ಕರ್ನಾಟಕ ಚುನಾವಣೆಯಲ್ಲಿ (Karnataka Assembly Election) ಕಾಂಗ್ರೆಸ್ (Congress) ಮುನ್ನಡೆ ಸಾಧಿಸುತ್ತಿದ್ದು, ಈ ಬಗ್ಗೆ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ (KC Venugopal) 2024ರ ಚುನಾವಣೆಯ ಮೈಲುಗಲ್ಲುಗಳಲ್ಲಿ ಇದೂ ಒಂದು ಎಂದು ಹೇಳಿದ್ದಾರೆ. ಬಿಜೆಪಿ ಮಾಡುವ ಒಡೆದು ಆಳುವ ರಾಜಕೀಯ ಪ್ರತಿ ಬಾರಿಯೂ ಯಶಸ್ವಿಯಾಗುವುದಿಲ್ಲ. ಇದು ಸ್ಪಷ್ಟ ಸಂದೇಶ. ನಾವು ಕರ್ನಾಟಕದ ಬಡವರ ಪರ ನಿಂತಿದ್ದೇವೆ. ಅವರು ಶ್ರೀಮಂತರ ಪರ ನಿಂತರು. ಅಂತಿಮವಾಗಿ ಈ ಚುನಾವಣೆಯಲ್ಲಿ ಬಡವರು ಗೆದ್ದಿದ್ದಾರೆ. ಇದು ಈ ಚುನಾವಣೆಯ ಸ್ಪಷ್ಟ ನಿರೂಪಣೆ ಎಂದು ಹೇಳಿದ್ದಾರೆ.
ಇದು ಕಾಂಗ್ರೆಸ್ನ ಪುನರಾಗಮನವನ್ನು ತೋರಿಸುತ್ತದೆ. ಶಾಸಕರು ಎಷ್ಟು ಗೆಲ್ಲುತ್ತಾರೆ ಎಂಬುದನ್ನು ತಿಳಿದುಕೊಂಡ ನಂತರವೇ ಮುಖ್ಯಮಂತ್ರಿಯನ್ನು ನಿರ್ಧರಿಸುತ್ತೇವೆ ಎಂದು ಕೆ.ಸಿ.ವೇಣುಗೋಪಾಲ್ ಏಷ್ಯಾನೆಟ್ ನ್ಯೂಸ್ಗೆ ತಿಳಿಸಿದ್ದಾರೆ. ದ್ವೇಷದ ರಾಜಕಾರಣಕ್ಕೂ ಮಿತಿ ಇದೆ ಎಂಬುದು ಸಾಬೀತಾಗಿದ್ದು, ಪ್ರತಿಪಕ್ಷಗಳ ಒಗ್ಗಟ್ಟಿಗೆ ಇದು ಸಕಾಲ ಎಂದು ಶಶಿ ತರೂರ್ ಪ್ರತಿಕ್ರಿಯಿಸಿದ್ದಾರೆ.
#WATCH | #KarnatakaResults | “The type of divisive politics that the BJP does, is not going to be successful every time. This is a clear message. We stood for the poor of Karnataka. They stood for the rich. Finally, the poor won this election. This is the clear narrative of this… pic.twitter.com/xlWFscF64p
— ANI (@ANI) May 13, 2023
ಕಾಂಗ್ರೆಸ್‌ನದು ಐತಿಹಾಸಿಕ ಗೆಲುವು ಎಂದು ರಮೇಶ್ ಚೆನ್ನಿತ್ತಲ ಹೇಳಿದರು. 2024ರ ಲೋಕಸಭೆ ಚುನಾವಣೆ ಗೆಲ್ಲಲು ಇರುವ ಸ್ಫೂರ್ತಿಯಾಗಿದೆ ಕರ್ನಾಟಕದ ಈ ಗೆಲುವು. ಭಾರತ್ ಜೋಡೋ ಯಾತ್ರೆಯ ನಂತರದ ಗೆಲುವು ಕಾಂಗ್ರೆಸ್ ಸಾಧನೆ. ಮೋದಿಯನ್ನು ಎದುರಿಸಲು ಕಾಂಗ್ರೆಸ್ ಇದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು, ಎಲ್ಲ ಜಾತ್ಯತೀತ ಶಕ್ತಿಗಳನ್ನು ಒಗ್ಗೂಡಿಸಲು ಸಿಕ್ಕ ಜಯ ಇದಾಗಿದೆ ಎಂದರು.
ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಮಾತನಾಡಿ, ದಕ್ಷಿಣ ಭಾರತವನ್ನು ಬಿಜೆಪಿಯಿಂದ ಮುಕ್ತಗೊಳಿಸಿರುವುದು ಸಂತಸ ತಂದಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ನಾಯಕರು ಕರ್ನಾಟಕದಲ್ಲಿ ಬೀಡುಬಿಟ್ಟು ಪ್ರಚಾರ ನಡೆಸಿದರೂ ಬಿಜೆಪಿಗೆ ಯಾವುದೇ ಫಲ ಸಿಕ್ಕಿಲ್ಲ. ಕೋಮುವಾದಕ್ಕೆ ಬಲವಾದ ವಿರೋಧ ಮತ್ತು ಆಡಳಿತ ವಿರೋಧಿ ಭಾವನೆಯು ಕರ್ನಾಟಕದಲ್ಲಿ ಪ್ರತಿಫಲಿಸಿತು. ಅದೇ ವೇಳೆ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವನ್ನು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪುನರಾಗಮನ ಎಂದು ಹೇಳಲಾಗದು ಎಂದು ಗೋವಿಂದನ್ ಹೇಳಿದರು.
ಚುನಾವಣೆ ಫಲಿತಾಂಶ ಲೈವ್ ಅಪ್ಡೇಟ್ ಇಲ್ಲಿ ಕ್ಲಿಕ್ ಮಾಡಿ
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:48 pm, Sat, 13 May 23