Siddaramaiah: ಶನಿವಾರದಿಂದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಎರಡನೇ ಅಧ್ಯಾಯ ಆರಂಭ; ಅಭಿಮಾನಿಗಳಲ್ಲಿ ಸಂಭ್ರಮ, ಸಡಗರ! 

Siddaramaiah: ಶನಿವಾರದಿಂದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಎರಡನೇ ಅಧ್ಯಾಯ ಆರಂಭ; ಅಭಿಮಾನಿಗಳಲ್ಲಿ ಸಂಭ್ರಮ, ಸಡಗರ! 

ಅರುಣ್​ ಕುಮಾರ್​ ಬೆಳ್ಳಿ
|

Updated on: May 18, 2023 | 2:56 PM

ಬೆಂಗಳೂರಿನ ವಿವಿಧ ಭಾಗಗಳಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಕೇಕ್ ಕತ್ತರಿಸುತ್ತಾ, ಸಿಹಿತಿಂಡಿಗಳನ್ನು ಹಂಚುತ್ತಾ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರು: ರಾಜ್ಯದೆಲ್ಲೆಡೆ ಸಿದ್ದರಾಮಯ್ಯ (Siddaramaiah) ಅಭಿಮಾನಿಗಳು ಖುಷಿಯಿಂದ ಸಂಭ್ರಮಿಸುತ್ತಿದ್ದಾರೆ. ಶನಿವಾರದಿಂದ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿ ಎರಡನೇ ಅಧ್ಯಾಯ (second innings) ಅರಂಭಿಸಲಿದ್ದಾರೆ. ಬೆಂಗಳೂರಿನ ವಿವಿಧ ಭಾಗಗಳಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಕೇಕ್ ಕತ್ತರಿಸುತ್ತಾ, ಸಿಹಿತಿಂಡಿಗಳನ್ನು ಹಂಚುತ್ತಾ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿ ಸೇರಿರುವ ಅಭಿಮಾನಿಗಳ ಗುಂಪು ಕೇವಲ ಸಿದ್ದರಾಮಯ್ಯ ಪರ ಮಾತ್ರ ಘೋಷಣೆಗಳನ್ನು ಕೂಗುತ್ತಿಲ್ಲ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಪರವಾಗಿಯೂ ಘೋಷಣೆಗಳನ್ನು ಕೂಗುತ್ತಿದ್ದಾರೆ. ಕೇಕ್ ಮೇಲೆ ಬರೆದಿರುವುದನ್ನು ಗಮನಿಸಿ. ಸಿಎಂ ಸಿದ್ದು ಬಾಸ್ 2.0 ಅಂತ ಬರೆಸಲಾಗಿದೆ!

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ