ಟೋಲ್​ ಶುಲ್ಕ ಹೆಚ್ಚಿಸಿದ ಬಿಜೆಪಿಯನ್ನು ಸೋಲಿಸಿ: ಟೋಲ್‌ ಗೇಟ್‌ ವಿರೋಧಿ ಕ್ರಿಯಾ ಸಮಿತಿ ಮನವಿ

|

Updated on: Apr 02, 2023 | 7:19 PM

ಹೆದ್ದಾರಿ ಟೋಲ್ ಶುಲ್ಕವನ್ನು ಶೇ.25 ರಷ್ಟು ಹೆಚ್ಚಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಟೋಲ್‌ ಗೇಟ್‌ ವಿರೋಧಿ ಕ್ರಿಯಾ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಇಲ್ಲಿ ಕಟುವಾಗಿ ಟೀಕಿಸಿದರು. ಟೋಲ್‌ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿರುವ ಬಿಜೆಪಿಯನ್ನು ಈ ಬಾರಿಯ ಚುನಾವಣೆಯಲ್ಲಿ ಸೋಲಿಸುವಂತೆ ಮನವಿ ಮಾಡಿದರು.

ಟೋಲ್​ ಶುಲ್ಕ ಹೆಚ್ಚಿಸಿದ ಬಿಜೆಪಿಯನ್ನು ಸೋಲಿಸಿ: ಟೋಲ್‌ ಗೇಟ್‌ ವಿರೋಧಿ ಕ್ರಿಯಾ ಸಮಿತಿ ಮನವಿ
ಟೋಲ್​ ಶುಲ್ಕ ಹೆಚ್ಚಿಸಿದ ಬಿಜೆಪಿಯನ್ನು ಸೋಲಿಸುವಂತೆ ಮನವಿ ಮಾಡಿದ ಟೋಲ್‌ ಗೇಟ್‌ ವಿರೋಧಿ ಕ್ರಿಯಾ ಸಮಿತಿ (ಸಾಂದರ್ಭಿಕ ಚಿತ್ರ)
Follow us on

ಮಂಗಳೂರು: ಹೆದ್ದಾರಿ ಟೋಲ್ ಗೇಟ್ ಶುಲ್ಕವನ್ನು ಭಾರೀ ಪ್ರಮಾಣದಲ್ಲಿ ಏರಿಕೆ (Toll gate fee hike) ಮಾಡಿದ ಬಿಜೆಪಿಯನ್ನು ಈ ಬಾರಿಯ ಚುನಾವಣೆಯಲ್ಲಿ (Karnataka Assembly Election 2023) ಸೋಲಿಸುವಂತೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಮತದಾರರಲ್ಲಿ ಟೋಲ್‌ ಗೇಟ್‌ ವಿರೋಧಿ ಕ್ರಿಯಾ ಸಮಿತಿ ಮನವಿ ಮಾಡಿದೆ. ಟೋಲ್ ಶುಲ್ಕವನ್ನು ಶೇ.25 ರಷ್ಟು ಹೆಚ್ಚಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಟೀಕಿಸಿದ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ನಾಲ್ಕು ಟೋಲ್ ಪ್ಲಾಜಾಗಳಲ್ಲಿ (Toll Plaza) ಟೋಲ್ ಶುಲ್ಕವನ್ನು ಹೆಚ್ಚಿಸಲಾಗಿದೆ. ಈಗಾಗಲೇ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಟೋಲ್ ಶುಲ್ಕ ಏರಿಕೆ ಮತ್ತಷ್ಟು ಹೊರೆಯಾಗಿದೆ ಎಂದರು.

ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲು ಜನಸಾಮಾನ್ಯರು ತಮ್ಮ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕು ಮತ್ತು ಕಾರ್ಪೊರೇಟ್‌ಗಳಿಗೆ ಲಾಭ ಮಾಡಿಕೊಡದಂತೆ ಎಲ್ಲಾ ರಾಜಕೀಯ ಪಕ್ಷಗಳನ್ನು ಒತ್ತಾಯಿಸಬೇಕು ಎಂದರು. ಕೇರಳದ ಗಡಿಯಲ್ಲಿರುವ ತಲಪಾಡಿ ಬಳಿ ಒಂದು ಟೋಲ್ ಗೇಟ್, ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬ್ರಹ್ಮರಕೂಟ್ಲು ಬಳಿ ಒಂದು ಟೋಲ್ ಗೇಟ್​ ಇದೆ. ಉಡುಪಿ ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಮತ್ತು ಸಾಸ್ತಾನದಲ್ಲಿ ತಲಾ ಒಂದೊಂದು ಟೋಲ್ ಪ್ಲಾಜಾಗಳಿವೆ.

ಇದನ್ನೂ ಓದಿ: Bengaluru Mysuru Expressway: ಟೋಲ್​ ದರ ಹೆಚ್ಚಳ ಇಲ್ಲ: ಆದೇಶ ವಾಪಸ್ ಪಡೆದ ಎನ್​ಹೆಚ್​ಎಐ

ಬೆಂಗಳೂರು-ಮೈಸೂರು ಹೆದ್ದಾರಿ ಸೇರಿದಂತೆ ರಾಜ್ಯದಲ್ಲಿ ಇರುವ ವಿವಿಧ ಹೆದ್ದಾರಿಗಳ ಟೋಲ್ ದರವನ್ನು ಶೇಕಡಾ 22ರಷ್ಟು ಏರಿಸಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ / NHAI) ಆದೇಶ ಹೊರಡಿಸಿತ್ತು. ಬೆಂಗಳೂರಿನಿಂದ ದೇವನಹಳ್ಳಿಯ (Bengaluru-Devanahalli) ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Bengaluru International Airport) ಹೋಗುವ ಟೋಲ್​ ದರ ಕೂಡ ಏರಿಕೆಯಾಗಿದೆ. ಏರ್​​ಪೋರ್ಟ್​​ ರಸ್ತೆಯ ನಿರ್ವಹಣೆ ಹೊತ್ತಿರುವ ಅಥಾಂಗ್ ಟೋಲ್ ವೇ ಪ್ರವೈಟ್ ಲಿಮಿಟೆಡ್‌ ಮಧ್ಯರಾತ್ರಿಯಿಂದಲೇ ಟೋಲ್ ದರವನ್ನು ಏರಿಸಲಾಗಿದೆ. ಆದರೆ ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್ ದರ ಏರಿಕೆಗೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ಇಲ್ಲಿ ದರ ಏರಿಕೆ ಮಾಡಿಲ್ಲ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:19 pm, Sun, 2 April 23