AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Mysuru Expressway: ಟೋಲ್​ ದರ ಹೆಚ್ಚಳ ಇಲ್ಲ: ಆದೇಶ ವಾಪಸ್ ಪಡೆದ ಎನ್​ಹೆಚ್​ಎಐ

ಬೆಂಗಳೂರು-ಮೈಸೂರು ಎಕ್ಸಪ್ರೆಸ್​ವೇ ಟೋಲ್​ ದರ ಹೆಚ್ಚಳಕ್ಕೆ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಟೋಲ್ ದರ ಹೆಚ್ಚಳ ಆದೇಶವನ್ನು ವಾಪಸ್ ಪಡೆದಿದೆ.

Bengaluru Mysuru Expressway: ಟೋಲ್​ ದರ ಹೆಚ್ಚಳ ಇಲ್ಲ: ಆದೇಶ ವಾಪಸ್ ಪಡೆದ ಎನ್​ಹೆಚ್​ಎಐ
ಬೆಂಗಳೂರು-ಮೈಸೂರು ಎಕ್ಸಪ್ರೆಸ್​ವೇ (ಎಡಚಿತ್ರ) ಟೋಲ್​ ದರ ವಾಪಸ್​ ಆದೇಶ (ಬಲಚಿತ್ರ)
ವಿವೇಕ ಬಿರಾದಾರ
|

Updated on: Apr 01, 2023 | 10:45 AM

Share

ರಾಮನಗರ: ಬೆಂಗಳೂರು-ಮೈಸೂರು ಎಕ್ಸಪ್ರೆಸ್​ವೇ (Bengaluru-Mysore Express)  ಟೋಲ್​ ದರ ಹೆಚ್ಚಳಕ್ಕೆ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಟೋಲ್ ದರ ಹೆಚ್ಚಳ ಆದೇಶವನ್ನು ವಾಪಸ್ ಪಡೆದಿದೆ. ಎನ್​ಹೆಚ್​ಎಐ ಶೇ.22ರಷ್ಟು ಟೋಲ್ ದರ ಹೆಚ್ಚಿಸಿ ಆದೇಶ ಹೊರಡಿಸಿತ್ತು. ಆದರೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆ ಹಿಂಪಡೆದಿದೆ.

ಟೋಲ್ ಸಂಗ್ರಹ ಆರಂಭವಾದ 17 ದಿನದಲ್ಲೇ ಟೋಲ್​ ದರ ಏರಿಕೆ

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ / NHAI) ಶೇಕಡಾ 22ರಷ್ಟು ಟೋಲ್​ ದರ (Bengaluru Mysuru expressway toll price) ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ಟೋಲ್ ಸಂಗ್ರಹ ಆರಂಭವಾದ 17 ದಿನದಲ್ಲೇ ಎನ್​ಹೆಚ್​ಎಐ ಮತ್ತೆ ಟೋಲ್ ದರ ಹೆಚ್ಚಳ ಮಾಡಿದ್ದು ಅಚ್ಚರಿಗೆ ಕಾರಣವಾಗಿತ್ತು. ಇದು ಈಗಿರುವ ಟೋಲ್​ಗಿಂತ ಶೇಕಡಾ 22ರಷ್ಟು ದರ ದುಬಾರಿಯಾಗಿತ್ತು. ಈ ಪರಿಷ್ಕೃತ ದರ ಇಂದು (ಏಪ್ರಿಲ್​ 1) ರಿಂದ ಜಾರಿಗೆ ಬರಬೇಕಿತ್ತು.

ದೇವನಹಳ್ಳಿ ಏರ್ಪೋರ್ಟ್ ರಸ್ತೆಯ ಟೋಲ್ ದರ ಹೆಚ್ಚಳ

ಬೆಂಗಳೂರಿನಿಂದ ದೇವನಹಳ್ಳಿಯ (Bengaluru-Devanahalli) ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Bengaluru International Airport) ಹೋಗುವ ಟೋಲ್​ ದರ ಕೂಡ ಏರಿಕೆಯಾಗಿದೆ. ಏರ್​​ಪೋರ್ಟ್​​ ರಸ್ತೆಯ ನಿರ್ವಹಣೆ ಹೊತ್ತಿರುವ ಅಥಾಂಗ್ ಟೋಲ್ ವೇ ಪ್ರವೈಟ್ ಲಿಮಿಟೆಡ್‌ ಮಧ್ಯರಾತ್ರಿಯಿಂದಲೇ ಟೋಲ್ ದರವನ್ನು ಏರಿಸಿದೆ.

ದೇವನಹಳ್ಳಿ ಟೋಲ್​ ದರ ಏರಿಕೆ

ಕಾರು, ಜೀಪು, ವ್ಯಾನ್ ಲಘು ‌ಮೋಟಾರು ವಾಹನ ಏಕಮುಖ ಸಂಚಾರಕ್ಕೆ 110 ರೂ. 24 ಗಂಟೆಯೊಳಗೆ ಹಿಂತಿರುಗುವ ಶುಲ್ಕ 170 ರೂ ನಿಗದಿ ಮಾಡಲಾಗಿದೆ. ಇಷ್ಟು ದಿನ ಏಕಮುಖ ಸಂಚಾರಕ್ಕೆ 105 ರೂ. ಹಾಗೂ ದ್ವಿಮುಖ ಸಂಚಾರ 165 ರೂಪಾಯಿ ಇತ್ತು. 3555 ರೂಪಾಯಿಯಿದ್ದ ಮಾಸಿಕ ಪಾಸ್ ಶುಲ್ಕ 3755 ರೂಪಾಯಿಗೆ ಏರಿಕೆಯಾಗಿದೆ.

ಲಘು ವಾಣಿಜ್ಯ ವಾಹನ ಲಘು ಸರಕು ವಾಹನ ಮಿನಿ ಬಸ್- ಏಕಮುಖ ಸಂಚಾರಕ್ಕೆ 165 ರಿಂದ 170 ರೂ. ಗೆ ಏರಿಕೆ. ಹಿಂತಿರುಗುವ ಶುಲ್ಕ 245 ರಿಂದ 260 ರೂಪಾಯಿಗೆ ಏರಿಕೆ. ಮಾಸಿಕ ಪಾಸ್ 5465 ರೂ. ಯಿಂದ 5745 ರೂ. ಗೆ ಏರಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಿಂದ ಮೈಸೂರಿಗೆ ತೆರಳಲು ಪರ್ಯಾಯ ಮಾರ್ಗಗಳಿವು

ಟ್ರಕ್ ಬಸ್ 2 ಆಕ್ಸೆಲ್ ವಾಹನಗಳ ಏಕಮುಖ ಸಂಚಾರಕ್ಕೆ 330 ರಿಂದ 345 ರೂ. ಗೆ ಏರಿಕೆ. ದ್ವಿಮುಖ ಸಂಚಾರಕ್ಕೆ 495 ರೂ. ನಿಂದ 520 ರೂ. ಗೆ ಏರಿಕೆ ಮಾಡಲಾಗಿದೆ. 10,990 ರೂಪಾಯಿ ಇದ್ದ ಮಾಸಿಕ ಪಾಸ್ 11,550 ರೂ. ಆಗಿದೆ. ಭಾರೀ ವಾಹನಗಳು 03 ರಿಂದ 06 ಅಕ್ಸೆಲ್ ವಾಹನಗಳ ಏಕಮುಖ ಸಂಚಾರಕ್ಕೆ 500 ರಿಂದ 525 ರೂ. ದ್ವಿಮುಖ ಸಂಚಾರ 750 ರೂ. ನಿಂದ 790 ರೂ. 16,680 ರೂ. ಇದ್ದ ಮಾಸಿಕ ಪಾಸ್ 17, 525 ರೂ. ಹೆಚ್ಚಿಗೆಯಾಗಿದೆ.

ಭಾರೀ ಗಾತ್ರದ ವಾಹನಗಳಿಗೆ 07 ಆಕ್ಸೆಲ್ ಹಾಗೂ ಅದಕ್ಕಿಂತ ಹೆಚ್ಚು ಆಕ್ಸೆಲ್ ವಾಹನಗಳಿಗೆ ಏಕಮುಖ ಸಂಚಾರಕ್ಕೆ 650 ರಿಂದ 685 ರೂ. ಗೆ ಏರಿಕೆ. ದ್ವಿಮುಖ 980 ರೂ. ನಿಂದ 1025 ರೂ. ಗೆ ಏರಿಕೆ. 21, 730 ರೂ. ಇದ್ದ ಮಾಸಿಕ ಪಾಸ್ 22, 830 ರೂಪಾಯಿಯಷ್ಟು ಹೆಚ್ಚಿಸಲಾಗಿದೆ. ಸ್ಥಳೀಯ ಮಾಸಿಕ ಪಾಸ್ 315 ರಿಂದ 330 ರೂಪಾಯಿಗೆ ಏರಿಕೆ (ಕಾರುಗಳಿಗೆ ಮಾತ್ರ ಅನ್ವಯವಾಗುತ್ತದೆ)

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ