Madhugiri Election Results: ಮಧುಗಿರಿ ವಿಧಾನಸಭಾ ಕ್ಷೇತ್ರ ಚನಾವಣೆ 2023 ಫಲಿತಾಂಶ; ಕಾಂಗ್ರೆಸ್​ ಜೆಡಿಎಸ್ ನಡುವೆ ಫೈಟ್

Madhugiri Assembly Election Results 2023 Live Counting Updates: ಕಳೆದ ಎರಡು ದಶಕಗಳಿಂದ ಮಧುಗಿರಿ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಹಾವು ಏಣಿ ಆಟ ನಡೆಯುತ್ತಿದೆ.

Madhugiri Election Results: ಮಧುಗಿರಿ ವಿಧಾನಸಭಾ ಕ್ಷೇತ್ರ ಚನಾವಣೆ 2023 ಫಲಿತಾಂಶ; ಕಾಂಗ್ರೆಸ್​ ಜೆಡಿಎಸ್ ನಡುವೆ ಫೈಟ್
ಮಧುಗಿರಿ ವಿಧಾನಸಭೆ ಚುನಾವಣೆ ಫಲಿತಾಂಶ

Updated on: May 13, 2023 | 2:40 AM

Madhugiri Assembly Election Results 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ತುಮಕೂರು ಜಿಲ್ಲೆಯ ಮಧುಗಿರಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಎಲ್​ಸಿ ನಾಗರಾಜ್, ಕಾಂಗ್ರೆಸ್​ನಿಂದ ಕೆಎನ್ ರಾಜಣ್ಣ, ಜೆಡಿಎಸ್​ನಿಂದ ವೀರಭದ್ರಯ್ಯ ಹಾಗೂ ಆಮ್ ಆದ್ಮಿ ಪಕ್ಷದಿಂದ ಸಯ್ಯದ್ ಮುಝಾಮಿಲ್ ಪಾಷಾ ಅವರು ಕಣದಲ್ಲಿದ್ದಾರೆ. 1999 ಮತ್ತು 2004ರ ಚುನಾವಣೆಯಲ್ಲಿ ಕಾಂಗ್ರೆಸ್​ ಸತತ ಎರಡು ಬಾರಿ ಗೆದ್ದಿದ್ದರೆ, ನಂತರದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹಾವು ಏಣಿ ಆಟ ನಡೆಯುತ್ತಿದೆ.

1999ರಲ್ಲಿ ಜೆಡಿಎಸ್​ನ ಗಂಗಹನುಮಯ್ಯ ವಿರುದ್ಧ ಕಾಂಗ್ರೆಸ್​ನ ಡಾ.ಜಿ.ಪರಮೇಶ್ವರ್ ಅವರು 55 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. 2004 ರ ಚುನಾವಣೆಯಲ್ಲೂ ಪರಮೇಶ್ವರ್ ಅವರು ಸತತ 2ನೇ ಬಾರಿ ಚುನಾಯಿತರಾದರು. ಇವರ ವಿರುದ್ಧ ಜೆಡಿಎಸ್​ನ ಹೆಚ್​ ಕೆಂಚಮಾರಯ್ಯ ಅವರು ಸೋಲು ಅನುಭವಿಸಿದ್ದರು. 2008ರ ಚುನಾವಣೆಯಲ್ಲಿ ಜೆಡಿಎಸ್​ನ ಡಿಸಿ ಗೌರಿಶಂಕರ್ ಚುನಾಯಿತರಾದರೆ ಕಾಂಗ್ರೆಸ್​ನ ಕೆಎನ್ ರಾಜಣ್ಣ ಸೋಲು ಅನುಭವಿಸಿದ್ದರು.

2013ರ ಚನಾವಣೆಯಲ್ಲಿ ಕಾಂಗ್ರೆಸ್​ನ ರಾಜಣ್ಣ ಅವರು ಜೆಡಿಎಸ್​ನ ಎಂವಿ ವೀರಭದ್ರಯ್ಯ ಅವರನ್ನು ಸೋಲಿಸಿದ್ದರು. 2018ರ ಚುನಾವಣೆಯಲ್ಲಿ ಕಾಂಗ್ರೆಸ್​ನ ರಾಜಣ್ಣ ಅವರನ್ನು ಜೆಡಿಎಸ್​ನ ವೀರಭದ್ರಯ್ಯ ಅವರು ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. 18,574 ಮತಗಳ ಅಂತರದಿಂದ ರಾಜಣ್ಣರನ್ನು ವೀರಭದ್ರಯ್ಯ ಅವರು ಸೋಲಿಸಿದ್ದರು.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ