ಫ್ರೀ ಬಸ್ ಭಾಗ್ಯಕ್ಕೆ ಯಾವುದೇ ಕಂಡೀಷನ್ ಹಾಕದಂತೆ ಮಹಿಳಾ ಮಣಿಗಳ ಮನವಿ

ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ಗೆಲ್ಲಲು ಯಾವುದೇ ಷರತ್ತು ಹಾಕದೆ ಭರ್ಜರಿ ಉಚಿತ ಭಾಗ್ಯಗಳನ್ನೇನೋ ಘೋಷಿಸಿತ್ತು. ಆದರೆ ಗೆಲುವಿನ ನಂತರ ಷರತ್ತು ವಿಧಿಸುವ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಉಚಿತ ಬಸ್ ಭಾಗ್ಯಕ್ಕೆ ಷರತ್ತು ವಿಧಿಸದಂತೆ ಮಹಿಳಾ ಮಣಿಗಳು ಮನವಿ ಮಾಡಿದ್ದಾರೆ.

ಫ್ರೀ ಬಸ್ ಭಾಗ್ಯಕ್ಕೆ ಯಾವುದೇ ಕಂಡೀಷನ್ ಹಾಕದಂತೆ ಮಹಿಳಾ ಮಣಿಗಳ ಮನವಿ
ಉಚಿತ ಬಸ್ ಯೋಜನೆಗೆ ಷರತ್ತು ಹಾಕದಂತೆ ಮಹಿಳೆಯರ ಮನವಿ
Follow us
Rakesh Nayak Manchi
|

Updated on: May 19, 2023 | 3:53 PM

ಆನೇಕಲ್: ಕರ್ನಾಟಕ ವಿಧಾನಸಭೆ ಚುನಾವಣೆ 2023ರಲ್ಲಿ ಗೆದ್ದು ಸರ್ಕಾರ ರಚಸಿಲು ಕಾಂಗ್ರೆಸ್ (Congress) ಪಕ್ಷವು ಯಾವುದೇ ಷರತ್ತು ಹಾಕದೆ ವಿವಿಧ ಉಚಿತ ಘೋಷಣೆಗಳನ್ನು ಮಾಡಿದ್ದರು. ಆದರೆ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಉಚಿತ ಭಾಗ್ಯಗಳಿಗೆ ಷರತ್ತು ವಿಧಿಸುವ ಮಾತುಗಳು ಕೇಳಿಬರಲಾರಂಭಿಸಿದೆ. ಈ ನಡುವೆ “ಕಾಂಗ್ರೆಸ್​ ಪಕ್ಷ 200 ಯುನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಿದ್ದರೆ, ಹೀಗಾಗಿ ನಾವು ವಿದ್ಯುತ್ ಬಿಲ್ ಕಟ್ಟಲ್ಲ” ಎಂದು ರಾಜ್ಯದ ವಿವಿಧ ಕಡೆಗಳಲ್ಲಿ ಜನರು ಹೇಳಲು ಆರಂಭಿಸಿದ್ದಾರೆ. ಇದೀಗ ಮಹಿಳಾ ಮಣಿಗಳು ಕೂಡ, ಉಚಿತ ಬಸ್ ಪ್ರಯಾಣಕ್ಕೆ (Free bus travel for Women) ಷರತ್ತು ವಿಧಿಸದಂತೆ ಮನವಿ ಮಾಡಿದ್ದಾರೆ.

ಮಹಿಳೆಯರಿಗೆ ಸಾರಿಗೆ ಬಸ್​ನಲ್ಲಿ ಉಚಿತ ಪ್ರಯಾಣ ಘೋಷಣೆಯಿಂದ ಎಲೆಕ್ಟ್ರಾನಿಕ್ ಸಿಟಿಯಲ್ಲಿ (ಬೆಂಗಳೂರು) ಮಹಿಳಾ ಮಣಿಗಳು ಫುಲ್ ಖುಷ್ ಆಗಿದ್ದಾರೆ. ಮೊದಲ ಕ್ಯಾಬಿನೆಟ್ ಬಳಿಕ ಉಚಿತ ಪ್ರಯಾಣ ಬೆಳಸಲು ಉತ್ಸುಕರಾಗಿದ್ದಾರೆ. ಆದರೆ ಉಚಿತ ಭಾಗ್ಯಗಳಿಗೆ ಕಂಡೀಷನ್ಸ್ ಹಾಕುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದ್ದಂತೆ ಎಚ್ಚೆತ್ತ ಮಹಿಳೆಯರು ಫ್ರೀ ಬಸ್ ಅಂತ ಹೇಳಿ ಸಾವಿರ ಕಂಡೀಷನ್ ಹಾಕದಂತೆ ಮನವಿ ಮಾಡಿದ್ದಾರೆ. ಇಷ್ಟು ಕಿಲೋ ಮೀಟರ್ ವರೆಗೆ ಮಾತ್ರ ಉಚಿತ ಬಸ್ ಪ್ರಯಾಣ, ಇದೇ ಜಾಗದಲ್ಲಿ ಬಸ್ ಹತ್ತಿದರೆ ಮಾತ್ರ ಉಚಿತ ಪ್ರಯಾಣ, ಈ ಜಾಗಕ್ಕೆ ಬಸ್ ಬರಲಿದೆ ಅಂತ ಷರತ್ತು ವಿಧಿಸದಂತೆ ಆಗ್ರಹ ಮಾಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಗೆದ್ದಿರುವುದರಿಂದ ಕರೆಂಟ್ ಬಿಲ್​ ಕಟ್ಟಲ್ಲ: ವಿದ್ಯುತ್ ಬಿಲ್ ನೀಡಲು ಬಂದ ಸಿಬ್ಬಂದಿಗೆ ಗ್ರಾಮಸ್ಥರಿಂದ ತರಾಟೆ

ಹೊರ ರಾಜ್ಯದ ಮಹಿಳೆಯರಿಗೂ ಫ್ರೀ ಸೇವೆ ಸಿಗಲಿ

ಉಚಿತ ಬಸ್ ಪ್ರಯಾಣ ರಾಜ್ಯದ ಮಹಿಳೆಯರಿಗೆ ಮಾತ್ರವಲ್ಲ, ರಾಜ್ಯದಲ್ಲಿರುವ ಹೊರ ರಾಜ್ಯದ ಮಹಿಳೆಯರಿಗೂ ಉಚಿತವಾಗಿ ಬಸ್​ನಲ್ಲಿ ಪ್ರಯಾಣ ಮಾಡುವ ಅವಕಾಶ ನೀಡಬೇಕು. ಹಲವು ವರ್ಷಗಳಿಂದ ಬೆಂಗಳೂರಿನಲ್ಲಿದ್ದೇವೆ. ಮಹಿಳೆ ಅಂದರೆ ಮಹಿಳೆ, ಹೊರ ರಾಜ್ಯದ ಮಹಿಳೆಯರಿಗೂ ಫ್ರೀ ಸೇವೆ ಸಿಗಲಿ ಎಂದು ಹೊರ ರಾಜ್ಯದ ಮಹಿಳೆಯರು ಆಗ್ರಹ ಮಾಡಿದ್ದಾರೆ.

ವಿದ್ಯುತ್ ಬಿಲ್ ಕಟ್ಟಲು ಜನರ ಹಿಂದೇಟು

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನಲೆ ರಾಜ್ಯಾದ್ಯಂತ ಭರ್ಜರಿ ಪ್ರಚಾರ ಕೈಗೊಂಡಿದ್ದ ಕಾಂಗ್ರೆಸ್​, ಮತದಾರರನ್ನ ಗೆಲ್ಲಲು ಗ್ಯಾರಂಟಿಗಳನ್ನ ಕೊಟ್ಟಿತ್ತು. ಅದರಲ್ಲಿ 200 ಯುನಿಟ್​ವರೆಗೆ ಉಚಿತ ವಿದ್ಯುತ್​ನ್ನು ನಾವು ಅಧಿಕಾರಕ್ಕೆ ಬಂದೊಡನೆ ಮಾಡುತ್ತೆವೆಂದು ಹೇಳಿದ್ದರು. ಅದರಂತೆ ಕಾಂಗ್ರೆಸ್​ ಅಧಿಕಾರಕ್ಕೆ ಬಂದಿದ್ದು, ರಾಜ್ಯದ ಹಲವೆಡೆ ವಿದ್ಯುತ್ ಶುಲ್ಕ ಪಾವತಿಸಲು ಜನ ಹಿಂದೇಟು ಹಾಕುತ್ತಿದ್ದಾರೆ. ರಾಜ್ಯದ ಜನರು ನಾವು ಕರೆಂಟ್ ಬಿಲ್ ಕಟ್ಟಲ್ಲ ಎನ್ನಲಾರಂಭಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ