ಮೈಸೂರು: ಕರ್ನಾಟಕ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದರ ಮೇಲೆ ಬೆಟ್ಟಿಂಗ್ (Betting) ಕಟ್ಟಿದ ಅನೇಕ ಪ್ರಕರಣಗಳು ನಡೆದಿದ್ದವು. ಇದೀಗ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲೂ ಬೆಟ್ಟಿಂಗ್ ಶುರವಾಗಿದೆ. ಹೌದು, ಮೈಸೂರು ತಾಲೂಕಿನ ಕಡವೇ ಕಟ್ಟೆಹುಂಡಿಯ ಅಭಿಮಾನಿಯೊಬ್ಬ ಮುಂದಿನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (Siddaramaiah) ಅವರು ಆಯ್ಕೆಯಾಗುತ್ತಾರೆ ಎಂದು ಒಂದಲ್ಲ ಮೂರು ಟಗರುಗಳನ್ನು ಬಾಜಿ (ಬೆಟ್ಟಿಂಗ್) ಇಟ್ಟಿದ್ದಾನೆ.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗೇ ಆಗುತ್ತಾರೆ, ಒಂದಲ್ಲ ಮೂರು ಟಗರು ಬಾಜಿ ಕಟ್ಟುತ್ತೇನೆ ಎಂದು ಚಂದ್ರು ಸವಾಲು ಹಾಕಿದ್ದಾನೆ. ಚುನಾವಣೆಯಲ್ಲಿ ಸಿದ್ದರಾಮಯ್ಯ ಗೆಲ್ಲುತ್ತಾರೆ ಅಂತಾ ಚಂದ್ರು ಮೂರು ಟಗರುಗಳನ್ನು ಬೆಟ್ಟಿಂಗ್ ಕಟ್ಟಿದ್ದಾರೆ. ಆದರೆ ಯಾರು ಕೂಡ ಬೆಟ್ಟಿಂಗ್ ಕಟ್ಟಲು ಮುಂದೆ ಬಂದಿರಲಿಲ್ಲ. ಚಂದ್ರ ನಿರೀಕ್ಷೆಯಂತೆ ಸಿದ್ದರಾಮಯ್ಯ ವರುಣಾದಲ್ಲಿ ಗೆದ್ದಿದ್ದು, ಮೂರು ಟಗರುಗಳು ಚಂದ್ರು ಜೊತೆಯೇ ಉಳಿದುಕೊಂಡಿವೆ.
ಇದನ್ನೂ ಓದಿ: ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್: ನಿಜವಾಗುತ್ತಾ ಮೈಲಾರಲಿಂಗ ಕಾರಣಿಕ? ಸಿದ್ದರಾಮಯ್ಯ ಸಿಎಂ ಪಕ್ಕಾ ?
ಸದ್ಯ ಇದೇ ಅಭಿಮಾನಿ ಚಂದ್ರು, ಸಿದ್ದರಾಮಯ್ಯ ಸಿಎಂ ಆಗುತ್ತಾರೆ ಎಂದು ಮತ್ತೆ ಅದೇ ಮೂರು ಟಗರುಗಳನ್ನು ಬಾಜಿಗಿಟ್ಟಿದ್ದಾನೆ. ಸಿದ್ದರಾಮಯ್ಯ ಅವರು ಸಿಎಂ ಆಗುತ್ತಾರೆ ಎಂದು ಚಂದ್ರುಗೆ ಎಷ್ಟು ಆತ್ಮವಿಶ್ವಾಸ ಇದೆ ಎಂದರೆ ಟಗರನ್ನು ಸಿದ್ದರಾಮಯ್ಯಗೆ ಕೊಡಲು ನಿರ್ಧಾರಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿ ಮನೆ ದೇವರ ಪೂಜೆಗೆ ಬಂದಾಗ ಟಗರು ಗಿಫ್ಟ್ ಮಾಡಲು ನಿರ್ಧರಿಸಿದ್ದಾನೆ.
ಸಿದ್ದರಾಮಯ್ಯ ಸಿಎಂ ಆದರೆ ರಾಜ್ಯದ ಜನರ ಹಸಿವು ನೀಗಿಸುತ್ತಾರೆ. ಡಿಕೆ ಶಿವಕುಮಾರ್ ಅವರೇ ಈ ಬಾರಿ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಆಗಲು ಬಿಡಿ ಎಂದು ಟಿವಿ9 ಜೊತೆ ಮಾತನಾಡುತ್ತಾ ಚಂದ್ರು ಮನವಿ ಮಾಡಿಕೊಂಡಿದ್ದಾರೆ. ನಿಮಗೆ ಇನ್ನೂ ವಯಸ್ಸು ಇದೆ ದೇವರು ನಿಮಗೆ ಆರೋಗ್ಯ ಆಯಸ್ಸು ನೀಡಲಿ. ಮುಂದೆ ಸಿದ್ದರಾಮಯ್ಯ ಅವರೇ ನಿಂತು ನಿಮ್ಮನ್ನು ಮುಖ್ಯಮಂತ್ರಿ ಮಾಡುತ್ತಾರೆ ಎಂದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ