ಕರ್ನಾಟಕದಲ್ಲಿ ಮೋದಿ, ಯೋಗಿ, ಅಮಿತ್ ಶಾ, ಜೆಪಿ ನಡ್ಡಾ ಚುನಾವಣಾ ಪ್ರಚಾರ: ಯಾವಾಗ, ಎಲ್ಲೆಲ್ಲಿ? ಇಲ್ಲಿದೆ ವೇಳಾಪಟ್ಟಿ
PM Modi Karnataka Tour Plan: ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇದೀಗ ಬಿಜೆಪಿ ಹೈಕಮಾಂಡ್ ಸಹ ಕರ್ನಾಟಕ್ಕಕೆ ಲಗ್ಗೆ ಇಡಲು ಎಲ್ಲಾ ಸಿದ್ಧತೆಗಳು ನಡೆದಿವೆ. ಮೋದಿ, ಯೋಗಿ, ಅಮಿತ್ ಶಾ, ನಡ್ಡಾ ಅವರು ಕರ್ನಾಟಕದಲ್ಲಿ ಪ್ರಚಾರ ಮಾಡಲಿದ್ದು, ಅವರು ಎಲ್ಲೆಲ್ಲಿ ಪ್ರಚಾರ ಮಾಡಲಿದ್ದಾರೆ? ಎನ್ನುವ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ.
ಬೆಂಗಳೂರು: ನಾಮಪತ್ರ ಹಿಂಪಡೆಯುವ ದಿನ ಮುಗಿದು, ಕಣದಲ್ಲಿರುವ ಅಭ್ಯರ್ಥಿಗಳು ಯಾರೆಂಬುದು ಅಂತಿಮವಾಗಿದೆ. ಹೀಗಾಗಿ ಕರ್ನಾಟಕ ಚುನಾವಣಾ (Karnataka Assembly Elections 2023) ಕಣ ರಂಗೇರತೊಡಗಿದ್ದು, ಏಟಿಗೆ ಎದಿರೇಟು, ಆರೋಪಕ್ಕೆ ಪ್ರತ್ಯಾರೋಪ, ತಂತ್ರಕ್ಕೆ ಪ್ರತಿತಂತ್ರದಿಂದ ನಾಯಕರು ಮತದಾರರನ್ನು ಸೆಳೆಯಲು ಪ್ರಚಾರಕ್ಕೆ ಇಳಿದಿದ್ದಾರೆ. ಅದರಲ್ಲೂ ಆಡಳಿತಾರೂಢ ಬಿಜೆಪಿ ಮತ್ತೊಮ್ಮೆ ಆಡಳಿತ ಚುಕ್ಕಾಣಿ ಹಿಡಿಯಬೇಕು ಎಂಬ ತಣತೊಟ್ಟು ಮುನ್ನುಗ್ಗಿದೆ. ಹಾಗಾಗಿ ಬಿಜೆಪಿ ಹೈಕಮಾಂಡ್ ನಾಯಕರನ್ನು ಸಮರ್ಕವಾಗಿ ಬಳಸಿಕೊಳ್ಳುತ್ತಿದೆ. ಇನ್ನು ಬಿಜೆಪಿ ಕೇಂದ್ರ ನಾಯಕರು ಸಹ ಈ ಬಾರಿ ಕರ್ನಾಟಕದಲ್ಲೂ ಅಧಿಕಾರ ಹಿಡಿಯಬೇಕೆಂದು ಭರ್ಜರಿ ಕಸರತ್ತು ನಡೆಸಿದ್ದಾರೆ. ಇದರಿಂದ ಗುಜರಾತ್ ಶಾಸಕರು ಸೇರಿದಂತೆ ಬಿಜೆಪಿಯ ಹಲವು ನಾಯಕರು ಕರ್ನಾಟಕಕ್ಕೆ ಲಗ್ಗೆ ಇಟ್ಟಿದ್ದು, ಇದೀಗ ಪ್ರಧಾನಿ ನರೇಂದ್ರ ಮೋದಿ, ಚುನಾವಣಾ ಚಾಣಕ್ಯ ಎಂದೇ ಕರೆಯಲ್ಪಡುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಹಲವು ಘಟಾನುಘಟಿ ನಾಯಕರ ಚಿತ್ತ ಕರ್ನಾಟಕದತ್ತ ನೆಟ್ಟಿದೆ. ಹಾಗಾದ್ರೆ, ಮೋದಿ, ಯೋಗಿ ಹಾಗೂ ಶಾ ಎಲ್ಲೆಲ್ಲಿ ಪ್ರಚಾರ ಮಾಡಲಿದ್ದಾರೆ ಎನ್ನುವ ಸಂಪೂರ್ಣ ವಿವರ ಈ ಕೆಳಗಿನಂತಿದೆ.
ಇದನ್ನೂ ಓದಿ: ಜಗದೀಶ್ ಶೆಟ್ಟರ್ ಸೋಲಿಸಲು ಚಾಣಕ್ಯನ ರಣತಂತ್ರ: ಪ್ರಮುಖ ಸಭೆಯಲ್ಲಿ ಅಮಿತ್ ಶಾ ಕಟ್ಟಪ್ಪಣೆ ಏನು ಗೊತ್ತಾ?
ಮೋದಿ, ಶಾ, ಯೋಗಿ, ನಡ್ಡಾ ಮತಬೇಟೆ
ಮೇಲೆ ತಿಳಿಸಿರುವಂತೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್, ಜೆಪಿ ನಡ್ಡಾ ಅವರು ನಾನಾ ತಂತ್ರಗಳೊಂದಿಗೆ ವಿಧಾನಸಭೆ ಕ್ಷೇತ್ರವಾರು ಪ್ರಚಾರ ನಡೆಸಲಿದ್ದಾರೆ, ಹೀಗಾಗಿ ಇವರೆಲ್ಲ ತಲಾ ಇಂತಿಷ್ಟು ಎಂದು ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡಿದ್ದು, ಅದರಂತೆ ಮೇ 7ರ ವರೆಗೆ ಸಭೆ, ಸಮಾವೇಶ ರೋಡ್ ಶೋ ನಡೆಸಲಿದ್ದಾರೆ.
ನರೇಂದ್ರ ಮೋದಿ ಅವರ ಪ್ರಚಾರದ ವೇಳಾಪಟ್ಟಿ ಇಂತಿದೆ
ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಏಪ್ರಿಲ್ 29ರಿಂದ ಕರ್ನಾಟಕದಲ್ಲಿ ಅಬ್ಬರ ಪ್ರಚಾರ ಕೈಗೊಳ್ಳಲಿದ್ದಾರೆ. ಮತದಾನಕ್ಕೂ ಮೊದಲೇ ಪ್ರಧಾನಿ ನರೇಂದ್ರ ಮೋದಿ ಅವರು ಐದು ದಿನಗಳನ್ನು ಕರ್ನಾಟಕಕ್ಕೆ ತಮ್ಮ ಸಮಯ ಮೀಸಲಿಟ್ಟಿದ್ದು, ಈ ಐದು ದಿನಗಳಲ್ಲಿ ವಿವಿದೆಡೆ ರೋಡ್ ಶೋ, ಸಮಾವೇಶಗಳನ್ನು ಮಾಡಲಿದ್ದಾರೆ. ಕರ್ನಾಟಕದಲ್ಲಿ ಬೆಂಗಳೂರು ಬಿಟ್ಟರೆ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯಿಂದಲೇ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರ ಆರಂಭಿಸಲಿದ್ದಾರೆ. ಕರ್ನಾಟಕದ ದೊಡ್ಡ ಜಿಲ್ಲೆಗಳಲ್ಲಿ ಒಂದಾದ ಬೆಳಗಾವಿಯ ಚಿಕ್ಕೋಡಿ, ಕಿತ್ತೂರು ಮತ್ತು ಕುಡಚಿಗೆ ಭೇಟಿ ನೀಡಲಿದ್ದಾರೆ. ಉತ್ತರ ಕನ್ನಡ ಜಿಲ್ಲೆಗೂ ಪ್ರಧಾನಿ ಭೇಟಿ ನೀಡಲಿದ್ದು, ಒಟ್ಟು ಐದು ದಿನಗಳಲ್ಲಿ 23 ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದಾರೆ.
- ಏಪ್ರಿಲ್ 30- ಕೋಲಾರ, ಚನ್ನಪಟ್ಟಣ, ಬೇಲೂರು, ಮೈಸೂರು
- ಮೇ 2- ಚಿತ್ರದುರ್ಗ, ವಿಜಯನಗರ, ಸಿಂಧನೂರು, ಕಲಬುರಗಿ
- ಮೇ 3- ಮೂಡುಬಿದಿರೆ, ಹಾವೇರಿ, ಶಿವಮೊಗ್ಗ ಗ್ರಾಮಾಂತರ, ಬೆಂಗಳೂರು ಸೆಂಟ್ರಲ್
- ಮೇ 6- ಚಿತ್ತಾಪುರ, ನಂಜನಗೂಡು, ತುಮಕೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ
- ಮೇ 7 ಬಾದಾಮಿ, ಹಾವೇರಿ,ಶಿವಮೊಗ್ಗ ಗ್ರಾಮಾಂತರ, ಬೆಂಗಳೂರು ದಕ್ಷಿಣ
ಅಮಿತ್ ಶಾ ಪ್ರವಾಸದ ವೇಳಾಪಟ್ಟಿ
ಇನ್ನು ಚುನಾವಣಾ ಚಾಣಕ್ಯ ಅಮಿತ್ ಶಾ ಸಹ ಕರ್ನಾಟಕದಲ್ಲಿ ಒಟ್ಟು 10 ದಿನಗಳ ಕಾಲ ಪ್ರಚಾರ ಮಾಡಲಿದ್ದು, 35 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತಬೇಟೆ ಮಾಡಲಿದ್ದಾರೆ.
- ಏಪ್ರಿಲ್ 25- ತೇರದಾಳ, ದೇವರ ಹಿಪ್ಪರಗಿ, ಅಫಜಲ್ಪುರ, ಯಾದಗಿರಿ ನಗರ
- ಏಪ್ರಿಲ್ 27- ವಿರಾಜಪೇಟೆ, ಬಂಟ್ವಾಳ, ಕುಂದಾಪುರ, ಮಂಗಳೂರು ನಗರ
- ಏಪ್ರಿಲ್ 28- ನಂಜನಗೂಡು ಶಿರಹಟ್ಟಿ, ಹಗರಿಬೊಮ್ಮನಹಳ್ಳಿ, ದಾವಣಗೆರೆ ನಗರ
- ಏಪ್ರಿಲ್ 29- ರಾಣೇಬೆನ್ನೂರು, ಬ್ಯಾಡಗಿ, ಹಳಿಯಾಳ, ಶಿವಮೊಗ್ಗ
- ಮೇ 01- ಚನ್ನಗಿರಿ, ಚಿಕ್ಕಮಗಳೂರು, ಮಾಗಡಿ, ಬೆಂಗಳೂರು ನಗರ
- ಮೇ 02-ಶಿಡ್ಲಘಟ್ಟ, ಮಾಲೂರು, ದೊಡ್ಡಬಳ್ಳಾಪುರ, ವರುಣಾ
- ಮೇ 04- ಕಡೂರು, ಗುಬ್ಬಿ, ನಾಗಮಂಗಲ, ಮೈಸೂರು
- ಮೇ 06- ಚಿಕ್ಕೋಡಿ, ಸದಲಗ, ಸೌದತ್ತಿ ಯಲ್ಲಮ್ಮ, ರಾಮದುರ್ಗ, ಬಳ್ಳಾರಿ
- ಮೇ 07- ಬೀದರ್ ನಗರ, ಮಸ್ಕಿ, ಧಾರವಾಡ ನಗರ
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಎಲ್ಲೆಲ್ಲಿ ಪ್ರಚಾರ?
ಮೋದಿ, ಅಮಿತ್ ಶಾ ಬಳಿಕ ಬಿಜೆಪಿಯ ಮತ್ತೋರ್ವ ಸ್ಟಾರ್ ಐಕಾನ್ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಹ ಕರ್ನಾಟಕದಲ್ಲಿ ಪ್ರಚಾರ ಮಾಡಲಿದ್ದಾರೆ. ಒಟ್ಟು ಮೂರು ದಿನ ಕರ್ನಾಟಕದಲ್ಲಿ ಪ್ರವಾಸ ಮಾಡಲಿದ್ದು, 12 ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ.
- ಏಪ್ರಿಲ್ 26- ದಾವಣಗೆರೆ, ಇಂಡಿ, ಬಸವನಬಾಗೇವಾಡಿ
- ಏಪ್ರಿಲ್ 30- ಶೃಂಗೇರಿ, ಪುತ್ತೂರು, ಕಾರ್ಕಳ, ಬೈಂದೂರು, ಭಟ್ಕಳ
- ಮೇ 03: ಗಂಗಾವತಿ, ಜೇವರ್ಗಿ, ಶಾಹಪೂರ, ಭಟ್ಕಳ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಪ್ರವಾಸದ ವೇಳಾಪಟ್ಟಿ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಈಗಾಗಲೇ ಕರ್ನಾಟಕದಲ್ಲಿ ತಮ್ಮ ಪ್ರಚಾರ ಆರಂಭಿಸಿದ್ದು, ಇದೀಗ ನಾಮಪತ್ರ ಪ್ರಕ್ರಿಯೆಗಳು ಮುಗಿಯುತ್ತಿದ್ದಂತೆಯೇ ಇನ್ನಷ್ಟು ಪರಿಣಾಮಕಾರಿಯಾಗಿ ಪ್ರಚಾರಕ್ಕಿಳಿಯಲಿದ್ದಾರೆ. ನಾಳೆಯಿಂದ(ಏಪ್ರಿಲ್ 26) ಮೇ 7ರ ವರೆಗೆ ಒಟ್ಟು 10 ದಿನಗಳಲ್ಲಿ 32 ಕ್ಷೇತ್ರಗಳಲ್ಲಿ ಪ್ರಚಾರ ಸಮಾವೇಶಗಳನ್ನು ಮಾಡಲಿದ್ದಾರೆ.
- ಏಪ್ರಿಲ್ 26-ಶಿರಸಿ, ಸೊರಬ, ಮೂಡಿಗೆರೆ, ಹಾಸನ
- ಏಪ್ರಿಲ್ 27- ಕೊಪ್ಪಳ, ಸುರಪುರ, ಸೇಡಂ, ಬೀದರ್ ನಗರ
- ಏಪ್ರಿಲ್ 29- ಮುದ್ದೇಬಿಹಾಳ, ಕಲಬುರಗಿ, ರೋಣ, ಹರಪನಹಳ್ಳಿ
- ಮೇ 01-ಸುಳ್ಯಾ, ಕಾಪು, ತೀರ್ಥಹಳ್ಳಿ
- ಮೇ 03-ಕೆಜಿಎಫ್, ಕೊರಟಗೆರೆ, ಹೊಸದುರ್ಗ, ಹೊನ್ನಾಳಿ
- ಮೇ 05-ಚಾಮುಂಡೇಶ್ವರಿ, ಎಚ್ಡಿ ಕೋಟೆ, ರಾಮನಗರ
- ಮೇ 06-ಸಿರಗುಪ್ಪ, ರಾಯಚೂರು ನಗರ, ರಾಯಚೂರು ಗ್ರಾಮಾಂತರ
- ಮೇ 7- ಮಳವಳ್ಳಿ, ಮೇಲುಕೋಟೆ, ಮಡಿಕೇರಿ
ಇದೇ ಮೇ 10ರಂದು 224 ಕ್ಷೇತ್ರಗಳಿಗೆ ಒಂದೇ ಹಂತದ ಮತದಾನ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:38 pm, Tue, 25 April 23