Bengaluru Mysuru Expressway: ಬೆಂಗಳೂರಿನಿಂದ ಮೈಸೂರಿಗೆ ತೆರಳಲು ಪರ್ಯಾಯ ಮಾರ್ಗಗಳಿವು

ದಶಪಥ ಹೆದ್ದಾರಿಯೇ ಬೇಡ, ಬೇರೆಯೇ ಮಾರ್ಗದಲ್ಲಿ ಮೈಸೂರಿಗೆ ಅಥವಾ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತೇವೆ ಎನ್ನುವುದಾದರೆ ಯಾವೆಲ್ಲ ಮಾರ್ಗಗಳಿವೆ? ಬೆಂಗಳೂರು ಹಾಗೂ ಮೈಸೂರು ಮಧ್ಯೆ ಪ್ರಯಾಣಿಸಬಹುದಾದ ಪರ್ಯಾಯ ಮಾರ್ಗಗಳು ಯಾವುವೆಲ್ಲ ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ.

Bengaluru Mysuru Expressway: ಬೆಂಗಳೂರಿನಿಂದ ಮೈಸೂರಿಗೆ ತೆರಳಲು ಪರ್ಯಾಯ ಮಾರ್ಗಗಳಿವು
ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ವೇ
Follow us
|

Updated on: Mar 24, 2023 | 8:20 AM

ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್​ ವೇ (Bengaluru-Mysuru Expressway) ಅನ್ನು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಲೋಕಾರ್ಪಣೆಗೊಳಿಸಿದ್ದಾರೆ. ಅದರ ಬೆನ್ನಲ್ಲೇ ದಶಪಥ ಹೆದ್ದಾರಿಯಲ್ಲಿ ಟೋಲ್ ಸಂಗ್ರಹವೂ (Toll Collection) ಆರಂಭವಾಗಿದೆ. ಈ ಬಗ್ಗೆ ಪರ-ವಿರೋಧ ಚರ್ಚೆಗಳೂ ನಡೆಯುತ್ತಿವೆ. ಹೆದ್ದಾರಿ ಕಾಮಗಾರಿ ಸಂಪೂರ್ಣ ಮುಕ್ತಾಯವಾಗದೆ ಟೋಲ್ ಸಂಗ್ರಹ ಸರಿಯಲ್ಲ, ಸೂಕ್ತ ಸರ್ವೀಸ್ ರಸ್ತೆ ವ್ಯವಸ್ಥೆ ಮಾಡದೇ ಟೋಲ್ ಸಂಗ್ರಹ ಮಾಡಬಾರದು ಎಂಬ ಕೂಗುಗಳೂ ಕೇಳಿಬಂದಿವೆ. ಅಲ್ಲಲ್ಲಿ ಪ್ರತಿಭಟನೆಗಳೂ ನಡೆದಿವೆ. ಆದರೆ, ಎಕ್ಸ್​ಪ್ರೆಸ್​ ವೇ ಪರಿಕಲ್ಪನೆಯಲ್ಲಿ ಸರ್ವೀಸ್ ರಸ್ತೆಯೂ ಸೇರಿಕೊಂಡಿರುತ್ತದೆ. ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್​ ವೇಯ ಆರು ಲೇನ್​ಗಳು ಪ್ರಮುಖವಾದದ್ದಾಗಿದ್ದು, ಎರಡೂ ಬದಿಯ ತಲಾ ಎರಡು ಲೇನ್​ಗಳನ್ನು ಸರ್ವೀಸ್ ರಸ್ತೆ ಎಂದು ಪರಿಗಣಿಸಲಾಗುತ್ತದೆ ಎಂದು ಹೆದ್ದಾರಿ ಪ್ರಾಧಿಕಾರ ಸ್ಪಷ್ಟನೆ ನೀಡಿದೆ.

ದಶಪಥ ಹೆದ್ದಾರಿಯೇ ಬೇಡ, ಬೇರೆಯೇ ಮಾರ್ಗದಲ್ಲಿ ಮೈಸೂರಿಗೆ ಅಥವಾ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತೇವೆ ಎನ್ನುವುದಾದರೆ ಯಾವೆಲ್ಲ ಮಾರ್ಗಗಳಿವೆ? ಬೆಂಗಳೂರು ಹಾಗೂ ಮೈಸೂರು ಮಧ್ಯೆ ಪ್ರಯಾಣಿಸಬಹುದಾದ ಪರ್ಯಾಯ ಮಾರ್ಗಗಳು ಯಾವುವೆಲ್ಲ ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ.

ಕನಕಪುರ ಮಾರ್ಗವಾಗಿ ಹೋಗುವುದು ಹೇಗೆ?

ಬೆಂಗಳೂರಿನಿಂದ ಕನಕಪುರ, ಹಲಗೂರು, ಮಳವಳ್ಳಿ, ಕಿರುಗಾವಲು, ಬನ್ನೂರು ಮೂಲಕ ಮೈಸೂರಿಗೆ ತೆರಳಬಹುದಾಗಿದೆ. ಹೀಗೆ ಪ್ರಯಾಣಿಸಲು ಒಟ್ಟು 164 ಕಿಲೋಮೀಟರ್ ಕ್ರಮಿಸಬೇಕಾಗುತ್ತದೆ. ಗೂಗಲ್​ ಮ್ಯಾಪ್ಸ್​ ಪ್ರಕಾರ ಈ ಮಾರ್ಗದ ಪ್ರಯಾಣಕ್ಕೆ ಸುಮಾರು 4 ತಾಸು ಬೇಕಾಗಲಿದೆ.

ಬೆಳ್ಳೂರು ಕ್ರಾಸ್ ಮೂಲಕವೂ ಹೋಗಬಹುದು, ಆದರೆ ಟೋಲ್ ಇದೆ!

ಮೈಸೂರಿನಿಂದ ಶ್ರೀರಂಗಪಟ್ಟಣ, ಪಾಂಡವಪುರ, ನಾಗಮಂಗಲ, ಬೆಳ್ಳೂರು ಕ್ರಾಸ್, ನೆಲಮಂಗಲ ಮೂಲಕವೂ ಬೆಂಗಳೂರಿಗೆ ಸಂಚರಿಸಬಹುದಾಗಿದೆ. ಆದರೆ, ಇದು ತುಂಬಾ ದೂರದ ಮಾರ್ಗವಾಗಿದೆ. ಈ ಮಾರ್ಗದಲ್ಲಿ ಸಂಚರಿಸುವುದಾದರೆ 195 ಕಿಲೋಮೀಟರ್ ದೂರ ಕ್ರಮಿಸಬೇಕಾಗಿದ್ದು, ಗೂಗಲ್​ ಮ್ಯಾಪ್ಸ್​ ಪ್ರಕಾರ ಸುಮಾರು 4 ತಾಸು ಬೇಕಾಗಲಿದೆ. ಆದರೆ, ಮತ್ತೆ ಈ ಮಾರ್ಗದಲ್ಲಿಯೂ ನೆಲಮಂಗಲದಿಂದ ಬೆಳ್ಳೂರು ಕ್ರಾಸ್ ನಡುವೆ ಟೋಲ್ ಪಾವತಿಸಿ ಸಂಚರಿಸಬೇಕಾಗುತ್ತದೆ. ಹೀಗಾಗಿ ಇದಕ್ಕಿಂತ ಎಕ್ಸ್​ಪ್ರೆಸ್​ ವೇ ಸಂಚಾರವೇ ಉತ್ತಮವಾಗಿದೆ.

ವಿಮಾನ ನಿಲ್ದಾಣದಿಂದ ಮೈಸೂರಿಗೆ ತೆರಳುವುದಾದರೆ ಯಾವುದು ಬೆಸ್ಟ್?

ಇನ್ನು, ಬೆಂಗಳೂರು ವಿಮಾನ ನಿಲ್ದಾಣದಿಂದ ಮೈಸೂರಿಗೆ ಹೋಗುವುದಾದರೆ ಸಮಯದ ದೃಷ್ಟಿಯಿಂದ ನೋಡಿದರೆ ದಶಪಥ ಹೆದ್ದಾರಿಯೇ ಸೂಕ್ತ ಎಂಬುದು ಗೂಗಲ್ ಮ್ಯಾಪ್ಸ್​ನಿಂದ ತಿಳಿದುಬರುತ್ತದೆ. ಆದರೆ, ನೆಲಮಂಗಲ – ಯಡಿಯೂರು, ನಾಗಮಂಗಲ, ಶ್ರೀರಂಗಪಟ್ಟಣ ಮೂಲಕವೂ ಮೈಸೂರಿಗೆ ತೆರಳಬಹುದಾಗಿದೆ.

ಆದರೆ, ಪರ್ಯಾಯ ಮಾರ್ಗಗಳೆಲ್ಲವೂ ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ ಹಾಗೂ ಇದಕ್ಕಾಗಿ ಹೆಚ್ಚು ಇಂಧನವನ್ನೂ ವ್ಯಯಿಸಬೇಕಾಗುತ್ತದೆ ಎಂಬುದು ಗಮನಾರ್ಹ. ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಅಥವಾ ಬೆಂಗಳೂರು ನಗರದ ಹೊರವಲಯಗಳಿಂದ ಮೈಸೂರನ್ನು ಸಂಪರ್ಕಿಸುವ ಸಂದರ್ಭ ಬಂದಾಗಲಷ್ಟೇ ಈ ಪರ್ಯಾಯ ಮಾರ್ಗಗಳನ್ನು ಆಯ್ಕೆ ಮಾಡಬಹುದು.

ದಶಪಥವೇ ಹೆದ್ದಾರಿಯೇ ಬೆಸ್ಟ್

ಪರ್ಯಾಯ ಮಾರ್ಗಗಳಿಗೆ ಹೋಲಿಸಿದರೆ ಉಭಯ ನಗರಗಳ ನಡುವಣ ಸಂಚಾರಕ್ಕೆ ಎಕ್ಸ್​ಪ್ರೆಸ್​​ ವೇ ಹೆದ್ದಾರಿಯೇ ಉತ್ತಮ ಆಯ್ಕೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಸಮಯದ ಅವಧಿ, ಇಂಧನ ಉಳಿತಾಯ ಇತ್ಯಾದಿ ವಿಚಾರಗಳನ್ನು ಗಣನೆಗೆ ತೆಗೆದುಕೊಂಡರೆ ಎಕ್ಸ್​ಪ್ರೆಸ್​ ವೇ ಸಂಚಾರವೇ ಸುಗಮ. ಟೋಲ್ ದರ ತುಸು ದುಬಾರಿ ಎಂಬುದು ಬಿಟ್ಟರೆ ಅತಿ ಕಡಿಮೆ ಅವಧಿಯಲ್ಲಿ, ಅಂದರೆ ಸುಮಾರು ಒಂದೂಕಾಲು ತಾಸಿನಿಂದ ಒಂದೂವರೆ ತಾಸಿನ ಒಳಗಾಗಿ ಗಮ್ಯ ತಲುಪಬಹುದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ