Yamakanmardi Election Result: ಯಮಕನಮರಡಿ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಮತ್ತೊಮ್ಮೆ ಗೆಲುವಿನ ನಗೆ ಬೀರಿದ ಸತೀಶ್ ಜಾರಕಿಹೊಳಿ

|

Updated on: May 13, 2023 | 6:43 PM

Yamakanmardi Assembly Election Result 2023 Live Counting Updates: ಯಮನಕರಡಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್ ಪಕ್ಷದ ಮಾರುತಿ ಮಲ್ಲಪ್ಪ ಅಸ್ತಗಿ, ಬಿಜೆಪಿಯ ಬಸವರಾಜ ಹೊಂಡ್ರಿ ಮತ್ತು ಕಾಂಗ್ರೆಸ್ ಪಕ್ಷದಿಂದ ಸತೀಶ್ ಜಾರಕಿಹೊಳಿ ಸ್ಪರ್ಧಿಸುತ್ತಿದ್ದಾರೆ

Yamakanmardi Election Result: ಯಮಕನಮರಡಿ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಮತ್ತೊಮ್ಮೆ ಗೆಲುವಿನ ನಗೆ ಬೀರಿದ ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ
Follow us on

Yamakanmardi Assembly Election Results 2023: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಯಮಕನಮರಡಿ (Yamakanmardi Assembly Election ) ಕ್ಷೇತ್ರದಲ್ಲಿ ಸತೀಶ್ ಲಕ್ಷ್ಮಣರಾವ್ ಜಾರಕಿಹೊಳಿ ಗೆದ್ದಿದ್ದಾರೆ. ರಾಜಕೀಯ ಇತಿಹಾಸ ಗಮನಿಸಿದರೆ ರಾಜ್ಯದ ವಿಧಾನಸಭೆ ಕ್ಷೇತ್ರಗಳಲ್ಲಿ ಇದು ವಿಶಿಷ್ಟ ಸ್ಥಾನ ಪಡೆದಿದೆ. ಮೊದಲು ಸಾಮಾನ್ಯ ಕ್ಷೇತ್ರವಾಗಿದ್ದು, 2008ರಲ್ಲಿ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರವಾಗಿ ರೂಪುಗೊಂಡಿತು. ಮೀಸಲು ಕ್ಷೇತ್ರವಾದ ನಂತರ ಕಾಂಗ್ರೆಸ್‌ನಿಂದ ಎಸ್‌ಟಿ ಸಮುದಾಯಕ್ಕೆ ಸೇರಿದ ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ ಸತತ ಮೂರು ಬಾರಿ ಆಯ್ಕೆಯಾಗಿದ್ದಾರೆ. 2008ರಲ್ಲಿ ಸತೀಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜೆಡಿಎಸ್‌ನ ಲಾಳಗೌಡ ಬಾಳಗೌಡ ಪಾಟೀಲರನ್ನು ಪರಾಭವಗೊಳಿಸಿದರು.

2013ರಲ್ಲಿ ಸತೀಶ್ ಲಕ್ಷ್ಮಣರಾವ್ ಜಾರಕಿಹೊಳಿ ಬಿಜೆಪಿಯ ಅಸ್ತಗಿ ಮಾರುತಿ ಮಲ್ಲಪ್ಪ ಅವರನ್ನು 24,350 ಮತಗಳ ಅಂತರದಿಂದ ಪರಾಭವಗೊಳಿಸಿದರು. 2018ರ ಚುನಾವಣೆಯಲ್ಲಿ ಜಾರಕಿಜೊಳಿ ಕುಟುಂಬದ ವಿರುದ್ಧ ಕತ್ತಿ ಸಹೋದರಾರ ಉಮೇಶ್ ಕತ್ತಿ ಹಾಗೂ ರಮೇಶ್ ಕತ್ತಿ ಹೋರಾಡಿದ್ದರು.  ಬಿಜೆಪಿ ಅಭ್ಯರ್ಥಿ ಮಾರುತಿ ಅಸ್ತಗಿಗೂ ಗೆಲುವು ಒಲಿಯಲಿಲ್ಲ. ಆ ಬಾರಿಯೂ ಸತೀಶ್ ಜಾರಕಿಹೊಳಿಯೇ ಗೆದ್ದು ಬೀಗಿದರು. ಈ ಬಾರಿ ಜೆಡಿಎಸ್ ಪಕ್ಷದ ಮಾರುತಿ ಮಲ್ಲಪ್ಪ ಅಸ್ತಗಿ, ಬಿಜೆಪಿಯ ಬಸವರಾಜ ಹೊಂಡ್ರಿ ಮತ್ತು ಕಾಂಗ್ರೆಸ್ ಪಕ್ಷದಿಂದ ಸತೀಶ್ ಜಾರಕಿಹೊಳಿ ಸ್ಪರ್ಧಿಸುತ್ತಿದ್ದಾರೆ

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 1:50 am, Sat, 13 May 23