ಋಣ ತೀರಿಸಲು ಆಪ್​​ ಅಭ್ಯರ್ಥಿಗೆ ಕೂಡಿಟ್ಟಿದ್ದ ಪಿಂಚಣಿ ಹಣ ನೀಡಿದ ವೃದ್ಧ ದಂಪತಿ

|

Updated on: May 05, 2023 | 3:02 PM

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಕೂಡಿಟ್ಟಿದ ಪಿಂಚಣಿ ಹಣವನ್ನು ವೃದ್ಧ ದಂಪತಿ ಆಮ್​ ಆದ್ಮಿ ಪಕ್ಷದ ಅಭ್ಯರ್ಥಿಗೆ ನೀಡಿದ್ದಾರೆ.

ದೇವನಹಳ್ಳಿ: ಈ ಬಾರಿಯ ಕರ್ನಾಟಕ ವಿಧಾಸಭೆ ಚುನಾವಣೆ (Karnataka Assembly Election 2023) ಸಾಕಷ್ಟು ವಿಶೇಷ ಸಂಗತಿಗಳಿಗೆ ಸಾಕ್ಷಿಯಾಗುತ್ತಿದೆ. ಇಷ್ಟು ವರ್ಷಗಳ ಕಾಲ ರಾಜಕಾರಣಿಗಳು (Politicians) ಮತದಾರರಿಗೆ ಹಣ ನೀಡಿದ್ದರೇ, ಈಗ ಜನರೇ ನಾಯಕರಿಗೆ ಹಣ ನೀಡುತ್ತಿರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ (Socail Media) ವೈರಲ್​ ಆಗುತ್ತಿವೆ. ಅದೇ ರೀತಿಯಾಗಿ ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ (Devanhalli) ಕೂಡಿಟ್ಟಿದ ಪಿಂಚಣಿ ಹಣವನ್ನು ವೃದ್ಧ ದಂಪತಿ ಆಮ್​ ಆದ್ಮಿ ಪಕ್ಷದ (AAP) ಅಭ್ಯರ್ಥಿಗೆ ನೀಡಿದ್ದಾರೆ.

ಎಎಪಿ ಅಭ್ಯರ್ಥಿ ಬಿ.ಕೆ.ಶಿವಪ್ಪ ಚುನಾವಣೆಗೂ ಮುನ್ನ ಪಟ್ಟಣದ ವೃದ್ಧ ದಂಪತಿ ಪುಟ್ಟಣ್ಣ ಗಿರಿಜಮ್ಮ ಎಂಬುವರಿಗೆ ಪಿಂಚಣಿ ಮಾಡಿಸಿಕೊಟ್ಟಿದ್ದರು. ಹೀಗಾಗಿ ಮತ ಕೇಳಲು ಹೋದ ವೇಳೆ ಕೂಡಿಟ್ಟಿದ್ದ ಹುಂಡಿಯಲ್ಲಿನ ಹಣವನ್ನು ನೀಡಿದ್ದಾರೆ. ಬಳಿಕ ಬಿ.ಕೆ.ಶಿವಪ್ಪ ಅವರನ್ನು ವೃದ್ಧ ದಂಪತಿ ಹಾರೈಸಿದ್ದಾರೆ. ಅಲ್ಲದೇ ಮತ ಕೇಳಲು ಬಂದವರಿಗೆ ಜ್ಯೂಸ್ ನೀಡಿ ಉಪಚಾರ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ವೃದ್ಧ ದಂಪತಿ, ಮಕ್ಕಳಿಲ್ಲದ ಕಾರಣ ಇಬ್ಬರೇ ಇದ್ದು ಪಿಂಚಣಿಗಾಗಿ ಪರದಾಡುತ್ತಿದ್ದೇವು. ನಮಗೆ ಸಹಾಯ ಮಾಡಿದ್ದೀರಾ ಒಳ್ಳೆಯದಾಗಲಿ ಅಂತ ಹುಂಡಿಯನ್ನು ಒಡೆದು ಸಂಪೂರ್ಣ ಹಣ ನೀಡಿದ್ದಾರೆ. ದಂಪತಿಯ ಈ ಕಾರ್ಯಕ್ಕೆ ಬಿಕೆ ಶಿವಪ್ಪ ಭಾವುಕರಾಗಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:01 pm, Fri, 5 May 23