ಕಾಂಗ್ರೆಸ್​​ನವರು ಹನುಮಂತನ ಬಾಲಕ್ಕೆ ಬೆಂಕಿ ಹಚ್ಚಿದ್ದಾರೆ, ಅದು ಸುಡದೇ ಬಿಡುವುದಿಲ್ಲ ಎಂದ ಸಚಿವ ಆರ್​ ಅಶೋಕ್​​

|

Updated on: May 07, 2023 | 3:22 PM

ಹನುಮಂತ ಸುಮ್ಮನೇ ಕುತ್ತಿದ್ದ. ಅವನ ಬಾಲಕ್ಕೆ ಬೆಂಕಿ ಇಟ್ಟಿದ್ದಾರೆ. ಹನುಮಂತನನ್ನು ಕಟ್ಟಿಹಾಕಲು ಸಾಧ್ಯವೇ. ಇಡೀ ಕಾಂಗ್ರೆಸ್​​​ ಅನ್ನು ಸುಟ್ಟು ಹಾಕುತ್ತಾನೆ ಎಂದು ಸಚಿವ ಆರ್​ ಅಶೋಕ್​ ವಾಗ್ದಾಳಿ ಮಾಡಿದ್ದಾರೆ.

ಕಾಂಗ್ರೆಸ್​​ನವರು ಹನುಮಂತನ ಬಾಲಕ್ಕೆ ಬೆಂಕಿ ಹಚ್ಚಿದ್ದಾರೆ, ಅದು ಸುಡದೇ ಬಿಡುವುದಿಲ್ಲ ಎಂದ ಸಚಿವ ಆರ್​ ಅಶೋಕ್​​
ಆರ್.ಅಶೋಕ್
Follow us on

ರಾಮನಗರ: ಹನುಮಂತ ಸುಮ್ಮನೇ ಕುತ್ತಿದ್ದ. ಅವನ ಬಾಲಕ್ಕೆ ಬೆಂಕಿ ಇಟ್ಟಿದ್ದಾರೆ. ಹನುಮಂತನನ್ನು ಕಟ್ಟಿಹಾಕಲು ಸಾಧ್ಯವೇ. ಇಡೀ ಕಾಂಗ್ರೆಸ್​​​ ಅನ್ನು ಸುಟ್ಟು ಹಾಕುತ್ತಾನೆ ಎಂದು ಸಚಿವ ಆರ್​ ಅಶೋಕ್​ (R Ashok) ವಾಗ್ದಾಳಿ ಮಾಡಿದ್ದಾರೆ. ರಾಮನಗರ ಜಿಲ್ಲೆಯ ಕನಕಪುರದಲ್ಲಿ ಮಾತನಾಡಿದ ಅವರು, ಇಡೀ ಪ್ರಪಂಚದಲ್ಲಿ ಬಜರಂಗದಳ ಇದೆ. ಲವ್ ಜಿಹಾದ್ ವಿರುದ್ಧ ಹೋರಾಟ ಮಾಡಲು ಬಜರಂಗದಳ ಇದೆ. ದೇಶ ಪ್ರೇಮಿಗಳು ಬಜರಂಗದಳದವರು. ಕಾಂಗ್ರೆಸ್​ನವರು ಇದ್ದಾಗ 60 ಕೇಸ್​​ಗಳು ಬಿದ್ದಿದ್ದವು. ಸಿಎಂ ಬಸವರಾಜ ಬೊಮ್ಮಾಯಿ ಮೇಲೆ ಒಂದು ಕೇಸ್ ಇಲ್ಲ ಎಂದು ಹೇಳಿದರು.

ನೀವೇನೂ ಸತ್ಯಹರಿಶ್ಚ್ಂದ್ರನ ಮಕ್ಕಳಾ? ಕಾಂಗ್ರೆಸ್​ಗೆ ಆರ್​ ಅಶೋಕ್​ ಪ್ರಶ್ನೆ 

ಕಾಂಗ್ರೆಸ್​ನವರು ತಿಂದು ಲೂಟಿ ಮಾಡಿ ಇದೀಗ ಮಾತನಾಡುತ್ತಿದ್ದಾರೆ. ನೀವೇನೂ ಸತ್ಯಹರಿಶ್ಚ್ಂದ್ರನ ಮಕ್ಕಳಾ ಎಂದು ಕಿಡಿಕಾರಿದ್ದಾರೆ. ಮನೆಯ ಮುಂದೆಯೇ ಸತ್ಯಹರಿಶ್ಚಂದ್ರನ ರೀತಿ ಮಾತನಾಡುತ್ತಾರೆ. ರಾಹುಲ್ ಗಾಂಧಿ ಬೇಲ್ ಮೇಲೆ ಇದ್ದಾರೆ. ಬೇಲ್​ಗಾಗಿ ಓಡಾಡುತ್ತಿದ್ದಾರೆ. ಮೋದಿ ಪ್ರಪಂಚದ ಸಾಲಿನಲ್ಲಿ ದೇಶವನ್ನು ಎತ್ತಿಕೊಂಡು ಹೋಗಿದ್ದಾರೆ ಎಂದು ತಿಳಿಸಿದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಡೈಲಾಗ್ ಹೊಡೆಯುತ್ತಾರೆ. ಕಾಂಗ್ರೆಸ್ ಪಕ್ಷವನ್ನು ಧಿಕ್ಕಾರ ಮಾಡಿ. ಮೋದಿ ಅವರಿಗೆ ವಿರೋಧಿಗಳು ಇಲ್ಲ. ಅವರೇ ಮತ್ತೆ ಪ್ರಧಾನಿ ಆಗೋದು ಎಂದರು.

ಇದನ್ನೂ ಓದಿ: Karnataka Assembly Elections 2023: ಕರ್ನಾಟಕದಲ್ಲಿ ಬಿಜೆಪಿ ಪರ ಭರ್ಜರಿ ಅಲೆ ಸೃಷ್ಟಿಸಿದ ಪ್ರಧಾನಿ ಮೋದಿ, ರಾಜ್ಯದಲ್ಲಿ ಪ್ರಚಾರಕ್ಕಿಳಿದಾಗಿನಿಂದ ಏನೇನಾಯ್ತು? ಇಲ್ಲಿದೆ ಮಾಹಿತಿ

ಕಾಂಗ್ರೆಸ್ ಹವಾ ಮೋದಿ ಬಂದ ನಂತರ ನಿರ್ನಾಮ

ಕನಕಪುರ ಇತಿಹಾಸದಲ್ಲಿ ಬಿಜೆಪಿ ಇಂತಹ ರೋಡ್ ಶೋ ಮಾಡಿಲ್ಲ. ಕಾಂಗ್ರೆಸ್ ದೇಶದಲ್ಲಿ ಎಲ್ಲಿಯೂ ಇಲ್ಲ. ರಾಜಸ್ಥಾನ ಸರ್ಕಾರ ಕೂಡ ಮೂರು ತಿಂಗಳಲ್ಲಿ ಹೊರಟು ಹೋಗುತ್ತದೆ. ಕಾಂಗ್ರೆಸ್ ಹವಾ ಮೋದಿ ಬಂದ ನಂತರ ನಿರ್ನಾಮ ಆಗುತ್ತದೆ. ರಾಹುಲ್ ಗಾಂಧಿ ಎಲ್ಲೆಲ್ಲಿ ಬಂದಿದ್ದಾರೆ ಅಲ್ಲಿ ಸೋಲು ಆಗಿದೆ ಎಂದು ಹರಿಹಾಯ್ದರು.

ಮಾರಾಟವಾಗದ ವಸ್ತುವಿಗೆ ಗ್ಯಾರಂಟಿ ಇರಲ್ಲ, ಕಾಂಗ್ರೆಸ್​ ಅದೇ ರೀತಿ: ಸಿಎಂ ಬೊಮ್ಮಾಯಿ 

ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಮನಗರ ಜಿಲ್ಲೆಯ ಕನಕಪುರ ಕ್ಷೇತ್ರದಲ್ಲಿ ಕಮಲ ಅರಳಲಿದೆ. ಇಡೀ ರಾಜ್ಯದಲ್ಲಿ ಮತ್ತು ಕನಕಪುರದಲ್ಲೂ ಬಿಜೆಪಿ ಪರ ಅಲೆ ಇದೆ. ಡಬಲ್ ಇಂಜಿನ್ ಸರ್ಕಾರ ದೊಡ್ಡಮಟ್ಟದ ಅಭಿವೃದ್ಧಿ ಮಾಡಿದೆ. ಪ್ರವಾಹದ ಸಂದರ್ಭದಲ್ಲಿ ಸಂತ್ರಸ್ತರಿಗೆ ಪರಿಹಾರ ಕೊಟ್ಟಿದ್ದೇವೆ. ಕಂದಾಯ ಇಲಾಖೆಯಲ್ಲಿ ಬಿಜೆಪಿ ಸರ್ಕಾರ ಕ್ರಾಂತಿ ಮಾಡಿದೆ. ಕಾಂಗ್ರೆಸ್​ನವರು ಗ್ಯಾರಂಟಿ ಎಂಬ ಹೆಸರಿನಲ್ಲಿ ವೋಟ್ ಕೇಳ್ತಿದ್ದಾರೆ. ಮಾರಾಟವಾಗದ ವಸ್ತುವಿಗೆ ಗ್ಯಾರಂಟಿ ಇರಲ್ಲ, ಕಾಂಗ್ರೆಸ್​ ಅದೇ ರೀತಿ ಎಂದು ಕಿಡಿಕಾರಿದರು.

ಇದನ್ನೂ ಓದಿ: ಮೇ 8ರಿಂದ ಬಹಿರಂಗ ಪ್ರಚಾರಕ್ಕೆ ತೆರೆ: ಸಂಜೆ 5ರಿಂದ ಮೇ10ರ ಮಧ್ಯರಾತ್ರಿವರೆಗೆ ಮದ್ಯ ನಿಷೇಧ

ಚುನಾವಣೆಯಿಂದಾಗಿ ಲಿಂಗಾಯತರ ಮೇಲೆ ಪ್ರೀತಿ: ಸಿದ್ದರಾಮಯ್ಯಗೆ ಟಾಂಗ್ 

ಬಡವರಿಗೆ ಪ್ರಧಾನಿ ಮೋದಿ 30 ರೂ.ಗೆ ಅಕ್ಕಿ ಕಳುಹಿಸಿದ್ದಾರೆ. ಕಾಂಗ್ರೆಸ್ ಕೊಟ್ಟಿದ್ದು ಗೋಣಿಚೀಲ ಮಾತ್ರ ಎಂದು ಸಿಎಂ ವ್ಯಂಗ್ಯವಾಡಿದ್ದಾರೆ. ಮೇ 10ರ ಬಳಿಕ ಕಾಂಗ್ರೆಸ್​ನದ್ದು ಗಳಗಂಟೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಮಾಜ ಒಡೆಯುತ್ತೆ. ಕಳೆದ ಬಾರಿ ವೀರಶೈವ ಲಿಂಗಾಯತ ಒಡೆಯಲು ಹೋಗಿದ್ದರು. ಚುನಾವಣೆ ಬಂದಿದೆ ಎಂದು ಲಿಂಗಾಯತರ ಮೇಲೆ ಪ್ರೀತಿ ಬಂದಿದೆ ಎಂದು ಪರೋಕ್ಷವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಿಎಂ ಟಾಂಗ್ ನೀಡಿದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ