಬೆಂಗಳೂರು ಉತ್ತರ ಶೇಕಡ 40.21% ಮತದಾನ
ಬೆಂಗಳೂರು ದಕ್ಷಿಣ 40.21% ಮತದಾನವಾಗಿದೆ
ಬೆಂಗಳೂರು ಸೆಂಟ್ರಲ್ 40.75% ಮತದಾನವಾಗಿದೆ
ಬೆಂಗಳೂರು ಅರ್ಬನ್ 41.43% ಮತದಾನವಾಗಿದೆ
ಮೈಸೂರು: ನಟಿ ಮಾಳವಿಕ ಅವಿನಾಶ್ ಮತ ಚಲಾವಣೆ ಮಾಡಿದ್ದಾರೆ. ಮೈಸೂರಿನ ಕೃಷ್ಣಮೂರ್ತಿಪುರಂನ ಗುಬ್ಬಚ್ಚಿ ಶಾಲೆಯ ಮತಗಟ್ಟೆಯಲ್ಲಿ ಮತಚಲಾಯಿಸಿದ್ದಾರೆ. ಬಳಿಕ ಕಾರ್ಯಕರ್ತರ ಜೊತೆ ನಿಂತು ಸೆಲ್ಫಿಗೆ ಫೋಸ್ ನೀಡಿದ್ದಾರೆ.
ಗದಗ: ಮತದಾನಕ್ಕೆ ಬಂದ ಮಹಿಳೆ ಮೇಲೆ ಪೊಲೀಸರು ಹಲ್ಲೆ ನಡೆಸಿದ ಆರೋಪ ಮಾಡಿದ್ದಾರೆ. ಮುಂಡರಗಿ ತಾಲೂಕಿನ ಶೀರನಹಳ್ಳಿ ಮತಗಟ್ಟೆ ಸಂಖ್ಯೆ 216ರಲ್ಲಿ ಘಟನೆ ನಡೆದಿದ್ದು, ಲಾಠಿಯಿಂದ ಹಲ್ಲೆ ನಡೆಸಿದ್ದಾರೆಂದು ಗ್ರಾಮಸ್ಥೆ ಹುಲಗೆಮ್ಮ ಆರೋಪ ಮಾಡಿದ್ದಾರೆ. ಚುನಾವಣಾಧಿಕಾರಿಗಳು, ಸ್ಥಳೀಯರ ನಡುವೆ ವಾಗ್ವಾದ, ನೂಕಾಟ ತಳ್ಳಾಟವಾಗಿದೆ.
ಬೆಳಗಾವಿ: ತಾಂತ್ರಿಕ ದೋಷದಿಂದಾಗಿ ಜಿಲ್ಲೆಯಲ್ಲಿ ಬರೋಬ್ಬರಿ ಒಂಬತ್ತು ಕಡೆ ಮತದಾನ ಸ್ಥಗಿತವಾಗಿದೆ. ಕಿತ್ತೂರು ಪಟ್ಟಣ, ದೇವಗಾಂವ, ಮೂಡಲಗಿ ಪಟ್ಟಣ, ಅರಬಾವಿ, ಕಾದ್ರೋಳ್ಳಿ, ನೇಸರಗಿ, ಉಳ್ಳಿಗೇರಿ, ಅಥಣಿ, ಗಳತಗಾ ಗ್ರಾಮದಲ್ಲಿ ಮತದಾನ ಸ್ಥಗಿತವಾಗಿದೆ. ಕಿತ್ತೂರು ಪಟ್ಟಣದಲ್ಲಿ ಎರಡೂವರೆ ಗಂಟೆಯಿಂದ ಮತದಾನ ಸ್ಥಗಿತವಾಗಿದೆ. ಇನ್ನೂಳಿದ ಮತಗಟ್ಟೆಗಳಲ್ಲಿ ಒಂದು ಗಂಟೆ, ಅರ್ಧ ಗಂಟೆಯಿಂದ ಸ್ಥಗಿತಗೊಂಡಿದೆ. ಮತಗಟ್ಟೆ ಮುಂಭಾಗದಲ್ಲಿ ಕಾದು ಕಾದು ಮತದಾರರು ಸುಸ್ತಾಗಿದ್ದಾರೆ.
ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆ ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ಮತದಾನ ಶುರುವಾಗಿದೆ. ಮಧ್ಯಾಹ್ನ ಒಂದು ಗಂಟೆಯವರೆಗೆ ಶೇಕಡಾ 40 ರಷ್ಟು ಮಾತ್ರ ಮತದಾನವಾಗಿದೆ. ಅತಿ ಹೆಚ್ಚು ಮತದಾನ ಜಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ 42 ರಷ್ಟು ಮತದಾನ ದಾಖಲಾಗಿದೆ. ಜಿಲ್ಲೆಯ ಎಳು ವಿಧಾನ ಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆಯಿಂದ ಉತ್ತಮ ಮತದಾನವಾಗಿದೆ.
ವಿಜಯಪುರ: ಜಿಲ್ಲೆಯ ಬಸವನಬಾಗೇವಾಡಿ ಕ್ಷೇತ್ರದ ಮಸಬಿನಾಳದಲ್ಲಿ ಇವಿಎಂ ಮಷೀನ್ ಪುಡಿಪುಡಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಾಟೆಯಲ್ಲಿ ಭಾಗಿಯಾದ 20-25 ಜನರನ್ನು ವಶಕ್ಕೆ ಪಡೆದಿದ್ದೇವೆ. ಹೆಚ್ಚುವರಿ EVM, ವಿವಿ ಪ್ಯಾಟ್ ಯಂತ್ರಗಳನ್ನು ಕಾರಿನಲ್ಲಿ ತರಲಾಗುತ್ತಿದೆ. ತಪ್ಪು ಮಾಹಿತಿಯಿಂದ ಚುನಾವಣಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ಧಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಆನಂದ್ಕುಮಾರ್ ಹೇಳಿದ್ದಾರೆ.
ಬೆಂಗಳೂರು: ನಗರದ ಯಲಹಂಕ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 212ರಲ್ಲಿ ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿ ಮತದಾನ ಮಾಡಿದ್ದಾರೆ.
ಕಲಬುರಗಿ: ನಗರದ ಬಸವ ನಗರದ ಸಮುದಾಯ ಆರೋಗ್ಯ ಕೇಂದ್ರದ ಬೂತ್ ನಂಬರ್ 120ರಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪತ್ನಿ ರಾಧಾಬಾಯಿ ಮತ ಚಲಾಯಿಸಿದ್ದಾರೆ. ಮತದಾನದ ಸಮಯದಲ್ಲಿ ಪತ್ನಿ ರಾಧಾಬಾಯಿ ಸಮೀಪ ಬಂದ ವೇಳೆ, ಮಲ್ಲಿಕಾರ್ಜುನ ಖರ್ಗೆಯವರು ದೂರ ಹೋಗುವಂತೆ ಸೂಚಿಸಿದ್ದಾರೆ. ಮತದಾನ ಗೌಪ್ಯತೆ ಹಿನ್ನೆಲೆಯಲ್ಲಿ ದೂರ ನಿಲ್ಲುವಂತೆ ಸೂಚಿಸಿದ್ದಾರೆ. ನಂತರ ಪತ್ನಿ ಮತ ಚಲಾಯಿಸುವಾಗ ತಾವು ದೂರ ನಿಂತಿದ್ದಾರೆ.
ಹಾಸನ: ಜಿಲ್ಲೆಯ ಪಡುವಲಹಿಪ್ಪೆ ಗ್ರಾಮದ ಮತಗಟ್ಟೆ ಸಂಖ್ಯೆ 251 ರಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಪತ್ನಿ ಚನ್ನಮ್ಮ ಅವರು ಮತದಾನ ಮಾಡಿದ್ದಾರೆ.
#WATCH | JD(S) chief and former Prime Minister HD Devegowda casts his vote for #KarnatakaElections2023 pic.twitter.com/6vqAY7Iwdu
— ANI (@ANI) May 10, 2023
ಕಾರವಾರ: ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಬಡಗೇರಿ ಗ್ರಾಮದ ಮತಗಟ್ಟೆ ಸಂಖ್ಯೆ 182ರಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ಮತದಾನ ಮಾಡಿದ್ದಾರೆ.
ರಾಯಚೂರು: ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿರುವ ಘಟನೆ ಜಿಲ್ಲೆಯ ಲಿಂಗಸಗೂರು ಪಟ್ಟಣದಲ್ಲಿ ನಡೆದಿದೆ. ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್ ಕಾರಿಗೆ ಬಿಜೆಪಿ ಪಕ್ಷದ ಬಾವುಟ
ಇರುವ ಕಾರಿನಲ್ಲಿ ಮತಗಟ್ಟೆಗೆ ಆಗಮಿಸಿರುವ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಬಿಜೆಪಿ, ಕಾಂಗ್ರೆಸ್ ಮುಖಂಡರ ನಡುವೆ ಮಾತಿನ ಚಕಮಕಿ ನಡೆದಿದೆ. ಕೂಡಲೇ ಮಧ್ಯೆ ಪ್ರವೇಶಿಸಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಮೈಸೂರು: ವರುಣಾ ಕ್ಷೇತ್ರದಲ್ಲಿ ಬಿಜೆಪಿ ನಾಯಕ ವಿ.ಸೋಮಣ್ಣ ಅವರು ಬೂತ್ ಪರಿಶೀಲನೆಗೆ ಆಗಮಿಸಿದ ವೇಳೆ ಕಾಂಗ್ರೆಸ್ ಕಾರ್ಯಕರ್ತ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ.
ಬೆಂಗಳೂರು: ಜೆಪಿ ನಗರದ ಆಕ್ಸ್ ಫರ್ಡ್ ಶಾಲೆಯಲ್ಲಿ ನಟ ಕಿಚ್ಚ ಸುದೀಪ್ ಮತದಾನ ಮಾಡಿದ್ದಾರೆ. ಇವರ ಜೊತೆಗೆ ಪತ್ನಿ ಪ್ರಿಯಾ ಹಾಗೂ ಪುತ್ರಿ ಸಾನ್ವಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ್ದಾರೆ.
ವಿಜಯಪುರ: ಗ್ರಾಮಸ್ಥರು ಮತಯಂತ್ರಗಳನ್ನು ಒಡೆದು ಪುಡಿಪುಡಿ ಮಾಡಿರುವ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದಲ್ಲಿ ನಡೆದಿದೆ. ಗ್ರಾಮಸ್ಥರು ಕಾಯ್ದಿರಿಸಲಾಗಿದ್ದ ಇವಿಎಂ ಮಶೀನ್ ಹಾಗೂ ವಿವಿಪ್ಯಾಟ್ ಮಶೀನ್‌ಗಳನ್ನು ಒಡೆದು ಹಾಕಿದ್ದಾರೆ.
ಬೆಂಗಳೂರು: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿ ಮತದಾನ ಮಾಡಲು ಆ್ಯಂಬುಲೆನ್ಸ್ನಲ್ಲಿ ಆಗಮಿಸಿ ರೋಗಿ ವೋಟ್ ಹಾಕಿದ್ದಾರೆ. ಆರ್ ಆರ್ ನಗರದ ನಿವಾಸಿ ಶೇಷಾದ್ರಿ (40) ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಕಳೆದ ನಾಲ್ಕು ದಿನಗಳಿಂದ ತಿಲಕ್ ನಗರದ ಸಾಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮತದಾನ ಮಾಡಲು ಆಂಬ್ಯುಲೆನ್ಸ್ನಲ್ಲಿ ಆರ್ ಆರ್ ನಗರಕ್ಕೆ ಬಂದು ಮತದಾನ ಮಾಡಿದ್ದಾರೆ.
ಬೆಳಗಾವಿ: ಮತ ಚಲಾಯಿಸಲು ಬಂದಿದ್ದ ವೃದ್ಧೆ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸವದತ್ತಿ ಯಲ್ಲಮ್ಮ ಕ್ಷೇತ್ರ ವ್ಯಾಪ್ತಿಯ ಯರಝರ್ವಿಯಲ್ಲಿ ನಡೆದಿದೆ. ಯರಝರ್ವಿ ಗ್ರಾಮದ 70 ವರ್ಷದ ಪಾರವ್ವ ಸಿದ್ನಾಳ ಮತದಾನಕ್ಕೂ ಮುನ್ನ ಮತಗಟ್ಟೆ ಆವರಣದಲ್ಲಿ ಲೋ ಬಿಪಿಯಿಂದ ಕುಸಿದು ಬಿದ್ದು ನಿಧನರಾಗಿದ್ದಾರೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹಾಸನ: ಮತದಾನ ಮಾಡಿ ಹೊರ ಬಂದ ಬಳಿಕ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಜಿಲ್ಲೆ ಬೇಲೂರು ತಾಲೂಕಿನ ಚಿಕ್ಕೋಲೆ ಗ್ರಾಮದಲ್ಲಿ ನಡೆದಿದೆ. ಚಿಕ್ಕೋಲೆ ಗ್ರಾಮದ ಜಯಣ್ಣ(49) ಮೃತ ದುರ್ದೈವಿ. ಚಿಕ್ಕೋಲೆ ಗ್ರಾಮದಲ್ಲಿ ಮತ ಚಲಾಯಿಸಿ ಹೊರಗೆ ಬಂದ ಬಳಿಕ ಹೃದಯಾಘಾತ ಮತಗಟ್ಟೆ ಆವರಣದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ನೆಲಮಂಗಲ: ನೆಲಮಂಗಲ ನಗರದ ಮತಗಟ್ಟೆ ಸಂಖ್ಯೆ 175ರಲ್ಲಿ ಸುಮಾರು 20 ಜನ ಲೈಂಗಿಕ ಅಲ್ಪಸಂಖ್ಯಾತರು ಮತದಾನ ಮಾಡಿದ್ದಾರೆ. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಾಧುರಿ ನಾವು ನಮ್ಮ ಹಕ್ಕನ್ನು ನಾವು ಚಲಾವಣೆ ಮಾಡಿದ್ದೇವೆ. ಎಲ್ಲರೂ ಮತ ಚಲಾವಣೆ ಮಾಡಬೇಕು. ಯಾವುದೇ ಸರ್ಕಾರಗಳು ಬಂದರೂ ನಮನ್ನು ಕಡೆಗಣಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಮಗೆ ಒಳ್ಳೆಯ ಸ್ಥಾನಮಾನ ನೀಡಬೇಕು. ಸರ್ಕಾರ ಈಗ ನೀಡಿರುವ ಅವಕಾಶವನ್ನು ಮತ್ತಷ್ಟು ಹೆಚ್ಚಿಸಬೇಕು. ಮತದಾನ ಮಾಡದವರು ವೇಸ್ಟ್, ನಮ್ಮ ದೇಶದಲ್ಲಿ ಇರಬಾರದು. ದಯಬಿಟ್ಟು ಮತದಾನ ಮಾಡುವ ಮೂಲಕ ನಿಮ್ಮ ಹಕ್ಕನ್ನು ಚಲಾಯಿಸಿ ಎಂದು ಕರೆ ನೀಡಿದರು.
ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಕೆಂಗೇರಿ ಮತಗಟ್ಟೆಯಲ್ಲಿ ವಿಶೇಷ ಚೇತನ ಅಂಧ 101 ವರ್ಷದ ವೃದ್ಧೆ ಮತದಾನ ಮಾಡಿದ್ದಾರೆ. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮತಾನಾಡಿದ ಅವರು ನನ್ನ ಹಕ್ಕನ್ನು ನಾನು ಚಲಾಯಿಸಿದ್ದೇನೆ. ಹೀಗಾಗಿ ಎಲ್ಲರೂ ಮತದಾನ ಮಾಡಿ. ಎಲ್ಲರೂ ಬಂದು ಮತದಾನ ಮಾಡಬೇಕು. ವೋಟ್ ಹಾಕದೆ ಇದ್ದರೆ ಅವರು ಇದ್ದು ಇಲ್ಲದಂತೆ ಎಂದು ಹೇಳಿದ್ದಾರೆ.
ಸಾಗರ ವಿಧಾನಸಭಾ ಕ್ಷೇತ್ರದಲ್ಲಿ 101 ವರ್ಷದ ವೃದ್ಧೆ ಮತ ಚಲಾಯಿಸಿದ್ದಾರೆ. ಸಾಗರ ವಿಧಾನಸಭಾ ಕ್ಷೇತ್ರದ 157ನೇ ಬೂತ್ ನಲ್ಲಿ ಅವಿನಹಳ್ಳಿ ನಿವಾಸಿ ಬಿಬಿ ಜಾನ್ ಮತದಾನ ಮಾಡಿದರು. ಮತದಾನ ಮಾಡುವ ಮೂಲಕ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ. 80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲೇ ಮತದಾನ ನಡೆದರು ಸಹ ಮತ ಕೇಂದ್ರಕ್ಕೆ ಬಂದು ಮತದಾನ ಮಾಡಿದ್ದಾರೆ.
ಮಂಗಳೂರು: ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅವರ ತಂದೆ, ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ (107) ಮತದಾನ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆ ತಾಲೂಕಿನ ಬಂಗಬೆಟ್ಟು ಪಬ್ಲಿಕ್ ಶಾಲೆಯ ಮತಗಟ್ಟೆಗೆ ಬಂದು ಮತಚಲಾಯಿಸಿದ್ದಾರೆ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ದೋನಹಳ್ಳಿ ಗ್ರಾಮದ ಜನರು ಮತದಾನ ಬಹಿಷ್ಕಾರ ಮಾಡಿದ್ದಾರೆ. ಹಾಸನ ಗ್ರಾಮಕ್ಕೆ ಮೂಲ ಸೌಲಭ್ಯ ಇಲ್ಲಾ ಎಂದು ಗ್ರಾಮದಲ್ಲಿರೋ 120 ಮತದಾರರು ಮತದಾನ ಬಹಿಷ್ಕರಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಬಂದ ಅಧಿಕಾರಿಗಳನ್ನೂ ಗ್ರಾಮಸ್ಥರಿ ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ಸಮಸ್ಯೆ ಬಗ್ಗೆ ಈಗಾಗಲೆ ಗಮನಕ್ಕೆ ತಂದರೂ ಏನೂ ಕ್ರಮ ಆಗಿಲ. ಈಗ ಯಾಕೆ ಮತ ಹಾಕಿ ಎಂದು ಹೇಳಲು ಬಂದಿದ್ದೀರಾ ಎಂದು ಗ್ರಾಮಸ್ಥರು ಅಸಮಾಧಾನ ಹೊರ ಹಾಕಿದ್ದಾರೆ.
ನೆಲಮಂಗಲ ನಗರದ ಮತಗಟ್ಟೆ ಸಂಖ್ಯೆ 175ರಲ್ಲಿ ಸುಮಾರು 20 ಜನ ಲೈಂಗಿಕ ಅಲ್ಪಸಂಖ್ಯಾತರು ಮತದಾನ ಮಾಡಿದರು. ಈ ವೇಳೆ ಮಾತನಾಡಿದ ಮಾಧುರಿ ಎಂಬುವವರು, ನಾವು ನಮ್ಮ ಹಕ್ಕು ಚಲಾವಣೆ ಮಾಡಿದ್ದೇವೆ. ಎಲ್ಲರೂ ಮತ ಚಲಾವಣೆ ಮಾಡಬೇಕು. ಯಾವುದೇ ಸರ್ಕಾರಗಳು ಬಂದ್ರು ನಮನ್ನ ಕಡೆಗಣಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಮಗೆ ಒಳ್ಳೆಯ ಸ್ಥಾನ ಮಾನ ನೀಡಬೇಕು. ಸರ್ಕಾರ ಈಗ ನೀಡಿರುವ ಅವಕಾಶವನ್ನ ಮತ್ತಷ್ಟು ಹೆಚ್ಚಿಸಬೇಕು. ಮತದಾನ ಮಾಡದವರು ವೇಸ್ಟ್, ನಮ್ಮ ದೇಶದಲ್ಲಿ ಇರಬಾರದು. ದಯಬಿಟ್ಟು ಮತದಾನ ಮಾಡುವ ಮೂಲಕ ನಿಮ್ಮ ಹಕ್ಕನ್ನ ಚಲಾಯಿಸಿ ಎಂದರು.
ಬೆಂಗಳೂರು: ಬೆಂಗಳೂರಿನಲ್ಲಿ ಬೆಳಗ್ಗೆ 11ರವರೆಗೆ ಶೇಕಡಾ 17.74ರಷ್ಟು ಮತದಾನವಾಗಿದೆ. ಬೆಂಗಳೂರು ಸೆಂಟ್ರಲ್ನಲ್ಲಿ ಬರುವ ಚಾಮರಾಜಪೇಟೆ ಕ್ಷೇತ್ರದಲ್ಲಿ ಶೇ. 16, ಚಿಕ್ಕಪೇಟೆ ಕ್ಷೇತ್ರದಲ್ಲಿ ಶೇ. 18, ಗಾಂಧಿನಗರ ಕ್ಷೇತ್ರದಲ್ಲಿ ಶೇ. 17, ರಾಜಾಜಿನಗರ ಕ್ಷೇತ್ರದಲ್ಲಿ ಶೇ. 20, ಆರ್.ಆರ್. ನಗರ ಕ್ಷೇತ್ರದಲ್ಲಿ ಶೇ. 17, ಶಾಂತಿನಗರ ಶೇ. 16, ಶಿವಾಜಿನಗರ ಕ್ಷೇತ್ರದಲ್ಲಿ ಶೇ. 17 ರಷ್ಟು ಮತದಾನವಾಗಿದೆ.
ಬೆಂಗಳೂರು ಉತ್ತರದ ಸಿ.ವಿ ರಾಮನ್ನಗರ ಶೇ. 15, ಹೆಬ್ಬಾಳ ಶೇ. 20, ಕೆ.ಆರ್. ಪುರ ಶೇ. 19, ಮಹಾಲಕ್ಷ್ಮೀ ಲೇಔಟ್ ಶೇ 20, ಮಲ್ಲೇಶ್ವರಂ ಶೇ. 21, ಪುಲಿಕೇಶಿನಗರ ಶೇ. 18, ಸರ್ವಜ್ಞನಗರ ಶೇ. 15 ರಷ್ಟು ಮತದಾನವಾಗಿದೆ. ಬೆಂಗಳೂರು ದಕ್ಷಿಣದ ಬಿಟಿಎಂ ಲೇಔಟ್ ಶೇ. 17, ಬಸವನಗುಡಿ ಶೇ. 19, ಬೊಮ್ಮನಹಳ್ಳಿ ಶೇ. 18, ಗೋವಿಂದರಾಜನಗರ ಶೇ. 19, ಜಯನಗರ ಶೇ. 20, ಪದ್ಮನಾಭನಗರ ಶೇ. 20, ವಿಜಯನಗರ ಶೇ. 16 ರಷ್ಟು ಮತದಾನವಾಗಿದೆ. ಬೆಂಗಳೂರು ನಗರದ
ಆನೇಕಲ್ ಕ್ಷೇತ್ರದ ಶೇ. 13, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಶೇ. 17, ಬ್ಯಾಟರಾಯನಪುರ ಶೇ. 17, ದಾಸರಹಳ್ಳಿ ಶೇ. 15, ಮಹಾದೇವಪುರ ಶೇ. 17, ಯಲಹಂಕ ಶೇ. 19, ಯಶವಂತಪುರ ಶೇ. 20 ರಷ್ಟು ಮತದಾನವಾಗಿದೆ.
ಬೆಂಗಳೂರು: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಬೆಳಗ್ಗೆ 7 ಗಂಟೆಯಿಂದ 11 ಗಂಟೆಯವರೆಗೆ ರಾಜ್ಯದಲ್ಲಿ ಶೇ.20.99ರಷ್ಟು ಮತದಾನವಾಗಿದೆ. ಬೆಂಗಳೂರು ಸೆಂಟ್ರಲ್ ಶೇಕಡಾ 19.30ರಷ್ಟು, ಬೆಂಗಳೂರು ಉತ್ತರ ಶೇಕಡಾ 17.50ರಷ್ಟು, ಬೆಂಗಳೂರು ದಕ್ಷಿಣ ಶೇಕಡಾ 19.18ರಷ್ಟು, ಬೆಂಗಳೂರು ನಗರದಲ್ಲಿ ಶೇಕಡಾ 17.72ರಷ್ಟು, ಬಾಗಲಕೋಟೆ ಜಿಲ್ಲೆಯಲ್ಲಿ ಶೇಕಡಾ 23.44ರಷ್ಟು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇಕಡಾ 20.23ರಷ್ಟು, ಬೆಳಗಾವಿ ಜಿಲ್ಲೆಯಲ್ಲಿ ಶೇಕಡಾ 20.76ರಷ್ಟು, ಬಳ್ಳಾರಿ ಜಿಲ್ಲೆಯಲ್ಲಿ ಶೇಕಡಾ 23.56ರಷ್ಟು, ಬೀದರ್ ಜಿಲ್ಲೆಯಲ್ಲಿ ಶೇಕಡಾ 20.54ರಷ್ಟು, ವಿಜಯಪುರ ಜಿಲ್ಲೆಯಲ್ಲಿ ಶೇಕಡಾ 20.66ರಷ್ಟು, ಚಾಮರಾಜನಗರ ಜಿಲ್ಲೆಯಲ್ಲಿ ಶೇಕಡಾ 16.77ರಷ್ಟು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೇಕಡಾ 21.46ರಷ್ಟು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇಕಡಾ 22.29ರಷ್ಟು ಮತದಾನವಾಗಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಶೇಕಡಾ 18.56ರಷ್ಟು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡಾ 28.46ರಷ್ಟು, ದಾವಣಗೆರೆ ಜಿಲ್ಲೆಯಲ್ಲಿ ಶೇಕಡಾ 21.32ರಷ್ಟು, ಧಾರವಾಡ ಜಿಲ್ಲೆಯಲ್ಲಿ ಶೇಕಡಾ 20.82ರಷ್ಟು, ಗದಗ ಜಿಲ್ಲೆಯಲ್ಲಿ ಶೇಕಡಾ 21.14ರಷ್ಟು, ಕಲಬುರಗಿ ಜಿಲ್ಲೆಯಲ್ಲಿ ಶೇಕಡಾ 17.89ರಷ್ಟು, ಹಾಸನ ಜಿಲ್ಲೆಯಲ್ಲಿ ಶೇಕಡಾ 22.18ರಷ್ಟು, ಹಾವೇರಿ ಜಿಲ್ಲೆಯಲ್ಲಿ ಶೇಕಡಾ 19.44ರಷ್ಟು, ಕೊಡಗು ಜಿಲ್ಲೆಯಲ್ಲಿ ಶೇಕಡಾ 26.49ರಷ್ಟು, ಕೋಲಾರ ಜಿಲ್ಲೆಯಲ್ಲಿ ಶೇಕಡಾ 19.87ರಷ್ಟು, ಕೊಪ್ಪಳ ಜಿಲ್ಲೆಯಲ್ಲಿ ಶೇಕಡಾ 21.46ರಷ್ಟು, ಮಂಡ್ಯ ಜಿಲ್ಲೆಯಲ್ಲಿ ಶೇಕಡಾ 19.56ರಷ್ಟು, ಮೈಸೂರು ಜಿಲ್ಲೆಯಲ್ಲಿ ಶೇಕಡಾ 19.34ರಷ್ಟು, ರಾಯಚೂರು ಜಿಲ್ಲೆಯಲ್ಲಿ ಶೇಕಡಾ 22.48ರಷ್ಟು, ರಾಮನಗರ ಜಿಲ್ಲೆಯಲ್ಲಿ ಶೇಕಡಾ 25.21ರಷ್ಟು, ಶಿವಮೊಗ್ಗ ಜಿಲ್ಲೆಯಲ್ಲಿ ಶೇಕಡಾ 22.75ರಷ್ಟು, ತುಮಕೂರು ಜಿಲ್ಲೆಯಲ್ಲಿ ಶೇಕಡಾ 22.06ರಷ್ಟು, ಉಡುಪಿ ಜಿಲ್ಲೆಯಲ್ಲಿ ಶೇಕಡಾ 30.26ರಷ್ಟು, ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇಕಡಾ 25.46ರಷ್ಟು, ವಿಜಯನಗರ ಜಿಲ್ಲೆಯಲ್ಲಿ ಶೇಕಡಾ 21.07ರಷ್ಟು, ಯಾದಗಿರಿ ಜಿಲ್ಲೆಯಲ್ಲಿ ಶೇಕಡಾ 18.84ರಷ್ಟು ಮತದಾನವಾಗಿದೆ.
ಬೆಂಗಳೂರು: ಬಸವನಗುಡಿ ಕ್ಷೇತ್ರದ ಯುವತಿ ಮೇಘನಾ ಅಮೇರಿಕಾದಿಂದ ಬಂದು ಮತ ಹಾಕಿದ್ದಾರೆ.
ಮೈಸೂರು: ಪಿರಿಯಾಪಟ್ಟಣದಲ್ಲಿ ನೂತನ ವಧು ವರರು ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಪಿರಿಯಾಪಟ್ಟಣದಲ್ಲಿ ಮದುಮಗ ಬಿಪಿನ್ ಕೆ ಎನ್, ಪತ್ನಿ ಅಕ್ಷತಾ ಪಿ ಜೊತೆಗೆ ಮತಗಟ್ಟೆಗೆ ಆಗಮಿಸಿದರು. ಇವರೊಂದಿಗೆ ಬಿಪಿನ್ರವರ ತಂದೆ ಕೆಎಸ್ ನಾಗೇಂದ್ರ ತಾಯಿ ಸಿಎಸ್ ಗೀತಾ ಆಗಮಿಸಿ ಮೂರು ಜನ ಮತದಾನ ಮಾಡಿದರು.
ಯಾದಗಿರಿ: ಜಿಲ್ಲೆಯ ಶಹಾಪುರ ಮತಕ್ಷೇತ್ರ ನಗನೂರ ಗ್ರಾಮದಲ್ಲಿ ಶತಾಯುಷಿ ಅಜ್ಜಿ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ. ದೇವಕ್ಕಮ್ಮ (105) ಮೊಮ್ಮಗನ ಜೊತೆ ಕಾರಿನಲ್ಲಿ ಬಂದು ಮತ ಚಲಾಯಿಸಿದ್ದಾರೆ.
ಕಲಬುರಗಿ: ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದ್ದು, ಜಿಲ್ಲೆಯ ಆಳಂದ ಕ್ಷೇತ್ರದಲ್ಲಿ ಅತಿಹೆಚ್ಚು ಮತದಾನವಾಗಿದೆ. ಆಳಂದ ಕ್ಷೇತ್ರದಲ್ಲಿ ಬೆಳಗ್ಗೆ ಈವರೆಗೆ ಶೇ.18ರಷ್ಟು ಮತದಾನವಾಗಿದೆ. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಶೇ. 13.45ರಷ್ಟು ಮತದಾನವಾಗಿದೆ.
ಹಾಸನ: ಜಿಲ್ಲೆಯ ಅರಸಿಕೇರಿಯ ಕಾಳೇನಹಳ್ಳಿಯಲ್ಲಿ ನಟ ಧನಂಜಯ್ ಕುಟುಂಬಸ್ಥರ ಜೊತೆ ಆಗಮಿಸಿ ಮತದಾನ ಮಾಡಿದ್ದಾರೆ.
ಮೈಸೂರು: ಮೈಸೂರು ತಾಲೂಕಿನ ಸಿದ್ದರಾಮನಹುಂಡಿ ಗ್ರಾಮದಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮತದಾನ ಮಾಡಿದ್ದಾರೆ.
ಮೈಸೂರು: ನಗರದ ಕುವೆಂಪುನಗರದ ಜ್ಞಾನಗಂಗಾ ಶಾಲೆ ಮತಗಟ್ಟೆ ನಂ. 26ರಲ್ಲಿ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಮತದಾನ ಮಾಡಿದ್ದಾರೆ. ಮೈಸೂರು ಜಿಲ್ಲಾ ಚುನಾವಣಾ ರಾಯಭಾರಿ ಜಾವಗಲ್ ಶ್ರೀನಾಥ್ ಅವರು ಸರತಿಸಾಲಿನಲ್ಲಿ ಆಗಮಿಸಿ ಮತದಾನ ಮಾಡಿದ್ದಾರೆ.
ಮೈಸೂರು: ನಗರದ ಕೆ ಆರ್ ಮೊಹಲ್ಲಾದ ಶ್ರೀಕಾಂತ ಶಾಲೆಯಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾ ಕುಮಾರಿ ಮತದಾನ ಮಾಡಿದ್ದಾರೆ.
ವಿಜಯನಗರ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಉಜ್ಜಯಿನಿಯ ಶ್ರೀ ಮರುಳಾಸಿದ್ದೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 238ರಲ್ಲಿ ಉಜ್ಜಯಿನಿ ಪೀಠದ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳು ಮತದಾನ ಮಾಡಿದ್ದಾರೆ. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಎಲ್ಲರೂ ತಪ್ಪದೇ ಮತ ಚಲಾವಣೆ ಮಾಡುವಂತೆ ಮನವಿ ಮಾಡಿದ್ದಾರೆ.
ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿಯ ಮತಗಟ್ಟೆ ಸಂಖ್ಯೆ 245ರಲ್ಲಿ ಮತದಾನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮತದಾನ ಮಾಡಿದ್ದಾರೆ. ಪತ್ನಿ ಉಷಾ, ಪುತ್ರ ಆಕಾಶ್, ಪುತ್ರಿ ಆಭರಣ, ಸಹೋದರ ಡಿ.ಕೆ.ಸುರೇಶ್ ಜೊತೆ ಆಗಮಿಸಿ ಡಿ.ಕೆ.ಶಿವಕುಮಾರ್ ಮತದಾನ ಮಾಡಿದ್ದಾರೆ.
ಮಂಗಳೂರು: ಕುಟುಂಬ ಸಮೇತ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಮಂಜುನಾಥೇಶ್ವರ ಅನುಧಾನಿಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರು ಮತದಾನ ಮಾಡಿದ್ದಾರೆ.
ಹುಬ್ಬಳ್ಳಿ: ಕರ್ನಾಟಕ ವಿಧಾನಸಭಾ ಚುನಾವಣೆಯ ನಿಮಿತ್ತ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ನಗರದ ನಾಗಶೆಟ್ಟಿಕೊಪ್ಪದ ವಿವೇಕಾನಂದನಗರದ ರೋಟರಿ ಶಾಲೆಯಲ್ಲಿ ಮತ ಚಲಾಯಿಸಿದರು.
ಬೆಂಗಳೂರು:ವಿಜಯನಗರದ ಆದಿಚುಂಚನಗಿರಿ ಶಾಲೆ ಮತಗಟ್ಟೆಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿಯವರು ಮತದಾನ ಮಾಡಿದ್ದಾರೆ.
ಕಲಬುರಗಿ: ಬಿಜೆಪಿ ಪರ ಮತ ಹಾಕಿಸುತ್ತಿದ್ದಾರೆ ಎನ್ನುವ ಆರೋಪದ ಮೇಲೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಚಾಮನೂರು ಗ್ರಾಮದಲ್ಲಿನ ಮತಗಟ್ಟೆ ಅಧಿಕಾರಿಯನ್ನು ಬದಲಾವಣೆ ಮಾಡಲಾಗಿದೆ. ಮತಗಟ್ಟೆ ಸಿಬ್ಬಂದಿ ವಿರುದ್ಧ ಕಾಂಗ್ರೆಸ್ ಏಜೆಂಟ್ ಆಕ್ಷೇಪಣೆ ವ್ಯಕ್ತಪಡಿಸಿದ ಹಿನ್ನೆಲೆ ಕೂಡಲೇ ಮತಗಟ್ಟೆಯ ಓರ್ವ ಬಿಎಲ್ಓ ಅನ್ನು ಮೇಲಾಧಿಕಾರಿಗಳು ಬದಲಾವಣೆ ಮಾಡಿದ್ದಾರೆ.
ನೆಲಮಂಗಲ: ನಗರದ ಮೈಲನಹಳ್ಳಿ ಮತಗಟ್ಟೆ 107ರಲ್ಲಿ ನಟ ವಿನೋದ್ ರಾಜ್ ಮತದಾನ ಮಾಡಿದ್ದಾರೆ. ಕಳೆದ ಬಾರಿ ಮತದಾನ ಪ್ರಮಾಣ ಕಡಿಮೆ ಆಗಿತ್ತು. ಹಾಗೆ ಆಗಬಾರದು. ಹಾಗೆ ಆದರೆ ಬ್ರಿಟಿಷರ್ ತರಹ ದೇಶವನ್ನು ರಾಜ್ಯವನ್ನ ಬೇರೆಯವರು ಆಳ್ವಿಕೆ ಮಾಡೋಕೆ ಅವಕಾಶ ಆಗುತ್ತೆ. ಎಲ್ಲರೂ ಮತದಾನ ಮಾಡಿ ಮನವಿ ಮಾಡಿದರು.
ಹುಬ್ಬಳ್ಳಿ: ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತದಾನ ಮಾಡಿದ್ದಾರೆ. ಕೇಶ್ವಾಪುರ ಎಸ್‌ಬಿಐ ಶಾಲೆಯ ಬೂತ್ ಸಂಖ್ಯೆ 125 ಮತಗಟ್ಟೆಗೆ ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದ್ದಾರೆ.
ಬೆಂಗಳೂರು: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಬೆಳಗ್ಗೆ 9 ಗಂಟೆಯವರೆಗೆ ಶೇಕಡಾ 8.15ರಷ್ಟು ಮತದಾನವಾಗಿದೆ. ಬೆಂಗಳೂರು ಸೆಂಟ್ರಲ್ ಶೇಕಡಾ 8ರಷ್ಟು, ಬೆಂಗಳೂರು ಉತ್ತರ ಶೇಕಡಾ 8ರಷ್ಟು, ಬೆಂಗಳೂರು ದಕ್ಷಿಣ ಶೇಕಡಾ 7ರಷ್ಟು, ಬಾಗಲಕೋಟೆ ಜಿಲ್ಲೆಯಲ್ಲಿ ಶೇಕಡಾ 9ರಷ್ಟು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇಕಡಾ 8ರಷ್ಟು, ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇಕಡಾ 9ರಷ್ಟು, ಬೆಳಗಾವಿ ಜಿಲ್ಲೆಯಲ್ಲಿ ಶೇಕಡಾ 8ರಷ್ಟು, ಬಳ್ಳಾರಿ ಜಿಲ್ಲೆಯಲ್ಲಿ ಶೇಕಡಾ 9ರಷ್ಟು, ಬೀದರ್ ಜಿಲ್ಲೆಯಲ್ಲಿ ಶೇಕಡಾ 8ರಷ್ಟು, ವಿಜಯಪುರ ಜಿಲ್ಲೆಯಲ್ಲಿ ಶೇಕಡಾ 8ರಷ್ಟು, ಚಾಮರಾಜನಗರ ಜಿಲ್ಲೆಯಲ್ಲಿ ಶೇಕಡಾ 6ರಷ್ಟು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೇಕಡಾ 10ರಷ್ಟು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇಕಡಾ 9ರಷ್ಟು, ಚಿತ್ರದುರ್ಗ ಜಿಲ್ಲೆಯಲ್ಲಿ ಶೇಕಡಾ 6ರಷ್ಟು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡಾ 12ರಷ್ಟು, ದಾವಣಗೆರೆ ಜಿಲ್ಲೆಯಲ್ಲಿ ಶೇಕಡಾ 7ರಷ್ಟು, ಧಾರವಾಡ ಜಿಲ್ಲೆಯಲ್ಲಿ ಶೇಕಡಾ 8ರಷ್ಟು, ಗದಗ ಜಿಲ್ಲೆಯಲ್ಲಿ ಶೇಕಡಾ 7ರಷ್ಟು, ಕಲಬುರಗಿ ಜಿಲ್ಲೆಯಲ್ಲಿ ಶೇಕಡಾ 7ರಷ್ಟು, ಹಾಸನ ಜಿಲ್ಲೆಯಲ್ಲಿ ಶೇಕಡಾ 9ರಷ್ಟು, ಹಾವೇರಿ ಜಿಲ್ಲೆಯಲ್ಲಿ ಶೇಕಡಾ 8ರಷ್ಟು, ಕೊಡಗು ಜಿಲ್ಲೆಯಲ್ಲಿ ಶೇಕಡಾ 11ರಷ್ಟು, ಕೋಲಾರ ಜಿಲ್ಲೆಯಲ್ಲಿ ಶೇಕಡಾ 7ರಷ್ಟು, ಕೊಪ್ಪಳ ಜಿಲ್ಲೆಯಲ್ಲಿ ಶೇಕಡಾ 8ರಷ್ಟು, ಮಂಡ್ಯ ಜಿಲ್ಲೆಯಲ್ಲಿ ಶೇಕಡಾ 7ರಷ್ಟು, ಮೈಸೂರು ಜಿಲ್ಲೆಯಲ್ಲಿ ಶೇಕಡಾ 6ರಷ್ಟು, ರಾಯಚೂರು ಜಿಲ್ಲೆಯಲ್ಲಿ ಶೇಕಡಾ 7ರಷ್ಟು, ರಾಮನಗರ ಜಿಲ್ಲೆಯಲ್ಲಿ ಶೇಕಡಾ 8ರಷ್ಟು, ಶಿವಮೊಗ್ಗ ಜಿಲ್ಲೆಯಲ್ಲಿ ಶೇಕಡಾ 9ರಷ್ಟು, ತುಮಕೂರು ಜಿಲ್ಲೆಯಲ್ಲಿ ಶೇಕಡಾ 8ರಷ್ಟು, ಉಡುಪಿ ಜಿಲ್ಲೆಯಲ್ಲಿ ಶೇಕಡಾ 13ರಷ್ಟು, ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇಕಡಾ 10ರಷ್ಟು,
ವಿಜನಗರ ಜಿಲ್ಲೆಯಲ್ಲಿ ಶೇಕಡಾ 7ರಷ್ಟು, ಯಾದಗಿರಿ ಜಿಲ್ಲೆಯಲ್ಲಿ ಶೇಕಡಾ 7ರಷ್ಟು ಮತದಾನವಾಗಿದೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಇಂದು (ಮೇ.10) ಮತದಾನ ನಡೆದಿದ್ದು, ಈವರೆಗೆ ಶೇ. 7.88 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಮೈಸೂರು: ಜಿಲ್ಲೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಏಳಿಗೆಹುಂಡಿ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದಾರೆ. ಈ ವೇಳೆ ಗ್ರಾಮಸ್ಥರ ಮನವೊಲಿಸಲು ಚುನಾವಣಾ ಅಧಿಕಾರಿಗಳು ಮುಂದಾಗಿದ್ದಾರೆ. ಇದಕ್ಕೆ ಗ್ರಾಮಸ್ಥರು 5 ವರ್ಷಗಳಲ್ಲಿ ಗ್ರಾಮಕ್ಕೆ ರಸ್ತೆ ಸಂಪರ್ಕ ಮಾಡಿ ಕೊಟ್ಟಿಲ್ಲ. ಕ್ಷೇತ್ರದ ಶಾಸಕ ಜಿಟಿ ದೇವೇಗೌಡ, ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ ಸಹ ಭೇಟಿ ಕೊಟ್ಟಿಲ್ಲ. ಹೀಗಿದ್ದಾಗ ನಾವು ಏಕೆ ಮತ ಹಾಕಬೇಕು ಎಂದು ಪ್ರಶ್ನಿಸಿದ್ದಾರೆ. ನಮ್ಮದು ಕೊನೆಯ ಗ್ರಾಮ ಎಂದು ಯಾರು ತಿರುಗಿಯೂ ನೋಡಲ್ಲ. ಈ ಹಿನ್ನೆಲೆ ನಾವೆಲ್ಲ ವೋಟ್ ಮಾಡಬಾರದು ಎಂದು ತೀರ್ಮಾನಿಸಿದ್ದೇವೆ ಎಂದು ಹೇಳಿದ್ದಾರೆ.
ಬಾಗಲಕೋಟೆ: ಜಿಲ್ಲೆಯ ತೇರಳದಾಳ ಕ್ಷೇತ್ರ ವ್ಯಾಪ್ತಿಯ ರಬಕವಿ ರಬಕವಿಯ ಸರ್ಕಾರಿ ಉರ್ದು ಶಾಲೆಯ ಮತಗಟ್ಟೆ ಸಂಖ್ಯೆ 83ರಲ್ಲಿ ಮಾಜಿ ಸಚಿವೆ, ನಟಿ ಉಮಾಶ್ರೀ ಮತದಾನ ಮಾಡಿದ್ದಾರೆ.
ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿಯಲ್ಲಿ ಮುಹೂರ್ತಕ್ಕೂ ಮುನ್ನಮಧುಮಗಳ ಮತದಾನ ಮಾಡಿದ್ದಾಳೆ.
ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಸರ್ ಎಂ.ವಿಶ್ವೇಶ್ವರಯ್ಯ ಪದವಿ ಪೂರ್ವ ಕಾಲೇಜಿನಲ್ಲಿ ಮತದಾನ ಮಾಡಿದ್ದಾರೆ. ಪತ್ನಿ ವನಿತಾ ಸೂದ್ ಜೊತೆ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ್ದಾರೆ.
ಹಾವೇರಿ: ಜಿಲ್ಲೆಯ ಶಿಗ್ಗಾಂವಿಯ ಮತಗಟ್ಟೆ ಸಂಖ್ಯೆ 102ರಲ್ಲಿ ಕುಟುಂಬ ಸಮೇತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮತದಾನ ಮಾಡಿದ್ದಾರೆ.
ಬೆಳಗಾವಿ: ವಿಜಯನಗರದ ಮರಾಠಿ ಶಾಲೆಯ ಮತಗಟ್ಟೆ ಸಂಖ್ಯೆ 60ರಲ್ಲಿ ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತದಾನ ಮಾಡಿದ್ದಾರೆ. ಕುಟುಂಬಸ್ಥರ ಜೊತೆ ಆಗಮಿಸಿ ಲಕ್ಷ್ಮೀ ಹೆಬ್ಬಾಳ್ಕರ್ ಮತ ಚಲಾಯಿಸಿದ್ದಾರೆ.
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಮತಗಟ್ಟೆ 67 ರಲ್ಲಿ ಮತದಾನ ಆರಂಭವಾಗಿಲ್ಲ. ಮತದಾನ ಆರಂಭವಾಗದ ಹಿಬ್ನಲೆ ಅಧಿಕಾರಿಗಳೊಂದಿಗೆ ಸಾರ್ವಜನಿಕರ ನಡುವೆ ವಾಗ್ವಾದ ನಡೆದಿದೆ.
ಬೆಂಗಳೂರು: ನಗರದ ಯಶವಂತಪುರದ ರೋಟರಿ ಮತಗಟ್ಟೆಯಲ್ಲಿ ಗಲಾಟೆ ನಡೆದಿದೆ. ಮತದಾನ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಮತದಾರರು ಗಲಾಟೆ ಮಾಡಿದ್ದು, ಮತಗಟ್ಟೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಹೆಬ್ಬಾಳ, ಆರ್ ಟಿ ನಗರದಲ್ಲಿವಾಕರ್ ಹಿಡಿದು ಬಂದು 90 ವರ್ಷದ ವೃದ್ದೆ ಮತ ಚಲಾಯಿಸಿದ್ದಾರೆ.
ಬೆಂಗಳೂರು: ಆರ್.ಆರ್.ನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ನಟ ಗಣೇಶ್ ದಂಪತಿ ಮತದಾನ ಮಾಡಿದ್ದಾರೆ.
ಬಾಗಲಕೋಟೆ: ಮುಧೋಳ ವಿಧಾನಸಭಾ ಕ್ಷೇತ್ರದ ಚೌಡಾಪುರ ಗ್ರಾಮದ ಮತಗಟ್ಟೆ ಬಳಿ ರಾತ್ರಿ ವಾಮಾಚಾರ ಮಾಡಿರುವ ಆರೋಪ ಕೇಳಿಬಂದಿದೆ. ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ವಿರುದ್ದ ವಾಮಾಚಾರ ಮಾಡಲು ಇಬ್ಬರು ವ್ಯಕ್ತಿಗಳು ಚೀಲದಲ್ಲಿ ವಾಮಾಚಾರದ ವಸ್ತುಗಳನ್ನು ತಂದಿದ್ದರು ಎನ್ನಲಾಗುತ್ತಿದೆ. ಈ ವೇಳೆ ಗ್ರಾಮದ ಕೆಲವರು ನೋಡಿ, ವಾಮಾಚಾರ ಮಾಡಿಸಲು ಬಂದಿದ್ದವರನ್ನು ತರಾಟೆಗೆ ತೆಗೆದುಕೊಂಡು ಕಳಿಸಿದ್ದಾರೆ. ಗೋವಿಂದ ಕಾರಜೋಳ ಅವರಿಗೆ ಮತಗಳು ಬಾರದಿರಲಿ ಎಂದು ವಾಮಚಾರ ಮಾಡಿಸಲು ಬಂದಿದ್ರು ಎನ್ನುವ ಆರೋಪ ಕೇಳಿಬಂದಿದೆ.
ಬೆಂಗಳೂರು: ಬನಶಂಕರಿಯ ಬಿಎನ್ಎಮ್ ಶಾಲೆ ಬೂತ್ ನಂ.145ರಲ್ಲಿ ನಟ ರಮೇಶ್ ಅರವಿಂದ್ ಮತದಾನ ಮಾಡಿದ್ದಾರೆ.
ಗೌಪ್ಯ ಮತದಾನದ ನಿಯಮ ಉಲ್ಲಂಘನೆಯಾಗಿದೆ. ಬಾಗಲಕೋಟೆ ಜಿಲ್ಲೆಯ ತೇರದಾಳ ಮತಕ್ಷೇತ್ರದಲ್ಲಿ ಮತದಾರ ಮತದಾನ ಮಾಡಿ ಫೋಟೋ ಹರಿಬಿಟ್ಟಿದ್ದಾರೆ. ಕೈ ಅಭ್ಯರ್ಥಿ ಸಿದ್ದು ಕೊಣ್ಣೂರಿಗೆ ವೋಟ್ ಹಾಕಿ, ಫೋಟೋ ತೆಗೆದುಕೊಂಡಿದ್ದಾರೆ. ಸದ್ಯ ಫೋಟೊ ವೈರಲ್ ಆಗಿದೆ.
ಹುಬ್ಬಳ್ಳಿಯ ಮೂರು ಸಾವಿರ ಮಠದ ಶಾಲೆಯ ಮತಗಟ್ಟೆಯಲ್ಲಿ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಮತದಾನ ಮಾಡಿದರು.
ಜಯನಗರ ಬಿಇಎಸ್ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಮತ್ತು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಮತ ಚಲಾಯಿಸಿದರು.
ದೈಹಿಕ ತೊಂದರೆ ಇದ್ರು 87 ವರ್ಷದ ವಯೋವೃದ್ದ ಮತಗಟ್ಟೆಗೆ ಬಂದು ಮತದಾನ ಮಾಡಿದರು. ಕಲಬುರಗಿ ನಗರದ ಎನ್ ವಿ ಶಾಲೆಯ ಬೂತ್ ಗೆ ಆಗಮಿಸಿ ಡಾ.ಸಂಗಪ್ಪ ಅನ್ನೋ ವೃದ್ದ ಕುಟುಂಬದವರ ಸಹಾಯದಿಂದ ಮತದಾನ ಮಾಡಿದರು. ಉತ್ತಮ ಸರ್ಕಾರ ಬರಬೇಕು ಅಂದ್ರೆ ಎಲ್ಲರು ಬಂದು ಮತ ಹಾಕಬೇಕು ಅಂತ ಮನವಿ ಮಾಡಿದರು.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಗೊರವಿಗೊಂಡನಹಳ್ಳಿ ಮತಯಂತ್ರದಲ್ಲಿ ದೋಷ ಕಂಡು ಬಂದಿದ್ದು ಮತದಾನ ಆರಂಭವಾಗಿಲ್ಲ. ಬೆಳಗ್ಗೆ 7ಗಂಟೆಯಿಂದ ಮತದಾರರು ಕಾಯುತ್ತಿದ್ದಾರೆ.
ಹೊನ್ನಾಳಿ ನಗರದ ಹಿರೇಮಠದಲ್ಲಿರುವ ಶ್ರೀ ಚನ್ನಕೇಶವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೂತ್ ನಂ 105 ರಲ್ಲಿ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರೇಣುಕಾಚಾರ್ಯ ಹಾಗೂ ಪತ್ನಿ ಸುಮಾ ರೇಣುಕಾಚಾರ್ಯ ಮತ ಚಲಾಯಿಸಿದರು.
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದ ಮತಗಟ್ಟೆಯಲ್ಲಿ ಡಾ.ಕೆ.ಸುಧಾಕರ್ ಕುಟುಂಬ ಸಮೇತರಾಗಿ ಮತದಾನ ಮಾಡಿದ್ದಾರೆ.
ಬೆಂಗಳೂರು: ಬನಶಂಕರಿ ಎರಡನೇ ಹಂತ ಬೂತ್ ನಂ.145ರ ಬಿಎನ್ಎಮ್ ಶಾಲೆಯಲ್ಲಿ ಗಲಾಟೆ ನಡೆದಿದೆ. ಮತ ಚಲಾಯಿಸಲು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಕೃಷ್ಣಪ್ಪ ಕ್ಯೂ ಬಿಟ್ಟು ಹೋಗಿದ್ದಾರೆ. ಈ ವೇಳೆ ಮತದಾರರು ಮತ್ತು ಎಂ.ಕೃಷ್ಣಪ್ಪ ನಡುವೆ ವಾಗ್ವಾದ ನಡೆದಿದೆ. ಜನಪ್ರತಿನಿಧಿಯಾಗಿ ಜನರಿಗೆ ಸಹಾಯ ಮಾಡಬೇಕು. ಅದನ್ನು ಬಿಟ್ಟು ನೀವು ವೋಟ್ ಹಾಕಿ ಓಡಿ ಹೋದರೆ ಹೇಗೆ? ಕ್ಯೂನಲ್ಲಿ ನಿಂತಿರುವವರು ನಾವು ಏನು ಮಾಡಬೇಕು ಅಂತ ಜನರು ಗರಂ ಆಗಿದ್ದಾರೆ.
Published On - 10:00 am, Tue, 9 May 23