Gadaga Election Result: ಗದಗ ವಿಧಾನಸಭಾ ಎಲೆಕ್ಷನ್​ 2023 ರಿಸಲ್ಟ್: ಹ್ಯಾಟ್ರಿಕ್ ಗೆಲವು ಸಾಧಿಸಿದ ಎಚ್​ಕೆ ಪಾಟೀಲ್​

Gadaga Assembly Election Result 2023 Live Counting Updates: ಗದಗ ವಿಧಾನಸಭಾ ಕ್ಷೇತ್ರದಲ್ಲಿ ಅನಿಲ್​ ಮೆಣಸಿನಕಾಯಿಗೆ ಬಿಜೆಪಿ ಟಿಕೆಟ್​ ನೀಡಿದೆ. ಅದೇ ರೀತಿಯಾಗಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ಎಚ್​.ಕೆ ಪಾಟೀಲ ಸ್ಪರ್ಧಿಸಿದ್ದು, ಮತ ಎಣಿಕೆಯ ವಿವರ ಇಲ್ಲಿದೆ.

Gadaga Election Result: ಗದಗ ವಿಧಾನಸಭಾ ಎಲೆಕ್ಷನ್​ 2023 ರಿಸಲ್ಟ್: ಹ್ಯಾಟ್ರಿಕ್ ಗೆಲವು ಸಾಧಿಸಿದ ಎಚ್​ಕೆ ಪಾಟೀಲ್​
ಪ್ರಾತಿನಿಧಿಕ ಚಿತ್ರ
Follow us
ಗಂಗಾಧರ​ ಬ. ಸಾಬೋಜಿ
|

Updated on:May 13, 2023 | 5:15 PM

Gadaga Assembly Election Result 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ಗದಗ ವಿಧಾನಸಭಾ ಕ್ಷೇತ್ರದಿಂದ (Gadaga Assembly Constituency) ಬಿಜೆಪಿ ಅಭ್ಯರ್ಥಿ ಅನೀಲ ಪಿ ಮೆನಸಿನಕಾಯಿ ವಿರುದ್ಧ ಕಾಂಗ್ರೆಸ್​ ಅಭ್ಯರ್ಥಿ ಹೆಚ್.ಕೆ.ಪಾಟೀಲ ಭರ್ಜರಿ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಹ್ಯಾಟ್ರಿಕ್ ಗೆಲವು ಸಾಧಿಸಿದ್ದಾರೆ. ಆರಂಭದಿಂದಲೂ ಎಚ್ ಕೆ ಪಾಟೀಲ್ ಮುನ್ನಡೆ ಸಾದಿಸಿದ್ರು. 9ನೇ ಸುತ್ತಿನಲ್ಲಿ ಬಿಜೆಪಿ ಸ್ವಲ್ಪ ಮುನ್ನಡೆ ಸಾಧಿಸಿದ್ರು. ಬಳಿಕ ಮತ್ತೆ ಎಚ್ ಕೆ ಪಾಟೀಲ್ ಮುನ್ನಡೆ ಸಾಧಿಸುವ ಮೂಲಕ ಕೊನೆಗ ಗೆಲುವಿನ ನಗೆ ಬಿರಿದ್ರು.

ಎಚ್ ಕೆ ಪಾಟೀಲ್ 89958 ಮತ ಪಡೆದ್ರೆ, ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ 74828 ಮತಗಳು ಪಡೆದು ಸೋಲು ಅನುಭವಿಸಿದ್ದಾರೆ.

ರಾಜ್ಯದ 224 ಕ್ಷೇತ್ರಗಳ ಪೈಕಿ ಗದಗ ವಿಧಾನಸಭಾ ಕ್ಷೇತ್ರ ಕೂಡ ಒಂದು. ಕಳೆದ 2018ರ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿದ್ದ ಅನೀಲ್​ ಮೆಣಸಿನಕಾಯಿ ಅವರು 1800ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲು ಕಂಡಿದ್ದರು. ಕಾಂಗ್ರೆಸ್​​ ಅಭ್ಯರ್ಥಿಯಾಗಿದ್ದ ಎಚ್​.ಕೆ ಪಾಟೀಲ ಅವರು ಗೆಲುವು ಸಾಧಿಸಿದ್ದರು.

ನಿರೀಕ್ಷೆಯಂತೆ ಗದಗ ವಿಧಾನಸಭಾ ಕ್ಷೇತ್ರದಿಂದ ಅನಿಲ್​ ಮೆಣಸಿನಕಾಯಿಗೆ ಬಿಜೆಪಿ ಟಿಕೆಟ್​ ನೀಡಲಾಗಿತ್ತು. ಅದೇ ರೀತಿಯಾಗಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ಎಚ್​.ಕೆ ಪಾಟೀಲ ಕಣದಲ್ಲಿದ್ದರು. ಇಬ್ಬರ ಮಧ್ಯದ ಪೈಪೋಟಿಗೆ ಕ್ಷೇತ್ರ ಸಜ್ಜಾಗಿತ್ತು. ಈ ಬಾರಿ ಕೂಡ ಗದಗ ವಿಧಾನಸಭಾ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 2:32 am, Sat, 13 May 23