ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Elections 2023) ಕೆಲವೇ ದಿನಗಳು ಬಾಕಿ ಇವೆ. ಈ ಹಿನ್ನೆಲೆ ಬುಧವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವರುಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಗಿ ನಾಮಪತ್ರ ಸಲ್ಲಿಸಿದ್ದಾರೆ. ಸಿದ್ದರಾಮಯ್ಯಗಿಂತ ಪತ್ನಿ ಪಾರ್ವತಿ ಶ್ರೀಮಂತೆ ಎಂದು ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಂದರ್ಭ ಸಲ್ಲಿಸಿದ ಅಫಿಡವಿಟ್ನಿಂದ ತಿಳಿದುಬಂದಿದೆ. 2018ರಲ್ಲಿ 18.55 ಕೋಟಿ ಮೌಲ್ಯದ ಆಸ್ತಿ ಘೋಷಿಸಿದ್ದ ಸಿದ್ದರಾಮಯ್ಯ, 2023ರಲ್ಲಿ 19 ಕೋಟಿ ಆಸ್ತಿ ಘೋಷಿಸಿಕೊಂಡಿದ್ದಾರೆ.
ಆಸ್ತಿ (ಸಿದ್ದರಾಮಯ್ಯ ಬಳಿ): 19 ಕೋಟಿ ರೂ.
ಆಸ್ತಿ (ಪತ್ನಿ ಪಾರ್ವತಿ ಬಳಿ): 32.12 ಕೋಟಿ ರೂ.
ಚರಾಸ್ತಿ: 9.58 ಕೋಟಿ ರೂ.
ಸ್ಥಿರಾಸ್ತಿ: 9.43 ಕೋಟಿ ರೂ.
ಚರಾಸ್ತಿ (ಪತ್ನಿ ಪಾರ್ವತಿ ಹೆಸರಲ್ಲಿ): 11.26 ಕೋಟಿ ರೂ.
ಸ್ಥಿರಾಸ್ತಿ (ಪತ್ನಿ ಪಾರ್ವತಿ ಹೆಸರಲ್ಲಿ): 19.56 ಕೋಟಿ ರೂ.
ಸಾಲ: 6.84 ಕೋಟಿ ರೂ.
ವಿಪಕ್ಷ ನಾಯಕ ಸಿದ್ದರಾಮಯ್ಯನವರು 2023ರ ವಿಧಾನಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಅನ್ನೋ ಕುತೂಹಲ ಕಳೆದೊಂದು ವರ್ಷದಿಂದ ನಡೆಯುತ್ತಲೇ ಇತ್ತು. ಸಿದ್ದರಾಮಯ್ಯ ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಹಾಗೂ ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಬಾದಾಮಿ ಕ್ಷೇತ್ರದಿಂದ ಗೆದ್ದು ಚಾಮುಂಡೇಶ್ವರಿಯಲ್ಲಿ ಸೋತಿದ್ದರು. ಆದರೆ ಈ ಬಾರಿ ಬಾದಾಮಿ ಕ್ಷೇತ್ರ ತುಂಬಾ ದೂರ, ಬೆಂಗಳೂರಿನಿಂದ ಓಡಾಡೋದು ಕಷ್ಟ ಅನ್ನೋ ಕಾರಣಕ್ಕೆ ಈ ಬಾರಿ ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡೋದಿಲ್ಲ.
ಇದನ್ನೂ ಓದಿ: ಕೋಲಾರದಲ್ಲಿ ಇನ್ನೂ ಬಗೆಹರಿದಿಲ್ಲ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಗೊಂದಲ, ಇನ್ನೂ ಉಳಿದಿದೆ ಕೊನೆ ಕ್ಷಣದ ಕುತೂಹಲ! ಏನದು ಒಳಸುಳಿ
ಬೆಂಗಳೂರಿಗೆ ಹತ್ತಿರ ಅನ್ನೋ ಕಾರಣಕ್ಕೆ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡ್ತಾರೆ ಅನ್ನೋದು ಒಂದು ವರ್ಷದಿಂದ ಸತತವಾಗಿ ಕೇಳಿಬಂದಿತ್ತು. ಅದಕ್ಕೆ ಕಾರಣ ಕೂಡಾ ಇತ್ತು. ಕೋಲಾರ ಕ್ಷೇತ್ರದಲ್ಲಿ ಅಹಿಂದ ಮತಗಳು ಹೆಚ್ಚಾಗಿವೆ ಅನ್ನೋ ಕಾರಣಕ್ಕೆ ಕೋಲಾರ ಕ್ಷೇತ್ರ ಸಿದ್ದರಾಮಯ್ಯ ಅವರಿಗೆ ಸುಲಭದ ತುತ್ತಾಗುತ್ತದೆ ಎಂಬುದು ಲೆಕ್ಕಾಚಾರವಾಗಿತ್ತು. ಅದರಂತೆ ತೀರಾ ಇತ್ತೀಚೆಗೆ, ನಾಲ್ಕೈದು ತಿಂಗಳಿಂದ ಸಿದ್ದರಾಮಯ್ಯ ಕೋಲಾರದಲ್ಲಿ ಒಂದಷ್ಟು ಓಡಾಡಿ ಕಳೆದ ಮೂರು ತಿಂಗಳ ಹಿಂದಷ್ಟೇ ಅಂದರೆ ಜನವರಿ 09 ರಂದು ತಾನು ಕೋಲಾರದಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಘೋಷಣೆ ಮಾಡಿದ್ದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ