ಜಗದೀಶ್​ ಶೆಟ್ಟರ್​ಗೆ ಆದ ಅನ್ಯಾಯದಿಂದ ಬಹಳ ದುಃಖವಾಗಿದೆ: ಪ್ರಭಾಕರ​ ಕೋರೆ

|

Updated on: Apr 16, 2023 | 1:53 PM

ಕಾಂಗ್ರೆಸ್ ಸೇರುವ ಚಿಂತನೆ ಸದ್ಯಕ್ಕಿಲ್ಲ, ಸೇರೋದಾದರೇ ತಮ್ಮನ್ನು ಕರೆದು ಮಾತನಾಡುವೆ. ಇವತ್ತು ಪಕ್ಷ ಬಿಡೋ ಬಗ್ಗೆ ಚಿಂತನೆ ಮಾಡಿಲ್ಲ, ಚರ್ಚೆ ನಡೆಸಿಲ್ಲ. ಈ ವಯಸ್ಸಿನಲ್ಲಿ ಪಕ್ಷ ಬಿಡುವ ವೈಯಕ್ತಿಕ ವಿಚಾರವೂ ಇಲ್ಲ ಎಂದು ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ್ ಕೋರೆ ಹೇಳಿದ್ದಾರೆ.

ಬೆಳಗಾವಿ: ಜಗದೀಶ್​ ಶೆಟ್ಟರ್​ ಅವರಿಗೆ (Jagadish Shettar) ಆದ ಅನ್ಯಾಯದಿಂದ ಬಹಳ ದುಃಖವಾಗಿದೆ. ಇಂದು (ಏ.16) ಸಂಜೆ ಜಗದೀಶ್​ ಶೆಟ್ಟರ್​ ಭೇಟಿಯಾಗಿ ಚರ್ಚೆ ಮಾಡುತ್ತೇನೆ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ (Laxman Savadi) ಪಕ್ಷ ತೊರೆದಿದ್ದು ವೈಯಕ್ತಿಕ. ಅನಂತಕುಮಾರ್​, ಯಡಿಯೂರಪ್ಪ, ಶೆಟ್ಟರ್ ಪಕ್ಷ ಕಟ್ಟಿದ್ದಾರೆ ಎಂದು ರಾಜ್ಯಸಭೆ ಮಾಜಿ ಸದಸ್ಯ ಪ್ರಭಾಕರ ಕೋರೆ (Prabhakar Kore) ಹೇಳಿದ್ದಾರೆ. ಪಕ್ಷಾತೀತವಾಗಿ ಜಗದೀಶ್ ಶೆಟ್ಟರ್, ಅವರ ಅಂಕಲ್ ನಮ್ಮ ಜೊತೆಗಿದ್ದವರು. ನನ್ನ ಕರ್ತವ್ಯ ಇದೆ ಜಗದೀಶ್ ಶೆಟ್ಟರ್ ಅವರಿಗೆ ಭೇಟಿಯಾಗುವುದು ಎಂದು ಹೇಳಿದರು.

ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ತಾವು (ಪ್ರಭಾಕರ್​ ಕೋರೆ) ಕಾಂಗ್ರೆಸ್​ ಪಕ್ಷಕ್ಕೆ ಸೇರುವ ವಿಚಾರವಾಗಿ ಮಾತನಾಡಿದ ಅವರು ಕಾಂಗ್ರೆಸ್ ಸೇರುವ ಚಿಂತನೆ ಸದ್ಯಕ್ಕಿಲ್ಲ, ಸೇರೋದಾದರೇ ತಮ್ಮನ್ನು ಕರೆದು ಮಾತನಾಡುವೆ. ಇವತ್ತು ಪಕ್ಷ ಬಿಡೋ ಬಗ್ಗೆ ಚಿಂತನೆ ಮಾಡಿಲ್ಲ, ಚರ್ಚೆ ನಡೆಸಿಲ್ಲ. ಈ ವಯಸ್ಸಿನಲ್ಲಿ ಪಕ್ಷ ಬಿಡುವ ವೈಯಕ್ತಿಕ ವಿಚಾರವೂ ಇಲ್ಲ. ನನಗೆ ಈಗ 75 ವರ್ಷ ವಯಸ್ಸು, ಮತ್ತೊಂದು ಪಕ್ಷಕ್ಕೆ ಹೋಗೋದು ಮತ್ತೊಂದು ಮದುವೆ ಮಾಡಿಕೊಂಡ ಹಾಗಾದೀತು ಎಂದರು.

ಇದನ್ನೂ ಓದಿ: ಬೆಳಗಾವಿಯಲ್ಲಿ ನಡೆದ ಅಸಮಾಧಾನಿತ ಬಿಜೆಪಿ ನಾಯಕರ ಸಂಧಾನ ಸಭೆ ವಿಫಲ, ಧರ್ಮೇಂದ್ರ ಪ್ರಧಾನ್ ಹೇಳಿದ್ದೇನು?

ಒಂದೇ ಸಲ ಪಕ್ಷ ಬದಲಾವಣೆ ಮಾಡಿದ್ದು ಸಾಕು ನನಗೆ, ಈ ಪಕ್ಷ ಅಧಿಕಾರ ಕೊಟ್ಟಿದೆ. ನನ್ನ ಸಂಸ್ಥೆ ಸಲುವಾಗಿ, ಈ ಭಾಗದ ಜನರ ಸಲುವಾಗಿ ಆರೋಗ್ಯ, ಶಿಕ್ಷಣ ಸೇವೆ ಮಾಡಿದ ತೃಪ್ತಿ ಇದೆ ಎಂದು ಹೇಳಿದರು.

ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟಿದರಿಂದ ಪಕ್ಷಕ್ಕೆ ಏನು ಹಿನ್ನಡೆ ಆಗಿಲ್ಲ: ನಳಿನ್​ ಕುಮಾರ್​ ಕಟೀಲ್​

ಪಕ್ಷದ ಹಿರಿಯ ನಾಯಕರು ಜಗದೀಶ್​ ಶೆಟ್ಟರ್ ಅವರ ಜತೆ ಮಾತುಕತೆ ನಡೆಸಿದ್ದರು. ಅವರಿಗೆ ಎಲ್ಲ ಗೌರವ ಪಕ್ಷ ಕೊಟ್ಟಿತ್ತು. ಎಲ್ಲ ಜವಾಬ್ದಾರಿಗಳನ್ನೂ ಕೊಟ್ಟಿತ್ತು. ಶೆಟ್ಟರ್ ಪಕ್ಷ ಬಿಟ್ಟಿದರಿಂದ ಪಕ್ಷಕ್ಕೆ ಏನು ಹಿನ್ನಡೆ ಆಗಿಲ್ಲ. ಅವರು ನಮ್ಮಲ್ಲೇ ಉಳಿದುಕೊಳ್ಳುತ್ತಾರೆ ಅಂತ ವಿಶ್ವಾಸವಿತ್ತು. ಎಲ್ಲ ಸಮುದಾಯ ಗುರುತಿಸಿ ಟಿಕೆಟ್ ಕೊಡಲಾಗಿದೆ. ಎಲ್ಲ ಸಮುದಾಯಗಳಿಗೂ ಸಾಮಾಜಿಕ ನ್ಯಾಯದಡಿ ಸ್ಥಾನಮಾನ ಕೊಡಲಾಗಿದೆ. ಲಿಂಗಾಯತರನ್ನು ಗುರುತಿಸಿ ಮುಖ್ಯಮಂತ್ರಿ ಮಾಡಿದ್ದು ನಮ್ಮ ಪಕ್ಷ ಮಾತ್ರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ಹೇಳಿದರು.

ಮತ್ತಷ್ಟು ಕರ್ನಾಟಕ ವಿಧಾನಸಭೆ ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:53 pm, Sun, 16 April 23