ರಾಹುಲ್ ಗಾಂಧಿ ಜಿಮ್ ತೆರೆಯಬೇಕು: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್

|

Updated on: Jun 03, 2024 | 8:11 PM

ಶಶಿ ತರೂರ್ ಅವರು ಇಂಗ್ಲಿಷ್ ತರಬೇತಿ ಸಂಸ್ಥೆ ಆರಂಭಿಸಬೇಕು. ಕಾಂಗ್ರೆಸ್ ಪಕ್ಷವು ಭಾಷೆಯಲ್ಲಿ ತುಂಬಾ ಒಳ್ಳೆಯವರು ಮತ್ತು ಬಹಳ ನಿರರ್ಗಳವಾಗಿ ಮಾತನಾಡುವ ಅನೇಕ ಜನರನ್ನು ಹೊಂದಿದೆ. ಈ ಚುನಾವಣೆಗಳು ಅವರು ಹೊಸ ಉದ್ಯೋಗದತ್ತ ಹೊರಳುವಂತೆ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದ ರಾಜೀವ್ ಚಂದ್ರಶೇಖರ್.

ರಾಹುಲ್ ಗಾಂಧಿ ಜಿಮ್ ತೆರೆಯಬೇಕು: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
ರಾಜೀವ್ ಚಂದ್ರಶೇಖರ್
Follow us on

ತಿರುವನಂತಪುರಂ ಜೂನ್ 03: ಕಾಂಗ್ರೆಸ್ ನಾಯಕ ಶಶಿ ತರೂರ್ (Shashi Tharoor) ಎಕ್ಸಿಟ್ ಪೋಲ್ (exit polls) ಬಗ್ಗೆ ನೀಡಿದ ಹೇಳಿಕೆಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ಅವರು ಸೋಮವಾರ ತಿರುಗೇಟು ನೀಡಿದ್ದಾರೆ. ರಾಹುಲ್ ಗಾಂಧಿ (Rahul Gandhi) ಜಿಮ್ ಆರಂಭಿಸಬೇಕು. ಶಶಿ ತರೂರ್ ಅವರು ಇಂಗ್ಲಿಷ್ ತರಬೇತಿ ಸಂಸ್ಥೆ ಆರಂಭಿಸಬೇಕು. ಕಾಂಗ್ರೆಸ್ ಪಕ್ಷವು ಭಾಷೆಯಲ್ಲಿ ತುಂಬಾ ಒಳ್ಳೆಯವರು ಮತ್ತು ಬಹಳ ನಿರರ್ಗಳವಾಗಿ ಮಾತನಾಡುವ ಅನೇಕ ಜನರನ್ನು ಹೊಂದಿದೆ. ಈ ಚುನಾವಣೆ ಅವರು ಹೊಸ ಉದ್ಯೋಗದತ್ತ ಹೊರಳುವಂತೆ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಎಎನ್‌ಐ ಜತೆ ಮಾತನಾಡಿದ ತಿರುವನಂತಪುರಂನ ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

“ಭಾರತದ ಜನರು ತಮ್ಮ ಸೇವೆ ಮಾಡುವ, ಅವರ ಜೀವನವನ್ನು ಸುಧಾರಿಸಬಲ್ಲ ರಾಜಕೀಯ ನಾಯಕರನ್ನು ಬಯಸುತ್ತಾರೆ. ಖಂಡಿತವಾಗಿಯೂ ಈ ಜನರ ಗುಂಪು ಅದು ರಾಹುಲ್ ಗಾಂಧಿಯಾಗಿರಲಿ ಅಥವಾ ಬೇರೆ ಯಾರೇ ಆಗಿರಲಿ ಇದಕ್ಕೆ ಸೂಕ್ತವಲ್ಲ ಎಂದು ಬಿಜೆಪಿ ನಾಯಕ ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ ಭಾರಿ ಜಯ ಸಿಗಲಿದೆ ಎಂದು ಭವಿಷ್ಯ ನುಡಿದಿರುವ ಎಕ್ಸಿಟ್ ಪೋಲ್​​ನ್ನು ‘ನಗು ತರಿಸುವಂಥದ್ದು’ ಎಂದು ಶಶಿ ತರೂರ್ ಹೇಳಿದ್ದಕ್ಕೆ ರಾಜೀವ್ ಚಂದ್ರಶೇಖರ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ನಾವೂ ದೇಶಾದ್ಯಂತ ಪ್ರಚಾರ ಮಾಡುತ್ತಿರುವುದರಿಂದ ಅದನ್ನು ಸಂಶಯದಿಂದ ಮತ್ತು ಅಪನಂಬಿಕೆಯಿಂದ ನೋಡುತ್ತಿದ್ದೇವೆ. ಜನರ ನಾಡಿಮಿಡಿತ ಏನೆಂಬುದರ ಬಗ್ಗೆ ನಮಗೆ ಅರಿವಿದೆ. ಈ ಸಮೀಕ್ಷೆಗಳಲ್ಲಿ ಅದು ನಿಖರವಾಗಿ ಪ್ರತಿಫಲಿಸುತ್ತದೆ ಎಂದು ನಾವು ನಂಬುವುದಿಲ್ಲ, ಎಂದು ತರೂರ್ ಹೇಳಿದ್ದರು.

ಇದನ್ನೂ ಓದಿ: ತೇಜಸ್ವಿ ಯಾದವ್ ಸುಳಿವಿನ ಬೆನ್ನಲ್ಲೇ ಪ್ರಧಾನಿ ಮೋದಿಯನ್ನು ಭೇಟಿಯಾದ ಸಿಎಂ ನಿತೀಶ್ ಕುಮಾರ್

ನಮ್ಮ ಕಾಂಗ್ರೆಸ್ ಅಧ್ಯಕ್ಷರು, ಎಲ್ಲಾ ಭಾರತ ಬ್ಲಾಕ್ ಸದಸ್ಯರನ್ನು ಭೇಟಿಯಾದ ನಂತರ, ನಮ್ಮ ಮೈತ್ರಿ ಸುಮಾರು 295 ಸೀಟು ಪಡೆಯುತ್ತದೆ ಎಂದು ಅವರಿಗೆ ಮನವರಿಕೆಯಾಗಿದೆ ಎಂದು ಹೇಳಿದ್ದಾರೆ. ನಾನು ಇದನ್ನು ಒಪ್ಪುವೆ ಎಂದಿದ್ದಾರೆ ತರೂರ್.

ಕಾಂಗ್ರೆಸ್ ಮತ್ತು ಹಲವಾರು ವಿರೋಧ ಪಕ್ಷಗಳು ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ತಳ್ಳಿಹಾಕಿದ್ದು, ಮಂಗಳವಾರ ಇಂಡಿಯಾ ಬಣ ವಿಜಯಶಾಲಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿವೆ. ನಾವು ಕಾಯಬೇಕು, ಕಾದು ನೋಡಬೇಕು. ನಮ್ಮ ಫಲಿತಾಂಶಗಳು ಎಕ್ಸಿಟ್ ಪೋಲ್‌ಗಳು ತೋರಿಸುತ್ತಿರುವುದಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿವೆ ಎಂದು ನಾವು ತುಂಬಾ ಭರವಸೆ ಹೊಂದಿದ್ದೇವೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೂಡ ಎಕ್ಸಿಟ್ ಪೋಲ್​​ನ್ನು ತಳ್ಳಿ ಹಾಕಿದ್ದು, “ಇದು ಎಕ್ಸಿಟ್ ಪೋಲ್ ಅಲ್ಲ, ಇದು ಮೋದಿ ಮೀಡಿಯಾ ಸಮೀಕ್ಷೆ. ಇದು ಮೋದಿ ಜಿ ಅವರ ಸಮೀಕ್ಷೆ. ಇದು ಅವರ ಫ್ಯಾಂಟಸಿ ಸಮೀಕ್ಷೆ” ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:08 pm, Mon, 3 June 24