Nargund Assembly Election Result 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ನರಗುಂದ ವಿಧಾನಸಭಾ ಕ್ಷೇತ್ರದಿಂದ (Nargund Assembly Constituency) ಬಿಜೆಪಿ ಅಭ್ಯರ್ಥಿ ಪ್ರಭಾವಿ ಸಚಿವ ಸಿಸಿ ಪಾಟೀಲ್ ತೀವ್ರ ಪ್ರಯಾಸದ ಗೆಲವು ಸಾಧಿಸಿದ್ದಾರೆ.
ಪ್ರಭಾವಿ ಸಚಿವ ಸಿಸಿ ಪಾಟೀಲ್ಗೆ ಮಾಜಿ ಸಚಿವ ಬಿಆರ್ ಯಾವಗಲ್ ತೀವ್ರ ಪೈಪೋಟಿ ನೀಡಿದ್ರು. ಪ್ರತಿಯೊಂದು ಸುತ್ತಿನಲ್ಲೂ ಕಾಂಗ್ರೆಸ್ ಬಿಜೆಪಿ ನಡುವ ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಬಿಜೆಪಿ ಅಭ್ಯರ್ಥಿ ಸಿ ಸಿ ಪಾಟೀಲ್ 72835 ಮತ ಪಡೆದ್ರೆ, ಕಾಂಗ್ರೆಸ್ ಅಭ್ಯರ್ಥಿ ಬಿ ಆರ್ ಯಾವಗಲ್ 71044 ಮತಗಳು ಪಡೆದು ಸೋಲು ಒಪ್ಪಿಕೊಂಡಿದ್ದಾರೆ.
ಕಳೆದ 2018ರ ಚುನಾವಣೆಯಲ್ಲಿ ನರಗುಂದ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಚಂದ್ರಕಾಂತಗೌಡ ಪಾಟೀಲ ಅವರೇ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಬಸವರಡ್ಡಿ ಯಾವಗಲ್ ಸುಮಾರು 7 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಬಸವರಡ್ಡಿ ಯಾವಗಲ್ ಮತ್ತೆ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಕಳೆದ ಮೂರು ಚುನಾವಣೆಗಳಲ್ಲಿ ಎರಡು ಸಲ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಹಾಗಾಗಿ ಇಲ್ಲಿ ಬಿಜೆಪಿಯದ್ದೇ ಪ್ರಾಬಲ್ಯವಿತ್ತು.
ಜೆಡಿಎಸ್ ಪಕ್ಷ ನರಗುಂದ ವಿಧಾನಸಭಾ ಕ್ಷೇತ್ರದಿಂದ ಹೊಸ ಮುಖಕ್ಕೆ ಮಣೆ ಹಾಕಿದ್ದು, ಗಿರಿಮಲ್ಲನಗೌಡ ಈಶ್ವರಗೌಡ ಪಾಟೀಲ ಬದಲಿಗೆ ರುದ್ರಗೌಡ ನಿಂಗನಗೌಡ ಪಾಟೀಲರನ್ನು ಕಣಕ್ಕಿಳಿಸಿತ್ತು. ಆಮ್ ಆದ್ಮಿಯ ಉಮೇದುವಾರರಾಗಿ ರಾಮಪ್ಪ ದ್ಯಾಮಪ್ಪ ಹೊನ್ನವರ ಕಣಕ್ಕಿಳಿದಿದ್ದರು.
ಈ ಕ್ಷೇತ್ರದಲ್ಲಿ ಲಿಂಗಾಯತ ಮತಗಳ ಪ್ರಾಬಲ್ಯ ಹೆಚ್ಚಿದೆ. ಸುಮಾರು, 80 ಸಾವಿರ ಲಿಂಗಾಯತ, ಕುರುಬ 27 ಸಾವಿರ, ಮುಸ್ಲಿಮ್ 25 ಸಾವಿರ, ಎಸ್ಟಿ 10 ಸಾವಿರ, ಬ್ರಾಹ್ಮಣ 5 ಸಾವಿರ ಮತದಾರರಿದ್ದಾರೆ.
Published On - 2:38 am, Sat, 13 May 23