ಎಸ್​ಆರ್ ಪಾಟೀಲ್​ಗೆ ತಪ್ಪಿದ ಟಿಕೆಟ್: ಕಾಂಗ್ರೆಸ್ ನಾಯಕರಿಗೆ ಪಾಟೀಲ್ ಅಭಿಮಾನಿಯ ಬಹಿರಂಗ ಸವಾಲು

|

Updated on: Apr 15, 2023 | 11:23 PM

ಕಾಂಗ್ರೆಸ್ ಹಿರಿಯ ನಾಯಕ ಎಸ್​ಆರ್ ಪಾಟೀಲ್ ಅವರಿಗೆ ದೇವರ ಹಿಪ್ಪರಗಿ ಕ್ಷೇತ್ರದ ಟಿಕೆಟ್ ಕೈತಪ್ಪಿದ ಹಿನ್ನೆಲೆ ಕಣ್ಣೀರು ಹಾಕಿದ ಅಭಿಮಾನಿಯೊಬ್ಬ ಬಾಗಲಕೋಟೆ ಜಿಲ್ಲೆಯಲ್ಲಿ ಪಾಟೀಲ್ ಇಲ್ಲದೇ ಒಂದೇ ಒಂದು ಕ್ಷೇತ್ರ ಗೆದ್ದು ತೋರಿಸುವಂತೆ ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾನೆ.

ಎಸ್​ಆರ್ ಪಾಟೀಲ್​ಗೆ ತಪ್ಪಿದ ಟಿಕೆಟ್: ಕಾಂಗ್ರೆಸ್ ನಾಯಕರಿಗೆ ಪಾಟೀಲ್ ಅಭಿಮಾನಿಯ ಬಹಿರಂಗ ಸವಾಲು
ಎಸ್​ಆರ್ ಪಾಟೀಪ್​ಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆ ಕಣ್ಣೀರು ಹಾಕಿದ ಅಭಿಮಾನಿ
Follow us on

ಬಾಗಲಕೋಟೆ: ಕಾಂಗ್ರೆಸ್ ಹಿರಿಯ ನಾಯಕ ಎಸ್​ಆರ್ ಪಾಟೀಲ್ (SR Patil) ಅವರಿಗೆ ದೇವರ ಹಿಪ್ಪರಗಿ ಕ್ಷೇತ್ರದ ಟಿಕೆಟ್ ಕೈತಪ್ಪಿದ ಹಿನ್ನೆಲೆ ಕಣ್ಣೀರು ಹಾಕಿದ ಅಭಿಮಾನಿಯೊಬ್ಬ ಬಾಗಲಕೋಟೆ ಜಿಲ್ಲೆಯಲ್ಲಿ ಪಾಟೀಲ್ ಇಲ್ಲದೇ ಒಂದೇ ಒಂದು ಕ್ಷೇತ್ರ ಗೆದ್ದು ತೋರಿಸುವಂತೆ ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾರೆ. ಜಿಲ್ಲೆ ಬಾಡಗಂಡಿಯಲ್ಲಿ ಎಸ್‌ಅರ್ ಪಾಟೀಲ್ ಎದುರೇ ಕಣ್ಣೀರು ಹಾಕಿದ ವೆಂಕಣ್ಣ ಬಿರಾದಾರ, ಡಿಕೆ ಶಿವಕುಮಾರ್ (DK Shivakumar) ಹಾಗೂ ಸಿದ್ದರಾಮಯ್ಯ (Siddaramaiah) ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ನಾಯಕರು ನಿಮಗೆ ಅನ್ಯಾಯ ಮಾಡಿದ್ದಾರೆ. ಎಂಬಿ ಪಾಟೀಲ್‌ರಿಂದ (MB Patil) ಅನ್ಯಾಯ ಆಗಿದೆ ಎಂದು ಆಕ್ರೋಶದ ನುಡಿಗಳನ್ನಾಡಿದ್ದಾರೆ.

ನಿಮ್ಮನ್ನ ಬಿಟ್ಟು ನಾವಿಲ್ಲ, ದಯವಿಟ್ಟು ಒಂದು ತೀರ್ಮಾನಕ್ಕೆ ಬನ್ನಿ ಎಂದು ಎಸ್​ಆರ್ ಪಾಟೀಲರನ್ನು ಒತ್ತಾಯಿಸಿರುವ ವೆಂಕಣ್ಣ ಬಿರಾದಾರ, ತಾಕತ್ತಿದ್ದರೆ ನೀವಿಲ್ಲದೇ ಜಿಲ್ಲೆಯಲ್ಲಿ ಒಂದೇ ಒಂದು ಸೀಟ್ ತಗೊಂಡ ಬರಲಿ ಎಂದು ಜಿಲ್ಲೆಯ ಕೈ ನಾಯಕರಿಗೆ ಸವಾಲ್ ಹಾಕಿದ್ದಾರೆ. ಜಿಲ್ಲಾ ಪಂಚಾಯತ್​ನಲ್ಲಿ ಕಾಂಗ್ರೆಸ್​ಗೆ ಬಹುಮತ ಬರಬೇಕಾದರೆ ಎಸ್ ಆರ್ ಪಾಟೀಲ್ ಬೇಕು. ನೀವು ಮನಸ್ಸು ಮಾಡಿದರೆ ಜಿಲ್ಲೆಯಲ್ಲಿ ಒಂದೇ ಒಂದು ಸೀಟ್ ಬರಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹೆಲಿಕಾಪ್ಟರ್​ನಲ್ಲಿ ಕೊಪ್ಪಳಕ್ಕೆ ಬಂದ ಸಿದ್ದರಾಮಯ್ಯ ನೋಡಲು ಹೆಲಿಪ್ಯಾಡ್​ಗೆ ನುಗ್ಗಿದ ಜನ! ವಿಡಿಯೋ ಇಲ್ಲಿದೆ

ನಿಮ್ಮ ಶಾಂತ ಸ್ವಭಾವವನ್ನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ಧರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅರ್ಥಮಾಡಿಕೊಳ್ಳದೇ ತುಳಿದಿದ್ದಾರೆ. ಶ್ಯಾಮನೂರು ಅವರಿಗೆ 92 ವರ್ಷ ವಯಸ್ಸಾದರೂ ಟಿಕೆಟ್ ಕೊಟ್ಟಿದ್ದಾರೆ. ಆದರೆ ನಿಮಗೆ ಕೊಡಲಿಲ್ಲ ಎಂದು ರಾಜ್ಯ ಕೈ ನಾಯಕರ ವಿರುದ್ಧ ವೆಂಕಣ್ಣ ಬಿರಾದಾರ ಅಸಮಾಧಾನ ಹೊರಹಾಕಿದ್ದಾರೆ.

ವಿಧಾನಸಭೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ