ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪನ್ನೀರಸೆಲ್ವಂ ಬಣ ಆಸಕ್ತಿ: ಯಡಿಯೂರಪ್ಪ ಭೇಟಿ

|

Updated on: Apr 07, 2023 | 9:21 PM

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ, ತಮಿಳುನಾಡು ಮಾಜಿ ಸಿಎಂ ಪನ್ನೀರಸೆಲ್ವಂ ಬಣ ಆಸಕ್ತಿ ತೋರಿದ್ದು, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರನ್ನು ಶುಕ್ರವಾರ ಭೇಟಿ ಮಾಡಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪನ್ನೀರಸೆಲ್ವಂ ಬಣ ಆಸಕ್ತಿ: ಯಡಿಯೂರಪ್ಪ ಭೇಟಿ
ಪ್ರಾತಿನಿಧಿಕ ಚಿತ್ರ
Image Credit source: timesnownews.com
Follow us on

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ, ಚುನಾವಣೆಯಲ್ಲಿ ಸ್ಫರ್ಧಿಸಲು ತಮಿಳುನಾಡು ಮಾಜಿ ಸಿಎಂ, ಎಐಎಡಿಎಂಕೆ (AIADMK) ಉಚ್ಚಾಟಿತ ನಾಯಕ ಪನ್ನೀರಸೆಲ್ವಂ (O Panneerselvam) ಬಣ ಆಸಕ್ತಿ ತೋರಿದ್ದು, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರನ್ನು ಶುಕ್ರವಾರ ಭೇಟಿ ಮಾಡಿದ್ದಾರೆ. ಜೊತೆಗೆ ಶಿವಾಜಿನಗರ, ಗಾಂಧಿನಗರ, ಕೆಜಿಎಫ್​ ಮೂರು ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಬಿ.ಎಸ್. ಯಡಿಯೂರಪ್ಪ ಅವರಿಗೆ ಪನ್ನೀರಸೆಲ್ವಂ ಮನವಿ ಮಾಡಿದ್ದಾರೆ. ಒಪಿಎಸ್​​ ಬೆಂಬಲಿಗ ನಾಯಕ ಪುಗಜೆಂತಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪನ್ನೀರಸೆಲ್ವಂ ನೇತ್ವತ್ವದ ಎಐಎಡಿಎಂಕೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದೆ. ಬೆಂಗಳೂರಿನ ಗಾಂಧಿ ನಗರ ಮತ್ತು ಕೆಜಿಎಫ್​ ಕ್ಷೇತ್ರಗಳಲ್ಲಿ ಸ್ಫರ್ಧಿಸಿ ಗೆದ್ದ ಇತಿಹಾಸವಿದೆ. ಹಾಗಾಗಿ ಪನ್ನೀರಸೆಲ್ವಂ ಪರವಾಗಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರವನ್ನು ನೀಡಿದ್ದೇವೆ ಎಂದು ತಿಳಿಸಿದರು.

ಆ ಮೂರು ಕ್ಷೇತ್ರಗಳು ಏಕೆ?

ಶಿವಾಜಿನಗರ, ಗಾಂಧಿನಗರ, ಕೆಜಿಎಫ್​ ಮೂರು ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಮನವಿ ಮಾಡಿರುವ ಎಐಎಡಿಎಂಕೆ ಈ ಮೂರು ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಕೇಳಿರುವುದು ಏಕೆ ಎಂಬ ಅನುಮಾನಗಳು ಹುಟ್ಟಕೊಂಡಿವೆ. ಸೂಕ್ಷ್ಮವಾಗಿ ಗಮನಿಸುವುದಾದರೆ ಈ ಮೂರು ಕ್ಷೇತ್ರಗಳಲ್ಲಿ ತಮಿಳು ಮತದಾರರ ಸಂಖ್ಯೆ ಹೆಚ್ಚು ಎನ್ನಲಾಗುತ್ತಿದೆ. ಹಾಗಾಗಿ ಹಂಚಿಕೆ ಮಾಡುವಂತೆ ಈಗಾಗಲೇ ಬಿಜೆಪಿ ಹೈಕಮಾಂಡ್​ಗೆ ಮನವಿ ಮಾಡಿರುವುದಾಗಿ ಇಪಿಎಸ್​ ಬಣದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಬಿಎಸ್​ವೈ ಪೂರ್ಣಾವಧಿ ಸಿಎಂ ಆಗಿದ್ದರೆ ಇನ್ನಷ್ಟು ಅಭಿವೃದ್ಧಿಯಾಗುತ್ತಿತ್ತು; ಚುನಾವಣೆ ಹೊತ್ತಲ್ಲೇ ವಿಜಯೇಂದ್ರ ಹೇಳಿಕೆ

ಟಿಕೆಟ್​ಗಾಗಿ ಬಹಳ ಒತ್ತಡ ಇರೋದು ನಿಜ ಎಂದ ಯಡಿಯೂರಪ್ಪ  

ಟಿಕೆಟ್ ಅಂತಿಮಗೊಳಿಸುವ ಸಂಬಂಧ ದೆಹಲಿಗೆ ಹೋಗುತ್ತಿದ್ದೇನೆ ಎಂದು ನಗರದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು. ಪಟ್ಟಿ ಸಿದ್ಧ ಮಾಡಲು ಪ್ರಮುಖರ ಜೊತೆಗೆ ಚರ್ಚೆ ಮಾಡಬೇಕಿದೆ. ಎಲ್ಲರೊಂದಿಗೆ ಚರ್ಚಿಸಿ ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡುತ್ತೇವೆ. ಟಿಕೆಟ್​ಗಾಗಿ ಬಹಳ ಒತ್ತಡ ಇರೋದು ನಿಜ ಎಂದರು.

ಇದನ್ನೂ ಓದಿ: DK Shivakumar: ಕಾಂಗ್ರೆಸ್​ಗೆ ಸೇರಿದವರೆಲ್ಲರಿಗೂ ಟಿಕೆಟ್​ ಕೊಡಲು ಆಗುವುದಿಲ್ಲ; ಡಿಕೆ ಶಿವಕುಮಾರ್

ಈಗಾಗಲೇ ಪ್ರತಿ ಕ್ಷೇತ್ರದಿಂದ ಇಬ್ಬರಿಂದ ಮೂವರ ಹೆಸರು ಅಂತಿಮ ಮಾಡಿದ್ದು, ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಮಾಡಿ ಹೈಕಮಾಂಡ್​ಗೆ ಕಳುಹಿಸಲಾಗಿದೆ. ಸಂಜೆ ನಾನು, ಸಿಎಂ ಹಾಗೂ ಪ್ರಮುಖರು ದೆಹಲಿಗೆ ಹೋಗುತ್ತಿದ್ದೇವೆ. ಯಾರು ಗೆಲ್ತಾರೆ ಎಂಬ ಬಗ್ಗೆ ಚರ್ಚಿಸಿ ಶೀಘ್ರದಲ್ಲೇ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.

ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಂದ ಬಿ.ಎಸ್.ಯಡಿಯೂರಪ್ಪ ಭೇಟಿ

ಬಿ.ಎಸ್.ಯಡಿಯೂರಪ್ಪ ದೆಹಲಿಗೆ ತೆರಳಲಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳಿಂದ ಬಿಎಸ್​ವೈ ಭೇಟಿ ಮಾಡಿದ್ದಾರೆ. ಎಂಟಿಬಿ ತಮ್ಮ ಪುತ್ರನಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದು, ರೋಷನ್ ಬೇಗ್ ಸಹ ತಮ್ಮ ಪುತ್ರನಿಗೆ ಟಿಕೆಟ್ ನೀಡುವಂತೆ ಒತ್ತಡ ಹಾಕಿದ್ದಾರೆ. ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಸಹ ತಮಗೆ ಟಿಕೆಟ್ ನೀಡುವಂತೆ ಕೇಳಿದ್ದಾರೆ. ಬೇರೆ ಬೇರೆ ಕ್ಷೇತ್ರಗಳಿಂದಲೂ ಟಿಕೆಟ್​ಗಾಗಿ ಬಿಎಸ್​ವೈ ಭೇಟಿ ಮಾಡಿ ಆಕಾಂಕ್ಷಿಗಳು ಮನವಿ ಸಲ್ಲಿಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:21 pm, Fri, 7 April 23