ಕಾಂಗ್ರೆಸ್ 200 ಯುನಿಟ್ ಉಚಿತ ವಿದ್ಯುತ್ ಪ್ರಣಾಳಿಕೆ; ಬೆಸ್ಕಾಂ ಸಿಬ್ಬಂದಿಗೆ ವೃದ್ಧೆ ಆವಾಜ್, ವಿಡಿಯೋ ನೋಡಿ
ರಾಜ್ಯದ ಹಲವೆಡೆ ವಿದ್ಯುತ್ ಶುಲ್ಕ ಪಾವತಿಸಲು ಜನ ಹಿಂದೇಟು ಹಾಕುತ್ತಿದ್ದಾರೆ. ಇದೀಗ ಅದರಂತೆ ರಾಜ್ಯದ ಜನರು ನಾವು ಕರೆಂಟ್ ಬಿಲ್ ಕಟ್ಟಲ್ಲ. ಅದ್ಯಾರು ಬರ್ತಾರೋ ಬರಲಿ ಎನ್ನುವ ಮೂಲಕ ಬೆಸ್ಕಾಂ ಸಿಬ್ಬಂದಿಗೆ ವೃದ್ದೆ ಆವಾಜ್ ಹಾಕಿರುವ ಘಟನೆ ಜಿ.ಪರಮೇಶ್ವರ ಕ್ಷೇತ್ರ ಕೊರಟಗೆರೆ ತಾಲೂಕಿನ ಟಿ.ಗೊಲ್ಲಹಳ್ಳಿಯಲ್ಲಿ ನಡೆದಿದೆ.
ತುಮಕೂರು: ರಾಜ್ಯ ವಿಧಾನಸಭೆ ಚುನಾವಣೆ(Karnataka Election results) ಹಿನ್ನಲೆ ರಾಜ್ಯಾದ್ಯಂತ ಭರ್ಜರಿ ಪ್ರಚಾರ ಕೈಗೊಂಡಿದ್ದ ಕಾಂಗ್ರೆಸ್(Congress), ಮತದಾರರನ್ನ ಗೆಲ್ಲಲು ಗ್ಯಾರಂಟಿಗಳನ್ನ ಕೊಟ್ಟಿತ್ತು, ಅದರಲ್ಲಿ 200 ಯುನಿಟ್ವರೆಗೆ ಉಚಿತ ವಿದ್ಯುತ್ನ್ನು ನಾವು ಅಧಿಕಾರಕ್ಕೆ ಬಂದೊಡನೆ ಮಾಡುತ್ತೆವೆಂದು ಹೇಳಿದ್ದರು. ಅದರಂತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ರಾಜ್ಯದ ಹಲವೆಡೆ ವಿದ್ಯುತ್ ಶುಲ್ಕ ಪಾವತಿಸಲು ಜನ ಹಿಂದೇಟು ಹಾಕುತ್ತಿದ್ದಾರೆ. ಇದೀಗ ಅದರಂತೆ ರಾಜ್ಯದ ಜನರು ನಾವು ಕರೆಂಟ್ ಬಿಲ್ ಕಟ್ಟಲ್ಲ. ಅದ್ಯಾರು ಬರ್ತಾರೋ ಬರಲಿ ಎನ್ನುವ ಮೂಲಕ ಬೆಸ್ಕಾಂ ಸಿಬ್ಬಂದಿಗೆ ವೃದ್ದೆ ಆವಾಜ್ ಹಾಕಿರುವ ಘಟನೆ ಜಿ.ಪರಮೇಶ್ವರ ಕ್ಷೇತ್ರ ಕೊರಟಗೆರೆ ತಾಲೂಕಿನ ಟಿ.ಗೊಲ್ಲಹಳ್ಳಿಯಲ್ಲಿ ನಡೆದಿದೆ. ಮೇ ತಿಂಗಳ ಬಿಲ್ ಕೊಡಲು ಬೆಸ್ಕಾ ಸಿಬ್ಬಂದಿ ತೆರಳಿದ್ದ ವೇಳೆ ಕಾಂಗ್ರೆಸ್ ನವರು ಫ್ರೀ ಕೊಡ್ತಿನಿ ಅಂದಿದ್ರು, ಈಗ ನೀವು ಬಿಲ್ ಕೇಳೋಕೆ ಬಂದ್ದೀರಾ? ನಾವು ಬಿಲ್ ಕಟ್ಟಲ್ಲ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ರನ್ನು ಕೇಳಿ ಎಂದಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ