20 ವರ್ಷಗಳ ಬಳಿಕ ಕನಕಪುರದಲ್ಲಿ ಈ ರೀತಿಯ ಚುನಾವಣೆ ನಡೆಯುತ್ತಿದೆ ಎಂದ ಆರ್​ ಅಶೋಕ್

|

Updated on: Apr 23, 2023 | 5:45 PM

ಕನಕಪುರ ಕ್ಷೇತ್ರದ ಜನರಿಗೆ ನನ್ನ ಪ್ರಚಾರದಿಂದ ಸಂತೋಷವಾಗಿದೆ. ಇಪ್ಪತ್ತು ವರ್ಷಗಳ ನಂತರ ಕನಕಪುರದಲ್ಲಿ ಈ ರೀತಿಯ ಚುನಾವಣೆ ನಡೆಯುತ್ತಿದೆ. ಹೀಗಾಗಿ ಜನರಿಗೆ ಖುಷಿಯೋ ಖುಷಿ ಎಂದು ಸಚಿವ ಆರ್.ಅಶೋಕ್ ಹೇಳಿದರು.

ರಾಮನಗರ: ಕನಕಪುರ ಕ್ಷೇತ್ರದ ಜನರಿಗೆ ನನ್ನ ಪ್ರಚಾರದಿಂದ ಸಂತೋಷವಾಗಿದೆ. ಇಪ್ಪತ್ತು ವರ್ಷಗಳ ನಂತರ ಕನಕಪುರದಲ್ಲಿ ಈ ರೀತಿಯ ಚುನಾವಣೆ ನಡೆಯುತ್ತಿದೆ. ಹೀಗಾಗಿ ಜನರಿಗೆ ಖುಷಿಯೋ ಖುಷಿ ಎಂದು ಸಚಿವ ಆರ್.ಅಶೋಕ್ (R Ashoka) ಹೇಳಿದರು. ಕನಕಪುರ ತಾ. ನಾಯಕನಹಳ್ಳಿ ಗ್ರಾಮದಲ್ಲಿ ಟಿವಿ9 ಜೊತೆ ಮಾತನಾಡಿದ ಅವರು, ಪ್ರಧಾನಿ ಮೋದಿ ತಂತ್ರಗಾರಿಕೆಯಿಂದ ಇಡೀ ಕ್ಷೇತ್ರ ಎದ್ದು ಕುಳಿತಿದೆ. ಅಶೋಕ್ ಸ್ಪರ್ಧೆ ಬಗ್ಗೆ ಕ್ಷೇತ್ರದ ಪ್ರತಿ ಮನೆಯಲ್ಲೂ ಮಾತನಾಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಮತ ಕೇಳುವುದನ್ನು ಬಿಟ್ಟು ಪೂಜೆ, ಹೋಮಹವನ ಮಾಡುತ್ತಿದ್ದಾರೆ. ಜ್ಯೋತಿಷಿಗಳ ಬಳಿ ಮತಕೇಳಿದ್ರೆ ಹಾಕಿಸುವುದಿಲ್ಲ, ವರವೂ ಕೊಡಲ್ಲ. ಸೋಲಿನ ಭಯದಿಂದ ಜ್ಯೋತಿಷಿ ಬಳಿ ಹೋಗುತ್ತಿದ್ದಾರೆ ಎಂದು ಕಿಡಿಕಾರಿದರು. ಹೆಚ್ಚಿನ ಸಂಖ್ಯೆಯಲ್ಲಿ ಜನತಾದಳ ಕಾರ್ಯಕರ್ತರು ಬರುತ್ತಿದ್ದಾರೆ. ಕಳೆದ ಬಾರಿ ಕನಕಪುರದಲ್ಲಿ 6 ಸಾವಿರ ಮತಗಳು ಬಿಜೆಪಿ ಬಂದಿದ್ದವು ಎಂದಿದ್ದಾರೆ.

ಕಾಂಗ್ರೆಸ್, ಜೆಡಿಎಸ್​​ ನಡುವೆ ಫೈಟ್​ ಕಾಣಿಸುತ್ತಿಲ್ಲ: ಅಶೋಕ್ ಗಂಭೀರ ಆರೋಪ

ಕನಕಪುರ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್​​ ನಡುವೆ ಫೈಟ್​ ಕಾಣಿಸುತ್ತಿಲ್ಲ ಎಂದು ಆರ್​. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ. ಒಳ ಒಪ್ಪಂದವೋ ಅಥವಾ ಹೊರ ಒಪ್ಪಂದವೋ ಏನೋ ಗೊತ್ತಿಲ್ಲ. ರಾಮನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಬಲವಾಗಿಲ್ಲ. ಡಿಕೆಶಿಗೆ ಫೈಟ್​ ಕೊಡೋದು ಅಶೋಕ್​ ಅಂತಾ ಜನರಿಗೆ ಅನ್ನಿಸಿದೆ. ಡಿ.ಕೆ.ಶಿವಕುಮಾರ್​ ಹುಟ್ಟೂರಿನಲ್ಲೂ ನನಗೆ ಭರ್ಜರಿ ಸ್ವಾಗತ ಸಿಕ್ಕಿದೆ ಎಂದರು.

ಇದನ್ನೂ ಓದಿ: ರಾಹುಲ್ ಗಾಂಧಿ ಜಗದೀಶ್ ಶೆಟ್ಟರ್ ನಡುವೆ ಲಿಂಗಾಯತರ ಬಗ್ಗೆ ಬಿಸಿಬಿಸಿ ಚರ್ಚೆ, ಇನ್​ಸೈಡ್ ಸ್ಟೋರಿ ಇಲ್ಲಿದೆ

ನಿನ್ನೆ ಜೆಡಿಎಸ್ ಮುಖಂಡರ ಮನೆಗೆ ಹೋಗಿದ್ದೆ. ಈ ಹಿಂದೆ ನಕಲಿ ಮತದಾನ ಆಯ್ತು, ತಡೆಯಲು ಆಗಿಲ್ಲ ಎಂದಿದ್ದರು. ಕನಕಪುರಕ್ಕೆ ರಾಹುಲ್ ಗಾಂಧಿ ಬಂದು ಪ್ರಚಾರ ಮಾಡಿದ್ರೆ ಸೋಲ್ತಾರೆ ಎಂದು ಹೇಳಿದರು.

ಹೈಕಮಾಂಡ್ ಸೂಚನೆಯಂತೆ ಪ್ರಚಾರ

ಪ್ರಾರಂಭದಲ್ಲಿ ಇಲ್ಲಿಗೆ ನಾನು ಬಂದಾಗ ಮೋದಿಯವರ ಚಾಣಾಕ್ಷತನ ಸರಿ ಇದೆ. ಮತಯಾಚನೆಗೆ ನಾನು ಬರುವುದಿಲ್ಲ, ಜನ ಚುನಾವಣೆ ಮಾಡುತ್ತಾರೆ ಎಂದು ಹೇಳಿದವರೆಲ್ಲಾ ಸೋತಿದ್ದಾರೆ. ಡಿಕೆಶಿ ಕ್ಷೇತ್ರದಲ್ಲಿ ಯಾಕೆ‌ ಪ್ರಚಾರ ಮಾಡುತ್ತಿಲ್ಲ ಅನ್ನೊದು ನನಗೆ ಅರ್ಥ ಆಗುತ್ತಿಲ್ಲ. ಹೈಕಮಾಂಡ್ ಸೂಚನೆಯಂತೆ ನಾನು ಪ್ರಚಾರ ಮಾಡುತ್ತಿದ್ದೇನೆ.

ಇದನ್ನೂ ಓದಿ: ರಾಹುಲ್ ಗಾಂಧಿ ಭೇಟಿ ನೀಡುವಲ್ಲಿ ಗೆಲ್ಲುತ್ತೇವೆ, ಗೆಲ್ಲದಿದ್ದರೆ ನನ್ನ ಹೆಸರು ಬದಲಾಯಿಸುವೆ: ಸಿಸಿ ಪಾಟೀಲ್​ಗೆ ನಲಪಾಡ್ ಸವಾಲ್

ಕಳೆದ ಎರಡು ದಿನಗಳಿಂದ ಜನ ಕಾಂಗ್ರೆಸ್​ನನ್ನು ಛೀ ಅಂತ ನೋಡುತ್ತಿದ್ದಾರೆ. ಪ್ರಧಾನಿ ಮೋದಿಯವರೇ ಕನಕಪುರ ಕ್ಷೇತ್ರಕ್ಕೆ ಚುನಾವಣೆಗೆ ಕಳಿಸಿರುವುದರಿಂದ ಮುಂದಿನ ದಿನಗಳು ದೆಹಲಿಯ ದೊಡ್ಡ ದೊಡ್ಡ ನಾಯಕರು ಪ್ರಚಾರ ಮಾಡುತ್ತಾರೆ ಎಂದು ಹೇಳಿದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:45 pm, Sun, 23 April 23