Narasimharaja Election Results: ನರಸಿಂಹರಾಜ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ತನ್ವೀರ್ ಸೇಠ್​​​ಗೆ ಜಯ

|

Updated on: May 13, 2023 | 4:29 PM

Narasimharaja Assembly Election Result 2023 Live Counting Updates: ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ತನ್ವೀರ್‌ ಸೇಠ್‌ ಸ್ಪರ್ಧಿಸಿದ್ದರೇ, ಜೆಡಿಎಸ್‌ನಿಂದ ಅಬ್ದುಲ್ ಖಾದರ್ ಶಾಹಿದ್ ಕಣದಲ್ಲಿದ್ದಾರೆ. ಬಿಜೆಪಿಯಿಂದ ಧರ್ಮಶ್ರೀ ಅವರು ಸ್ಪರ್ಧಿಸಿದ್ದು ಮತ ಎಣಿಕೆಯ ವಿವರ ಇಲ್ಲಿದೆ.

Narasimharaja Election Results: ನರಸಿಂಹರಾಜ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ತನ್ವೀರ್ ಸೇಠ್​​​ಗೆ ಜಯ
ತನ್ವೀರ್​ ಸೇಠ್​​
Follow us on

Narasimharaja Assembly Election Results 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಪ್ರಕಟಗೊಂಡಿದ್ದು, ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ (Narasimharaja Assembly Constituency) ಕಾಂಗ್ರೆಸ್​ ಅಭ್ಯರ್ಥಿ ತನ್ವೀರ್‌ ಸೇಠ್‌ ಗೆದ್ದಿದ್ದಾರೆ. ಬಿಜೆಪಿಯಿಂದ ಸಂದೇಶ್‌ ಸ್ವಾಮಿ ಪ್ರತಿಸ್ಪರ್ಧಿಯಾಗಿದ್ದರು. ಜೆಡಿಎಸ್‌ನ ಅಬ್ದುಲ್ ಖಾದರ್ ಶಾಹಿದ್ ಅವರು ಕಣದಲ್ಲಿದ್ದರು. ಎಎಪಿಯಿಂದ ಧರ್ಮಶ್ರೀ ಸ್ಪರ್ಧೆಯಲ್ಲಿದ್ದರು.

ರಾಜ್ಯದಲ್ಲಿಯೇ ಮುಸ್ಲಿಂ ಸಮುದಾಯದ ಕ್ಷೇತ್ರ ಎಂದು ಗುರುತಿಸಿಕೊಂಡಿರುವ ಕ್ಷೇತ್ರಗಳಲ್ಲಿ ನರಸಿಂಹರಾಜ ಮತಕ್ಷೇತ್ರವೂ ಒಂದು. ಇದುವರೆಗೂ ನಡೆದಿರುವ 16 ಚುನಾವಣೆಗಳಲ್ಲಿ 11 ಬಾರಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದಿದೆ. ಇದೊಂದು ಮುಸ್ಲಿಂ ಸಮುದಾಯದ ಭದ್ರಕೋಟೆಯಾಗಿದೆ. 13 ಬಾರಿ ಮುಸ್ಲಿಂ ಶಾಸಕರು ಆಯ್ಕೆಯಾಗಿ ಧರ್ಮದ ಆಧಾರದ ಮೇಲೆಯೇ ಚುನಾವಣೆ ನಡೆಯುವ ನರಸಿಂಹರಾಜ ಕ್ಷೇತ್ರದಲ್ಲಿ ಹಿಂದುತ್ವದ ಅಜೆಂಡಾ ಇಟ್ಟುಕೊಂಡು ಗೆಲುವು ಸಾಧಿಸಲು ಬಿಜೆಪಿ ಶತಾಯಗತಾಯ ಪ್ರಯತ್ನ ಮಾಡಿತ್ತು.

ಈ ಹಿಂದೆ ನರಸಿಂಹರಾಜ ಕ್ಷೇತ್ರದ ಸಾಮ್ರಾಟ ತನ್ವೀರ್‌ ಸೇಠ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಹೀಗಾಗಿ ತನ್ವೀರ್​ ಸೇಠ್​​​ ಅನಾರೋಗ್ಯದ ಕಾರಣ ನೀಡಿ ಈ ಬಾರಿ ವಿಧಾನಸಭಾ ಚುನಾವಣೆಯಿಂದ ಹಿಂದೆ ಸರಿದಿದ್ದರು. ನಾನು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕಾಂಗ್ರೆಸ್‌ ಮುಖಂಡರಿಗೆ ಮನವಿ ಸಲ್ಲಿಸಿದ್ದರು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಇದಾದ ಬಳಿಕ ಕಾಂಗ್ರೆಸ್‌ ಮುಖಂಡರು ಸಮಾಧಾನಪಡಿಸಿ ಈ ಬಾರಿಯೂ ನರಸಿಂಹರಾಜ ಕ್ಷೇತ್ರದ ಟಿಕೆಟ್‌ನನ್ನು ತನ್ವೀರ್‌ ಸೇಠ್‌ಗೆ ನೀಡಿದ್ದರು.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 3:31 am, Sat, 13 May 23