ಕರ್ನಾಟಕ ರಾಜ್ಯ ವಿಧಾನ ಸಭೆಗೆ ಮೇ 10ರಂದು ಮತದಾನ ನಡೆದಿದೆ. ಕೋಲಾರ ವಿಧಾನಸಾಭಾ ಕ್ಷೇತ್ರದಲ್ಲೂ ಎಂದಿನಂತೆ ಬಿರುಸಿನ ಮತದಾನ ನಡೆದಿತ್ತು. ಈ ಬಾರಿ ಕಾಂಗ್ರೆಸ್ನಿಂದ ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್ ಮನ್ನಡೆಯನ್ನು ಸಾಧಿಸಿದ್ದಾರೆ. ಇದೇ ಕ್ಷೇತ್ರದಲ್ಲಿ ಎರಡು ಬಾರಿ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿ ಯಡಿಯೂರಪ್ಪ ಸರ್ಕಾರದಲ್ಲಿ ಸಚಿವರಾಗಿಯೂ ಕೆಲಸ ಮಾಡಿದ್ದ ಬಿಜೆಪಿ ಆಭ್ಯರ್ಥಿ ಆವರ್ತೂರ್ ಪ್ರಕಾಶ್ ಹಿನ್ನಡೆಯಲ್ಲಿದ್ದಾರೆ. ಇನ್ನು ಜೆಡಿಎಸ್ ನಿಂದ ಇದೇ ಮೊದಲ ಬಾರಿಗೆ ಹೊಸ ಮುಖ ಸಿಎಂಆರ್ ಶ್ರೀನಾಥ್ ಅವರಿಗೆ ಹಿನ್ನಡೆಯಾಗಿದೆ.
ಇಲ್ಲಿನ ಜನರು ಹೆಚ್ಚಾಗಿ ಕೃಷಿ ಹಾಗೂ ವಿವಿದ ಉಪಕಸುಬು ಆಧಾರಿತ ಜೀವನ ನಡೆಸುವವ ಜನರೇ ಹೆಚ್ಚಾಗಿದ್ದಾರೆ. ಪ್ರಮುಖವಾಗಿ ರೇಷ್ಮೆ, ಹಾಲು, ಜೊತೆಗೆ ನರಸಾಪುರ ಹಾಗೂ ವೇಮಗಲ್ ಕೈಗಾರಿಕಾ ಪ್ರದೇಶಗಳು ಈ ಕ್ಷೇತ್ರ ವ್ಯಾಪ್ತಿಗೆ ಬರುವುದರಿಂದ ಹೆಚ್ಚಿನ ಜನರು ಕೈಗಾರಿಕೆಗಳಲ್ಲಿ ಉದ್ಯೋಗ ಮಾಡುವವರ ಸಂಖ್ಯೆ ಹೆಚ್ಚಿದೆ. ಇನ್ನು ಕ್ಷೇತ್ರದಲ್ಲಿ 115107 ಪುರುಷ, 116583 ಮಹಿಳಾ ಮತದಾರರು ಜೊತೆಗೆ ಒಟ್ಟು ಕ್ಷೇತ್ರದಲ್ಲಿ-231742 ಜನ ಮತದಾರರಿದ್ದಾರೆ, ಕ್ಷೇತ್ರದಲ್ಲಿ ಒಟ್ಟು-284 ಮತಗಟ್ಟೆಗಳನ್ನು ಸ್ಥಾಪನೆ ಮಾಡುವ ಸಾಧ್ಯತೆ ಇದೆ. ಕೋಲಾರ ಕ್ಷೇತ್ರ ವ್ಯಾಪ್ತಿಗೆ ನಾಲ್ಕು ಹೋಬಳಿಗಳು ಒಳಪಡುತ್ತವೆ ಕೋಲಾರ ಕಸಬಾ, ವೇಮಗಲ್, ವಕ್ಕಲೇರಿ, ನರಸಾಪುರ ಹೋಬಳಿಗಳು ಒಡಪಡುತ್ತವೆ. ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಹೆಚ್ಚಿನ ಸಂಖ್ಯೆ ಯಲ್ಲಿದ್ದಾರೆ. ಜನಸಂಖ್ಯೆಯಲ್ಲಿ ಮುಸ್ಲಿಂಮರು ಎರಡನೇ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ವಕ್ಕಲಿಗರು, ಕುರುಬ, ಪಳ್ಳಿಗರು, ಬಲಿಜಿಗ, ಗೊಲ್ಲರು ಇನ್ನಿತರ ಸಮುದಾಯದವರಿದ್ದಾರೆ. ಕೋಲಾರ ನಗರದಲ್ಲಿ ಮುಸ್ಲಿಂ, ಕಸಾಬ ಹೋಬಳಿಯಲ್ಲಿ ಒಕ್ಕಲಿಗರು, ಕುರುಬರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ವೇಮಗಲ್ ಹೋಬಳಿಯಲ್ಲಿ ಒಕ್ಕಲಿಗರು, ಹಿಂದುಳಿದ ವರ್ಗದವರಿದ್ದು, ನರಸಾಪುರ ಹೋಬಳಿಯಲ್ಲಿ ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ, ಒಕ್ಕಲಿಗರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ.
ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಪ್ರಾಬಲ್ಯ ಈ ಕ್ಷೇತ್ರದಲ್ಲಿದೆಯಾದರೂ, ಕಾಂಗ್ರೆಸ್‌ನಲ್ಲಿನ ಸಂಘಟಿತ ಶ್ರಮದ ಕೊರತೆ, ಒಳಜಗಳದಿಂದ ಗೆಲುವು ಸಾದಿಸಲು ಸಾಧ್ಯವಾಗಿಲ್ಲ, ಕಾಂಗ್ರೇಸ್ ಅಧಿಕಾರ ಕಳೆದುಕೊಂಡು 20 ವರ್ಷಗಳಾಗಿದೆ, ಇನ್ನು ಜೆಡಿಎಸ್ ಪಕ್ಷವೂ ಕಳೆದ ಬಾರಿ ಅಧಿಕಾರ ಪಡೆಯಿತಾದರೂ ಅದು ಕಾಂಗ್ರೇಸ್ ಪಾಲಾಗಿ ಹೋಗಿದೆ, ಇನ್ನು ಎರಡು ಬಾರಿ ಪಕ್ಷೇತರ ಅಭ್ಯರ್ಥಿ ವರ್ತೂರ್ ಪ್ರಕಾಶ್ ಜಯಗಳಿಸುವ ಮೂಲಕ ಕ್ಷೇತ್ರದಲ್ಲಿ ತಮ್ಮದೇ ಪ್ರಾಬಲ್ಯ ಬೆಳೆಸಿಕೊಂಡಿದ್ದಾರೆ. ಈಬಾರಿ ವರ್ತೂರ್ ಪ್ರಕಾಶ್ ಬಿಜೆಪಿ ಸೇರ್ಪಡೆಯಾಗಿರುವ ಹಿನ್ನೆಲೆ ಕೋಲಾರ ಕ್ಷೇತ್ರದಲ್ಲಿ ಬಿಜೆಪಿಗೂ ಹೆಚ್ಚಿನ ಶಕ್ತಿ ಬಂದಂತಾಗಿದೆ.
Published On - 12:44 am, Sat, 13 May 23