ಕೊಪ್ಪಳ: 5 ಸಾವಿರ ಕೋಟಿ ವೆಚ್ಚದಲ್ಲಿ ಅಂಜನಾದ್ರಿ ಕ್ಷೇತ್ರವನ್ನ ಅಭಿವೃದ್ಧಿ ಮಾಡುವೆ; ಜನಾರ್ದನರೆಡ್ಡಿ

|

Updated on: Mar 19, 2023 | 2:34 PM

ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಬೆನ್ನಲ್ಲೇ ಎಲ್ಲಾ ಪಕ್ಷಗಳು ಪ್ರಚಾರ ಕಾರ್ಯವನ್ನ ಆರಂಭಿಸಿದೆ. ಅದರಂತೆ ಜಿಲ್ಲೆಯ ಗಂಗಾವತಿಯಲ್ಲಿ ಮಾಜಿ ಸಚಿವ ಜನಾರ್ದನರೆಡ್ಡಿ ‘5 ಸಾವಿರ ಕೋಟಿ ವೆಚ್ಚದಲ್ಲಿ ಅಂಜನಾದ್ರಿ ಕ್ಷೇತ್ರವನ್ನ ಉತ್ತರ ಪ್ರದೇಶದ ಅಯೋಧ್ಯೆಗಿಂತ ಉತ್ತಮವಾಗಿ ಅಭಿವೃದ್ಧಿ ಮಾಡುವೆ ಎಂದಿದ್ದಾರೆ.

ಕೊಪ್ಪಳ: 5 ಸಾವಿರ ಕೋಟಿ ವೆಚ್ಚದಲ್ಲಿ ಅಂಜನಾದ್ರಿ ಕ್ಷೇತ್ರವನ್ನ ಅಭಿವೃದ್ಧಿ ಮಾಡುವೆ; ಜನಾರ್ದನರೆಡ್ಡಿ
ಮಾಜಿ ಸಚಿವ ಜನಾರ್ದನರೆಡ್ಡಿ
Follow us on

ಕೊಪ್ಪಳ: ವಿಧಾನಸಭೆ ಚುನಾವಣೆಗೆ ಕೆಲವೆ ತಿಂಗಳು ಬಾಕಿ ಇರುವ ಬೆನ್ನಲ್ಲೇ ಎಲ್ಲಾ ಪಕ್ಷಗಳು ಪ್ರಚಾರ ಕಾರ್ಯವನ್ನ ಆರಂಭಿಸಿದೆ. ಅದರಂತೆ ಜಿಲ್ಲೆಯ ಗಂಗಾವತಿಯಲ್ಲಿ ಮಾಜಿ ಸಚಿವ ಜನಾರ್ದನರೆಡ್ಡಿ (Janardhana Reddy) ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ‘5 ಸಾವಿರ ಕೋಟಿ ವೆಚ್ಚದಲ್ಲಿ ಅಂಜನಾದ್ರಿ ಕ್ಷೇತ್ರವನ್ನ ಉತ್ತರ ಪ್ರದೇಶದ ಅಯೋಧ್ಯೆಗಿಂತ ಉತ್ತಮವಾಗಿ ಅಭಿವೃದ್ಧಿ ಮಾಡುವೆ. ಗಂಗಾವತಿ ಜನತೆ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದರೆ ಇಡೀ ದೇಶವೇ ತಿರುಗಿನೋಡುವಂತೆ ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತೇನೆ. ಸುಂದರ ಗಂಗಾವತಿ ನಿರ್ಮಾಣ ಮಾಡುವುದು ನಮ್ಮ ಕೆಲಸವಾಗಿದೆ ಎಂದರು.

ಮೊನ್ನೆಯಷ್ಟೆ ಅಂಜನಾದ್ರಿಗೆ ಸಿಎಂ ಬೊಮ್ಮಾಯಿ ಭೂಮಿ ಪೂಜೆ ಮಾಡಿದ ಬೆನ್ನಲ್ಲೆ, ಇದೀಗ ಹಿಂದೂ ಮತಬ್ಯಾಂಕ್ ತಪ್ಪದಂತೆ ರೆಡ್ಡಿ ಭರವಸೆಗಳ ಮಹಾಪೂರವನ್ನೇ ಕೊಟ್ಟಿದ್ದಾರೆ. ‘224 ಕ್ಷೇತ್ರಗಳ ಪೈಕಿ 50 ಕ್ಷೇತ್ರಗಳಲ್ಲಿ ಕೆಆರ್​ಪಿಪಿ ಸ್ಪರ್ಧೆ ಮಾಡುತ್ತಿದೆ. ಜನಾರ್ದನರೆಡ್ಡಿ ರಾಜಕೀಯದಿಂದ ಹೊರಗಡೆ ಬಂದಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಇಟಲಿಯಿಂದ ಭಾರತಕ್ಕೆ ಬಂದು ಬಳಿಕ ಬಳ್ಳಾರಿಯಲ್ಲಿ ಸ್ಪರ್ಧಿಸಿ, ಇಲ್ಲಿಂದ ಗೆದ್ದು ಹೋದ ನಾಯಕಿ ಪಕ್ಷದವರು ನನ್ನ ಬಗ್ಗೆ ಈಗ ಮಾತನಾಡುತ್ತಾರೆ. ಪರೋಕ್ಷವಾಗಿ ಕಾಂಗ್ರೆಸ್​ನ ಇಕ್ಬಾಲ್ ಅನ್ಸಾರಿ ವಿರುದ್ಧ ರೆಡ್ಡಿ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಜನಾರ್ಧನ ರೆಡ್ಡಿ ವಿರುದ್ದ ತೊಡೆತಟ್ಟಿದ ಕೇಸರಿ ಕಲಿಗಳು; ಗದ್ದುಗೆ ಹಿಡಿಯಲು ಸಾಲು ಸಾಲು ಕಾರ್ಯಕ್ರಮ ಆಯೋಜನೆ

ಪ್ರಾದೇಶಿಕ ಪಕ್ಷ ಕಟ್ಟಿದವರು ಯಾರು ಕೂಡ ದೊಡ್ಡ ಪ್ರಮಾಣದಲ್ಲಿ ಸಕ್ಸಸ್ ಆಗಿಲ್ಲ. ರೆಡ್ಡಿ ಏನ್ ಮಾಡುತ್ತಾರೆ ಅಂದರು. ಕೆಆರ್​ಪಿಪಿ 50 ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳು ಕೆಲಸ ಮಾಡುತ್ತಿದ್ದಾರೆ. ನನ್ನ ಬಗ್ಗೆ ಕೆಲವರು ಅಪ್ರಚಾರ ಮಾಡುತ್ತಿದ್ದಾರೆ. ಅದರ ಬಗ್ಗೆ ಯಾರು ಕಿವಿಗೊಡಬೇಡಿ‌ ಎಂದಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:32 pm, Sun, 19 March 23