ಹಿಂದೂ ನಂಬಿಕೆಯನ್ನು ತೊಡೆದುಹಾಕಲು ಕಾಂಗ್ರೆಸ್ ಷಡ್ಯಂತ್ರ ನಡೆಸುತ್ತಿದೆ: ಮಹಾರಾಷ್ಟ್ರದಲ್ಲಿ ಮೋದಿ ವಾಗ್ದಾಳಿ

|

Updated on: May 10, 2024 | 2:28 PM

ಮಹಾರಾಷ್ಟ್ರದ ನಂದೂರ್‌ಬಾರ್‌ನಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ನಾನು  ಅತ್ಯಂತ ಜವಾಬ್ದಾರಿಯಿಂದ ಒಂದು ಮಾತು ಹೇಳಲು ಬಯಸುತ್ತೇನೆ. ಅದು ಎಸ್‌ಸಿ, ಎಸ್‌ಟಿ ಅಥವಾ ಒಬಿಸಿಯೇ ಆಗಿರಲಿ ವಂಚಿತರ ಹಕ್ಕನ್ನು ಸಂರಕ್ಷಿಸುವವರೇ ಮೋದಿ ಎಂದು ಹೇಳಿದ್ದಾರೆ.ಕಾಂಗ್ರೆಸ್‌ನ ಕುಟುಂಬದಂತೆ ನಾನು ರಾಜಮನೆತನದಿಂದ ಹೊರಬಂದಿಲ್ಲ, ನಾನು ಬಡತನವನ್ನು ಎದುರಿಸಿ ಬೆಳೆದಿದ್ದೇನೆ. ನನಗೆ ಬುಡಕಟ್ಟು ಸಮುದಾಯದ ಸೇವೆ ಮತ್ತು ಸಹಾಯ ಮಾಡುವುದು ನನ್ನ ಸ್ವಂತ ಕುಟುಂಬದ ಸದಸ್ಯರಿಗೆ ಸೇವೆ ಮಾಡಿದಂತೆ ಎಂದಿದ್ದಾರೆ ಪ್ರಧಾನಿ.

ಹಿಂದೂ ನಂಬಿಕೆಯನ್ನು ತೊಡೆದುಹಾಕಲು ಕಾಂಗ್ರೆಸ್ ಷಡ್ಯಂತ್ರ ನಡೆಸುತ್ತಿದೆ: ಮಹಾರಾಷ್ಟ್ರದಲ್ಲಿ ಮೋದಿ ವಾಗ್ದಾಳಿ
ನರೇಂದ್ರ ಮೋದಿ
Follow us on

ನಂದೂರ್‌ಬಾರ್‌ ಮಹಾರಾಷ್ಟ್ರ ಮೇ 10: ಮಹಾರಾಷ್ಟ್ರದ (Maharashtra) ನಂದೂರ್‌ಬಾರ್‌ನಲ್ಲಿ (Nandurbar) ಇಂದು (ಶುಕ್ರವಾರ) ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi), ಹಿಂದೂ ನಂಬಿಕೆಯನ್ನು ತೊಡೆದುಹಾಕಲು ಕಾಂಗ್ರೆಸ್ ಷಡ್ಯಂತ್ರದಲ್ಲಿ ತೊಡಗಿದೆ ಎಂದು ಹೇಳಿದ್ದಾರೆ.  ಕಾಂಗ್ರೆಸ್ ಪಕ್ಷದ ಸಾಗರೋತ್ತರ ಘಟಕದ ಮಾಜಿ ಮುಖ್ಯಸ್ಥರ ಹೇಳಿಕೆಗಳ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ರಾಮ ಮಂದಿರ ನಿರ್ಮಾಣವು ಭಾರತದ ಕಲ್ಪನೆಗೆ ವಿರುದ್ಧವಾಗಿದೆ ಎಂದು ಶೆಹಜಾದೆ (ರಾಹುಲ್ ಗಾಂಧಿ) ಗುರುಗಳು ಅಮೆರಿಕಕ್ಕೆ ಹೇಳಿದ್ದಾರೆ” ಎಂದಿದ್ದಾರೆ. ಅದೇ ವೇಳೆ ಉದ್ಧವ್ ಠಾಕ್ರೆ ಶಿವಸೇನಾ ಬಣದ ವಿರುದ್ಧ ವ್ಯಂಗ್ಯವಾಡಿದ ಅವರು, ಉದ್ಧವ್ ಬಣವನ್ನು “ನಕಲಿ ಶಿವಸೇನೆ”ಎಂದಿದ್ದಾರೆ. “ನಕಲಿ ಶಿವಸೇನೆಯವರು ನನ್ನನ್ನು ಜೀವಂತ ಸಮಾಧಿ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ” ಎಂದಿದ್ದಾರೆ ಪ್ರಧಾನಿ.

“ಕಾಂಗ್ರೆಸ್‌ನ ಮನಸ್ಥಿತಿ ನೋಡಿ, ರಾಮನ ದೇಶದಲ್ಲಿ ರಾಮಮಂದಿರವನ್ನು ದೇಶವಿರೋಧಿ ಎಂದು ಕರೆಯುತ್ತಿದ್ದಾರೆ.’ ಸರ್ಕಾರಿ ಇಫ್ತಾರಿ’ಯನ್ನು ಆಯೋಜಿಸುವ, ಭಯೋತ್ಪಾದಕರ ಸಮಾಧಿಯನ್ನು ಶೃಂಗಾರಗೊಳಿಸುವವರು ನಮ್ಮ ಪ್ರಭು ರಾಮನನ್ನು, ಆತನ ಮಂದಿರ ಮತ್ತು ರಾಮ ಮಂದಿರಕ್ಕೆ ಹೋಗುವವರು ದೇಶವಿರೋಧಿಗಳು ಎಂದು ಕರೆಯುತ್ತಿದ್ದಾರೆ ಎಂದು ಮೋದಿ ವಾಗ್ದಾಳಿ  ನಡೆಸಿದ್ದಾರೆ.

ಮೋದಿ ಭಾಷಣ

ವಂಚಿತ್ ಕಾ ಜೋ ಅಧಿಕಾರ್ ಹೈ, ಮೋದಿ ಉಸ್ಕಾ ಚೌಕಿದಾರ್ ಹೈ

ಮಹಾರಾಷ್ಟ್ರದ ನಂದೂರ್‌ಬಾರ್‌ನಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ನಾನು  ಅತ್ಯಂತ ಜವಾಬ್ದಾರಿಯಿಂದ ಒಂದು ಮಾತು ಹೇಳಲು ಬಯಸುತ್ತೇನೆ. ಅದು ಎಸ್‌ಸಿ, ಎಸ್‌ಟಿ ಅಥವಾ ಒಬಿಸಿಯೇ ಆಗಿರಲಿ, ‘ವಂಚಿತ್ ಕಾ ಜೋ ಅಧಿಕಾರ್ ಹೈ, ಮೋದಿ ಉಸ್ಕಾ ಚೌಕಿದಾರ್ ಹೈ.” (ವಂಚಿತರ ಹಕ್ಕನ್ನು ಸಂರಕ್ಷಿಸುವವರೇ ಮೋದಿ) ಎಂದು ಹೇಳಿದ್ದಾರೆ.

SC, ST ಮತ್ತು OBC ಮೀಸಲಾತಿಯನ್ನು ವಿಭಜಿಸುವುದಿಲ್ಲ

ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ವಿರುದ್ಧ ಟೀಕಾ ಪ್ರಹಾರ ಮಾಡಿದ್ದು, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಮೀಸಲಾತಿಯನ್ನು ವಿಭಜಿಸುವುದಿಲ್ಲ ಎಂದು ಲಿಖಿತವಾಗಿ ನೀಡುವಂತೆ ಕಾಂಗ್ರೆಸ್ ಪಕ್ಷಕ್ಕೆ ಕೇಳಿದ್ದೇನೆ ಎಂದು ಹೇಳಿದರು. ಕಾಂಗ್ರೆಸ್‌ನ ಮೌನ ಹಿಡನ್ ಅಜೆಂಡಾವನ್ನು ಹೊಂದಿದೆ ಎಂದು ತೋರಿಸುತ್ತದೆ ಎಂದಿದ್ದಾರೆ ಮೋದಿ.

“ಯೇ ಮಹಾ ಅಘಾಡಿ, ಆರಕ್ಷಣ್ ಕೆ ಮಹಾ ಬಕ್ಷಣ್ ಕಾ ಮಹಾ ಅಭಿಯಾನ್ ಚಲಾ ರಹೀ ಹೈ'( ಈ ಮಹಾ ಅಘಾಡಿ ಮೀಸಲಾತಿಯನ್ನು ನುಂಗಿಹಾಕುವುದಕ್ಕೆ ಮಹಾ ಅಭಿಯಾನ ಮಾಡುತ್ತಿದೆ). ಆದರೆ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಮೀಸಲಾತಿಯನ್ನು ರಕ್ಷಿಸಲು, ಮೋದಿ ‘ಆರಕ್ಷಣ್ ಕೆ ಮಹಾ ರಕ್ಷಣಾ ಕಾ ಮಹಾ ಯಜ್ಞ ಕರ್ ರಹಾ ಹೈ’.(ಮೀಸಲಾತಿಯ ರಕ್ಷಣೆಗೆ ಮಹಾಯಜ್ಞ ಮಾಡುತ್ತಿದ್ದಾರೆ ಮೋದಿ). ನಾನು ಕಾಂಗ್ರೆಸ್‌ಗೆ ಸವಾಲು ಹಾಕುತ್ತಿದ್ದೇನೆ. ಕಳೆದ 17 ದಿನಗಳ ಹಿಂದೆ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಮೀಸಲಾತಿಯನ್ನು ವಿಭಜಿಸಿ ಮುಸ್ಲಿಮರಿಗೆ ನೀಡುವುದಿಲ್ಲ ಎಂದು ಲಿಖಿತವಾಗಿ ನೀಡುವಂತೆ ಕೇಳಿದ್ದೆ, ಆದರೆ ಅವರು ನನ್ನ ಸವಾಲಿಗೆ ಉತ್ತರಿಸುತ್ತಿಲ್ಲ. ಅವರು ಹಿಡನ್ ಅಜೆಂಡಾವನ್ನು ಹೊಂದಿರುತ್ತಾರೆ ಎಂದಿದ್ದಾರೆ.

ಬುಡಕಟ್ಟು ಸಮುದಾಯಕ್ಕೆ ಸಹಾಯ ಮಾಡುವುದು ನನ್ನ ಕುಟುಂಬದ ಸದಸ್ಯರಿಗೆ ಸೇವೆ ಮಾಡಿದಂತೆ

ಕಾಂಗ್ರೆಸ್‌ನ ಕುಟುಂಬದಂತೆ ರಾಜಮನೆತನದಿಂದ ಹೊರಬಂದಿಲ್ಲ, ನಾನು ಬಡತನವನ್ನು ಎದುರಿಸಿ ಬೆಳೆದಿದ್ದೇನೆ. ನನಗೆ ಬುಡಕಟ್ಟು ಸಮುದಾಯದ ಸೇವೆ ಮತ್ತು ಸಹಾಯ ಮಾಡುವುದು ನನ್ನ ಸ್ವಂತ ಕುಟುಂಬದ ಸದಸ್ಯರಿಗೆ ಸೇವೆ ಮಾಡಿದಂತೆ ಎಂದು ಮೋದಿ ಹೇಳಿದ್ದಾರೆ.” ನಂದೂರ್‌ಬಾರ್‌ ಮತ್ತು ಗುಜರಾತ್ ನಡುವೆ ಅಂತರವಿಲ್ಲ, ನಾನು ಇಲ್ಲಿಗೆ ಮುಂಚೆಯೇ ಬರುತ್ತಿದ್ದೆ, ನಂದೂರ್‌ಬಾರ್‌ಗೆ ಬಂದು ಚೌಧರಿ ಚಹಾವನ್ನು ಸೇವಿಸದೆ ಇರಲು ಸಾಧ್ಯವಿಲ್ಲ, ಚೌಧರಿಯ ಸ್ಟ್ರಾಂಗ್ ಟೀ ನಂದೂರ್‌ಬಾರ್‌ ನೆನಪುಗಳೊಂದಿಗೆ ಬೆಸೆದಿದೆ. ಚಹಾದ ಬಂಧವನ್ನು ನಿಮ್ಮ ಪ್ರೀತಿಯ ಋಣವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಬುಡಕಟ್ಟು ಜನರಿಗೆ ಸೇವೆ ಸಲ್ಲಿಸುವುದು ನನ್ನ ಕುಟುಂಬದ ಸದಸ್ಯರಿಗೆ ಸೇವೆ ಸಲ್ಲಿಸಿದಂತೆಯೇ. ನಾನು ಕಾಂಗ್ರೆಸ್‌ನ ರಾಜಮನೆತನದಂತಹ ದೊಡ್ಡ ಕುಟುಂಬದಿಂದ ಬಂದವನಲ್ಲ. ನಾನು ಬಡತನದಲ್ಲಿ ಬೆಳೆದಿದ್ದೇನೆ. ನೀವು ಎಷ್ಟು ನೋವನ್ನು ಅನುಭವಿಸಿದ್ದೀರಿ ಎಂದು ನನಗೆ ತಿಳಿದಿದೆ.

‘‘ಅಭಿವೃದ್ಧಿ ವಿಚಾರದಲ್ಲಿ ಮೋದಿಗೆ ಪೈಪೋಟಿ ನೀಡಲು ಸಾಧ್ಯವಿಲ್ಲ ಎಂಬುದು ಕಾಂಗ್ರೆಸ್‌ಗೆ ಗೊತ್ತು. ಹೀಗಾಗಿ ಈ ಚುನಾವಣೆಯಲ್ಲಿ ಅವರು ಸುಳ್ಳಿನ ಕಾರ್ಖಾನೆ ತೆರೆದಿದ್ದಾರೆ. ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್‌ ಸ್ಥಿತಿ ‘ಚೋರ್‌ ಮಚಾಯೇ ಶೋರ್‌’ ಎಂಬಂತಾಗಿದೆ. ಧರ್ಮಾಧಾರಿತ ಮೀಸಲಾತಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ತತ್ವಕ್ಕೆ ವಿರುದ್ಧವಾಗಿದೆ. ಸಂವಿಧಾನ ರೂಪಿಸಿದವರ ಬೆನ್ನಿಗೆ ಚೂರಿ ಹಾಕಿದಂತಿದೆ. ಇದು ಲೆಕ್ಕಹಾಕಲಾಗದ ಪಾಪ ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ:  ನಕಲಿ ಶಿವಸೇನೆಯವರು ನನ್ನನ್ನು ಜೀವಂತ ಸಮಾಧಿ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ: ನರೇಂದ್ರ ಮೋದಿ

ಮಹಾರಾಷ್ಟ್ರದಲ್ಲಿ ಪ್ರಧಾನಿ ಮೋದಿ

ಬಿಜೆಪಿ ಅಭ್ಯರ್ಥಿ ಹಾಗೂ ಸಂಸದೆ ಹೀನಾ ಗವಿತ್ ಪರ ಪ್ರಧಾನಿ ಪ್ರಚಾರ ನಡೆಸುತ್ತಿದ್ದರು. ಬಿಜೆಪಿ ಅಭ್ಯರ್ಥಿ ಮೂರನೇ ಬಾರಿಗೆ ಮರಾಠವಾಡ ಪ್ರದೇಶದ ನಂದೂರ್‌ಬಾರ್‌ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಮಾಜಿ ಸಚಿವ ಕೆ.ಸಿ.ಪದವಿ ಅವರ ಪುತ್ರ ಗೋವಾಲ್‌ ಪದವಿ ವಿರುದ್ಧ ಗವಿತ್‌ ಕಣಕ್ಕಿಳಿದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ