ಸಿಇಟಿ ಪರೀಕ್ಷೆಯಂದೇ ಪ್ರಮಾಣವಚನ: ಮೋದಿ ರೋಡ್​ ಶೋ ಟೀಕಿಸಿದ್ದ ಸಿದ್ದರಾಮಯ್ಯಗೆ ಬಿಎಲ್ ಸಂತೋಷ್ ಟಕ್ಕರ್

|

Updated on: May 19, 2023 | 4:37 PM

ಸಿಇಟಿ ಪರೀಕ್ಷೆಯಂದೇ ಕಾಂಗ್ರೆಸ್ ಪಕ್ಷ ಸಿಎಂ ಡಿಸಿಎಂ ಪ್ರಮಾಣವಚನ ಸ್ವೀಕಾರ ಸಮಾರಂಭ ಆಯೋಜನೆ ಮಾಡಿದೆ. ಇದನ್ನೇ ಮುಂದಿಟ್ಟುಕೊಂಡು ನೀಟ್ ಪರೀಕ್ಷೆಯಂದು ಮೋದಿ ರೋಡ್ ಶೋ ನಡೆಸಿದ ಬಗ್ಗೆ ಟೀಕಿಸಿದ್ದ ಸಿದ್ದರಾಮಯ್ಯಗೆ ಬಿಎಲ್ ಸಂತೋಷ್ ಟಕ್ಕರ್ ಕೊಟ್ಟಿದ್ದಾರೆ.

ಸಿಇಟಿ ಪರೀಕ್ಷೆಯಂದೇ ಪ್ರಮಾಣವಚನ: ಮೋದಿ ರೋಡ್​ ಶೋ ಟೀಕಿಸಿದ್ದ ಸಿದ್ದರಾಮಯ್ಯಗೆ ಬಿಎಲ್ ಸಂತೋಷ್ ಟಕ್ಕರ್
ಬಿಎಲ್ ಸಂತೋಷ್ ಮತ್ತು ಸಿದ್ದರಾಮಯ್ಯ
Follow us on

ಬೆಂಗಳೂರು: ಅಂದು ಮೊದಲ ಸುತ್ತಿನ ನೀಟ್ ಪರೀಕ್ಷೆ ನಡೆದ ದಿನ ಮೋದಿ ರೋಡ್ ಶೋ ನಡೆದಿತ್ತು. ಅದಕ್ಕೆ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇನ್ನು ನಾಳೆ (ಮೇ 20) ಸಿಇಟಿ​ ಪರೀಕ್ಷೆ (CET 2023) ಇದೆ. ಆದರೆ ನಾಳೆಯೇ ಸಿದ್ದರಾಮಯ್ಯ (Siddaramaiah) ಪ್ರಮಾಣವಚನ ಸಮಾರಂಭ ಇಟ್ಟುಕೊಂಡಿದ್ದಾರೆ. ಇದು ಹಿಪಾಕ್ರಸಿ ಅಲ್ಲವೇ!?ಬಿಎಲ್ ಸಂತೋಷ್ (BL Santhosh) ಪ್ರಶ್ನೆ.

ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಟ್ವೀಟ್ ಮೂಲಕ ಕೌಂಟರ್ ಕೊಟ್ಟಿದ್ದಾರೆ. “ನಮ್ಮ ನಿಯೋಜಿತ ಸಿಎಂ ಟ್ವೀಟ್ ಮಾಡಿ ತುಂಬಾ ದಿನಗಳು ಕಳೆದಿಲ್ಲ. ನಾಳೆ ರಾಜ್ಯಾದ್ಯಂತ ಮತ್ತು ಬೆಂಗಳೂರಿನಲ್ಲಿ ಸಿಇಟಿ ಪರೀಕ್ಷೆ ಇದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರೇ ನಿಮ್ಮ ಪ್ರಮಾಣ ವಚನ ಒಂದು ಅಥವಾ ಎರಡು ದಿನಗಳ ಕಾಲ ತಡೆದಿದ್ದರೆ ಏನಾಗುತ್ತಿತ್ತು? ವಿದ್ಯಾರ್ಥಿಗಳಿಗೂ ಸಮಸ್ಯೆಯಾಗುತ್ತಿರಲಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರಮಾಣವಚನ ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಿದ ಡಿಕೆ ಶಿವಕುಮಾರ್, ಅಧಿಕಾರಿಗಳಿಗೆ ಕೊಟ್ಟ ಸಲಹೆ ಸೂಚನೆಗಳೇನು ಗೊತ್ತಾ?

ಮೋದಿ ರೋಡ್ ಶೋ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?

ನೀಟ್ ಪರೀಕ್ಷಾರ್ಥಿಗಳು ಮತ್ತು ಬೆಂಗಳೂರಿನ ಜನರ ವಿರೋಧವನ್ನು ಧಿಕ್ಕರಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮೇ 7ರಂದು ಬೆಂಗಳೂರಿನಲ್ಲಿ ನಡೆಸಲಿರುವ ರೋಡ್ ಶೋ ಅತ್ಯಂತ ಬೇಜವಾಬ್ದಾರಿತನದ ನಡೆ. ಮೋದಿ ಅವರು ಪ್ರಚಾರ ಮಾಡಲಿ ನಮ್ಮ ತಕರಾರು ಇಲ್ಲ. ಆದರೆ ವಿದ್ಯಾರ್ಥಿಗಳಿಗೆ ಆಗುವ ತೊಂದರೆಗೆ ಯಾರು ಹೊಣೆ? ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ಪ್ರಶ್ನಿಸಿದ್ದರು.

ಆರೋಪ ಪ್ರತ್ಯಾರೋಪ ಏನೇ ಇರಲಿ, ಒಟ್ನಲ್ಲಿ ಅಪ್ಪ-ಅಮ್ಮ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವಂತೆ ಶೈಕ್ಷಣಿಕ ಜೀವನದ ಮಹತ್ವದ ಘಟ್ಟದಲ್ಲಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿರುವುದು ಆರೋಗ್ಯಕರ ಬೆಳವಣಿಗೆ ಅಲ್ಲ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ