
ಕರ್ನಾಟಕದ ಸಿಂಗಂ ಖ್ಯಾತಿಯ ಮಾಜಿ ಐಪಿಎಸ್ ಕೆ. ಅಣ್ಣಾಮಲೈ ಅವರು ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಪ್ರಸ್ತುತ ತಮಿಳುನಾಡಿನಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಜ್ಯಾಧ್ಯಕ್ಷರೂ ಆಗಿರುವ ಅಣ್ಣಾಮಲೈ ಅವರು ಲೋಕ ಚುನಾವಣೆಯಲ್ಲಿ ಗೆಲ್ಲುತ್ತಾರೋ ಅಥವಾ ಅಪಜಯ ಅನುಭವಿಸುತ್ತಾರೋ ಅದು ಮತದಾರರಿಗೆ, ರಾಜಕೀಯ ಪರಿಣತರಿಗೆ ಬಿಟ್ಟ ವಿಷಯ. ಆದರೆ ಅವರ ಸೋಲು-ಗೆಲುವಿನ ಸಾಧ್ಯತೆಯ ಬಗ್ಗೆ ಊಹಾಪೋಹಗಳು, ಲೆಕ್ಕಾಚಾರಗಳು, ಸಮೀಕರಣಗಳು ಬಹಳವಾಗಿ ಹರಡುತ್ತಿದೆ. ಕೊಯಮತ್ತೂರು ಬಿಜೆಪಿಯ ಭದ್ರಕೋಟೆ ಎಂದು ಪರಿಗಣಿಸಲ್ಪಟ್ಟಿದೆ ಎಂಬುದು ಗಮನಾರ್ಹ. ಆದರೆ ಎಐಎಡಿಎಂಕೆಯೂ ಮೇಲುಗೈ ಹೊಂದಿದೆ. ಈ ಹಿಂದೆ ಇವೆರಡೂ ಮಿತ್ರ ಪಕ್ಷಗಳಾಗಿದ್ದವು. ಆದರೆ ಈ ಬಾರಿ ಮೈತ್ರಿ ಕಾರ್ಯಗತವಾಗಿಲ್ಲ. ಜಯಲಲಿತಾ ಅಣ್ಣಾ ಡಿಎಂಕೆಗೆ ಬಿಜೆಪಿ ಸಡ್ಡು ಹೊಡೆದು ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ಜಾತಿಯ ಡೈನಾಮಿಕ್ಸ್, ಎಸ್‌ಪಿ ವೇಲುಮಣಿ ಅಂಶ, ಅಲ್ಪಸಂಖ್ಯಾತರ ಮತಗಳು ಮತ್ತು ಪಕ್ಷದ ಆಂತರಿಕ ಸಮಸ್ಯೆಗಳು ಬಿಜೆಪಿಗೆ ಸವಾಲುಗಳನ್ನು ಒಡ್ಡುತ್ತವೆ. ಆದಾಗ್ಯೂ, ಪಕ್ಷವು ತನ್ನ ಬೆಂಬಲದ ನೆಲೆಯನ್ನು ಕ್ರೋಢೀಕರಿಸುವ ಕೆಲಸ ಮಾಡುತ್ತಿದೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ. ನಾಯ್ಡು ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಎಐಎಡಿಎಂಕೆಯ ನಿರ್ಧಾರವು ಗೌಂಡರ್ ಬೆಂಬಲದ ನೆಲೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿಲ್ಲದಿದ್ದರೂ, ಬಿಜೆಪಿ ತನ್ನ ಸಾಂಪ್ರದಾಯಿಕ ಮತದಾರರ ಬೆಂಬಲ, ಅಣ್ಣಾಮಲೈ ಅವರ ಜನಪ್ರಿಯತೆ ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನು ಆಧರಿಸಿದೆ. ಈ ಕ್ಷೇತ್ರದಲ್ಲಿ 2019ರಲ್ಲಿ ಮೋದಿ ವಿರೋಧಿ ಅಲೆ ಇತ್ತು. ಆದರೆ ಈ ಬಾರಿ ಮೋದಿ ಮತದಾರರ ಒಲವು ಸಂಪಾದಿಸಿದ್ದಾರೆ. ಹಾಗಾಗಿ ರಣಕಣ ರಂಗೇರಿದೆ. ಗಮನಾರ್ಹ ಬೆಳವಣಿಗೆಯೆಂದರೆ ಅಣ್ಣಾಮಲೈ ಯಾವುದೇ ಕ್ಷೇತ್ರದಲ್ಲಿ ಕಾಲೂರಿದರೂ...