ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ಡಿಕೆ ಶಿವಕುಮಾರ್ ಮಾಡಿದ ಚಂಡಿಕಾ ಯಾಗದ ಹಿಂದಿದೆ ಮುಖ್ಯಮಂತ್ರಿಯಾಗುವ ತಂತ್ರ

|

Updated on: Apr 25, 2023 | 3:23 PM

ಕಳೆದ ಮೂರು ದಿನದಿಂದಲೂ ದೇಗುಲಗಳಿಗೆ ರೌಂಡ್ಸ್​​​ ಹಾಕ್ತಿರುವ ಕಾಂಗ್ರೆಸ್​ ಕಲಿ, ಯಜ್ಞ-ಯಾಗಾದಿಯನ್ನ ಮುಂದುವರೆಸಿದ್ದಾರೆ. ಅದ್ರಲ್ಲೂ ಡಿಕೆ ಶಿವಕುಮಾರ್ ಅವರ ಯಾಗದ ಹಿಂದಿನ ಕನಸು, ಪಠಣದಲ್ಲೇ ಬಹಿರಂಗವಾಗಿದೆ.

ಬೆಂಗಳೂರು: ಮುಖ್ಯಮಂತ್ರಿ ಆಗಲೇ ಬೇಕು. ಗದ್ದುಗೆ ಏರಲೇಬೇಕು. ರಾಜ್ಯದ ಚುಕ್ಕಾಣಿ ಹಿಡಿಯಲೇಬೇಕು ಅಂತ ಡಿಕೆ.ಶಿವಕುಮಾರ್(DK Shivakumar) ಪಟ್ಟು ಹಾಕಿ ನಿಂತಿದ್ದಾರೆ. ತನ್ನ ಆಸೆ ಈಡೇರಿಕೆಗಾಗಿ ಕ್ಷೇತ್ರಗಳಲ್ಲಿ ರಣತಂತ್ರ ಮಾಡ್ತಿರುವ ಕೆಪಿಸಿಸಿ ಸಾರಥಿ, ಯಾಗ, ಯಜ್ಞದ ಮೂಲಕ ದೇವರಲ್ಲೂ ಮೊರೆ ಇಟ್ಟಿದ್ದಾರೆ. ಕಳೆದ ಮೂರು ದಿನದಿಂದಲೂ ದೇಗುಲಗಳಿಗೆ ರೌಂಡ್ಸ್​​​ ಹಾಕ್ತಿರುವ ಕಾಂಗ್ರೆಸ್​ ಕಲಿ, ಯಜ್ಞ-ಯಾಗಾದಿಯನ್ನ ಮುಂದುವರೆಸಿದ್ದಾರೆ. ಅದ್ರಲ್ಲೂ ಡಿಕೆ ಶಿವಕುಮಾರ್ ಅವರ ಯಾಗದ ಹಿಂದಿನ ಕನಸು, ಪಠಣದಲ್ಲೇ ಬಹಿರಂಗವಾಗಿದೆ.

‘ಮುಖ್ಯಮಂತ್ರಿ ಸ್ಥಾನ’ಕ್ಕಾಗಿ ಡಿಕೆಶಿ ಯಾಗ!

ಚುನಾವಣಾ ಪ್ರಚಾರದ ಜೊತೆ ಜೊತೆಯಲ್ಲೇ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ದೇವರ ಮೊರೆ ಹೋಗಿದ್ದಾರೆ. ಏಪ್ರಿಲ್ 23ರಂದು ಬೈಂದೂರಿನಲ್ಲಿ ಪರ ಪ್ರಚಾರ ನಡೆಸಿದ ಅವರು, ಸಂಜೆ ಪತ್ನಿ ಜೊತೆ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಗೆ ತೆರಳಿದ್ರು. ಸಪ್ತ ಸತಿ ಪಾರಾಯಣ, ದಾನ ಧರ್ಮಾದಿ ನೆರವೇರಿಸಿದ ದಂಪತಿ, ಏಪ್ರಿಲ್​ 24ರಂದು ನವ ಚಂಡಿಕಾ ಹೋಮ ನೆರವೇರಿಸಿದ್ರು. ದೇವಾಳದ ಅರ್ಚಕ ನರಸಿಂಹ ಅಡಿಗ ನೇತೃತ್ವದಲ್ಲಿ ಧಾರ್ಮಿಕ ಕಾರ್ಯ ನಡೆದಿದ್ದು, ಕನಕಪುರದಲ್ಲಿ ವಿಜಯ, ಮುಖ್ಯಮಂತ್ರಿ ಸ್ಥಾನ ಪ್ರಾಪ್ತಿಯ ಮಂತ್ರವನ್ನೂ ಅರ್ಚಕರು ಪಠಿಸಿದ್ದಾರೆ.

ಇದನ್ನೂ ಓದಿ: ಪಕ್ಷವನ್ನ ಅಧಿಕಾರಕ್ಕೆ ತರುವ ಸಂಕಲ್ಪ! ಶೃಂಗೇರಿಯಲ್ಲಿ ಚಂಡಿಕಾಯಾಗ ಮುಗಿಸಿದ ಡಿಕೆ ಶಿವಕುಮಾರ್ ಅವರಿಂದ ಇಂದು ಉಡುಪಿಯಲ್ಲೂ ನವಚಂಡಿಕಾ ಯಾಗ!

ಅರ್ಚಕರು ಪಠಿಸಿದ ಮಂತ್ರದಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವ ಕನಸನ್ನ ಹೊರಗೆಳೆದಿದೆ. ಈ ಕುರಿತು ಡಿಕೆ.ಶಿವಕುಮಾರ್​ ಅವ್ರನ್ನೂ ಮಾಧ್ಯಮದವರು ಪ್ರಶ್ನೆ ಮಾಡಿದ್ರು. ಇದಕ್ಕೆ ಉತ್ತರಿಸಿದ ಡಿಕೆಶಿ, ನಾನೇನ್ ಕಾವಿ ಧರಿಸಿಲ್ಲ ಅನ್ನೋ ಡೈಲಾಗ್ ಹೊಡೆದ್ರು. ಸಿಎಂ ಹುದ್ದೆಯೇ ನನ್ನ ಟಾರ್ಗೆಟ್ ಅನ್ನೋ ರೀತಿಯಲ್ಲಿ ಮಾತನಾಡಿದ್ರು. ಇನ್ನು ಮೂಕಾಂಬಿಕೆ ಸನ್ನಿಧಿಯಲ್ಲಿ ಚಂಡಿಕಾ ಹೋಮ ಮಾಡಿದ್ರೆ, ಇಷ್ಟಾರ್ಥಗಳನ್ನ ದೇವಿ ಅನುಗ್ರಹಿಸುತ್ತಾಳೆ ಅನ್ನೋ ನಂಬಿಕೆ ಇದ್ಯಂತೆ.

ಕರ್ನಾಟಕ ವಿಧಾನಸಭಾ ಚುನಾವಣೆ ಸಂಬಂಧ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ