Karnataka Polls: ಮೋದಿ ರಾಜ್ಯ ದಂಡಯಾತ್ರೆಗೆ 40 ಪರ್ಸೆಂಟ್ ಅಲ್ಲ, 200 ಪರ್ಸೆಂಟ್ ಡೀಲ್: ಬಿಜೆಪಿ ವಿರುದ್ಧ ಡಿಕೆ ಸುರೇಶ್ ವಾಗ್ದಾಳಿ

|

Updated on: Mar 31, 2023 | 2:52 PM

ಕರ್ನಾಟಕದಲ್ಲಿ ಸರ್ಕಾರದಿಂದ ಮೋದಿ ಪ್ರವಾಸಕ್ಕೆ 40 ಪರ್ಸೆಂಟ್ ಅಲ್ಲ, 200 ಪರ್ಸೆಂಟ್ ಡೀಲ್ ನಡೆಯುತ್ತಿದೆ. ಪ್ರಧಾನಿಯವರು ಇಲ್ಲಿನ ತಕ್ಕಡಿ ಏಳಿಸಬೇಕು ಅಂತ ಹೊರಟಿದ್ದರೆ ಅವರ ಹೆಸರಲ್ಲೇ ಬೊಮ್ಮಾಯಿ ಸರ್ಕಾರ ಡೀಲ್ ಮಾಡುತ್ತಿದೆ ಎಂದು ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ವಾಗ್ದಾಳಿ ನಡೆಸಿದರು.

Karnataka Polls: ಮೋದಿ ರಾಜ್ಯ ದಂಡಯಾತ್ರೆಗೆ 40 ಪರ್ಸೆಂಟ್ ಅಲ್ಲ, 200 ಪರ್ಸೆಂಟ್ ಡೀಲ್: ಬಿಜೆಪಿ ವಿರುದ್ಧ ಡಿಕೆ ಸುರೇಶ್ ವಾಗ್ದಾಳಿ
ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಮತ್ತು ಪ್ರಧಾನಿ ನರೇಂದ್ರ ಮೋದಿ
Follow us on

ಬೆಂಗಳೂರು: ನನಗೆ ಭಯ ಅನ್ನೋದು ಜಾಯಮಾನದಲ್ಲಿಯೇ ಇಲ್ಲ. ನನಗೆ ಭಯ ಇದೆ ಅಂದುಕೊಂಡವನು ಮುಠಾಳ ಎಂದು ಕಾಂಗ್ರೆಸ್ ಸಂಸದ ಡಿಕೆ ಸುರೇಶ್ (DK Suresh) ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾನಾಡಿದ ಅವರು, ಹೆಣ್ಣು ಮಕ್ಕಳ ಮೇಲೆ ರೇಪ್ ಕೇಸ್ ಹಾಕಿ ಗಾಂಜಾ ಕೇಸ್ ಹಾಕಿ ರಾಜಕಾರಣ ಮಾಡಿದವನಲ್ಲ ನಾನು. ಯಾರು ಯಾರನ್ನು ಹೇಗೆಲ್ಲ ಮಾಧ್ಯಮಗಳಲ್ಲಿ ಬಿಂಬಿಸಲಾಗುತ್ತಿದೆ ನನಗೆ ಗೊತ್ತಿದೆ ಎಂದರು. ಪ್ರಧಾನಿ ನರೇಂದ್ರ ಮೋದಿ (Narendra Modi) ಕರ್ನಾಟಕ ಪ್ರವಾಸವನ್ನು ಟೀಕಿಸಿದ ಅವರು, ಸರ್ಕಾರದಿಂದ ಕರ್ನಾಟಕದಲ್ಲಿ ಮೋದಿ ಟೂರ್ ಡೀಲ್ ನಡೆಯುತ್ತಿದೆ. 40 ಪರ್ಸೆಂಟ್ ಅಲ್ಲ, 200 ಪರ್ಸೆಂಟ್ ಡೀಲ್ ನಡೆಯುತ್ತಿದೆ. ಪ್ರಧಾನಿಯವರು ಇಲ್ಲಿನ ತಕ್ಕಡಿ ಏಳಿಸಬೇಕು ಅಂತ ಹೊರಟಿದ್ದರೆ ಅವರ ಹೆಸರಲ್ಲೇ ಬಸವರಾಜ ಬೊಮ್ಮಾಯಿ (Basavaraj Bommai) ಸರ್ಕಾರ ಡೀಲ್ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಕೆಂಪೇಗೌಡ ಪ್ರತಿಮೆ ಉದ್ಘಾಟನೆಗೆ ಪ್ರಧಾನಿ ಮೋದಿ ಆಗಮಿಸಿದ್ದರು. ಕೆಂಪೇಗೌಡರ ಮೇಲೆ ಬಹಳ ಗೌರವ ಇಟ್ಟುಕೊಂಡು ಪ್ರತಿಮೆ ನಿರ್ಮಾಣ ಮಾಡಿದ್ದಾರೆ ಅಂದುಕೊಂಡಿದ್ದೆವು. ಆದರೆ ಕೆಂಪೇಗೌಡ ಹೆಸರಲ್ಲಿ ಡೀಲ್ ಮಾಡುತ್ತಿದ್ದಾರೆ. ಇದರಲ್ಲಿ 200 ಪರ್ಸೆಂಟ್ ಡೀಲ್ ನಡೆದಿದೆ. ಕೆಂಪೇಗೌಡ ಪ್ರತಿಮೆ ಉದ್ಘಾಟನೆಗೆ 30 ಕೋಟಿ ಖರ್ಚು ಮಾಡಿದ್ದಾರೆ. ಮೋದಿ 7ಬಾರಿ ಬಂದಿದ್ದಾರೆ ಅಂದರೆ ಎಷ್ಟು ಹಣಲೂಟಿ ಮಾಡಿದ್ದಾರೆ ನೋಡಿ ಎಂದರು.

ಏರ್ ಪೋರ್ಟ್ ರಸ್ತೆ ಇವರಿಗೆ ಬರುವುದೇ ಇಲ್ಲ. ಅಥಾರಿಟಿಯೇ ಇಲ್ಲದ ಕಡೆ 8.36 ಕೋಟಿ ಖರ್ಚು ಮಾಡಿದ್ದಾರೆ. ಪ್ರತಿಮೆ ಇರುವ ಸ್ಥಳ ಮಾತ್ರ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಏರ್ ಪೋರ್ಟ್ ರಸ್ತೆ ಗುಂಡಿ ಬಿದ್ದಿತ್ತಾ? ರಿಪೇರಿ ಎಲ್ಲಿ ಬಂತು? ಪ್ರಧಾನಿ ಮೋದಿ ಕಾರ್ಯಕ್ರಮದ ಪೆಂಡಾಲ್​ಗೆ 12 ಕೋಟಿ ಖರ್ಚು ಮಾಡಿದ್ದಾರೆ. 12 ಕೋಟಿ ಹಣದಲ್ಲಿ ಎರಡು ಸೆಟ್ ಪೆಂಡಾಲ್ ಖರೀದಿ ಮಾಡಬಹುದಿತ್ತು. 12 ಕೋಟಿಯಲ್ಲಿ ಚಿನ್ನದ ಕಾರ್ಪೆಟ್ ಹಾಕಿಸಬಹುದಿತ್ತು. ಬಂದ ಜನರಿಗೆ ನೀರು ಕೊಡಲು 1 ಕೋಟಿ ಖರ್ಚು ತೋರಿಸಿದ್ದಾರೆ. ಒಬ್ಬೊಬ್ಬ ಎಷ್ಟೆಷ್ಟು ಲೀಟರ್ ನೀರು ಕುಡಿದಿದ್ದಾರೆ? 10 ಲಕ್ಷ ಜನ ಸೇರಿದ್ದರೆ 1 ಕೋಟಿ ಆಗಬೇಕು. ಎಷ್ಟು ಜನ ಸೇರಿದ್ದರು? ಎಷ್ಟು ನೀರು ಖರ್ಚಾಯ್ತು? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಏಪ್ರಿಲ್ 9ರಂದು ಪ್ರಧಾನಿ ಕರ್ನಾಟಕ ಪ್ರವಾಸ; ಬಂಡೀಪುರದಲ್ಲಿ ಸಫಾರಿ ನಡೆಸಲಿರುವ ನರೇಂದ್ರ ಮೋದಿ

ಕರ್ನಾಟಕದ ಕನ್ನಡಿಗರ ದುಡ್ಡನ್ನು ಮೋದಿ ಹೆಸರಲ್ಲಿ ಚುನಾವಣಾ ಸಂದರ್ಭದಲ್ಲಿ ದಂಡಯಾತ್ರೆಗೆ ಬಳಕೆ ಮಾಡುತ್ತಿದ್ದಾರೆ. ಒಂದು ಬಾರಿ ಬಂದಾಗಲೇ ಇಷ್ಟು ಲೂಟಿ ಮಾಡಿದ್ದಾರೆ. ಕಿಚನ್ ಸೆಟಪ್ ಮಾಡುವುದಕ್ಕೆ 50 ಲಕ್ಷ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 77 ಲಕ್ಷ ಖರ್ಚು ಮಾಡಿದ್ದಾರೆ. ಇದು ಬಿಜೆಪಿಯ ಭರವಸೆ. ಈ ಬಗ್ಗೆ ಅಸ್ವಸ್ತ ನಾರಾಯಣರನ್ನೇ (ಅಶ್ವತ್ಥ ನಾರಾಯಣ) ಈ ಬಗ್ಗೆ ಕೇಳಬೇಕು. ಉರಿಗೌಡ ನಂಜೇಗೌಡ ಇಟ್ಟುಕೊಂಡು ಒಕ್ಕಲಿಗರನ್ನು ಕೊಲೆಗಡುಕರೆಂದು ಮಾಡಿದವರನ್ನೇ ಕೇಳಬೇಕು ಎಂದರು.

ಎಲ್ಲೆಲ್ಲಿ ಪ್ರಧಾನಿ ಬಂದಿದ್ದಾರೆ ಅಲೆಲ್ಲ ಜನರು ಕದವನ್ನು ತಟ್ಟಬೇಕು. ಅಮಿತ್ ಶಾ ಹೆಸರಲ್ಲಿ ಎಷ್ಟು ಲೂಟಿ ಹೊಡೆದಿದ್ದಾರೋ ಗೊತ್ತಿಲ್ಲ. ದಾವಣಗೆರೆಯಲ್ಲಿ ಬಿಜೆಪಿ ಪಕ್ಷದ ಕಾರ್ಯಕ್ರಮ ನಡೆದಿತ್ತು. ಅಲ್ಲಿ ನಳೀನ್ ಕುಮಾರ್ ಕಟೀಲ್ ಎಷ್ಟು ಬಿಲ್ ಮಾಡಿದ್ದಾರೆ? ಪ್ರಧಾನಿಗೋಸ್ಕರ ಭ್ರಷ್ಟಾಚಾರದ ಪರ್ಸೆಂಟೇಜ್ ಹೆಚ್ಚಾಯ್ತಾ? ದುಡ್ಡು ಲೂಟಿ ಹೊಡೆಯುವುದಕ್ಕಾಗಿಯೇ ಇವರು ಹೋದಲ್ಲೆಲ್ಲ ಸ್ಟ್ಯಾಚ್ಯೂ ಕಟುತ್ತೇವೆ ಅಂತಾರೆ. ಪ್ರತಿಮೆ ನಿರ್ಮಾಣಗಳ ಹೆಸರಲ್ಲಿ ಜನರ ತೆರಿಗೆ ಹಣವನ್ನು ಲೂಟಿ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಒಕ್ಕಲಿಗರು ಮಾತ್ರವಲ್ಲ ಯಾವ ಸಮುದಾಯವೂ ಬಿಜೆಪಿ ಜೊತೆಗೆ ಹೋಗಲ್ಲ ಎಂದರು.

ಆತಂಕದಲ್ಲಿ ಕೆಲವು ರಾಜಕೀಯ ಪಕ್ಷಗಳು: ಡಿಕೆ ಸುರೇಶ್

ಪ್ರಜಾಪ್ರಭುತ್ವ ಹಬ್ಬ ಆಚರಣೆ ಮಾಡುವ ಸಂದರ್ಭ ಇದಾಗಿದೆ. ಜನರು ಸಂಭ್ರಮದಲ್ಲಿದ್ದಾರೆ, ಮಾಧ್ಯಮಗಳೂ ಸಡಗರದಲ್ಲಿವೆ. ಆದರೆ ಕೆಲವು ರಾಜಕೀಯ ಪಕ್ಷಗಳು ಆತಂಕದಲ್ಲಿವೆ ಎಂದು ಡಿಕೆ ಸುರೇಶ್ ಹೇಳಿದ್ದಾರೆ. ಕರ್ನಾಟಕ ಮೊದಲಿನಿಂದಲೂ ಶಾಂತಿಪ್ರಿಯ ರಾಜ್ಯ. ಗಲಾಟೆ ಕೋಮುಗಲಭೆ ಚುನಾವಣೆ ಸಂದರ್ಭದಲ್ಲಿ ನೋಡಿಲ್ಲ ನಾವು. ಇತ್ತೀಚೆಗೆ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಲ್ಲಿ ಅನೇಕ ಭಾಷಿಕರು ವಾಸ ಮಾಡುತ್ತಾ ಇದ್ದಾರೆ. ತಮಿಳು ತೆಲುಗು ಬೇರೆ ಬೇರೆ ಧರ್ಮ ಮಾತನಾಡುವವರು ಇದ್ದಾರೆ. ಸೌಹಾರ್ದತೆಗೆ ಯಾವತ್ತೂ ಧಕ್ಕೆ ಬಂದಿರಲಿಲ್ಲ. ಕಾವೇರಿ ವಿಚಾರದಲ್ಲಿ ತಮಿಳಿಗರಿಗೂ ನಮಗೂ ಸ್ವಲ್ಪ ಗಲಾಟೆ ಆಗಿತ್ತು. ಯಾರೇ ವಾಸ ಮಾಡಿದರೂ ತಾಯಿ ಭುವನೇಶ್ವರಿ ನೆಲ ಅಂತ ನಾವು ಕಾಲ ಕಳೆತಿದ್ದೇವೆ ಎಂದರು.

ಆರ್ ಆರ್ ನಗರ ಕ್ಷೇತ್ರದ ಜಾಲಹಳ್ಳಿ ಬಳಿ ಖಾತಾ ನಗರ ಬಳಿ ತಮಿಳರು 50-60 ವರ್ಷದಿಂದ ವಾಸ ಮಾಡುತ್ತಿದ್ದಾರೆ. ಕರ್ನಾಟಕದ ಸಚಿವರು ಮಾರ್ಚ್ 19ರ ರಾತ್ರಿ 9.30ರಂದು ನಡೆದ ಅಲ್ಲಿನ ಕಾರ್ಯಕ್ರಮದಲ್ಲಿ ಸಚಿವ ಮುನಿರತ್ನ ತಮಿಳಿನಲ್ಲಿ ಮಾತನಾಡುತ್ತಾ, ಈ ಪ್ರದೇಶಕ್ಕೆ ಯಾರೇ ಮತ ಕೇಳಲು ಬಂದರೂ ಹೊಡೆದೋಡಿಸಿ, ಯಾರಿಗೂ ಹೆದರಿಕೊಳ್ಳಬೇಡಿ ಅಂತ ತಮಿಳರನ್ನು ಕನ್ನಡಿಗರ ಮೇಲೆ ಎತ್ತಿಕಟ್ಟುವ ಪ್ರಯತ್ನ ಮಾಡಿದ್ದಾರೆ. ಒಕ್ಕಲಿಗ ಹೆಣ್ಣು ಮಗಳನ್ನು ಹೊಡೆದೋಡಿಸಿ ಯಾರನ್ನೂ ಬಿಡಬೇಡಿ ಸಾಯುವಂತೆ ಹೊಡೆದೋಡಿಸಿ ಅಂತ ಎತ್ತಿಕಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಒಕ್ಕಲಿಗರ ಹೆಸರಲ್ಲಿ ದುಡ್ಡು ಮಾಡುವ ಮುನಿರತ್ನ ಈ ತರಹ ಹೇಳಿಕೆ ಕೊಟ್ಡಿದ್ದಾರೆ. 2013-2018 ರಲ್ಲಿ ಇದೇ ತರಹದ ಪ್ರಸಂಗ ನಡೆದಿತ್ತು. ಖಾತಾನಗರ ಪ್ರದೇಶದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಲು ಮುನಿರತ್ನ ಮುಂದಾಗಿದ್ದಾರೆ. ಒಕ್ಕಲಿಗ ಕನ್ನಡಿಗ ಹೆಣ್ಣುಮಗಳ ವಿರುದ್ದ ತಮಿಳರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇವರು ಬಂದಿರುವುದು ರಾಜಕಾರಣ ಮಾಡುವುದಕ್ಕೆ ಹಣ ಮಾಡುವುದಕ್ಕೆ, ಕುಸುಮಾ ಈಗಾಗಲೇ ಕಮಿಷನರ್​ಗೆ ದೂರು ನೀಡಿದ್ದಾರೆ. ಪೊಲೀಸರು ಸಚಿವರ ವಿರುಧ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಭಾಷೆಯ ಸಾಮರಸ್ಯ ಕದಡುವ ಕೆಲಸ ಮಾಡಿರುವ ಮುನಿರತ್ನ ಅವರನ್ನು ಬಂಧಿಸಬೇಕು. ಪೊಲೀಸ್ ಇಲಾಖೆಯನ್ನು ಈ ಸರ್ಕಾರ ಹಾಳು ಮಾಡಿದೆ ಎಂದು ಹೇಳಿ ಸಚಿವ ಮುನಿರತ್ನ ಹೊಡಿರಿ ಎಂದ ವೀಡಿಯೋ ರಿಲೀಸ್ ಮಾಡಿದರು.

ವಿಧಾನಸಭೆ ಚುನಾವಣೆತ ತಾಜಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:52 pm, Fri, 31 March 23